ಕೊರೊನಾ ಸೋಂಕಿತನೊಂದಿಗೆ ಫೋನಲ್ಲಿ ಮಾತಾಡಿದವರು ಕ್ವಾರಂಟೈನ್​ಗೆ; ಇದನ್ನು ಪ್ರಶ್ನಿಸಿದ ಪತ್ರಕರ್ತ ಜೈಲಿಗೆ

ಸಾರ್ವಜನಿಕರು ತಪ್ಪು ದಾರಿ ತುಳಿಯದ ಹಾಗೆ ಮಾಡಲು ಈ ಕಾನೂನು ಕ್ರಮ ಅಗತ್ಯವಿತ್ತು. ನಿಷ್ಪಕ್ಷಪಾತವಾಗಿ ಕ್ರಮ ತೆಗೆದುಕೊಂಡಿದ್ದೇವೆ ಎಂದು ಅಂಡಮಾನ್ ಪೊಲೀಸರು ಸಮರ್ಥನೆ ಮಾಡಿಕೊಂಡಿದ್ದಾರೆ.

news18
Updated:April 28, 2020, 4:23 PM IST
ಕೊರೊನಾ ಸೋಂಕಿತನೊಂದಿಗೆ ಫೋನಲ್ಲಿ ಮಾತಾಡಿದವರು ಕ್ವಾರಂಟೈನ್​ಗೆ; ಇದನ್ನು ಪ್ರಶ್ನಿಸಿದ ಪತ್ರಕರ್ತ ಜೈಲಿಗೆ
ಪ್ರಾತಿನಿಧಿಕ ಚಿತ್ರ
  • News18
  • Last Updated: April 28, 2020, 4:23 PM IST
  • Share this:
ಬೆಂಗಳೂರು(ಏ. 28): ವಿವೇಚನೆ ಇಲ್ಲದೆ ಕರ್ತವ್ಯ ನಿಭಾಯಿಸಿದರೆ ಅದು ಕೇವಲ ಅಂಧಾಚರಣೆ ಆಗುತ್ತದೆ. ಕೊರೋನಾ ಸೋಂಕಿತ ವ್ಯಕ್ತಿಯೊಬ್ಬರೊಂದಿಗೆ ಫೋನಲ್ಲಿ ಮಾತನಾಡಿದ್ದಕ್ಕೆ ಜನರನ್ನು ಕ್ವಾರಂಟೈನ್​ನಲ್ಲಿಟ್ಟ ಘಟನೆ ಅಂಡಮಾನ್​ನಲ್ಲಿ ನಡೆದಿದೆ. ಇದನ್ನು ಪ್ರಶ್ನಿಸಿ ಟ್ವೀಟ್ ಮಾಡಿದ ಜುಬೇರ್ ಅಹ್ಮದ್ ಎಂಬ ಪತ್ರಕರ್ತನನ್ನು ಪೊಲೀಸರು ಬಂಧಿಸಿದ್ದಾರೆ. ಈ ವಿಚಿತ್ರ ಬೆಳವಣಿಗೆ ನಡೆದಿರುವುದು ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ. ಜುಬೈರ್ ಸದ್ಯಕ್ಕೆ ಜಾಮೀನು ಪಡೆದು ಹೊರಬಂದಿದ್ದಾರೆ.

ಅಂಡಮಾನ್ ಕ್ರೋನಿಕಲ್ ಎಂಬ ದಿನಪತ್ರಿಕೆಯಲ್ಲಿ ಬಂದ ವರದಿಯ ಪ್ರಕಾರ, ಅಂಡಮಾನ್​ನ ಹಡ್ಡೋ ನಗರದಲ್ಲಿ ಒಂದೇ ಕುಟುಂಬದ ನಾಲ್ವರನ್ನು ಕ್ವಾರಂಟೈನ್​ಗೆ ಇಡಲಾಗಿತ್ತು. ಇವರಲ್ಲಿನ ಒಬ್ಬರು ಕೊರೋನಾ ಸೋಂಕಿತರೊಂದಿಗೆ ಫೋನಲ್ಲಿ ಮಾತನಾಡಿ ಯೋಗಕ್ಷೇಮ ವಿಚಾರಿಸಿದ್ದೇ ಕಾರಣ. ಏಪ್ರಿಲ್ 26ರಂದು ಈ ಸುದ್ದಿಯು ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅದಾದ ಮರುದಿನ ಪತ್ರಕರ್ತ ಜುಬೇರ್ ಅಹ್ಮದ್ ಅವರು, ಕೋವಿಡ್ ರೋಗಿಗಳೊಂದಿಗೆ ಫೋನಲ್ಲಿ ಮಾತನಾಡಿದ ಮಾತ್ರಕ್ಕೆ ಜನರನ್ನು ಕ್ವಾರಂಟೈನ್​ನಲ್ಲಿಡಲು ಸೂಚಿಸಿದ್ದು ಯಾಕೆ ಎಂದು ಯಾರಾದರೂ ಹೆಳಬಲ್ಲಿರಾ? ಎಂದು ಟ್ವೀಟ್ ಮಾಡಿದ್ದರು. ಹಾಗೆಯೇ, ಕ್ವಾರಂಟೈನ್​ನಲ್ಲಿರುವವರು ಯಾರೊಂದಿಗೂ ಫೋನಲ್ಲಿ ಮಾತನಾಡಬೇಡಿ. ಯಾಕೆಂದರೆ, ಫೋನ್ ಕಾಲ್ ಆಧಾರದ ಮೇಲೆ ಜನರನ್ನು ಕ್ವಾರಂಟೈನ್​ನಲ್ಲಿ ಇಡಲಾಗಿದೆ ಎಂದು ಜುಬೇರ್ ಮತ್ತೊಂದು ಟ್ವೀಟ್ ಮಾಡಿದ್ದರು.

ಇದನ್ನೂ ಓದಿ: ಬಿಆರ್ ಶೆಟ್ಟಿ: ಅರಬ್ ನಾಡಲ್ಲಿ ದೊಡ್ಡ ಸಾಮ್ರಾಜ್ಯ ಕಟ್ಟಿ ಪತನಗೊಂಡ ಕರ್ನಾಟಕ ಬಂಟನ ಕಥೆ

ಬಳಿಕ ಪೊಲೀಸರು ಜುಬೇರ್​ನನ್ನು ಬಂಧಿಸಿದರು. ವಿಪತ್ತ ನಿರ್ವಹಣೆಯ ಸೆಕ್ಷನ್ 51, ಸರ್ಕಾರಿ ಅಧಿಕಾರಿಯ ಆದೇಶ ಉಲ್ಲಂಘನೆಯ ಸೆಕ್ಷನ್188, ಮಾರಕ ರೋಗ ಹರಡಲು ಕಾರಣವಾಗುವ ವರ್ತನೆಯ ಸೆಕ್ಷನ್ 269 ಮತ್ತು 270, ಸಾರ್ವಜನಿಕರಲ್ಲಿ ಭೀತಿ ತರುವ ಉದ್ದೇಶದಿಂದ ಸುಳ್ಳು ಸುದ್ದಿ ಹಬ್ಬಿಸುವ ಸೆಕ್ಷನ್ 505 ಅಡಿ ಜುಬೇರ್ ವಿರುದ್ಧ ಪ್ರಕರಣ ದಾಖಲಾಗಿದೆ.

ಈ ಬಗ್ಗೆ ಇವತ್ತು ಸ್ಪಷ್ಟನೆ ನೀಡಿರುವ ಅಂಡಮಾನ್ ಡಿಜಿಪಿ ದೀಪೇಂದ್ರ ಪಾಠಕ್, “ಇಂಥ ಹೇಳಿಕೆಗಳು ಸಮರ್ಪಕ ಆರೋಗ್ಯ ವ್ಯವಸ್ಥೆ ಬಗ್ಗೆ ಜನರಲ್ಲಿ ಗೊಂದಲ ಮೂಡಿಸುತ್ತವೆ. ಇದರಿಂದ ಜನರು ಸರಿಯಾದ ಮಾಹಿತಿ ಮುಚ್ಚಿಡಲು ಯತ್ನಿಸಬಹುದು; ಸುಳ್ಳು ಹೇಳಿಕೆ ನೀಡಬಹುದು; ಆರೋಗ್ಯ ಸಿಬ್ಬಂದಿಗೆ ಸಹಕಾರ ಕೊಡದಿರಬಹುದು, ಪ್ರತಿಭಟನೆ ಮಾಡಬಹುದು; ಅಥವಾ ದೊಡ್ಡ ಗುಂಪು ಸೇರಿ ಪ್ರತಿಭಟಿಸಬಹುದು” ಎಂದು ಹೇಳಿಕೆ ನೀಡಿದ್ಧಾರೆ.

“ಸಾರ್ವಜನಿಕರು ತಪ್ಪು ದಾರಿ ತುಳಿಯದ ಹಾಗೆ ಮಾಡಲು ಈ ಕಾನೂನು ಕ್ರಮ ಅಗತ್ಯವಿತ್ತು. ನಿಷ್ಪಕ್ಷಪಾತವಾಗಿ ಕ್ರಮ ತೆಗೆದುಕೊಂಡಿದ್ದೇವೆ. ಸರ್ಕಾರಿ ಅಧಿಕಾರಿಗಳು ಮತ್ತವರ ಕುಟುಂಬ ಸದಸ್ಯರನ್ನೇ ಬಿಟ್ಟಿಲ್ಲ” ಎಂದು ಪೊಲೀಸ್ ಮಹಾನಿರ್ದೇಶಕರು ತಿಳಿಸಿದ್ದಾರೆ.

ಇದನ್ನೂ ಓದಿ: Pool Testing - ಕೊರೋನಾ ‘ಪೂಲ್ ಟೆಸ್ಟ್’ಗೆ ಕೇಂದ್ರ ಸಲಹೆ; ಏನಿದು ಪೂಲ್ ಟೆಸ್ಟಿಂಗ್?ಕ್ವಾರಂಟೈನ್​ಗೆ ಒಳಪಟ್ಟವರಲ್ಲಿ ಒಬ್ಬರು ಸರ್ಕಾರಿ ನೌಕರರೂ ಆಗಿದ್ಧಾರೆ. ಇವರ ಮಾವನಿಗೆ ಕೊರೋನಾ ಸೋಂಕು ತಗುಲಿತ್ತು. ಅವರ ಯೋಗಕ್ಷೇಮ ವಿಚಾರಿಸಲು ಇವರು ಫೋನ್ ಮಾಡಿದ್ದರು. ಆ ಬಳಿಕ ಇವರ ಮನೆಗೆ ಬಂದ ಆರೋಗ್ಯ ಸಿಬ್ಬಂದಿ ಕ್ವಾರಂಟೈನ್ ನೋಟೀಸ್ ಅಂಟಿಸಿದ್ದಾರೆ. ಅದು ಹೇಗೆ ಎಂದು ಪ್ರಶ್ನಿಸಿದ್ದಕ್ಕೆ, ತಮಗೆ ಮೇಲಿನಿಂದ ಸೂಚನೆ ಬಂದಿದ್ದು, ಅದನ್ನು ಪಾಲಿಸುತ್ತಿದ್ದೇವಷ್ಟೇ ಎಂದು ಹೇಳಿದ್ದಾರೆ. ನಂತರ ಗೊತ್ತಾಗಿದ್ದು, ಸೋಂಕಿತ ವ್ಯಕ್ತಿಗಳೊಂದಿಗೆ ಫೋನಲ್ಲಿ ಸಂಪರ್ಕ ಮಾಡಿದವರನ್ನೂ ಕ್ವಾರಂಟೈನ್​ಗೆ ಒಳಪಡಿಸಲಾಗುತ್ತಿದೆ. ಇದು ಗೊತ್ತಾಗಿ, ಅಂಡಮಾನ್ ಕ್ರೋನಿಕಲ್ ಪತ್ರಿಕೆ ಸುದ್ದಿ ಮಾಡಿತ್ತು ಎಂದು ದಿ ನ್ಯೂಸ್ ಮಿನ್ಯೂಟ್ ಜಾಲತಾಣ ವರದಿ ಮಾಡಿದೆ.

First published: April 28, 2020, 4:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading