HOME » NEWS » Coronavirus-latest-news » PARENTS WHO REQUEST TO DONATE FOR THEM PHYSICAL CHALLENGED SON TREATMENT RH

ಬಡವರ ಬದುಕನ್ನೇ ಲಾಕ್ ಮಾಡಿದ ಲಾಕ್​ಡೌನ್; ವಿಶೇಷಚೇತನ ಪುತ್ರನಿಗೆ ಚಿಕಿತ್ಸೆ ಕೊಡಿಸಲಾಗದೇ ದಂಪತಿ ಪರದಾಟ

ಹೆಮ್ಮಾರಿ ಕೊರೋನಾ ಜನರ ಬಾಳಲ್ಲಿ ಕರಿನೆರಳಾಗಿ ಅನೇಕ ಬಡಕುಟುಂಬಗಳ ಬದುಕು ಅಕ್ಷರಶಃ ಬೀದಿಗೆ ಬಿದ್ದಿದೆ. ಒಬ್ಬೊರದ್ದು ಒಂದೊಂದು ರೀತಿಯ ಕಣ್ಣೀರಿನ ಕಥೆ. ಕ್ರೂರಿ ಕೊರೋನಾ ಒಂದೆಡೆ ದುಡಿದು ತಿನ್ನೋಣ ಅಂದ್ರೂ ಅಮಾಯಕ ಜನರನ್ನು ಬಿಡುತ್ತಿಲ್ಲ. ಇನ್ನೊಂದೆಡೆ ಈ ರೀತಿ ಪುಟ್ಟ ಕಂದಮ್ಮಗಳಿಗೆ ಚಿಕಿತ್ಸೆ ಕೊಡಿಸಲು ಪೋಷಕರಿಗೆ ಶಕ್ತಿ ಇಲ್ಲದಂತೆ ಮಾಡಿದೆ.

news18-kannada
Updated:May 2, 2020, 3:45 PM IST
ಬಡವರ ಬದುಕನ್ನೇ ಲಾಕ್ ಮಾಡಿದ ಲಾಕ್​ಡೌನ್; ವಿಶೇಷಚೇತನ ಪುತ್ರನಿಗೆ ಚಿಕಿತ್ಸೆ ಕೊಡಿಸಲಾಗದೇ ದಂಪತಿ ಪರದಾಟ
ವಿಶೇಷಚೇತನ ಮಗು ಅನುಷ್.
  • Share this:
ಚಿಕ್ಕಮಗಳೂರು: ಕೊರೋನಾ ಕರಿನೆರಳು ಅಮಾಯಕ ಜನರ ಮೇಲೆ ಬೀರಿರುವ ಪರಿಣಾಮ ಅಷ್ಟಿಷ್ಟಲ್ಲ. ಕಷ್ಟಪಟ್ಟು ದಿನಗೂಲಿ ಮಾಡಿ ಜೀವನ ಮಾಡುತ್ತಿದ್ದ ಜನರು ಇದೀಗ ಲಾಕ್ ಡೌನ್ ನಿಂದ ಕಂಗಲಾಗಿ ಹೋಗಿದ್ದಾರೆ. ಕಣ್ಣೀರಲ್ಲೇ ಕೈ ತೊಳೆಯುತ್ತಿದ್ದ ಚಿಕ್ಕಮಗಳೂರಿನ ಬಡ ಕುಟುಂಬ ಇದೀಗ ಕೆಲಸವಿಲ್ಲದೇ ವಿಶೇಷಚೇತನದ ಮಗುವಿನ ಚಿಕಿತ್ಸೆಗೂ ಪರದಾಟ ನಡೆಸುತ್ತಿದೆ.

ಲಾಕ್​ಡೌನ್​ನಿಂದ ಕೆಲಸವಿಲ್ಲದೇ ಕಾಲುಗಳು ಮುದುಡಿಕೊಂಡು, ಮೆದುಳು  ನಿಷ್ಕ್ರಿಯವಾಗಿ ಎದ್ದೆಳುವ ಚೈತನವ್ಯವೇ ಇಲ್ಲದ ಪುಟ್ಟ ಕಂದನಿಗೆ ಚಿಕಿತ್ಸೆ ಕೊಡಿಸಲಾಗದ ಸ್ಥಿತಿ ತಲುಪಿದ್ದೇವೆ ಅಂತಾ ದಂಪತಿ ಅಸಹಾಯಕ ತೋಡಿಕೊಂಡಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಹಳ್ಳಿಕೆರೆಯ ಅಣ್ಣಪ್ಪ-ಅನ್ನಪೂರ್ಣ ದಂಪತಿಯ ಪುತ್ರ ಅನುಷ್. 5 ವರ್ಷದ ಈ ಮಗುವಿಗೆ ಪ್ರತಿ ತಿಂಗಳು ಮಾತ್ರೆ ಸೇರಿ ಕೆಲವೊಂದು ಟಾನಿಕ್​ಅನ್ನು ಈ ಬಾಲಕನಿಗೆ ತಪ್ಪಿಸದೆ ಕೊಡಲೇಬೇಕು. ಕೂಲಿ ಮಾಡಿ ಸಂಸಾರ ಸಾಗಿಸುತ್ತಿರುವ ಈ ಮಗುವಿನ ತಂದೆ ಚಿಕಿತ್ಸೆಗಾಗಿ ಈಗಾಗಲೇ 10 ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಿದ್ದಾರೆ. ಅಲ್ಲದೇ ಪ್ರತಿ ತಿಂಗಳು ಶಿವಮೊಗ್ಗಕ್ಕೆ ಮಗನಿಗೆ ಮಾತ್ರೆ-ಟಾನಿಕ್ ತರಲು 4-5 ಸಾವಿರ ರೂ ಖರ್ಚಾಗ್ತಿದೆ. ಆದರೆ ಕಳೆದ ಒಂದೂವರೆ ತಿಂಗಳಿನಿಂದ ಯಾವುದೇ ಕೆಲಸ ಸಿಗದೇ ಮಗುವಿನ ಮಾತ್ರೆ ತರಲು ಪರದಾಟ ನಡೆಸುವಂತಾಗಿದೆ.

ತಮ್ಮ ಸ್ಥಿತಿಯನ್ನು ನೆನೆದು ತಂದೆ-ತಾಯಿ ಕಣ್ಣೀರಿಟ್ಟಿದ್ದಾರೆ. ಅಂದಾಗೆ ಈ ದಂಪತಿಗೆ ಇಬ್ಬರು ಮಕ್ಕಳು. ದೊಡ್ಡ ಮಗನೇ 5 ವರ್ಷದ ಅನುಷ್. ಎರಡನೇಯವನು 3ವರ್ಷದ ಧನುಷ್. ಚಿಕ್ಕವನು ಆರೋಗ್ಯವಾಗಿದ್ದು, ಅಣ್ಣನ ಸ್ಥಿತಿ ನೋಡಿ ತನ್ನೊಳಗೆ ನೊಂದು ಸುಮ್ಮನಾಗುವ ಅಸಹಾಯಕತೆ ತಮ್ಮ ಧನುಷ್​ದು. ಈಗಾಗಲೇ ಹಲವೆಡೆ ತೋರಿಸಿದ್ದೀವಿ, ಮಗು ಮೆದುಳು ಕೂಡ ಬೆಳವಣಿಗೆ ಆಗದೇ ಇರೋದ್ರಿಂದ ಚಿಕಿತ್ಸೆಗೆ ಹೆಚ್ಚು ಹಣ ಬೇಕಾಗುತ್ತೆ ಅಂತಾ ಹೇಳಿದ್ದಾರೆ. ಸದ್ಯ ಆತನಿಗೆ ಪ್ರತಿ ತಿಂಗಳು ಮಾತ್ರೆ ತರಲು ಕೂಡ ನಮ್ಮ ಕೈಯಲ್ಲಿ ಸಾಧ್ಯವಾಗುತ್ತಿಲ್ಲ ಅಂತಾ ಕಣ್ಣೀರಿಡುತ್ತಿದ್ದಾರೆ ಹೆತ್ತಮ್ಮ ಅನ್ನಪೂರ್ಣ.

ಹೆಮ್ಮಾರಿ ಕೊರೋನಾ ಜನರ ಬಾಳಲ್ಲಿ ಕರಿನೆರಳಾಗಿ ಅನೇಕ ಬಡಕುಟುಂಬಗಳ ಬದುಕು ಅಕ್ಷರಶಃ ಬೀದಿಗೆ ಬಿದ್ದಿದೆ. ಒಬ್ಬೊರದ್ದು ಒಂದೊಂದು ರೀತಿಯ ಕಣ್ಣೀರಿನ ಕಥೆ. ಕ್ರೂರಿ ಕೊರೋನಾ ಒಂದೆಡೆ ದುಡಿದು ತಿನ್ನೋಣ ಅಂದ್ರೂ ಅಮಾಯಕ ಜನರನ್ನು ಬಿಡುತ್ತಿಲ್ಲ. ಇನ್ನೊಂದೆಡೆ ಈ ರೀತಿ ಪುಟ್ಟ ಕಂದಮ್ಮಗಳಿಗೆ ಚಿಕಿತ್ಸೆ ಕೊಡಿಸಲು ಪೋಷಕರಿಗೆ ಶಕ್ತಿ ಇಲ್ಲದಂತೆ ಮಾಡಿದೆ.

ಅಣ್ಣಪ್ಪ-ಅನ್ನಪೂರ್ಣ ದಂಪತಿ


ಸದ್ಯ ಈ ಕುಟುಂಬವೂ ಕೂಡ ಲಾಕ್​ಡೌನ್​ನಿಂದಾಗಿ ಪುಟ್ಟ ಕಂದಮ್ಮನಿಗೆ ಮಾತ್ರೆ ಕೊಡಿಸಲು ಸಾಧ್ಯವಾಗದೇ ಕಣ್ಣೀರು ಹಾಕುವಂತಾಗಿರೋದು ಮಾತ್ರ ನಿಜಕ್ಕೂ ದುರಂತ. ಸಂಕಷ್ಟದಲ್ಲಿ ಇರುವ ಈ ಕುಟುಂಬಕ್ಕೆ ನೆರವು ನೀಡಲು ಬಯಸುವವರು ಈ ಅಕೌಂಟ್ ನಂಬರ್​ಗೆ ಹಣ ಕಳುಹಿಸಬಹುದು. ಬಿ.ಕೆ.ಅಣ್ಣಪ್ಪ ಬಣಕಲ್ ಕರ್ಣಾಟಕ ಬ್ಯಾಂಕ್ ಖಾತೆ ಸಂಖ್ಯೆ - 0692500137355601, IFSC CODE -KARB0000069.
First published: May 2, 2020, 3:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories