ಕೊರೋನಾ ವಿರುದ್ಧ ಹೋರಾಡಲು ಮಹತ್ವದ ಹೆಜ್ಜೆ ಇಟ್ಟ ಪಾಕ್- ಬಾಂಗ್ಲಾ ಕ್ರಿಕೆಟಿಗರು

ಹೀಗಿರುವಾಗ ಕ್ರಿಕೆಟಿಗರು ತಮ್ಮ ದೇಶದ ಜನತೆಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಅದರಲ್ಲು ಬಾಂಗ್ಲಾದೇಶ ಕ್ರಿಕೆಟಿಗರು ತಮ್ಮ ಅರ್ಧ ತಿಂಗಳ ಸಂಬಳವನ್ನು ಸರ್ಕಾರದ ಪರಿಗಾರ ನಿಧಿಗೆ ನೀಡಲು ನಿರ್ಧಾರ ಮಾಡಿದ್ದಾರೆ.

news18-kannada
Updated:March 27, 2020, 8:21 AM IST
ಕೊರೋನಾ ವಿರುದ್ಧ ಹೋರಾಡಲು ಮಹತ್ವದ ಹೆಜ್ಜೆ ಇಟ್ಟ ಪಾಕ್- ಬಾಂಗ್ಲಾ ಕ್ರಿಕೆಟಿಗರು
ಬಾಂಗ್ಲಾ ಹಾಗೂ ಪಾಖ್ ಕ್ರಿಕೆಟಿಗರು.
  • Share this:
ನವದೆಹಲಿ(ಮಾ.27): ಎಲ್ಲೆಡೆ ಕ್ಷಿಪ್ರ ವೇಗದಲ್ಲಿ ಹರಡುತ್ತಿರುವ ಈ ಮಾರಣಾಂತಿಕ ಕೊರೋನಾ ವೈರಸ್​​ಗೆ ಇಡೀ ವಿಶ್ವವೇ ಬೆಚ್ಚಿ ಬಿದ್ದಿದೆ. ಭಾರತದಲ್ಲಿ ನಿನ್ನೆ ಒಂದೇ ದಿನ ಅತಿ ಹೆಚ್ಚು ಕೊರೋನಾ ಪ್ರಕರಣಗಳು ದಾಖಲಾಗಿವೆ. ಸುಮಾರು 88 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 694ಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆ 16ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಇಲ್ಲಿಯವರೆಗೂ 23 ಸಾವಿರ ಮಂದಿ ಬಲಿಯಾಗಿದ್ದಾರೆ. ಜತ್ತಿನ ಒಟ್ಟು 182 ದೇಶಗಳಲ್ಲಿ 5 ಲಕ್ಷಕ್ಕೂ ಹೆಚ್ಚು ಮಂದಿಗೆ ಸೋಂಕು ಪತ್ತೆಯಾಗಿದೆ ಎಂದು ವರದಿಗಳು ತಿಳಿಸಿವೆ.

IPL 2020: ಐಪಿಎಲ್ ಆರಂಭದ ಬಗ್ಗೆ ಮಾಹಿತಿ ನೀಡಿದ ಹಿಟ್​​ಮ್ಯಾನ್ ರೋಹಿತ್ ಶರ್ಮಾ!

ಭಾರತದಂತೆಯೇ ಇಡೀ ವಿಶ್ವದ ಬಹುತೇಕ ದೇಶಗಳಲ್ಲಿ ಸಂಪೂರ್ಣ ಲಾಕ್​​ಡೌನ್ ಘೋಷಣೆ ಮಾಡಲಾಗಿದೆ. ಹಾಗಾಗಿ ಸುಮಾರು 260 ಕೋಟಿ ಜನ ಈಗ ಗೃಹ ಬಂಧನಕ್ಕೆ ಒಳಗಾಗಿದ್ದಾರೆ.

ಬ್ರಿಟನ್, ಫ್ರಾನ್ಸ್, ಇಟಲಿ, ಸ್ಪೇನ್ ಸೇರಿದಂತೆ 42 ದೇಶಗಳು ಲಾಕ್​​ಡೌನ್ ಮಾಡಲಾಗಿದೆ. ಇದೀಗ ಈ ಸಾಲಿಗೆ ಭಾರತ ಮತ್ತು ನ್ಯೂಜಿಲೆಡ್ ಸೇರ್ಪಡೆಯಾಗಿವೆ. ಎಲ್ಲೆಡೆಯೂ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

ಹೀಗಿರುವಾಗ ಕ್ರಿಕೆಟಿಗರು ತಮ್ಮ ದೇಶದ ಜನತೆಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಅದರಲ್ಲು ಬಾಂಗ್ಲಾದೇಶ ಕ್ರಿಕೆಟಿಗರು ತಮ್ಮ ಅರ್ಧ ತಿಂಗಳ ಸಂಬಳವನ್ನು ಸರ್ಕಾರದ ಪರಿಗಾರ ನಿಧಿಗೆ ನೀಡಲು ನಿರ್ಧಾರ ಮಾಡಿದ್ದಾರೆ. ಬಾಂಗ್ಲಾ ತಂಡದಲ್ಲಿರುವ ಒಟ್ಟು 27 ಆಟಗಾರರ ಪೈಕಿ 17 ಪ್ಲೇಯರ್ಸ್​ ತಮ್ಮ ಅರ್ಧ ತಿಂಗಳ ಸಂಬಳವನ್ನು ಸರ್ಕಾರಕ್ಕೆ ನೀಡಿದ್ದಾರೆ.

ನಿಮಗಿದು ಗೊತ್ತಾ?: ಏಕದಿನ ಕ್ರಿಕೆಟ್​​ನಲ್ಲಿ ಹಿಟ್​ಮ್ಯಾನ್​​ ಸಿಡಿಸಿದ 264 ರನ್ ಗರಿಷ್ಠ ಸ್ಕೋರ್ ಅಲ್ಲ; ಮತ್ಯಾರದ್ದು?ಇನ್ನೂ ಪಾಕಿಸ್ತಾನ ಕ್ರಿಕೆಟಿಗರು ಕೂಡ ಪಾಕ್ ಸರ್ಕಾರಕ್ಕೆ 50 ಲಕ್ಷ ಪಾಕಿಸ್ತಾನ ರೂಪಾಯಿಯನ್ನು ಸರ್ಕಾರದ ತುರ್ತು ನಿಧಿಗೆ ನೀಡಲು ಮುಂದಾಗಿದ್ದಾರೆ. ಇತ್ತ ಪಾಕ್ ಕ್ರಿಕೆಟ್ ಮಂಡಳಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ಉನ್ನತ ಮಟ್ಟದ ಸಿಬ್ಬಂದಿ ವರ್ಗ ಒಂದು ದಿನದ ಸಂಬಳವನ್ನು ಸರ್ಕಾರಕ್ಕೆ ನೀಡಿದ್ದಾರೆ.
First published:March 27, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading