ತುಮಕೂರು(ಮೇ 27): ಕಲ್ಪತರು ನಾಡು ತುಮಕೂರು ಸದ್ಯ ಮಾರಕ ಕೊರೋನಾ ವೈರಸ್ನಿಂದ ನಲುಗುತ್ತಿದೆ. ಅಯ್ಯೋ ಅಲ್ಲೂ ಬಂತಾ, ಅಯ್ಯೋ ಇಲ್ಲಿಗೂ ಬಂತಾ..! ಎನ್ನುವಷ್ಟರಲ್ಲಿ ಈಗ ಹಳ್ಳಿ ಹಳ್ಳಿಗಳಿಗೆ ವೈರಸ್ ವ್ಯಾಪಿಸಿದೆ. ಇದರಿಂದ ಮತ್ತಷ್ಟು ಆತಂಕ ಶುರುವಾಗಿದೆ. ತೋಟತುಡುಕೆ ಅಂತ ಕೆಲಸ ಮಾಡಿಕೊಂಡು ಇದ್ದ ಗ್ರಾಮಸ್ಥರು ಈಗ ಮನೆಯಿಂದ ಹೊರೆಗೆ ಬರುವುದಕ್ಕೆ ಹೆದರುತ್ತಿದ್ದಾರೆ.
ಈ ಮೊದಲು ದೆಹಲಿ ನಿಜಾಮುದಿನ್ ಹಾಗೂ ಅಹಮದಾಬಾದ್ ನ ತಬ್ಲಿಘಿಗಳ ನಂಟು, ಪಾದರಾಯನಪುರದ ಕೇಸ್ ಬಳಿಕ ಮುಂಬೈ ಮಹಾಮಾರಿ ಇಷ್ಟೇ ಬಿಡಿ ಅಂತಾ ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಟ್ಟಿದ್ದ ತುಮಕೂರು ಈಗ ಮತ್ತೆ ಇದಕ್ಕೂ ಮೀರಿ ಒಂದು ಹೆಜ್ಜೆ ಮುಂದೆ ಹೋಗಿದೆ. ಅದು ತುಮಕೂರಿನ ಹಳ್ಳಿ ಹಳ್ಳಿಯ ಜನರು ನಿಜಕ್ಕೂ ಬೆಚ್ಚಿ ಬೀಳಿಸುವ ವಿಚಾರ.
ಈ ಬಾರಿ ಡೆಡ್ಲಿ ವೈರಸ್ ದೆಹಲಿ, ಅಹಮದಾಬಾದ್, ಪಾದರಾಯನಪುರ, ಮುಂಬೈನಿಂದ ಬಂದಿಲ್ಲ, ಈ ಬಾರಿ ಕೊರೋನಾ ಸ್ಥಳೀಯವಾಗಿ ಹರಡಿದೆ. ಯಾವುದೇ ಸಂಪರ್ಕ, ರೋಗ ಲಕ್ಷಣಗಳು ಇಲ್ಲದ ವ್ಯಕ್ತಿ ಗೆ ಕೊರೋನಾ ಅಟ್ಯಾಕ್ ಆಗಿದೆ. ತಮ್ಮ ಗ್ರಾಮದಲ್ಲಿ ಎಲ್ಲರಂತೆ ಆರಾಮವಾಗಿ ಓಡಾಡಿಕೊಂಡಿದ್ದ ವ್ಯಕ್ತಿ ಗೆ ಕೊರೋನಾ ಅಟ್ಟಹಾಸ ಮೆರೆದಿದೆ. ತನಗೆ ಕೊರೋನಾ ಬಂದಿದೆಯಾ ಎನ್ನುವ ಪ್ರಶ್ನೆ ಸ್ವತಃ ಆ ವ್ಯಕ್ತಿಗೆ ಕಾಡಲಾರಂಭಿಸಿದೆ.
ಯಾವ ರೋಗದ ಲಕ್ಷಣಗಳು ಇಲ್ಲದ 34 ವರ್ಷದ ವ್ಯಕ್ತಿ ಗೆ ಕೊರೋನಾ ಕಾಣಿಸಿಕೊಂಡಿದೆ. ತುಮಕೂರು ತಾಲೂಕಿನ ಮಾವಿನಕುಂಟೆ ಗ್ರಾಮದ ನಿವಾಸಿಯಾಗಿರುವ ವ್ಯಕ್ತಿ ರಾಮನಗರ ಜಿಲ್ಲೆಯ ಮಾಗಡಿಯ ಡಿಪೋದಲ್ಲಿ ಕೆಎಸ್ಆರ್ಟಿಸಿ ಬಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಕಳೆದ ವಾರ ಕರ್ತವ್ಯಕ್ಕೂ ಹಾಜರಿಗೂ ಮುನ್ನ ಸಹಜವಾಗಿ ಕೋವಿಡ್ 19 ಟೆಸ್ಟ್ಗೆ ಒಳಪಡಿಸಿದಾಗ ಕೊರೊನಾ ಸೊಂಕು ಇರುವುದು ಪತ್ತೆಯಾಗಿದೆ.
ಸದ್ಯ ಈ ಪ್ರಕರಣ ಜಿಲ್ಲೆಯ ಜನರ ಮತ್ತಷ್ಟು ನಿದ್ದೆಗೆಡಿಸಿದೆ, ಲಕ್ಷಣಗಳು ಇಲ್ಲದೇ ವೈರಸ್ ಬಂದಿದ್ದು ನಿಜಕ್ಕೂ ಆತಂಕಕ್ಕೆ ಕಾರಣವಾಗಿದೆ. ಸದ್ಯ ಇವರ ಸಂಪರ್ಕದಲ್ಲಿ ಇದ್ದ ತಮ್ಮ ಕುಟುಂಬದ ಐವರನ್ನ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ 17 ಜನರನ್ನ ಕ್ವಾರಂಟೈನ್ ಮಾಡಿ ಗ್ರಾಮವನ್ನ ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ. ಗ್ರಾಮಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಇನ್ನಷ್ಟು ಸಂಪರ್ಕದಲ್ಲಿ ಇದ್ದವರನ್ನ ಪತ್ತೆಮಾಡುತ್ತಿದ್ದಾರೆ.
ಇದನ್ನು ಓದಿ : ರಾಮನಗರದಲ್ಲಿ ಕಾಡಾನೆಗಳ ದಾಳಿಗೆ ರೈತನ ಬದುಕು ತತ್ತರ
ದೆಹಲಿ, ಮುಂಬೈ ನಿಂದ ಸೊಂಕು ಅಂತಾ ಸುಮ್ಮನಿದ್ದ ತುಮಕೂರಿಗೆ ಈಗ ಹಳ್ಳಿ ಹಳ್ಳಿಗಳಿಗೆ ಕೋರೊನಾ ಕಾಲಿಟ್ಟಿರುವುದು ನಿಜಕ್ಕೂ ಭಯಬೀತಿರನ್ನಾಗಿಸಿದೆ. ಸದ್ಯ ಇದ್ರಿಂದ ಜಿಲ್ಲೆಯಲ್ಲಿ 27 ಕ್ಕೆ ಪಾಸಿಟಿವ್ ಸಂಖ್ಯೆಯಾಗಿದ್ದು ಇಬ್ಬರ ಸಾವನ್ನಪ್ಪಿದ್ದು, ಐವರು ಗುಣಮುಖರಾಗಿದ್ದು, 20 ಆಕ್ಟಿವ್ ಕೇಸ್ಗಳಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ