School Re-Open| ಕರ್ನಾಟಕದಲ್ಲಿ 1ನೇ ತರಗತಿಯಿಂದ ಶಾಲೆಗಳ ಪುನಾರಾರಂಭಕ್ಕೆ ಪೋಷಕರು ಆಸಕ್ತಿ; ವರದಿ

ಕಿರಿಯ ಮಕ್ಕಳು ಶಾಲೆಗಳಿಗೆ ಮರಳುವುದು, ಸ್ನೇಹಿತರ-ಶಿಕ್ಷಕರ ಜೊತೆಗೆ ಬೆರೆತು ಸಂವಹನ ನಡೆಸುವುದು ಮುಖ್ಯ. ಇಲ್ಲದಿದ್ದರೆ ಮಕ್ಕಳು ತಮ್ಮ ಬಾಲ್ಯವನ್ನು ಕಳೆದುಕೊಳ್ಳಲಿದ್ದಾರೆ ಎಂದು ಪೋಷಕರು ಭಾವಿಸುತ್ತಿದ್ದಾರೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

 • Share this:
  ಬೆಂಗಳೂರು: ನವೆಂಬರ್ 1 ರಿಂದ ಗ್ರೇಡ್ 1 ಮತ್ತು ಅದಕ್ಕಿಂತ ಹೆಚ್ಚಿನ ತರಗತಿಗಳನ್ನು ಪುನರಾರಂಭಿಸಲಾಗುವುದು ಎಂದು ಕೇರಳ ಘೋಷಿಸಿರುವುದರಿಂದ, ಕರ್ನಾಟಕ ಸರ್ಕಾರವೂ ರಾಜ್ಯದಲ್ಲಿ 1ನೇ ತರಗತಿಯಿಂದ ಎಲ್ಲಾ ಶಾಲೆಗಳನ್ನು ಆರಂಭಿಸಬೇಕು ಎಂದು ಪೋಷಕರು ಆಶಿಸಿದ್ದಾರೆ ಎನ್ನಲಾಗಿದೆ. ಕರ್ನಾಟಕದಲ್ಲಿ 9 ರಿಂದ 12 ನೇ ತರಗತಿಗಳನ್ನು ತೆರೆಯಲು ಈಗಾಗಲೇ ಅನುಮತಿ ನೀಡಲಾಗಿದೆ. ಅಲ್ಲದೆ, 6 ರಿಂದ 8 ನೇ ತರಗತಿಗಳಿಗೆ ಸೆಪ್ಟೆಂಬರ್ 6 ರಂದು ಪುನರಾರಂಭಕ್ಕೆ ಅವಕಾಶ ನೀಡಲಾಗಿತ್ತು. ಆದರೆ, ಕಿರಿಯ ಪ್ರಾಥಮಿಕ ಶಾಲೆಗಳ ಆರಂಭಕ್ಕೂ ಒತ್ತಾಯಗಳು ಕೇಳಿ ಬರುತ್ತಿವೆ. ಸೆಪ್ಟೆಂಬರ್ 11 ರಂದು ಕರ್ನಾಟಕ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, "ಈ ವಿಷಯದ ಕುರಿತು ಸರ್ಕಾರವು ಕೋವಿಡ್ -19 ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಚರ್ಚೆ ನಡೆಸುತ್ತಿದೆ. ಚರ್ಚೆಯ ನಂತರ ಪ್ರಾಥಮಿಕ ತರಗತಿಗಳ ಆರಂಭಕ್ಕೆ ಅನುಮತಿ ನೀಡಲಾಗುವುದು" ಎಂದು ತಿಳಿಸಿದ್ದರು.

  ಕಿರಿಯ ಮಕ್ಕಳು ಶಾಲೆಗಳಿಗೆ ಮರಳುವುದು, ಸ್ನೇಹಿತರ-ಶಿಕ್ಷಕರ ಜೊತೆಗೆ ಬೆರೆತು ಸಂವಹನ ನಡೆಸುವುದು ಮುಖ್ಯ ಎಂದು ಪೋಷಕರು ಭಾವಿಸುತ್ತಿದ್ದಾರೆ. ಶಾಲೆಗಳು ಒಂದು ವರ್ಷಕ್ಕಿಂತ ಹೆಚ್ಚು ಕಾಲ ಮನೆಯಿಂದ ಕಾರ್ಯನಿರ್ವಹಿಸುತ್ತಿರುವುದರಿಂದ, ಮಕ್ಕಳೂ ಸಹ ದೊಡ್ಡವರಂತೆ ಮಾತನಾಡುವುದು ಮತ್ತು ವರ್ತಿಸುವುದನ್ನು ಕಲಿಯುತ್ತಿದ್ದಾರೆ. ಇಂತಹ ವಿಚಾರಗಳಿಂದ ಮಕ್ಕಳು ತಮ್ಮ ಬಾಲ್ಯವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಪೋಷಕರು ಕಳವಳ ವ್ಯಕ್ತಪಡಿಸಿದ್ದಾರೆ.

  37 ವರ್ಷದ ಪರಿಣಿತಾ ನಾರಾಯಣ್, ಪ್ರಮಾಣೀಕೃತ ಪೌಷ್ಟಿಕಾಂಶ ತರಬೇತುಗಾರರು ಮತ್ತು ಐದು ವರ್ಷದ ಮಗುವಿನ ತಾಯಿ. ಸಾಂಕ್ರಾಮಿಕ ಸಮಯದಲ್ಲಿ ಮನೆಯಲ್ಲಿದ್ದಾಗ ತನ್ನ ಮಗಳ ನಡವಳಿಕೆಯಲ್ಲಿನ ವ್ಯತ್ಯಾಸವನ್ನು ಗಮನಿಸಿದ್ದೇನೆ ಎಂದು ಅವರು ಹೇಳಿದ್ದಾರೆ. "ಅವಳು ನನ್ನನ್ನು ಅನುಕರಿಸಲು ಪ್ರಾರಂಭಿಸಿದಳು, ಅವಳು ನನ್ನಂತೆಯೇ ಮಾತನಾಡಲು ಯತ್ನಿಸುತ್ತಾಳೆ ಮತ್ತು ನಾನು ಅವಳೊಂದಿಗೆ ಮಾತನಾಡುವ ರೀತಿಯಲ್ಲಿ ಅವಳ ತಂದೆಯೊಂದಿಗೆ ಮಾತನಾಡುತ್ತಾಳೆ. ಇದು ನಿಜಕ್ಕೂ ಕಳವಳಕಾರಿ" ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

  "ಇದಲ್ಲದೆ ಅವರು ಏಕಾಂತ ಅಥವಾ ಪ್ರತ್ಯೇಕತೆಯ ಆತಂಕವನ್ನು ಎದುರಿಸುತ್ತಿದ್ದಾಳೆ. ಇದೇ ಕಾರಣಕ್ಕೆ ನಾನು ಮನೆಯಿಂದ ಹೊರ ಹೋಗಬೇಕಾದರೆ ಅಳಲು ಪ್ರಾರಂಭಿಸುತ್ತಾಳೆ. ಲಾಕ್​ಡೌನ್ ಸಂದರ್ಭದಲ್ಲಿ ಎಲ್ಲಾ ಮಕ್ಕಳಲ್ಲೂ ಇದು ಸಾಮಾನ್ಯವಾಗಿ ಕಂಡು ಬಂದಿರುವ ಸಾಧ್ಯತೆ ಇದೆ. ಹೀಗಾಗಿ ಮಕ್ಕಳು ಶಾಲೆ ಆರಂಭವಾಗಿ ತನ್ನ ಗೆಳೆಯರೊಂದಿಗೆ ಸಂವಹನ ನಡೆಸಿದರೆ ಮಾತ್ರ ಈ ಸ್ಥಿತಿ ಬದಲಾಗಲು ಸಾಧ್ಯ" ಎಂದು ಪರಿಣಿತಾ ನಾರಾಯಣ್ ತಿಳಿಸಿದ್ದಾರೆ.

  ಇದನ್ನೂ ಓದಿ: Explained: Immunity Boosterಗಳಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದಾ? ತಜ್ಞರು ಏನಂತಾರೆ?

  ಶಾಲೆ ಆರಂಭಕ್ಕೆ ಉಪಾಯವನ್ನೂ ನೀಡಿರುವ ಪರಿಣಿತಾ ನಾರಾಯಣ್, "ಶಾಲೆಗಳು ತರಗತಿಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಬಹುದು ವಾರಕ್ಕೆ ಎರಡು ಬಾರಿ ಶಾಲೆಗಳನ್ನು ಪ್ರಾರಂಭಿಸಿದರೆ ಉತ್ತಮ. ಕಡಿಮೆ ಅವಧಿಗೆ ಶಾಲೆಗಳು ನಡೆಯಬೇಕು. ಈ ವೇಳೆ ಒಳಾಂಗಣದಲ್ಲಿರುವಾಗ ಕನಿಷ್ಠ ಒಂದೆರಡು ಗಂಟೆಗಳ ಕಾಲ ಮುಖವಾಡಗಳನ್ನು ಖಾತ್ರಿಪಡಿಸುವುದು, ಮುಖವಾಡಗಳಿಲ್ಲದೆ ಹೊರಾಂಗಣ ಚಟುವಟಿಕೆ ಮತ್ತು ಸಾಮಾಜಿಕ ಅಂತರದ ಮೂಲಕ ಕೆಲವು ಚಟುವಟಿಕೆಗಳನ್ನು ನಡೆಸುವ ಮೂಲಕ ಮಕ್ಕಳ ಬಾಲ್ಯವನ್ನು ಮತ್ತೆ ಅವರಿಗೆ ನೀಡಬಹುದಾಗಿದೆ" ಎಂದು ಅವರು ತಿಳಿಸಿದ್ದಾರೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:MAshok Kumar
  First published: