ಯಾದಗಿರಿಯಲ್ಲಿ ಜೀವದ ಹಂಗು ತೊರೆದು ಸೇವೆ ಸಲ್ಲಿಸುತ್ತಿರುವ ಪೌರ ಕಾರ್ಮಿಕರಿಗೆ ಪುಷ್ಪ ಅರ್ಪಣೆ

ಪೌರ ಕಾರ್ಮಿಕರಿಗೆ ಪುಷ್ಪ ಅರ್ಪಿಸಿ ಚಪ್ಪಾಳೆ ತಟ್ಟುವ ಮೂಲಕ ಅವರ  ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಲಾಗಿದೆ.  ಇದು ಪೌರ ಕಾರ್ಮಿಕರನ್ನು ಮತ್ತಷ್ಟು ಹುರಿದುಂಬಿಸಿದಂತಾಗಿದೆ.

news18-kannada
Updated:April 8, 2020, 10:59 AM IST
ಯಾದಗಿರಿಯಲ್ಲಿ ಜೀವದ ಹಂಗು ತೊರೆದು ಸೇವೆ ಸಲ್ಲಿಸುತ್ತಿರುವ ಪೌರ ಕಾರ್ಮಿಕರಿಗೆ ಪುಷ್ಪ ಅರ್ಪಣೆ
ಪೌರ ಕಾರ್ಮಿಕರಿಗೆ ಹೂವಿನ ಅರ್ಪಣೆ
  • Share this:
ಯಾದಗಿರಿ (ಏ.8):ವಿಶ್ವದಾದ್ಯಂತ ಕೊರೊನಾ ಭೀತಿಯಿಂದ ಜನ ತಲ್ಲಣಗೊಂಡಿದ್ದಾರೆ.ಜನರು ಮನೆಯಿಂದ ಹೊರ ಬರಲು ಭಯಪಡುತ್ತಿದ್ದಾರೆ. ಆದರೆ, ವೈದ್ಯರು, ದಾದಿಯರು,ಪೌ ರ ಕಾರ್ಮಿಕರು, ಪೊಲೀಸರು ಜೀವದ ಹಂಗು ತೊರೆದು ಹಗಲಿರುಳು ಸೇವೆ ಸಲ್ಲಿಸುತ್ತಿದ್ದಾರೆ. ಈ ರೀತಿ ಸೇವೆ ಸಲ್ಲಿಸಿದ ಯಾದಗಿರಿ ಪೌರ ಕಾರ್ಮಿಕರಿಗೆ ಪುಷ್ಪ ಅರ್ಪಿಸಿ ಗೌರವ ಸಲ್ಲಿಸಲಾಯಿತು.

ಯಾದಗಿರಿ ನಗರಸಭೆಯಲ್ಲಿ ಕೆಲಸ ಮಾಡುತ್ತಿರುವ 72 ಪೌರ ಕಾರ್ಮಿಕರಿಗೆ ಹಾಗೂ ಅಧಿಕಾರಿ ಸಿಬ್ಬಂದಿಗಳಿಗೆ ಸನ್ಮಾನ ಮಾಡಲಾಯಿತು. ನಗರದ ಸಪ್ನಾ ಮೈದಾನದಲ್ಲಿ ವೀರಶೈವ ಸಮಾಜ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಪೌರ ಕಾರ್ಮಿಕರಿಗೆ ಬಟ್ಟೆ , ಆಹಾರ ಧಾನ್ಯ, ಮಾಸ್ಕ್, ಸ್ಯಾನಿಟೈಸರ್ ವಿತರಣೆ ಮಾಡಿ ಗೌರವಿಸಲಾಯಿತು.

ಶಾಸಕ ವೆಂಕಟರೆಡ್ಡಿ ಮುದ್ನಾಳ ,ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸಿದ್ದಪ್ಪ ಹೊಟ್ಟಿ,ವೀರಶೈವ ಸಮಾಜದ ಮುಖಂಡ ಅಯ್ಯಣ್ಣ ಹುಂಡೇಕಾರ ಹಾಗೂ ಮೊದಲಾದ ಮುಖಂಡರ ನೇತೃತ್ವದಲ್ಲಿ ಪೌರ ಕಾರ್ಮಿಕರಿಗೆ ಸನ್ಮಾನ ಮಾಡಲಾಯಿತು.

ಇದನ್ನೂ ಓದಿ: ರಾಜ್ಯದಲ್ಲಿ ಲಾಕ್​ಡೌನ್​ ಮುಂದುವರಿಸಿ; ಕೋವಿಡ್-19 ಟಾಸ್ಕ್​ಫೋರ್ಸ್ ವೈದ್ಯರಿಂದ ಸರ್ಕಾರಕ್ಕೆ ಶಿಫಾರಸು

ಪೌರ ಕಾರ್ಮಿಕರಿಗೆ ಪುಷ್ಪ ಅರ್ಪಿಸಿ ಚಪ್ಪಾಳೆ ತಟ್ಟುವ ಮೂಲಕ ಅವರ  ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಲಾಗಿದೆ.  ಇದು ಪೌರ ಕಾರ್ಮಿಕರನ್ನು ಮತ್ತಷ್ಟು ಹುರಿದುಂಬಿಸಿದಂತಾಗಿದೆ.

(ವರದಿ: ನಾಗಪ್ಪ ಮಾಲಿಪಾಟೀಲ)
First published:April 8, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading