• Home
  • »
  • News
  • »
  • coronavirus-latest-news
  • »
  • ಯಾದಗಿರಿ ಜಿಲ್ಲೆಯಲ್ಲಿ ಬಿರುಗಾಳಿಸಹಿತ ಮಳೆಗೆ ನೆಲಕಚ್ಚಿದ ಭತ್ತದ ಬೆಳೆ; ಸಂಕಷ್ಟದಲ್ಲಿ ಅನ್ನದಾತ!

ಯಾದಗಿರಿ ಜಿಲ್ಲೆಯಲ್ಲಿ ಬಿರುಗಾಳಿಸಹಿತ ಮಳೆಗೆ ನೆಲಕಚ್ಚಿದ ಭತ್ತದ ಬೆಳೆ; ಸಂಕಷ್ಟದಲ್ಲಿ ಅನ್ನದಾತ!

ಯಾದಗಿರಿಯಲ್ಲಿ ಮಳೆಗೆ ಭತ್ತದ ಬೆಳೆ ನಾಶವಾಗಿರುವುದು.

ಯಾದಗಿರಿಯಲ್ಲಿ ಮಳೆಗೆ ಭತ್ತದ ಬೆಳೆ ನಾಶವಾಗಿರುವುದು.

ಕೆಲ ರೈತರು ಭತ್ತ ಕಟಾವು ಮಾಡಿ ರಾಶಿ ಮಾಡಿ ಒಣಗಲು ಹಾಕಿದ್ದ ಅಪಾರ ಪ್ರಮಾಣದ ಭತ್ತ ನೀರು ಪಾಲಾಗಿದೆ. ಸರಕಾರ ರೈತರಿಗೆ ಹೆಚ್ಚಿನ ಪರಿಹಾರ ನೀಡಿ ಅನ್ನದಾತರ ಜೀವ ಉಳಿಸುವ ಕಾರ್ಯ ಮಾಡಬೇಕಿದೆ.

  • Share this:

ಯಾದಗಿರಿ: ಲಾಕ್​ಡೌನ್​ನಿಂದ ಸಂಕಷ್ಟಕ್ಕೆ ಸಿಲುಕಿದ ರೈತರು ಈಗ ಬಿರುಗಾಳಿ ಸಹಿತ ಮಳೆಯಿಂದಾಗಿ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಭಾರೀ ಮಳೆಗೆ ಭತ್ತ ಹಾಗೂ ಪಪ್ಪಾಯಿ ಬೆಳೆ ಹಾನಿಯಾಗಿದ್ದು, ವರುಣನ‌ ಅಬ್ಬರಕ್ಕೆ ರೈತರು ಚಿಂತೆ ಮಾಡುವಂತಾಗಿದೆ.  ಕಳೆದ ಎರಡು ದಿನಗಳಿಂದ ಯಾದಗಿರಿ ಜಿಲ್ಲೆಯಲ್ಲಿ ಮಳೆ ಬರುತಿದ್ದು, ಇದರಿಂದ ಅಪಾರ ಪ್ರಮಾಣದ ಬೆಳೆ ಸಂಪೂರ್ಣ ನೆಲಕಚ್ಚಿದೆ.


ಜಿಲ್ಲೆಯ ವಡಗೇರಾ ತಾಲೂಕಿನ ಶಿವನೂರ, ಮಾಚನೂರ, ಬೆನಕನಹಳ್ಳಿ, ಗೊಂದಡಗಿ, ನಾಯ್ಕಲ್ ಹಾಗೂ ಕೃಷ್ಣಾ ನದಿ ತೀರದ ಕೊಳ್ಳುರು ಎಂ.ಹೆಮ್ಮಡಗಿ ಹಾಗೂ ಮೊದಲಾದ ಕಡೆ ವರುಣನ ಅವಾಂತರಕ್ಕೆ ಭತ್ತದ ಬೆಳೆ ಹಾಗೂ ಪಪ್ಪಾಯಿ ಬೆಳೆ ಹಾನಿಯಾಗಿದೆ.


ನದಿ ತೀರದ ರೈತರ ನೆಮ್ಮದಿ ಕಸಿದ ವರುಣ...!


ಕಳೆದ ಅಗಸ್ಟ್ ತಿಂಗಳಲ್ಲಿ ಮಹಾರಾಷ್ಟ್ರದ ಮಹಾ ಮಳೆಗೆ ಕೃಷ್ಣಾ ಹಾಗೂ ಭೀಮಾ ನದಿ ತೀರದ ರೈತರ ಅಪಾರ ಪ್ರಮಾಣದ ಭತ್ತ ಹಾಗೂ ಹತ್ತಿ ಬೆಳೆ ಹಾನಿಯಾಗಿತ್ತು. ಪ್ರವಾಹದ ನಂತರ ಮತ್ತೆ ಸಾಲ ಮಾಡಿ ನದಿ ತೀರದ ರೈತರು ಬದುಕು ಕಟ್ಟಿಕೊಂಡಿದ್ದರು. ಲಕ್ಷಾಂತರ ರೂ. ವೆಚ್ಚ ಮಾಡಿ ಭತ್ತ ಬೆಳೆದಿದ್ದರು. ಆದರೆ, ಈಗ ವರುಣನ ಅಬ್ಬರಕ್ಕೆ ಭತ್ತದ ಬೆಳೆ ಸಂಪೂರ್ಣ ಹಾನಿಯಾಗಿದೆ.


ಈ ಬಗ್ಗೆ ನ್ಯೂಸ್ 18 ಕನ್ನಡದೊಂದಿಗೆ ಮಾತನಾಡಿದ ಶಿವನೂರ ಗ್ರಾಮದ ರೈತ ಶಂಕರಗೌಡ ಪಾಟೀಲ, ಕಳೆದ ಬಾರಿ ಪ್ರವಾಹದಿಂದ ಬೆಳೆ ಹಾನಿಯಾಗಿತ್ತು. ಈಗ ಮತ್ತೆ ಭತ್ತ ಕಟಾವು ಮಾಡಿ ರಾಶಿ ಮಾಡಿ ಸಾಲ ತೀರಿಸಬೇಕೆಂದರೆ ಮಳೆ ಬಂದು ಬೆಳೆ ಹಾನಿ ಮಾಡಿದೆ. ನಾವು ಹೊಲ ಮಾರಾಟ ಮಾಡಿ ಜೀವನ ಸಾಗಿಸುವ ಪರಿಸ್ಥಿತಿ ಬಂದಿದೆ. ಸರಕಾರ ರೈತರ ಜೀವ ಉಳಿಸುವ ಕೆಲಸ ಮಾಡಬೇಕೆಂದು ನೋವು ತೊಡಿಕೊಂಡರು.


ಗಾಯದ ಮೇಲೆ ಬರೆ ಎಳೆದ ಮಳೆ..!


ಕಳೆದ ಅಗಸ್ಟ್ ತಿಂಗಳಲ್ಲಿ ರೈತರು ಬೆಳೆ ನಷ್ಟ ಹೊಂದಿದ್ದರು. ಮತ್ತೆ ಈಗ ಲಾಕ್​ಡೌನ್ ಸಂಕಷ್ಟದಲ್ಲಿಯೇ ವರುಣನ‌ ಅಬ್ಬರಕ್ಕೆ 10 ಸಾವಿರಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಬೆಳದಿದ್ದ ಭತ್ತ ಹಾನಿಯಾಗಿದೆ. ಭತ್ತ ರಾಶಿ ಮಾಡುಬೇಕೆನ್ನುವಷ್ಟರಲ್ಲಿ ಧಾರಾಕಾರ ಮಳೆ ಸುರಿದು ಬೆಳೆ ನೆಲ ಕಚ್ಚಿದೆ.


ಇದನ್ನು ಓದಿ: ಆರೆಂಜ್ ಝೋನ್​ನಲ್ಲಿ ವಿಜಯಪುರ ಜಿಲ್ಲೆ; ಗುಮ್ಮಟ ನಗರಿ ಹೊರತುಪಡಿಸಿ ಉಳಿದ ತಾಲೂಕುಗಳಲ್ಲಿ ಹಲವು ವಿನಾಯಿತಿ


ಈ ಬಗ್ಗೆ ನ್ಯೂಸ್ 18 ಕನ್ನಡದೊಂದಿಗೆ ಮಾತನಾಡಿದ ಕಾಂಗ್ರೆಸ್ ಮುಖಂಡ ಮಾಣೀಕರೆಡ್ಡಿ ಕುರಕುಂದಿ, ಸರಕಾರ ಕೂಡಲೇ ಸಮೀಕ್ಷೆ ಮಾಡಬೇಕು. ಅದೆ ರೀತಿ ಬೆಳೆ ಹಾನಿಯಾದ ರೈತರಿಗೆ ಹೆಚ್ಚಿನ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.


ಕೆಲ ರೈತರು ಭತ್ತ ಕಟಾವು ಮಾಡಿ ರಾಶಿ ಮಾಡಿ ಒಣಗಲು ಹಾಕಿದ್ದ ಅಪಾರ ಪ್ರಮಾಣದ ಭತ್ತ ನೀರು ಪಾಲಾಗಿದೆ. ಸರಕಾರ ರೈತರಿಗೆ ಹೆಚ್ಚಿನ ಪರಿಹಾರ ನೀಡಿ ಅನ್ನದಾತರ ಜೀವ ಉಳಿಸುವ ಕಾರ್ಯ ಮಾಡಬೇಕಿದೆ.


ವರದಿ: ನಾಗಪ್ಪ ಮಾಲಿಪಾಟೀಲ

Published by:HR Ramesh
First published: