ಸಾಮಾಜಿಕ ಅಂತರ ಕಾಯ್ದುಕೊಳ್ಳಲೆಂದು ಮಾರ್ಕ್‌ ಮಾಡಲಾಗಿದ್ದ ಬಾಕ್ಸ್‌ನಲ್ಲಿ ಚಪ್ಪಲಿ ಬಿಟ್ಟ ಜನ; ವಿಡಿಯೋ ವೈರಲ್

ಮೈಸೂರಿನ ಹೆಬ್ಬಾಳ ಬಡಾವಣೆಯಲ್ಲಿ ಘಟನೆ ನಡೆದಿದೆ. ಸ್ಥಳೀಯ ನಗರ ಪಾಲಿಕೆ ಸದಸ್ಯ ಕೆ. ವಿ. ಶ್ರೀಧರ್ ರಿಂದ ಇಂದು ಸುಮಾರು 600 ಜನರಿಗೆ ಅಗತ್ಯ ವಸ್ತುಗಳ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಲ್ಲದೆ, ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂಬ ಸಲುವಾಗಿ ಬಾಕ್ಸ್‌ ಸಹ ಬಿಡಿಸಲಾಗಿತ್ತು.

news18-kannada
Updated:April 24, 2020, 3:53 PM IST
ಸಾಮಾಜಿಕ ಅಂತರ ಕಾಯ್ದುಕೊಳ್ಳಲೆಂದು ಮಾರ್ಕ್‌ ಮಾಡಲಾಗಿದ್ದ ಬಾಕ್ಸ್‌ನಲ್ಲಿ ಚಪ್ಪಲಿ ಬಿಟ್ಟ ಜನ; ವಿಡಿಯೋ ವೈರಲ್
ಸಾಮಾಜಿಕ ಅಂತರ ಕಾಯ್ದುಕೊಳ್ಳಲೆಂದು ಮಾರ್ಕ್‌ ಮಾಡಲಾಗಿದ್ದ ಬಾಕ್ಸ್‌ನಲ್ಲಿ ಚಪ್ಪಲಿ ಬಿಟ್ಟಿರುವ ಜನ.
  • Share this:
ಮೈಸೂರು (ಏಪ್ರಿಲ್ 24); ಕೊರೋನಾ ಸೋಂಕು ಹರಡದಂತೆ ತಡೆಯಲು ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಸರ್ಕಾರ ಕಳೆದ ಎರಡು ತಿಂಗಳಿನಿಂದ ಪ್ರಚಾರ ನಡೆಸುತ್ತಿದೆ. ಆದರೆ, ಮೈಸೂರಿನ ಜನ ಅಗತ್ಯ ವಸ್ತುಗಳನ್ನು ಖರೀದಿಸುವ ಸರತಿ ಸಾಲಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬದಲು ಸಲುವಾಗಿ ಬಿಡಿಸಲಾಗಿದ್ದ ಬಾಕ್ಸ್‌ನಲ್ಲಿ ಚಪ್ಪಲಿ ಬಿಟ್ಟು ಮತ್ತೊಂದಡೆ ಗುಂಪು ಸೇರಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.

ಮೈಸೂರಿನ ಹೆಬ್ಬಾಳ ಬಡಾವಣೆಯಲ್ಲಿ ಘಟನೆ ನಡೆದಿದೆ. ಸ್ಥಳೀಯ ನಗರ ಪಾಲಿಕೆ ಸದಸ್ಯ ಕೆ. ವಿ. ಶ್ರೀಧರ್ ರಿಂದ ಇಂದು ಸುಮಾರು 600 ಜನರಿಗೆ ಅಗತ್ಯ ವಸ್ತುಗಳ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಲ್ಲದೆ, ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂಬ ಸಲುವಾಗಿ ಬಾಕ್ಸ್‌ ಸಹ ಬಿಡಿಸಲಾಗಿತ್ತು.

ಆದರೆ, ಈ ವೇಳೆ ಬಾಕ್ಸ್‌ನಲ್ಲಿ ನಿಲ್ಲದ ಜನ ಆ ಬಾಕ್ಸ್‌ ಮಾರ್ಕ್‌‌ನಲ್ಲಿ ತಮ್ಮ ತಮ್ಮ ಚಪ್ಪಲಿಯನ್ನು ಬಿಟ್ಟು ಪಕ್ಕದಲ್ಲಿ ಗುಂಪು ಸೇರಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದ್ದು ನಗೆಪಾಟಲಿಗೆ ಈಡಾಗುತ್ತಿದೆ. ಅಲ್ಲದೆ, ಲಾಕ್‌ಡೌನ್ ಘೋಷಣೆಯಾದಂದಿನಿಂದ ಇಂತಹ ಪ್ರಕರಣಗಳು ಅಲ್ಲಲ್ಲಿ ವರದಿಯಾಗುತ್ತಲೇ ಇದೆ.

ಇದನ್ನೂ ಓದಿ ; ಪಾದರಾಯನಪುರ ಗಲಾಟೆ ಆರೋಪಿಗಳು ಬೆಂಗಳೂರಿಗೆ ಶಿಫ್ಟ್‌; ರೆಡ್‌ಜೋನ್‌ನಲ್ಲಿ ಹೆಚ್ಚಿದ ಆತಂಕ
First published: April 24, 2020, 3:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading