Coronavirus: ಕೋವಿಡ್ ನಂತರ ಶ್ವಾಸಕೋಶ ಸಮಸ್ಯೆ, ಹೃದಯ ಸಮಸ್ಯೆಯಂಥ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಪ್ರಕರಣಗಳ ಜೊತೆಗೆ. ಇದೀಗ ಈ ಪಟ್ಟಿಗೆ ಮತ್ತೊಂದು ಸಮಸ್ಯೆ ಸೇರ್ಪಡೆಯಾಗಿದೆ, ಅದುವೇ ಹೇರ್‌ಫಾಲ್.. ಬಹುಶಃ ಅನೇಕರು ಗಮನಿಸಿರಲಿಕ್ಕಿಲ್ಲ. ಆದ್ರೆ ಕೂದಲು ವಿಪರೀತವಾಗಿ ಉದುರುತ್ತಿದ್ದು, ನಿಮಗೆ ಈಗಾಗಲೇ ಕೋವಿಡ್ ಬಂದು ಗುಣಮುಖರಾಗಿದ್ದಿರಿ ಎಂದರೆ ಇದರ ಮೂಲ ಸೋಂಕಿನಲ್ಲೇ ಇದೆ ಎಂದು ಅಂದಾಜಿಸಬಹುದು. ಹೌದು, ಕೋವಿಡ್ ಸೋಂಕಿನಿಂದ ಗುಣಮುಖರಾದ ಶೇ. 40ಕ್ಕೂ ಹೆಚ್ಚು ಜನರಲ್ಲಿ ಕೂದಲು ಉದುರುವ ಸಮಸ್ಯೆ ಹೇರಳವಾಗಿ ಕಂಡು ಬರುತ್ತಿರುವುದು ವರದಿಯಾಗುತ್ತಿದೆ. ಕೆಲವು ಅಧ್ಯಯನಗಳು ಸಹ ಈ ಬಗ್ಗೆ ಉಲ್ಲೇಖಿಸಿವೆ. ಇದರಿಂದ ಕೋವಿಡ್‌ನಿಂದ ಗುಣಮುಖರಾದರೂ ಕೂದಲು ಉದುರುವ ಸಮಸ್ಯೆಗೆ ಜನರು ಮಾನಸಿಕ ಕಿರಿಕಿರಿ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಫೋರ್ಟಿಸ್ ಆಸ್ಪತ್ರೆ ಡರ್ಮಾಲಜಿ ಕನ್ಸಲ್ಟೆಂಟ್ ಡಾ. ಸುಧೀಂದ್ರ ಜಿ ಉದ್ಬಾಲ್ಕರ್ ಕೋವಿಡ್ ಬಳಿಕ ಕೂದಲು ಉದುರುವ ಸಮಸ್ಯೆಯ ಕುರಿತು ಒಂದಷ್ಟು ಆಸಕ್ತಿಕರ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಆದರೆ, ಇದು ತಾತ್ಕಾಲಿಕ ಸಮಸ್ಯೆ, ಈ ಬಗ್ಗೆ ಇನ್ನಷ್ಟು ತಲೆ ಕೆಡಿಸಿಕೊಂಡರೆ ಕೂದಲುದುರುವ ಸಮಸ್ಯೆ ಹೆಚ್ಚಳವಾಗುವುದು ನಿಶ್ಚಿತ. ಹೀಗಾಗಿ ಕೂದಲುದುರುವುದನ್ನು ಕಡಿಮೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಆಹಾರ ಕ್ರಮ ಬದಲಾವಣೆ ಮಾಡಿಕೊಳ್ಳಬೇಕು ಎನ್ನುತ್ತಾರೆ.
ರೋಗ ಲಕ್ಷಣವಿಲ್ಲದವರಲ್ಲೂ ಕೂದಲು ಉದುರುತ್ತಿದೆ: ಸಾಮಾನ್ಯವಾಗಿ ಕೋವಿಡ್‌ನ ಗುಣಲಕ್ಷಣಗಳು ಹೆಚ್ಚಿದ್ದವರಿಗೆ ಕೂದಲು ಉದುರುವ ಸಮಸ್ಯೆ ಸಾಮಾನ್ಯವಾಗಿತ್ತು, ಆದರೆ, ಲಕ್ಷಣಗಳೇ ಇಲ್ಲದವರಲ್ಲೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿರುವುದು ಆಶ್ಚರ್ಯ ಮೂಡಿಸಿದೆ.
ಇದನ್ನೂ ಓದಿ: Covid Report: ತಮಿಳುನಾಡಿನಿಂದ ಬರುವ ಎಲ್ಲರಿಗೂ ನೆಗೆಟಿವ್ ರಿಪೋರ್ಟ್ ಕಡ್ಡಾಯ, ರಿಪೋರ್ಟ್ ಇಲ್ಲದಿದ್ರೆ ಗಡಿಯಲ್ಲೇ ವಾಪಸ್
ಕಾರಣವೇನು? ಕೋವಿಡ್ ಸೋಂಕಿನಿAದ ಗುಣಮುಖರಾದ ಒಂದು ಅಥವಾ ಎರಡು ತಿಂಗಳ ಬಳಿಕ ಕೂದಲು ಉದುರುವ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ದೇಹದಲ್ಲಾಗುವ ಬದಲಾವಣೆಗಳು, ಜ್ವರ, ಒತ್ತಡ, ಆತಂಕ ಹಠಾತ್ ಹಾರ್ಮೋನ್ ಬದಲಾವಣೆಗಳು ಕೂದಲು ಉದುರುವಿಕೆಗೆ ಕಾರಣವಾಗುತ್ತಿವೆ ಎಂದು ಅವರು ಹೇಳುತ್ತಾರೆ.
ಪರಿಹಾರವೇನು? ಮೊದಲು ಕೂದಲು ಉದುರುತ್ತಿದೆ ಎಂಬ ಆತಂಕವನ್ನು ಕಡಿಮೆ ಮಾಡಿಕೊಳ್ಳಬೇಕು, ಮಾನಸಿಕ ಒತ್ತಡದಿಂದಲೂ ಬಹುತೇಕ ಕೂದಲುದುರುವ ಸಮಸ್ಯೆ ಹೆಚ್ಚಳವಾಗಬಹುದು. ಜೊತೆಗೆ, ಕಬ್ಬಿಣಾಂಶ ಹಾಗೂ ಪ್ರೋಟಿನ್‌ಯುಕ್ತ ಆಹಾರ ಸೇವನೆ ಮಾಡಬೇಕು, ಜೊತೆಗೆ, ಡ್ರೆöÊ ಫ್ರೂಟ್ಸ್, ಹಣ್ಣು ತರಕಾರಿ, ಮೊಟ್ಟೆ, ಮಾಂಸ, ಮೀನುಗಳ ಸೇವನೆ ಮಾಡುವುದುರಿಂದ ದೇಹಕ್ಕೆ ಪ್ರೋಟಿನ್ ಸಿಗಲಿದ್ದು, ಕೂದಲ ಬೆಳವಣಿಗೆ ಪ್ರೇರೇಪಿಸುತ್ತದೆ. ಜೊತೆಗೆ ಕೋವಿಡ್‌ನಿಂದ ಗುಣಮುಖರಾದ ಬಳಿಕ ಕನಿಷ್ಠ 6 ತಿಂಗಳ ಕಾಲ ಕೂದಲ ಆರೈಕೆಗೆ ಆದ್ಯತೆ ನೀಡಬೇಕು. ಇದು ಸಹ ನಿಮ್ಮ ಕೂದಲ ರಕ್ಷಣೆಗೆ ನೆರವಾಗಲಿದೆ.
ಯಾರಿಗೆ ಹೆಚ್ಚು: ಕೋವಿಡ್ ಸೋಂಕಿನ ಬಳಿಕ ಗಂಡು ಹಾಗೂ ಹೆಣ್ಣು ಇಬ್ಬರಲ್ಲೂ ಸಮಪ್ರಮಾಣದಲ್ಲಿ ಕೂದಲುದುರುವ ಸಮಸ್ಯೆ ಕಂಡು ಬರುತ್ತಿದೆ.
ಇದನ್ನೂ ಓದಿ: ಶ್ರಾವಣ ಮಾಸದಲ್ಲಿ ನಾನ್ ವೆಜ್ ತಿನ್ನುವುದಿಲ್ಲ ಯಾಕೆ? ಇದಕ್ಕೂ ವೈಜ್ಞಾನಿಕ ಕಾರಣ ಇದೆಯಾ?
ಸ್ಕಿನ್ ಅಲರ್ಜಿ ಸಮಸ್ಯೆ: ಮತ್ತೊಂದೆಡೆ ಕೋವಿಡ್ ಬಳಿಕ ಕೆಲವರಲ್ಲಿ ಸ್ಕಿನ್ ಅಲರ್ಜಿಯಂಥ ಪ್ರಕರಣಗಳು ಕಂಡು ಬರುತ್ತಿದೆ. ಈ ಪ್ರಮಾಣ ಶೇ.20ರಷ್ಟು ಇದೆ. ಆರೋಗ್ಯದಲ್ಲಿ ಹೆಚ್ಚು ಸೂಕ್ಷö್ಮತೆ ಹೊಂದಿದವರಲ್ಲಿ ಅಲರ್ಜಿಯಂಥ ಪ್ರಕರಣಗಳು ಕಂಡು ಬರುತ್ತಿದೆ. ಹೀಗಾಗಿ ಕೋವಿಡ್ ಬಳಿಕ ಚರ್ಮ ಹಾಗೂ ಕೂದಲಿನ ಆರೈಕೆ ಮಾಡುವುದು ಮುಖ್ಯ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ