ಕೊರೋನಾ ಜಾಗೃತಿ ಮೂಡಿಸಲು ರಸ್ತೆಗಿಳಿದ ಸ್ವಾಮೀಜಿ - ಮನೆ ಮನೆಗೆ ತೆರಳಿ ಮಾಸ್ಕ್​​​​​ ವಿತರಣೆ

ನಿಡಸೋಸಿಯ ಗ್ರಾಮದ ದುರುದುಂಡೆಶ್ವರ ಮಠದ ಮಠಾಧೀಶ ಶ್ರೀ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಗ್ರಾಮದ ಮನೆ ಮನೆಗಳಿಗೆ ತೆರಳಿ ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾಗಿದ್ದಾರೆ.

news18-kannada
Updated:April 1, 2020, 3:51 PM IST
ಕೊರೋನಾ ಜಾಗೃತಿ ಮೂಡಿಸಲು ರಸ್ತೆಗಿಳಿದ ಸ್ವಾಮೀಜಿ - ಮನೆ ಮನೆಗೆ ತೆರಳಿ ಮಾಸ್ಕ್​​​​​ ವಿತರಣೆ
ಮಾಸ್ಕ್​​ ವಿತರಿಸುತ್ತಿರುವ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ
  • Share this:
ಚಿಕ್ಕೋಡಿ(ಏ.01): ಕೊರೋನಾದಿಂದಾಗಿ ದೇಶಾದ್ಯಂತ ಲಾಕ್ ಡೌನ್ ಆಗಿದೆ. ಎಲ್ಲಾ ದೇವಸ್ಥಾನಗಳು, ಮಸೀದಿಗಳು, ಪ್ರಾರ್ಥನಾ ಮಂದಿರಗಳು ಬಾಗಿಲು ಮುಚ್ಚಿವೆ. ಆದರೆ, ಜನ ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಪೊಲೀಸರರು ಎಷ್ಟೆ ಮನವಿ ಮಾಡಿದರು ಲಾಠಿ ಏಟು ಕೊಟ್ಟರು ಜನ ಮಾತ್ರ ತಲೆ ಕೊಡೆಸಿಕೊಳ್ಳದೆ ವಿನಾಕಾರಣ ರಸ್ತೆಗಿಳಿದು ಒಡಾಡುತ್ತಿದ್ದಾರೆ. ಇಷ್ಟು ದಿನ ಮಠದಲ್ಲೆ ಇದ್ದ ಮಠಾಧೀಶರೊಬ್ಬರು ಇಂದು ರಸ್ತೆಗಿಳಿದು ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾಗಿದ್ದಾರೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸುಕ್ಷೇತ್ರ ನಿಡಸೋಸಿಯ ಗ್ರಾಮದ ದುರುದುಂಡೆಶ್ವರ ಮಠದ ಮಠಾಧೀಶ ಶ್ರೀ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಗ್ರಾಮದ ಮನೆ ಮನೆಗಳಿಗೆ ತೆರಳಿ ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾಗಿದ್ದಾರೆ.

ಗ್ರಾಮದ ಜನರಿಗೆ ಸುರಕ್ಷಿತ ಅಂತರ ಕಾಯ್ದುಕೊಳ್ಳುವ ಕುರಿತು, ಅನಾವಶ್ಯಕ ಹೊರಗಡೆ ಹೋಗದಂತೆ ಹಾಗೂ ಕೊರೋನಾ ತಡೆಗಟ್ಟುವ ಮುಂಜಾಗ್ರತಾ ಕ್ರಮಗಳ ಕುರಿತು ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿಗಳ ಜೊತೆಗೆ ಸೇರಿ ತಾವೆ ಜಾಗೃತಿ ಮೂಡಿಸಿದ್ದಾರೆ.

ಇನ್ನು ಮೆಡಿಕಲ್​​ಗಳಲ್ಲಿ ಮಾಸ್ಕ್​​​ ಸಿಗದ ಹಿನ್ನಲೆಯಲ್ಲಿ ಸ್ವಾಮೀಜಿ ಜನರಿಗೆ ತಾವೆ ಬಟ್ಟೆಗಳ ಮಾಸ್ಕ್​​ ತಯಾರಿಸುವಂತೆ ಕರೆ ಕೊಟ್ಟಿದ್ದರು. ಸ್ವಾಮೀಜಿ ಕರೆಗೆ ಸ್ಪಂದಿಸಿದ ಕೆಲವರು ಒಂದೆ ದಿನದಲ್ಲಿ ಎರಡು ಸಾವಿರ ಮಾಸ್ಕ್​​ ಗಳನ್ನ ತಯಾರಿಸಿ ಸ್ವಾಮೀಜಿಗಳ ಮೂಲಕ ಗ್ರಾಮದಸ್ಥರಿಗೆ ಹಂಚಿದ್ದಾರೆ.

ಇದನ್ನು ಓದಿ : ಲಾಕ್‌ಡೌನ್​ನಿಂದ ಸಮಸ್ಯೆಗೆ ಸಿಲುಕಿದವರಿಗಾಗಿ ಇಂದಿನಿಂದ ‘ಎಚ್‌ಡಿಕೆ ಜನತಾ ದಾಸೋಹ’ ಆರಂಭ

ಮಾರಕ ಕೊರೋನಾ ಸೋಂಕಿಗೆ ಇದುವರೆಗೂ ದೇಶದಲ್ಲಿ 1400ಕ್ಕೂ ಹೆಚ್ಚು ಮಂದಿ ತುತ್ತಾಗಿದ್ದು, 38 ಜನರು ಬಲಿಯಾಗಿದ್ದಾರೆ. ಕರ್ನಾಟಕದಲ್ಲೂ ಸೋಂಕಿತರ ಸಂಖ್ಯೆ ನೂರರ ಗಡಿ ದಾಟಿದ್ದು, ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಮಾರಕ ಸೋಂಕು ನಿಯಂತ್ರಣಕ್ಕಾಗಿ ಇಡೀ ದೇಶವನ್ನು ಏಪ್ರಿಲ್ 14ರವರೆಗೆ ಲಾಕ್​ಡೌನ್ ಮಾಡಲಾಗಿದೆ.
First published:April 1, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading