Covid in Kids: ಪೋಷಕರೇ, ಪುಟ್ಟ ಮಕ್ಕಳನ್ನು ಶಾಲೆಗೆ ಕಳಿಸೋ ಮುನ್ನ ಈ ವಿಚಾರಗಳು ಗೊತ್ತಿರಲಿ

Corona Fear in Children: ಪ್ರತಿನಿತ್ಯ ಸುದ್ದಿ ಮಾಧ್ಯಮಗಳನ್ನು ಮಕ್ಕಳು ಸಹ ವೀಕ್ಷಿಸಿ, ಕೋವಿಡ್ ಸಾವಿನ ಬಗ್ಗೆ ಆತಂಕಗೊಂಡಿರುತ್ತಾರೆ. ಈಗ ತಾವೂ ಸಹ ಶಾಲೆಗಳಿಗೆ ತೆರಳುವುದರಿಂದ ಕೋವಿಡ್ ಬರಬಹುದು ಎಂಬ ಭೀತಿಗೆ ಒಳಗಾಗಬಹುದು. ಇದು ಮಕ್ಕಳ ಮನಸ್ಸಿನ ಮೇಲೆ ಹೆಚ್ಚು ಪರಿಣಾಮ ಬೀರಿ, ಅವರ ಶಿಕ್ಷಣದ ಮೇಲೆ ಪ್ರಭಾವ ಬೀರುವುದಲ್ಲದೇ ಮಾನಸಿಕ ನೆಮ್ಮದೆ ಕಳೆದುಕೊಳ್ಳಬಹುದು. 

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
How to protect Kids from Covid 19: ಕಳೆದ ಒಂದೂವರೆ ವರ್ಷದಿಂದ ಕೋವಿಡ್ ಭಯಕ್ಕೆ ಶಾಲೆಯ ಅಂಗಳದಿಂದ ದೂರವಿದ್ದ ಪುಟ್ಟ ಮಕ್ಕಳು ಇದೀಗ ಶಾಲೆಯತ್ತ (Schools Reopen) ಮುಖ ಮಾಡಬೇಕಿದೆ. ಇದು ಒಳ್ಳೆಯ ಬೆಳವಣಿಗೆಯೇ ಆದರೂ, ಕೆಲ ಮಕ್ಕಳ ಮನಸ್ಸಿನ ಮೇಲೆ ಇದು ಒತ್ತಡವೆನಿಸಬಹುದು (Stress on Kids minds). ಹೌದು, ಕೋವಿಡ್ ಸಾಂಕ್ರಮಿಕದಿಂದ ಆನ್‌ಲೈನ್ ಕ್ಲಾಸ್‌ಗಳಿಗೆ ಹೊಂದಿಕೊAಡಿದ್ದ ಮಕ್ಕಳು ಸಂಪೂರ್ಣವಾಗಿ ಶಾಲಾ ವಾತಾವರಣದಿಂದ ಹೊರಗುಳಿದಿದ್ದರು. ಆನ್‌ಲೈನ್ ಕ್ಲಾಸ್ (Online Class) ಹಾಗೂ ಮನೆಯವರೊಂದಿಗೆ ದಿನಪೂರ್ತಿಯ ಒಡನಾಟಕ್ಕೆ ಹೊಂದಿಕೊಂಡಿದ್ದರು. ಇದೀಗ ಶಾಲೆಗಳು ತೆರೆಯಲಾಗಿದೆ. ಅಲ್ಲದೆ, ಕೋವಿಡ್ ಮೂರನೇ ಅಲೆ ಬರಬಹುದು ಎಂಬ ಆತಂಕ ಸಹ ಮಕ್ಕಳ ಮೇಲೆ ಭಯದ ಛಾಯೆ ಉಂಟು ಮಾಡಬಹುದು. ಈ ಸಂದರ್ಭದಲ್ಲಿ ಮಕ್ಕಳನ್ನು ಸುರಕ್ಷಿತವಾಗಿ (Safety first) ಶಾಲೆಗೆ ಕಳುಹಿಸುವುದಲ್ಲದೇ, ಮಾನಸಿಕವಾಗಿಯೂ (Prepare Mentally) ಅವರನ್ನು ಸಿದ್ಧ ಮಾಡುವುದು ಅತ್ಯವಶ್ಯಕ. ಈ ಕುರಿತಾಗಿ ಫೋರ್ಟಿಸ್ ಆಸ್ಪತ್ರೆಯ ಮನಶಾಸ್ತ್ರಜ್ಞರಾದ ಡಾ ಕೆ ಶಮಂತ ಒಂದಷ್ಟು ಉಪಯುಕ್ತ ಮಾಹಿತಿ ನೀಡಿದ್ದಾರೆ.

ಮಕ್ಕಳ ಆತಂಕ ನಿವಾರಿಸಿ

ಪ್ರತಿನಿತ್ಯ ಸುದ್ದಿ ಮಾಧ್ಯಮಗಳನ್ನು ಮಕ್ಕಳು ಸಹ ವೀಕ್ಷಿಸಿ, ಕೋವಿಡ್ ಸಾವಿನ ಬಗ್ಗೆ ಆತಂಕಗೊಂಡಿರುತ್ತಾರೆ. ಈಗ ತಾವೂ ಸಹ ಶಾಲೆಗಳಿಗೆ ತೆರಳುವುದರಿಂದ ಕೋವಿಡ್ ಬರಬಹುದು ಎಂಬ ಭೀತಿಗೆ ಒಳಗಾಗಬಹುದು. ಇದು ಮಕ್ಕಳ ಮನಸ್ಸಿನ ಮೇಲೆ ಹೆಚ್ಚು ಪರಿಣಾಮ ಬೀರಿ, ಅವರ ಶಿಕ್ಷಣದ ಮೇಲೆ ಪ್ರಭಾವ ಬೀರುವುದಲ್ಲದೇ ಮಾನಸಿಕ ನೆಮ್ಮದೆ ಕಳೆದುಕೊಳ್ಳಬಹುದು.  ಹೀಗಾಗಿ ಶಾಲೆಗೆ ಕಳುಹಿಸುವ ಮುನ್ನ ಮಕ್ಕಳನ್ನು ಈ ಕೋವಿಡ್ ಎದುರಿಸುವ ಜೊತೆಗೆ, ಆತ್ಮವಿಶ್ವಾಸ ತುಂಬುದು ಅತ್ಯಂತ ಅವಶ್ಯಕ.

ಮಕ್ಕಳಲ್ಲಿನ ಆತಂಕ ನಿವಾರಿಸಲು ಈ ಅಂಶಗಳನ್ನು ಪಾಲಿಸಿ

1. ಕೋವಿಡ್ ಸೋಂಕಿನ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ, ಹಾಗೂ ಕೋವಿಡ್ ಮಾರ್ಗಸೂಚಿಗಳಾದ ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು ಹಾಗೂ ಆಗಾಗ್ಗೇ ಸ್ಯಾನಿಟೈಸ್ ಮಾಡಿಕೊಳ್ಳುವುದರ ಬಗ್ಗೆ ಅರ್ಥವಾಗುವ ರೀತಿ ತಿಳಿ ಹೇಳಿ. ಸಣ್ಣ ಮಕ್ಕಳಾದರೆ ನೀವೇ ಹೆಚ್ಚು ಕೇರ್ ತೆಗೆದುಕೊಳ್ಳಿ. ಈ ಮಾರ್ಗಸೂಚಿಗಳನ್ನು ಅವರಿಗೆ ಹೇಳುವ ವೇಳೆ ಆತಂಕ ಪಡಿಸುವ ರೀತಿ ವಿವರಿಸಬಾರದು. ಇದು ಮಕ್ಕಳಲ್ಲಿ ಇನ್ನಷ್ಟು ಭಯ ಹುಟ್ಟು ಹಾಕಬಹುದು.

ಇದನ್ನೂ ಓದಿ: Corona in Kids: ಮಕ್ಕಳಲ್ಲಿ ಹೆಚ್ಚಾಗುತ್ತಿವೆ ಕೋವಿಡ್‌ ಪ್ರಕರಣಗಳು; ಆತಂಕ ಬೇಡ, ಎಚ್ಚರಿಕೆ ಇರಲಿ ಎಂದ ತಜ್ಞರು..!

2. ಮಕ್ಕಳಲ್ಲಿ ಕೋವಿಡ್ ಬಗ್ಗೆ ಸಾಕಷ್ಟು ಪ್ರಶ್ನೆಗಳು ಇರುತ್ತವೆ. ಆ ಬಗ್ಗೆ ಯಾವುದೇ ಸಂಕೋಚವಿಲ್ಲದೇ ಅವರಿಗೆ ನಿಧಾನವಾಗಿ ತಿಳಿ ಹೇಳಿ, ಅವರ ಗೊಂದಲವನ್ನು ನಿವಾರಿಸಿ.

3. ಮಕ್ಕಳು ವರ್ಷಗಳ ಬಳಿಕ ಶಾಲೆಗೆ ತೆರಳುತ್ತಿರುವುದರಿಂದ ಸ್ನೇಹಿರೊಂದಿಗೆ ಹರಟೆ ಹೊಡೆಯುವುದು, ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸಲು ಇಚ್ಚಿಸಬಹುದು. ಇದನ್ನು ತಡೆಯುವುದು ತಪ್ಪು, ಮಕ್ಕಳ ಇಚ್ಚೆಯಂತೆ ಅವರು ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿ, ಆದರೆ, ಸುರಕ್ಷತೆ ಬಗ್ಗೆ ಜಾಗರೂಕತೆಯಾಗಿರಲು ಸಹ ಮನವರಿಕೆ ಮಾಡಿಕೊಡಿ.

4. ಮಕ್ಕಳು ಶಿಕ್ಷಣದ ಬಗ್ಗೆ ಆಸಕ್ತಿ ವಹಿಸಬೇಕು ಎಂಬ ಒತ್ತಡ ಹಾಕುವುದನ್ನು ಕಡಿಮೆ ಮಾಡಿ, ಮಕ್ಕಳು ಕೆಲ ಸಮಯದ ವರೆಗೆ ಶಾಲೆಯ ಆಫ್‌ಲೈನ್ ಶಿಕ್ಷಣಕ್ಕೆ ಹೊಂದಿಕೊಳ್ಳಲು ಕಾಲಾವಕಾಶ ನೀಡಿ.

5. ಮಕ್ಕಳು ಶಾಲೆಗೆ ಹೋಗಲು ಹೆದರುತ್ತಿದ್ದರೆ, ಶಾಲಾ ಶಿಕ್ಷಕರೊಂದಿಗೆ ಮಾತನಾಡಿ, ಅವರಲ್ಲಿ ಇರುವ ಭಯವನ್ನು ಹೋಗಲಾಡಿಸಲು ಪ್ರಯತ್ನ ಪಡಿ. ಅಥವಾ ಮಕ್ಕಳಿಗೆ ಆಪ್ತ ಸಮಾಲೋಚನೆಯ ಅವಶ್ಯಕತೆ ಇದ್ದರೆ ಆಪ್ತಸಮಾಲೋಚನೆ ಮಾಡಿಸುವುದು ಉತ್ತಮ.

6. ಇನ್ನೂ ಸಣ್ಣ ಮಕ್ಕಳಿಗೆ ಶಾಲೆ ತೆರೆದಿಲ್ಲ, ಮುಂದಿನ ದಿನಗಳಲ್ಲಿ ಶಾಲೆ ತೆರೆಯುವ ಬಗ್ಗೆ ಅವರಿಗೆ ಈಗಿನಿಂದಲೇ ಅರ್ಥೈಸುತ್ತಾ ಬನ್ನಿ. ಮಕ್ಕಳಿಗೆ ಶಾಲೆ ಬಗ್ಗೆ ಆಸಕ್ತಿ ಹುಟ್ಟಿಸುವ ರೀತಿಯಲ್ಲಿ ವಾತಾವರಣ ನಿರ್ಮಾಣ ಮಾಡಿ.

ಮೂರನೇ ಅಲೆ ಬಗ್ಗೆ ಭಯ ಬೇಡ

ಕೋವಿಡ್ ಮೊದಲ ಹಾಗೂ ಎರಡನೇ ಅಲೆಯಿಂದ ಜನರು ಸಾಕಷ್ಟು ಭಯಭೀತಗೊಂಡಿದ್ದರು. ಮೂರನೇ ಅಲೆ ಮಕ್ಕಳನ್ನು ಕಾಡಬಹುದು ಎಂಬ ವರದಿ ಬಳಿಕ ಇನ್ನಷ್ಟು ಹೆದರಿದ್ದರು. ಆದರೆ, ಕೆಲವು ಅಧ್ಯಯನಗಳು ಮಕ್ಕಳಿಗೆ ಹೆಚ್ಚಾಗಿ ಕೋವಿಡ್ ಬಾಧಿಸುವುದಿಲ್ಲ ಎಂದು ಹೇಳಿದೆ. ಜೊತೆಗೆ ಮೊದಲನೇ ಅಲೆಗೆ ಹೋಲಿಸಿದರೆ ಎರಡನೇ ಅಲೆಯಲ್ಲಿ ಮಕ್ಕಳಿಗೆ ಕೋವಿಡ್ ಸೋಂಕು ತಗುಲಿದ ಪ್ರಕರಣಗಳು ತೀರ ಕಡಿಮೆ ಎಂದು ಯುನೈಟೆಡ್ ಕಿಂಗ್‌ಡಮ್ ನಡೆಸಿದ ಸಂಶೋಧನೆಯಲ್ಲಿ ಸಾಭೀತಾಗಿದೆ. ಹೀಗಾಗಿ ಮೂರನೇ ಅಲೆಯೂ ಸಹ ಮಕ್ಕಳಿಗೆ ಬಾಧಿಸದೇ ಇರಬಹುದು. ಆದರೆ, ಸುರಕ್ಷತೆಯಿಂದಿರುವುದು ನಮ್ಮೆಲ್ಲರ ಕರ್ತವ್ಯ.
Published by:Soumya KN
First published: