ಇನ್ನು ಮುಂದೆ ಅಂತರ ಜಿಲ್ಲೆ ಪ್ರಯಾಣಕ್ಕೆ ಪಾಸ್​ ಅಗತ್ಯವಿಲ್ಲ; ಪೊಲೀಸ್ ಮಹಾನಿರ್ದೇಶಕ

ಈ ಮೊದಲು ಮೂರನೇ ಹಂತದ ಲಾಕ್​ಡೌನ್​ನಲ್ಲಿ ಅಂತರ್​ ಜಿಲ್ಲಾ ಪ್ರಯಾಣಕ್ಕೆ ಅವಕಾಶ ನೀಡಲಾಗಿದ್ದರೂ ಸಾರ್ವಜನಿಕ ಸಾರಿಗೆಗೆ ಅನುಮತಿ ನೀಡಿರಲಿಲ್ಲ. ಇದರ ಜೊತೆಗೆ ಅಂತರ್​ಜಿಲ್ಲಾ ಪ್ರಯಾಣಕ್ಕೆ ಪೊಲೀಸ್ ಇಲಾಖೆಯಿಂದ ನೀಡುವ ಇ-ಪಾಸ್​ ಕಡ್ಡಾಯವಾಗಿತ್ತು.

ಚೆಕ್ ಪೋಸ್ಟ್

ಚೆಕ್ ಪೋಸ್ಟ್

 • Share this:
  ಬೆಂಗಳೂರು: ಮೇ 31ರವರೆಗೂ ದೇಶಾದ್ಯಂತ ನಾಲ್ಕನೇ ಹಂತದ ಲಾಕ್​ಡೌನ್​ ಜಾರಿಯಲ್ಲಿರಲಿದೆ. ಈ ನಡುವೆ 4.0 ಲಾಕ್​ಡೌನ್​ನಲ್ಲಿ ಭಾರೀ ಸಡಿಲಿಕೆ ಮಾಡಲಾಗಿದೆ. ಈವರೆಗೂ ಜಿಲ್ಲೆಯಿಂದ ಜಿಲ್ಲೆಗೆ ಪ್ರಯಾಣಿಸುವವರು ಪೊಲೀಸ್ ಇಲಾಖೆಯಿಂದ ಇ-ಪಾಸ್​ ಪಡೆಯುವುದು ಕಡ್ಡಾಯವಾಗಿತ್ತು. ಆದರೆ, ಇದೀಗ ಆ ನಿಯಮವನ್ನು ಕೈಬಿಡಲಾಗಿದೆ. ಇನ್ನು ಮುಂದೆ ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಪ್ರಯಾಣಿಸುವವರಿಗೆ ಇ-ಪಾಸ್ ಅಗತ್ಯವಿಲ್ಲ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದ್ದಾರೆ.

  ಈ ಸಂಬಂಧ ಟ್ವೀಟ್ ಮಾಡಿರುವ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರು, ಇನ್ನುಮುಂದೆ ಜಿಲ್ಲಾ ಪ್ರಯಾಣಕ್ಕೆ ಪಾಸ್​ ಅವಶ್ಯಕತೆ ಇಲ್ಲ. ಆದರೂ ಅನಿವಾರ್ಯವಿದ್ದವರು ಮಾತ್ರ ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಪ್ರಯಾಣಿಸಿ, ಅನಗತ್ಯವಾಗಿ ತಿರುಗಾಡಬೇಡಿ. ಜೊತೆಗೆ ಸಂಜೆ 7ರಿಂದ ಬೆಳಗ್ಗೆ 7 ರವರೆಗೆ ಲಾಕ್​ಡೌನ್​ ಇರುವುದನ್ನು ಮರೆಯಬೇಡಿ ಎಂದು ಹೇಳಿದ್ದಾರೆ.  ಮೇ 18ರಿಂದ ಮೇ 31ರವರೆಗೆ ಲಾಕ್​ಡೌನ್​ 4.0 ಜಾರಿಯಲ್ಲಿರಲಿದ್ದು, ಹಲವು ವಿನಾಯಿತಿಗಳನ್ನು ನೀಡಲಾಗಿದೆ. ಈಗಾಗಲೇ ರಾಜ್ಯದಲ್ಲಿ ಅಂತರ್​ ಜಿಲ್ಲಾ ಪ್ರಯಾಣಕ್ಕೆ ಅನುಮತಿ ನೀಡಲಾಗಿದೆ. ಸಾರ್ವಜನಿಕ ಸಾರಿಗೆಯೂ ಸಹ ಆರಂಭವಾಗಿದ್ದು, ಎಲ್ಲ ಕಡೆ ನಿಯಮಿತ ಪ್ರಯಾಣಿಕರೊಂದಿಗೆ ಕೆಎಸ್​ಆರ್​ಟಿಸಿ ಬಸ್​ಗಳು ಸಂಚಾರ ಆರಂಭಿಸಿವೆ.

  ಇದನ್ನು ಓದಿ: ಕರ್ನಾಟಕ ರಾಜ್ಯಾದ್ಯಂತ ಅರ್ಧ ದಿನದಲ್ಲಿ 63 ಹೊಸ ಕೇಸ್; ಹಾಸನದಲ್ಲಿ ಅತ್ಯಧಿಕ; ಒಟ್ಟು ಪ್ರಕರಣ 1,458ಕ್ಕೇರಿಕೆ

  ಈ ಮೊದಲು ಮೂರನೇ ಹಂತದ ಲಾಕ್​ಡೌನ್​ನಲ್ಲಿ ಅಂತರ್​ ಜಿಲ್ಲಾ ಪ್ರಯಾಣಕ್ಕೆ ಅವಕಾಶ ನೀಡಲಾಗಿದ್ದರೂ ಸಾರ್ವಜನಿಕ ಸಾರಿಗೆಗೆ ಅನುಮತಿ ನೀಡಿರಲಿಲ್ಲ. ಇದರ ಜೊತೆಗೆ ಅಂತರ್​ಜಿಲ್ಲಾ ಪ್ರಯಾಣಕ್ಕೆ ಪೊಲೀಸ್ ಇಲಾಖೆಯಿಂದ ನೀಡುವ ಇ-ಪಾಸ್​ ಕಡ್ಡಾಯವಾಗಿತ್ತು.
  First published: