Video: ಸಾಯುವುದಾದರೆ ಚೀನಾದಲ್ಲೇ ಸಾಯಿರಿ; ಕೊರೋನಾ ಭೀತಿಯಲ್ಲಿರುವ ಪಾಕ್​ ವಿದ್ಯಾರ್ಥಿಗಳಿಗೆ ಸರ್ಕಾರದ ಸಂದೇಶ!

ಶನಿವಾರ ಬೆಳಗ್ಗೆ ಏರ್​ ಇಂಡಿಯಾದ ಜಂಬೋ ಬಿ747 ವಿಮಾನದಲ್ಲಿ ಭಾರತೀಯರನ್ನು ದೆಹಲಿಗೆ ಕರೆತರಲಾಗಿದೆ.  ಇಂದು ಕೂಡ ಒಂದಷ್ಟು ಜನರನ್ನು ಭಾರತಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ. ಈ ಮಧ್ಯೆ ಪಾಕಿಸ್ತಾನದವರು ವಿಡಿಯೋ ಒಂದನ್ನು ಮಾಡಿ ಹರಿಬಿಟ್ಟಿದ್ದು, ಸಾಕಷ್ಟು ವೈರಲ್​ ಆಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ನವದೆಹಲಿ (ಫೆ.2): ಚೀನಾದಲ್ಲಿ ಮಾರಣಾಂತಿಕ ಕೊರೋನಾ ವೈರಸ್​ಗೆ ಬಲಿಯಾದವರ ಸಂಖ್ಯೆ 300 ಗಡಿ ದಾಟಿದೆ. ಚೀನಾದಲ್ಲಿರುವ ಭಾರತೀಯರಿಗೆ ಈ ವೈರಸ್ ತಗಲುವ ಭೀತಿ ಎದುರಾಗಿದ್ದು, 324 ಭಾರತೀಯರನ್ನು ಸ್ಥಳಾಂತರ ಮಾಡಲಾಗಿದೆ. ಆದರೆ, ಪಾಕಿಸ್ತಾನದ ವಿದ್ಯಾರ್ಥಿಗಳು ಮಾತ್ರ ನೆರವು ಸಿಗದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

  ವುಹಾನ್​ ಭಾಗದಲ್ಲಿ ಕೊರೋನಾ ವೈರಸ್​ ಭೀತಿ ಹೆಚ್ಚಾಗಿದೆ. ವುಹಾನ್​ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ನಡೆಸುತ್ತಿರುವ 324 ಭಾರತೀಯರನ್ನು ಶನಿವಾರ ಬೆಳಗ್ಗೆ ಏರ್​ ಇಂಡಿಯಾದ ಜಂಬೋ ಬಿ747 ವಿಮಾನದಲ್ಲಿ ದೆಹಲಿಗೆ ಕರೆತರಲಾಗಿದೆ.  ಇಂದು ಕೂಡ ಒಂದಷ್ಟು ಜನರನ್ನು ಭಾರತಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ. ಈ ಮಧ್ಯೆ ಪಾಕಿಸ್ತಾನದವರು ವಿಡಿಯೋ ಒಂದನ್ನು ಮಾಡಿ ಹರಿಬಿಟ್ಟಿದ್ದು, ಸಾಕಷ್ಟು ವೈರಲ್​ ಆಗಿದೆ.

  ವುಹಾನ್​ ಪ್ರಾಂತ್ಯದಲ್ಲಿ ಭಾರತ, ಪಾಕ್​, ಬಾಂಗ್ಲಾ ಸೇರಿ ಬೇರೆ ಬೇರೆ ರಾಷ್ಟ್ರಗಳ ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಿದ್ದಾರೆ. ಈಗಾಗಲೇ ಅನೇಕ ರಾಷ್ಟ್ರಗಳು ಇಲ್ಲಿ ಅಧ್ಯಯನ ನಡೆಸುತ್ತಿರುವವರನ್ನು ತಮ್ಮ ದೇಶಕ್ಕೆ ಮರಳಿ ಕರೆಸಿಕೊಂಡಿದೆ. ಆದರೆ, ಪಾಕಿಸ್ತಾನ ಮಾತ್ರ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲವಂತೆ.

  ಇದನ್ನೂ ಓದಿ: ಕೊರೊನಾ ವೈರಸ್​​ ಭೀತಿ: ವಿಮಾನದ ಮೂಲಕ ಚೀನಾದಿಂದ 324 ಭಾರತೀಯರ ಸ್ಥಳಾಂತರ

  “ಅಲ್ಲಿ ಕಾಣುತ್ತಿರುವ ಬಸ್​ನಲ್ಲಿ ಭಾರತೀಯರನ್ನು ಕರೆದುಕೊಂಡು ಹೋಗಲಾಗುತ್ತಿದೆ. ಅವರು ಮೊದಲು ಭಾರತೀಯ ರಾಯಭಾರಿ ಕಚೇರಿಗೆ ತೆರಳುತ್ತಾರೆ. ನಂತರ ಅವರನ್ನು ಭಾರತಕ್ಕೆ ಕರೆದುಕೊಂಡು ಹೋಗಲಾಗುತ್ತದೆ. ಇಂದು ಬಾಂಗ್ಲಾದವರು ಕೂಡ ತಮ್ಮ ದೇಶಕ್ಕೆ ತೆರಳುತ್ತಿದ್ದಾರೆ,” ಎಂದು ಪಾಕ್​ ವಿದ್ಯಾರ್ಥಿಯೋರ್ವ ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ.  ಮುಂದುವರೆದು, “ನಮ್ಮ ದೇಶದವರು ಮಾತ್ರ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಸಾಯುವುದಾದರೆ ಇಲ್ಲೇ ಸಾಯಿರಿ, ನಾವು ಮಾತ್ರ ನಿಮ್ಮನ್ನು ಕರೆದೊಯ್ಯುವುದಿಲ್ಲ ಎಂದು ಹೇಳಿದ್ದಾರೆ. ಈ ವಿಚಾರದಲ್ಲಿ ಭಾರತದವರನ್ನು ನೋಡಿ ಕಲಿತುಕೊಳ್ಳಿ,” ಎಂದು ಪಾಕ್​ ಸರ್ಕಾರಕ್ಕೆ ಉಪದೇಶ ನೀಡಿದ್ದಾನೆ.

   
  First published: