• Home
 • »
 • News
 • »
 • coronavirus-latest-news
 • »
 • ಪಾದರಾಯನಪುರ ಗಲಭೆ ಪ್ರಕರಣ; ಐದು ದಿನ ಕಳೆದರೂ ಪತ್ತೆಯಾಗದ ಪ್ರಮುಖ ಆರೋಪಿ ಇರ್ಫಾನ್

ಪಾದರಾಯನಪುರ ಗಲಭೆ ಪ್ರಕರಣ; ಐದು ದಿನ ಕಳೆದರೂ ಪತ್ತೆಯಾಗದ ಪ್ರಮುಖ ಆರೋಪಿ ಇರ್ಫಾನ್

ಪಾದರಾಯನಪುರ ಗಲಭೆಯ ದೃಶ್ಯ

ಪಾದರಾಯನಪುರ ಗಲಭೆಯ ದೃಶ್ಯ

ಪಾದರಾಯನಪುರ ಗಲಭೆಗೆ ಸಂಬಂಧಿಸಿದಂತೆ ಈವರೆಗೆ ಸುಮಾರು 54 ಜನರನ್ನು ಬಂಧಿಸಿರುವ ಪೊಲೀಸರು ಎಲ್ಲರನ್ನೂ ರಾಮನಗರ ಜಿಲ್ಲಾ ಬಂಧಿಖಾನೆಗೆ ಕಳುಹಿಸಿದ್ದಾರೆ. ಬಂಧಿತರ ಪೈಕಿ ನಾಲ್ವರು ಆರೋಪಿಗಳು ಕೊಟ್ಟ ಹೇಳಿಕೆ ಆಧರಿಸಿ ಈ ಎಲ್ಲಾ ಗಲಭೆಗೂ ಇರ್ಫಾನ್ ಎಂಬ ವ್ಯಕ್ತಿಯೇ ಕಾರಣ ಎಂಬ ತೀರ್ಮಾನಕ್ಕೆ ಪೊಲೀಸರು ಬಂದಿದ್ದಾರೆ.

ಮುಂದೆ ಓದಿ ...
 • Share this:

  ಬೆಂಗಳೂರು (ಏಪ್ರಿಲ್ 23); ಪಾದರಾಯನಪುರ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಎ-1 ಆರೋಪಿ ಇರ್ಫಾನ್‌ಗಾಗಿ ಕಳೆದ ಐದು ದಿನಗಳಿಂದ ಪೊಲೀಸರು ಬಲೆ ಬೀಸಿದ್ದಾರೆ. ಆದರೆ, ಆತ ಈ ವರೆಗೆ ಪತ್ತೆಯಾಗಿಲ್ಲ.

  ಪಾದರಾಯನಪುರ ಗಲಭೆಗೆ ಸಂಬಂಧಿಸಿದಂತೆ ಈವರೆಗೆ ಸುಮಾರು 54 ಜನರನ್ನು ಬಂಧಿಸಿರುವ ಪೊಲೀಸರು ಎಲ್ಲರನ್ನೂ ರಾಮನಗರ ಜಿಲ್ಲಾ ಬಂಧಿಖಾನೆಗೆ ಕಳುಹಿಸಿದ್ದಾರೆ. ಬಂಧಿತರ ಪೈಕಿ ನಾಲ್ವರು ಆರೋಪಿಗಳು ಕೊಟ್ಟ ಹೇಳಿಕೆ ಆಧರಿಸಿ ಈ ಎಲ್ಲಾ ಗಲಭೆಗೂ ಇರ್ಫಾನ್ ಎಂಬ ವ್ಯಕ್ತಿಯೇ ಕಾರಣ ಎಂಬ ತೀರ್ಮಾನಕ್ಕೆ ಪೊಲೀಸರು ಬಂದಿದ್ದಾರೆ.

  ಹೀಗಾಗಿ ಚಾಮರಾಜಪೇಟೆ ,ಶಿವಾಜಿನಗರ , ಡಿಜೆ ಹಳ್ಳಿ ಪೊಲೀಸರು ಕಳೆದ ಐದು ದಿನಗಳಿಂದ ಇರ್ಫಾನ್‌ಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ. ಆತನ ಕುಟುಂಬಸ್ಥರು ಮತ್ತು ಸ್ನೇಹಿತರ ಬಳಗದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ಆದರೆ, ಈವರೆಗೆ ಆತ ಎಲ್ಲಿದ್ದಾನೆ ಎಂಬುದನ್ನು ಪೊಲೀಸರಿಂದ ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ ಎಂದು ತಿಳಿದುಬಂದಿದೆ.

  ಇದನ್ನೂ ಓದಿ : Black Day: ಇಂದು ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಕರಾಳ ದಿನಾಚರಣೆ

  Published by:MAshok Kumar
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು