ಕೊರೋನಾ ಎಫೆಕ್ಟ್​: ಬೆಂಗಳೂರಿನಿಂದ ತಮ್ಮ ಹಳ್ಳಿಗಳಿಗೆ ಬಂದು ಕೃಷಿ ಮಾಡುತ್ತಿರುವ ಜನ

ಕೊರೋನಾ ತೊಲಗುವವರೆಗೂ ಬೆಂಗಳೂರು ಸೇಫ್ ಅಲ್ಲಾ ಅನ್ನೋದು ಬೆಂಗಳೂರಿಗೆ ವಲಸೆ ಹೊದವರ ನಿರ್ಧಾರ. ಹಾಗಾಗಿ ತಮ್ಮ ತಮ್ಮ ಊರಿಗೆ ಬಂದು ಕೃಷಿಯತ್ತ ತೊಡಗಿದ್ದಾರೆ. ಅದರಲ್ಲೇ ಖುಷಿ ಕಾಣುತಿದ್ದಾರೆ..

ಕೃಷಿಯಲ್ಲಿ ತೊಡಗಿರುವ ಯುವಕರು.

ಕೃಷಿಯಲ್ಲಿ ತೊಡಗಿರುವ ಯುವಕರು.

  • Share this:
ತುಮಕೂರು(ಜು. 16): ಇಷ್ಟು ದಿನ ಕೃಷಿ ಜಮೀನುಗಳೆಲ್ಲಾ ಬೀಳುಬಿಡುತಿದ್ದರು. ಕಾರಣ ನಗರದತ್ತ ಯುವಕರು ಮುಖ ಮಾಡುತಿದ್ದರು. ಆದರೆ ಈಗ ಬೀಳು ಬಿಟ್ಟ ಜಮೀನೆಲ್ಲಾ ಹಸನಾಗುತ್ತಿದೆ. ಅದರಲ್ಲಿ ಬೆಳೆ ಬೆಳೆಯಲಾಗುತ್ತಿದೆ. ಇದೆಲ್ಲಾ ಕೊರೋನಾ ಎಫೆಕ್ಟ್.

ಬೆಂಗಳೂರು ಬಿಟ್ಟು ಬಂದ ಜನರೆಲ್ಲಾ ಈಗ ಕೃಷಿಯಲ್ಲಿ ತೊಡಗಿಕೊಂಡಿರಿವುದೇ ಇದಕ್ಕೆ ಕಾರಣ. ತುಮಕೂರು ಜಿಲ್ಲೆಯಲ್ಲಿ ಈಗ ಕೃಷಿ ಚಟುವಟಿಕೆಗಳು ಜೋರಾಗಿದೆ. ಇಷ್ಟು ದಿನ ಬೀಳು ಬಿಡುತಿದ್ದ ಜಮೀನುಗಳಲ್ಲಿ ವಿವಿಧ ರೀತಿಯ ಕೃಷಿ ಮಾಡಲಾಗುತ್ತಿದೆ. ಕೊರೋನಾದಿಂದ ಬೆಂಗಳೂರು ಬಿಟ್ಟು ಪುನಃ ತಮ್ಮೂರಿಗೆ ಬಂದ ಜನರು ಕೃಷಿಯತ್ತ ಮುಖಮಾಡಿದ್ದಾರೆ.

ಉರುಳಿ, ಭತ್ತ ಸೇರಿದಂತೆ ತರಕಾರಿಗಳನ್ನು ಬೆಳೆಯುತಿದ್ದಾರೆ. ಮಾರ್ಚ್ ತಿಂಗಳಲ್ಲಿ ಊರಿನತ್ತ ಮುಖ ಮಾಡಿದ ಜನರು ಬೆಂಗಳೂರಿಗೆ ವಾಪಸ್ ಹೋಗದೇ ಕೃಷಿ ಮತ್ತು ತೋಟಗಾರಿಕೆ ಬೆಳೆ ಬೆಳೆಯುವಲ್ಲಿ ನಿರತರಾಗಿದ್ದಾರೆ. ಆ ಮೂಲಕ ಆದಾಯವನ್ನೂ ಗಳಿಸುತಿದ್ದಾರೆ.

ತಂದೆ-ತಾಯಿಗಳು ಜಮೀನಿನಲ್ಲಿ ಕೆಲಸ ಮಾಡಿದ್ರೆ ಮಕ್ಕಳು ಉದ್ಯೋಗ ಹರಿಸಿ ನಗರ, ಪಟ್ಟಣಕ್ಕೆ ಹೋಗುತಿದ್ದರು. ಪರಿಣಾಮ ಕೃಷಿ ಕೆಲಸಕ್ಕೆ ಕೂಲಿ ಆಳುಗಳು ಸಿಗುತ್ತಿರಲಿಲ್ಲ. ಹಾಗಾಗಿ ಕೃಷಿ ಜಮೀನಿಗಳನ್ನು ಬೀಳು ಬಿಡಲಾಗುತಿತ್ತು. ಈಗ ತುಮಕೂರು ಜಿಲ್ಲೆಯಲ್ಲಿ ನೂರಾರು ಹೆಕ್ಟೆರ್ ಬೀಳು ಬಿಟ್ಟ ಜಮೀನಲ್ಲಿ ಉಳುಮೆ ಮಾಡಲಾಗುತ್ತಿದೆ.

ಸುಮಾರು 4 ಸಾವಿರ ಯುವಕರು ಬೆಂಗಳೂರಿನಿಂದ ಬಂದು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎನ್ನಲಾಗಿದೆ. ಇದರ ಜೊತೆ ಸರ್ಕಾರ ಈಗ ಕೃಷಿಗೆ ಹೆಚ್ಚಿನ ಒತ್ತು ಕೊಟ್ಟು ರೈತರಿಗೆ ಅನುಕೂಲವಾಗುವ ರೀತಿ ಹೊಸ ಯೋಜನೆ ಘೋಷಣೆ ಮಾಡಬೇಕು ಅಂತಾರೆ ರೈತರು.

ಇದನ್ನೂ ಓದಿ: ಬ್ರಾಹ್ಮಣರಿಗೆ ಜಾತಿ ಪ್ರಮಾಣ ಪತ್ರ ನೀಡಲು ರಾಜ್ಯ ಸರ್ಕಾರದ ಆದೇಶ

ಕೊರೋನಾ ತೊಲಗುವವರೆಗೂ ಬೆಂಗಳೂರು ಸೇಫ್ ಅಲ್ಲಾ ಅನ್ನೋದು ಬೆಂಗಳೂರಿಗೆ ವಲಸೆ ಹೊದವರ ನಿರ್ಧಾರ. ಹಾಗಾಗಿ ತಮ್ಮ ತಮ್ಮ ಊರಿಗೆ ಬಂದು ಕೃಷಿಯತ್ತ ತೊಡಗಿದ್ದಾರೆ. ಅದರಲ್ಲೇ ಖುಷಿ ಕಾಣುತಿದ್ದಾರೆ..
Published by:Ganesh Nachikethu
First published: