HOME » NEWS » Coronavirus-latest-news » PEOPLE DO NOT WORRY ABOUT LOCK DOWN SAYS DCM ASHWATH NARAYAN RHHSN

ಲಾಕ್​ಡೌನ್ ಅಂತಾ ಜನರಲ್ಲಿ ಆತಂಕ ಮೂಡಿಸೋದು ಬೇಡ, ಇರುವ ವ್ಯವಸ್ಥೆಯಲ್ಲೇ ಕೊರೋನಾ ನಿಯಂತ್ರಿಸೋಣ; ಅಶ್ವಥ್ ನಾರಾಯಣ

ಈಗಾಗಲೇ ಪಕ್ಕದ ಮಹಾರಾಷ್ಟ್ರದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ವಾರದ ದಿನಗಳಲ್ಲಿ ನೈಟ್​ ಕರ್ಫ್ಯೂ ಹಾಗೂ ವಾರಾಂತ್ಯದ ದಿನಗಳಲ್ಲಿ ಲಾಕ್​ಡೌನ್​ ಘೋಷಣೆ ಮಾಡಲಾಗಿದೆ. ಅದೇ ರೀತಿ ಬೆಂಗಳೂರಿನಲ್ಲೂ ಲಾಕ್​ಡೌನ್​ ಮಾಡುವ ಚಿಂತನೆ ಇದೆ ಎಂದು ಹೇಳಲಾಗುತ್ತಿದೆ.

news18-kannada
Updated:April 12, 2021, 2:33 PM IST
ಲಾಕ್​ಡೌನ್ ಅಂತಾ ಜನರಲ್ಲಿ ಆತಂಕ ಮೂಡಿಸೋದು ಬೇಡ, ಇರುವ ವ್ಯವಸ್ಥೆಯಲ್ಲೇ ಕೊರೋನಾ ನಿಯಂತ್ರಿಸೋಣ; ಅಶ್ವಥ್ ನಾರಾಯಣ
ಉಪಮುಖ್ಯಮಂತ್ರಿ ಅಶ್ವತ್ಹನಾರಾಯಣ
  • Share this:
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಪ್ರಕರಣಗಳು ವ್ಯಾಪಕವಾಗಿ ಹಬ್ಬುತ್ತಿರುವ ಕಾರಣದಿಂದ ಡಿಸಿಎಂ ಅಶ್ವಥ್ ನಾರಾಯಣ ಅವರು ಇಂದು ಬಿಬಿಎಂಪಿ ಅಧಿಕಾರಿಗಳು ಹಾಗೂ ತಜ್ಞರ ಜೊತೆಗಿನ ಸಭೆ ನಡೆಸಿದರು. ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಶ್ವಥ್ ನಾರಾಯಣ ಅವರು, ಕೊರೋನಾ ತಡೆಗಟ್ಟುವಿಕೆ ಬಗ್ಗೆ ಚರ್ಚೆ ಮಾಡಿದ್ದೇವೆ. ಕೊರೋನಾ ನಿರ್ವಹಣೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇವೆ. ಪಶ್ಚಿಮ ವಲಯದಲ್ಲಿ 6000 ಕೇಸ್ ಗಳು ಬಂದಿವೆ. 6 ಸಾವಿರದಿಂದ 10 ಸಾವಿರ ಟೆಸ್ಟ್ ಮಾಡಬೇಕು. ಸೋಂಕಿತರ, ಪ್ರಾಥಮಿಕ ಹಾಗೂ ದ್ವಿತೀಯ ಕಾಂಟ್ಯಾಕ್ಟ್ ಇರೋರ ತಪಾಸಣೆಗೆ ಒಳಪಡಿಸಬೇಕು. ಪಶ್ಚಿಮ ವಲಯದಲ್ಲಿ ನಾಲ್ಕೂವರೆ ಸಾವಿರ ಜನ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 700 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯಾರು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಅವರಿಗೆ ಔಷಧಿ ಕೊಡಲು ಕ್ರಮ ವಹಿಸಲಾಗಿದೆ. ಅವರ ಮನೆಯಲ್ಲಿ ಆಕ್ಸಿಜನ್ ವ್ಯವಸ್ಥೆ ಬಗ್ಗೆಯೂ ಚರ್ಚೆ ಮಾಡಿದ್ದೇವೆ ಎಂದು ತಿಳಿಸಿದರು.

ಕೊರೋನಾ ರೋಗಿಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಯಾವುದೇ ರೀತಿಯ ಬೆಡ್ ಕೊರತೆ ಇಲ್ಲ.  ಚಿಕಿತ್ಸೆಗೂ ಯಾವುದೇ ಔಷಧ ಕೊರತೆ ಇಲ್ಲ. ಎಲ್ಲಾ ರೀತಿಯಲ್ಲೂ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ. ಕೊರೋನಾ ತಡೆಗೆ ಲಾಕ್ ಡೌನ್ ಮಾಡುವ ವಿಚಾರವಾಗಿ  ಮುಖ್ಯಮಂತ್ರಿಗಳು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಲಾಕ್ ಡೌನ್ ಇಲ್ಲ ಅಂತಾ. ಲಾಕ್ ಡೌನ್ ಅಂತಾ ಜನರಲ್ಲಿ ಆತಂಕ ಮೂಡಿಸೋದು ಬೇಡ. ಇರುವ ವ್ಯವಸ್ಥೆಯಲ್ಲೇ ಕೊರೋನಾ ನಿಯಂತ್ರಣ ಮಾಡ್ತೇವೆ. ಸಂಖ್ಯೆ ಜಾಸ್ತಿಯಾಗ್ತಿದೆ, ಆದರೆ ಎಲ್ಲರ ಸಹಕಾರದಿಂದ ಕೊರೋನಾ ನಿರ್ವಹಣೆ ಮಾಡಬೇಕು. ಜನರು ಕೂಡ ಈ ಬಗ್ಗೆ ಎಚ್ಚರಿಕೆ ವಹಿಸಿ, ಸರ್ಕಾರದ ಜೊತೆ ಕೈ ಜೋಡಿಸಬೇಕು ಎಂದು ಡಿಸಿಎಂ ಅಶ್ವಥ್ ನಾರಾಯಣ ಅವರು ಮನವಿ ಮಾಡಿದರು.

ಇದನ್ನು ಓದಿ: Weekend Lockdown - ಬೆಂಗಳೂರಿನಲ್ಲಿ ವೀಕೆಂಡ್ ಲಾಕ್​ಡೌನ್ ಸಾಧ್ಯತೆ; ಏ. 16ರಂದು ನಿರ್ಧಾರ

ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕು ಪ್ರಕರಣಗಳು ನಿರೀಕ್ಷೆಗೂ ಮೀರಿ ಎಗ್ಗಿಲ್ಲದೇ ಏರಿಕೆ ಆಗುತ್ತಿವೆ. ದಿನವೊಂದಕ್ಕೆ ದಾಖಲಾಗುತ್ತಿರುವ ಪ್ರಕರಣಗಳ ಸಂಖ್ಯೆ 10 ಸಾವಿರ ದಾಟಿ ಹೋಗುತ್ತಿದೆ. ಮೊದಲ ಅಲೆಗಿಂತಲೂ ಸೋಂಕಿನ ಎರಡನೇ ಅಲೆ ತೀವ್ರಮಟ್ಟದಲ್ಲಿದೆ. ಈಗಾಗಲೇ ಎರಡು ದಿನಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದ ಎಂಟು ನಗರಗಳಲ್ಲಿ ಕೊರೋನಾ ಕರ್ಫ್ಯೂ (Nigh Curfew) ಹೇರಲಾಗಿದೆ. ಆದರೂ ಪರಿಸ್ಥಿತಿ ತಹಬದಿಗೆ ಬರುವ ಲಕ್ಷಣ ಕಾಣುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ಇನ್ನಷ್ಟು ಬಿಗಿಕ್ರಮಗಳನ್ನ ಕೈಗೊಳ್ಳಲು ನಿರ್ಧರಿಸಿದೆ. ಬೆಂಗಳೂರಿನಲ್ಲಿ ಈ ವಾರಾಂತ್ಯದ ಎರಡು ದಿನಗಳನ್ನ ಲಾಕ್ ಡೌನ್ ಮಾಡಲು ಸರಕಾರ ಗಂಭೀರ ಚಿಂತನೆ ನಡೆಸಿರುವುದು ಮೂಲಗಳಿಂದ ತಿಳಿದುಬಂದಿದೆ. ಏಪ್ರಿಲ್ 16ರಂದು ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆಯೊಂದು ನಡೆಯಲಿದ್ದು, ಆಗ ಈ ಬಗ್ಗೆ ಚರ್ಚಿಸಿ ಒಂದು ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಈಗಾಗಲೇ ಪಕ್ಕದ ಮಹಾರಾಷ್ಟ್ರದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ವಾರದ ದಿನಗಳಲ್ಲಿ ನೈಟ್​ ಕರ್ಫ್ಯೂ ಹಾಗೂ ವಾರಾಂತ್ಯದ ದಿನಗಳಲ್ಲಿ ಲಾಕ್​ಡೌನ್​ ಘೋಷಣೆ ಮಾಡಲಾಗಿದೆ. ಅದೇ ರೀತಿ ಬೆಂಗಳೂರಿನಲ್ಲೂ ಲಾಕ್​ಡೌನ್​ ಮಾಡುವ ಚಿಂತನೆ ಇದೆ ಎಂದು ಹೇಳಲಾಗುತ್ತಿದೆ.
Published by: HR Ramesh
First published: April 12, 2021, 2:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories