ಖಾಯಂ ಉಪನ್ಯಾಸಕರಿಂದ ಅತಿಥಿ ಉಪನ್ಯಾಸಕರಿಗೆ ನೆರವಿನ ಹಸ್ತ ; ಕೊರೋನಾ ಸಂಕಷ್ಟದಲ್ಲಿ ಒಂದು ದಿನ ವೇತನ ಸಹಾಯ

ಮೂರು ಸಾವಿರಕ್ಕೂ ಹೆಚ್ಚು ಪಿಯು ಅತಿಥಿ ಉಪನ್ಯಾಸಕರಿದ್ದು ಇವರಿಗೆ ತಮ್ಮ ಒಂದು ದಿನದ ವೇತನವನ್ನು ನೀಡಲು ಖಾಯಂ ಉಪನ್ಯಾಸಕರ ಸಂಘ ನಿರ್ಧರಿಸಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು(ಜುಲೈ.06): ಕೊರೋನಾ ಸಂಕಷ್ಟದಲ್ಲಿರುವ ರಾಜ್ಯದ ಅತಿಥಿ ಉಪನ್ಯಾಸಕರಿಗೆ ಸರ್ಕಾರಿ ಉಪನ್ಯಾಸಕರು ಒಂದು ದಿನ ವೇತನದ ನೆರವಿನ ಹಸ್ತ ಚಾಚಿದ್ದಾರೆ. ದೇಶದಲ್ಲಿ ಇದೇ ಮೊದಲ ಬಾರಿಗೆ ಖಾಯಂ ನೌಕರರು ಅತಿಥಿ ಉಪನ್ಯಾಸಕರಿಗೆ ಸಹಾಯ ಮಾಡಲು ಮುಂದಾಗಿರುವುದು ಕೊರೊನಾ ಸೋಂಕು ಕಳೆದ ಮೂರು ತಿಂಗಳಿನಿಂದ ಇನ್ನಲ್ಲಿದಂತೆ ರಾಜ್ಯವನ್ನೂ ಕಾಡುತ್ತಿದೆ.

ಕಳೆದೊಂದು ವಾರದಿಂದ ಕೊರೋನಾ ಪಾಸಿಟಿವ್ ಸಂಖ್ಯೆ ಬೆಂಗಳೂರಿನಲ್ಲಿ ಪ್ರತಿದಿನ ಸಾವಿರ ಗಡಿ ಸಮೀಪಕ್ಕೆ ಬರುತ್ತಿದೆ. ರಾಜ್ಯದಲ್ಲಿ 21 ಸಾವಿರ ಗಡಿ ದಾಟಿದ್ದರೆ, ಬೆಂಗಳೂರಿನಲ್ಲಿ ಎಂಟು ಸಾವಿರ ಗಡಿ ದಾಡಿದೆ. ಇಂಥ ಸಂದರ್ಭದಲ್ಲಿ ಶಾಲಾಕಾಲೇಜು ತೆರೆಯುವುದು ಸರ್ಕಾರದ ಪಾಲಿಗೆ ದುಸ್ಸಾಹಸದ ಕೆಲಸ. ಇದರಿಂದಾಗಿ ರಾಜ್ಯದ ಪಿಯು ಕಾಲೇಜಿನ ಖಾಯಂ ಸರ್ಕಾರಿ ಉಪನ್ಯಾಸಕರಿಗೆ ವೇತನ ಬರುತ್ತಿದೆ. ಆದರೆ ಅವರ ಜೊತೆ ಕೆಲಸ ಮಾಡುತ್ತಿದ್ದ ಅತಿಥಿ ಉಪನ್ಯಾಸಕರ ಬದುಕು ಅತಂತ್ರವಾಗಿದೆ.

ಕಾಲೇಜು ತೆರೆಯದ ಕಾರಣ ಸಹಜವಾಗಿ ಅವರಿಗೆ ವೇತನವೂ ಸಿಗುತ್ತಿಲ್ಲ‌‌‌. ಇದರಿಂದ ಅತಿಥಿ ಉಪನ್ಯಾಸಕರು ಜೀವನ‌ ನಡೆಸುವುದು ಕಷ್ಟವಾಗಿದೆ. ಲಾಕ್ ಡೌನ್ ಸಂಕಷ್ಟದಲ್ಲಿರುವ ರಾಜ್ಯದ ಅತಿಥಿ ಉಪನ್ಯಾಸಕರಿಗೆ ಸಹಾಯಹಸ್ತ ತೋರಲು ಸರ್ಕಾರಿ ಪಿಯು ಉಪನ್ಯಾಸಕರ ಸಂಘ ಮುಂದಾಗಿದೆ. ಅತಿಥಿ ದೇವೋಭವವೆಂದು ರಾಜ್ಯದ ಖಾಯಂ ಉಪನ್ಯಾಸಕರು ಅತಿಥಿಗಳ ಸಂಕಷ್ಟಕ್ಕೆ ಮಿಡಿದು, ದೇಶಕ್ಕೆ ಮಾದರಿ ಕೆಲಸ ಮಾಡಲು ಮುಂದಾಗಿದ್ದಾರೆ‌.

ಲಾಕ್ ಡೌನ್ ಸಂದರ್ಭದಲ್ಲಿ ದೇಶದಲ್ಲಿಯೇ ಮೊದಲ ಬಾರಿಗೆ ಈ ರೀತಿ ಸಾಮೂಹಿಕ ಸಹಾಯ ಖಾಯಂ ಉಪನ್ಯಾಸಕರಿಂದ ಆಗುತ್ತಿದೆ‌. ಕಳೆದ ನಾಲ್ಕು ತಿಂಗಳ ವೇತನವಿಲ್ಲದೆ ಅತಿಥಿ ಉಪನ್ಯಾಸಕರ ಪರದಾಡುತ್ತಿದ್ದಾರೆ‌. ಲಾಕ್ ಡೌನ್ ಸಂಕಷ್ಟದಿಂದ ರಾಜ್ಯದಲ್ಲಿ ಈಗಾಗಲೇ ಎಂಟು ಉಪನ್ಯಾಸಕರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ‌. ಮುಂದಾಗುವ ಅನಾಹುತಕ್ಕೆ ಎಚ್ಚೆತ್ತು ಸರ್ಕಾರ ಮಾಡಬೇಕಾದ ಕೆಲಸ ಖಾಯಂ ಉಪನ್ಯಾಸಕರಿಂದ ಸಹಾಯಕ್ಕೆ ಮುಂದಾಗಿದ್ದಾರೆ.

ರಾಜ್ಯದಲ್ಲಿ ಸರ್ಕಾರ ಹಾಗೂ ಅನುದಾನ ಕಾಲೇಜಿನಲ್ಲಿ 17 ಸಾವಿರ ಖಾಯಂ ಉಪನ್ಯಾಸಕರಿದ್ದಾರೆ. ಇದರಲ್ಲಿ ಮೂರು ಸಾವಿರಕ್ಕೂ ಹೆಚ್ಚು ಪಿಯು ಅತಿಥಿ ಉಪನ್ಯಾಸಕರಿದ್ದು ಇವರಿಗೆ ತಮ್ಮ ಒಂದು ದಿನದ ವೇತನವನ್ನು ನೀಡಲು ಖಾಯಂ ಉಪನ್ಯಾಸಕರ ಸಂಘ ನಿರ್ಧರಿಸಿದೆ. ಹಾಗಂತ ಎಲ್ಲರೂ ಕೊಡಬೇಕೆಂದು ಪಿಯು ಉಪನ್ಯಾಸಕರ ಸಂಘ ಒತ್ತಾಯವೇನು ಮಾಡಿಲ್ಲ. ಸ್ವ ಇಚ್ಚೆಯಿಂದ ಒಂದು ದಿನದ‌ ವೇತನ ನೀಡಲು ಉಪನ್ಯಾಸಕರು ರೆಡಿಯಾಗಿದ್ದಾರೆ.

ಜುಲೈ ತಿಂಗಳ ಎಚ್ ಆರ್ ಎಂಎಸ್ ವೇತನದಲ್ಲಿ ಕಡಿತಗೊಳಿಸುವ ಕುರಿತು ಪಿಯು ಬೋರ್ಡ್ ಅಧಿಕಾರಿಗಳ ಜೊತೆ ಮಾತುಕತೆ ನಡೆದಿದೆ. ಎಚ್ ಆರ್‌ ಎಂ ಎಸ್ ನಲ್ಲಿ ಒಂದು ದಿನದ‌ ವೇತನ ಕಡಿತಗೊಳಿಸಿ ಅದರ ಹಣವನ್ನು ಒಟ್ಟುಗೂಡಿಸಿ ಅತಿಥಿ ಉಪನ್ಯಾಸಕರಿಗೆ ಹಂಚಲು ಸಂಘ ನಿರ್ಧರಿಸಿದೆ‌. ನಮ್ಮ ಒಂದು ದಿನದ ವೇತನ ತಿಂಗಳಿಗೆ ಮೂರು ಕೋಟಿಯಷ್ಟು ಹಣವಾಗಬಹುದು. 'ದಿನದ ವೇತನ ದಾನ' ನೀಡಲು ಖಾಯಂ ಉಪನ್ಯಾಸಕರು ರೆಡಿಯಾಗಿದ್ದೇವೆ ಎಂದು ಪಿಯುಸಿ ಸರ್ಕಾರಿ ಉಪನ್ಯಾಸಕರ‌ ಸಂಘದ ಅಧ್ಯಕ್ಷ ನಿಂಗೇಗೌಡ ಮಾಹಿತಿ ನೀಡುತ್ತಾರೆ‌.

ಇದನ್ನೂ ಓದಿ : ಕಾರ್ಮಿಕ ಸಚಿವರ ತವರು ಜಿಲ್ಲೆಯಲ್ಲೇ ಆರೋಗ್ಯ ಸೌಲಭ್ಯಕ್ಕಾಗಿ ಕಾರ್ಮಿಕರ ಪರದಾಟ ; ಇಎಸ್ಐ ಆರಂಭವಾಗಿದರೂ ವೈದ್ಯರೇ ಇಲ್ಲ

ಈ ಬಗ್ಗೆ  ಅತಿಥಿ ಉಪನ್ಯಾಸಕರ ಸಂಘದ ಕಾರ್ಯದರ್ಶಿ ಮಲ್ಲಿಕಾರ್ಜುನ್‌ ಮಾನ್ಪಡೆ ಮಾತನಾಡಿ, ಪಿಯುಸಿ ಅತಿಥಿ ಉಪನ್ಯಾಸಕರಿಗೆ ತಮ್ಮ ಕೈಲಾದ ಸಹಾಯವನ್ನು ಮಾಡಲು ಸರ್ಕಾರಿ ಪಿಯು ಉಪನ್ಯಾಸಕರು ಮುಂದಾಗಿರುವುದು ಶ್ಲಾಘನೀಯ. ಕಾಲೇಜಿನಲ್ಲಿ ಕೇವಲ ಅವರ ಜೊತೆ ಕೆಲಸ ಮಾಡದೆ ಕೊರೋನಾ ಸಂಕಷ್ಟದಲ್ಲಿ ಅವರ ಪರಿಸ್ಥಿತಿ ಅರ್ಥ ಮಾಡಿಕೊಂಡು ಸಹಾಯ ಮಾಡುತ್ತಿರುವುದು ಸಾಕಷ್ಟು ಮನೋಬಲ ತುಂಬುತ್ತದೆ. ಅದೇ ರೀತಿ ಸರ್ಕಾರ ಅತಿಥಿ ಉಪನ್ಯಾಸಕರ ಸಂಕಷ್ಟಕ್ಕೆ ನೆರವಾಗಬೇಕಿದೆ ಎಂದು ಅಭಿಪ್ರಾಯಪಡುತ್ತಾರೆ.

ಕಳೆದ ಫೆಬ್ರವರಿಯಿಂದ ವೇತನವಿಲ್ಲದೆ ಅತಿಥಿ ಉಪನ್ಯಾಸಕರ ಪರದಾಡುತ್ತಿದ್ದಾರೆ. ಕೊವಿಡ್ ಸಂಕಷ್ಟಕ್ಕೆ ಶಿವಮೊಗ್ಗ‌ ಜಿಲ್ಲೆಯ ನಾಲ್ವರು, ರಾಯಚೂರು ಜಿಲ್ಲೆಯ ದೇವದುರ್ಗದ ಇಬ್ಬರು ಹಾಗೂ ಮಂಡ್ಯ ಜಿಲ್ಲೆಯ ಮಳವಳ್ಳಿಯ ಒಂದೇ ಕಾಲೇಜಿನ ಇಬ್ಬರು ಅತಿಥಿ ಉಪನ್ಯಾಸಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಂದಾಗುವ ಅನಾಹುತ ತಪ್ಪಿಸಲು ಅತಿಥಿ ಉಪನ್ಯಾಸಕರಿಗೆ ಖಾಯಂ ಉಪನ್ಯಾಸಕರು ನೆರವಿನ ಹಸ್ತ ಚಾಚಿರುವುದು ಶ್ಲಾಘನೀಯ.
Published by:G Hareeshkumar
First published: