9ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಪರೀಕ್ಷೆ ಇಲ್ಲದೆ ಪಾಸ್, SSLCಗೆ ವೇಳಾಪಟ್ಟಿ ಪ್ರಕಟ; ಸಚಿವ ಸುರೇಶ್ ಕುಮಾರ್

10 ನೇ ತರಗತಿಯ ಪರೀಕ್ಷೆಯ ವೇಳಾಪಟ್ಟಿಯನ್ನು ಏಪ್ರಿಲ್ 14ರ ನಂತರ ನಿರ್ಧಾರ ಮಾಡಲಾಗುವುದು. ಇನ್ನೂ ದ್ವಿತೀಯ ಪಿಯುಸಿ ತರಗತಿಯ ಇಂಗ್ಲೀಷ್ ಪರೀಕ್ಷೆ ಮಾತ್ರ ಬಾಕಿ ಇದ್ದು ಇದಕ್ಕೂ ದಿನಾಂಕವನ್ನು ನಿಗದಿ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್‌ ತಿಳಿಸಿದ್ದಾರೆ.

ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್‌.

ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್‌.

  • Share this:
ಬೆಂಗಳೂರು (ಏಪ್ರಿಲ್ 02); ಮಾರಣಾಂತಿಕ ಕೊರೋನಾ ಭೀತಿ ಹಿನ್ನೆಲೆ 7 ರಿಂದ 9 ನೇ ತರಗತಿವರೆಗಿನ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೆ ಪಾಸು ಮಾಡಲಾಗುವುದು ಮತ್ತು ಏಪ್ರಿಲ್ 14 ಲಾಕ್‌ಡೌನ್ ಅವಧಿ ಮುಗಿದ ನಂತರ SSLS ಮತ್ತು PUC ಪರೀಕ್ಷೆಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

ಈ ಕುರಿತು ಇಂದು ಮಾಹಿತಿ ನೀಡಿರುವ ಸುರೇಶ್ ಕುಮಾರ್, "ಎಲ್ಲಾ ತರಗತಿಗಳಿಗೂ ಇದು ಪರೀಕ್ಷೆ ನಡೆಸಲು ಸೂಕ್ತ ಕಾಲ ಅಲ್ಲ. ಶಾಲಾ ಮಟ್ಟದಲ್ಲಿ ಫಾರ್ಮೆಟೀವ್, ಸಮೇಟೀವ್ ಪರೀಕ್ಷೆ ಆಧಾರದಲ್ಲಿ 9ನೇ ತರಗತಿ ವರೆಗೆ ಎಲ್ಲಾ ಶಾಲಾ ವಿದ್ಯಾರ್ಥಿಗಳನ್ನು ಪಾಸು ಮಾಡಲಾಗಿದೆ. 7 ನೇ ತರಗತಿ ಮೌಲ್ಯಾಂಕನ ಪರೀಕ್ಷೆಯೂ ರದ್ದು ಮಾಡಲಾಗಿದೆ. ಈ ಕುರಿತು ಈ ಹಿಂದೆಯೇ ಘೋಷಣೆ ಮಾಡಲಾಗಿದೆ.

10 ನೇ ತರಗತಿಯ ಪರೀಕ್ಷೆಯ ವೇಳಾಪಟ್ಟಿಯನ್ನು ಏಪ್ರಿಲ್ 14ರ ನಂತರ ನಿರ್ಧಾರ ಮಾಡಲಾಗುವುದು. ಇನ್ನೂ ದ್ವಿತೀಯ ಪಿಯುಸಿ ತರಗತಿಯ ಇಂಗ್ಲೀಷ್ ಪರೀಕ್ಷೆ ಮಾತ್ರ ಬಾಕಿ ಇದ್ದು ಇದಕ್ಕೂ ದಿನಾಂಕವನ್ನು ನಿಗದಿ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಅಲ್ಲದೆ ಪರೀಕ್ಷೆ ಇಲ್ಲ ಎಂಬ ಕಾರಣಕ್ಕೆ ಲಾಕ್‌ಡೌನ್ ಉಲ್ಲಂಘಿಸಿ ವಿದ್ಯಾರ್ಥಿಗಳು ಮನೆಯಿಂದ ಹೊರ ಬರುವಂತಿಲ್ಲ" ಎಂದೂ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ : ಭಾರತದಲ್ಲಿ 50ಕ್ಕೇರಿದ ಕೊರೋನಾ ಸಾವಿನ ಸಂಖ್ಯೆ; 2000 ಗಡಿದಾಟಿದ ಸೋಂಕಿತರು!

 
First published: