ಪಾದರಾಯನಪುರ ಘಟನೆ ನಡುವೆ ಮೈಸೂರಿನಲ್ಲಿ ಮಾದರಿಯಾದ ಹಳ್ಳಿಗರು; ಕೊರೋನಾ ಟೆಸ್ಟ್‌ ಮಾಡಿಸಿಕೊಳ್ಳಲು ಊರಿಗೆ ಊರೇ ಮುಂದು

ಮೈಸೂರು ತಾಲ್ಲೂಕಿನ ಮೊಸಂಬಾಯನಹಳ್ಳಿಯಲ್ಲಿ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಲು ತಾ ಮುಂದು ನಾ ಮುಂದು ಎಂದು ಬರುತ್ತಿರುವ ಜನರು ಸ್ವಯಂ ಪ್ರೇರಿತರಾಗಿ ಪರೀಕ್ಷೆಗೆ ಒಳಪಡುತ್ತಿದ್ದಾರೆ

news18-kannada
Updated:April 21, 2020, 7:35 AM IST
ಪಾದರಾಯನಪುರ ಘಟನೆ ನಡುವೆ ಮೈಸೂರಿನಲ್ಲಿ ಮಾದರಿಯಾದ ಹಳ್ಳಿಗರು; ಕೊರೋನಾ ಟೆಸ್ಟ್‌ ಮಾಡಿಸಿಕೊಳ್ಳಲು ಊರಿಗೆ ಊರೇ ಮುಂದು
ಗ್ರಾಮಸ್ಥರು
  • Share this:
ಮೈಸೂರು(ಏ.21): ಪಾದರಾಯನಪುರದಲ್ಲಿ ಕೊರೋನಾ ಪರೀಕ್ಷೆ ಮಾಡಲು ಹೋದ ಕೊರೋನಾ ವಾರಿಯರ್ಸ್​​ಗಳ ಮೇಲೆ ನಡೆದ ಹಲ್ಲೆಗೆ ಇಡೀ ರಾಜ್ಯವ್ಯಾಪಿ  ಖಂಡನೆ ವ್ಯಕ್ತವಾಗುತ್ತಿರುವ ಹಿನ್ನಲೆಯಲ್ಲಿ ಮೈಸೂರಿನಲ್ಲಿ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಲು ತಾವಾಗಿಯೇ ಮುಂದೆ ಬಂದ ಜನರು ಇಡೀ ರಾಜ್ಯಕ್ಕೆ ಮಾದರಿಯಾಗಿದ್ದಾರೆ.

ಮೈಸೂರು ತಾಲ್ಲೂಕಿನ ಮೊಸಂಬಾಯನಹಳ್ಳಿಯಲ್ಲಿ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಲು ತಾ ಮುಂದು ನಾ ಮುಂದು ಎಂದು ಬರುತ್ತಿರುವ ಜನರು ಸ್ವಯಂ ಪ್ರೇರಿತರಾಗಿ ಪರೀಕ್ಷೆಗೆ ಒಳಪಡುತ್ತಿದ್ದಾರೆ. ಗ್ರಾಮದ ವೃದ್ಧನಲ್ಲಿ ಕಾಣಿಸಿಕೊಂಡಿರುವ ಕೊರೋನಾ ಪಾಸಿಟಿವ್‌ನಿಂದಾಗಿ ಗ್ರಾಮದಲ್ಲಿರುವ 350ಕ್ಕೂ ಹೆಚ್ಚು ಮನೆಗಳಲ್ಲೂ ಆತಂಕ ಸೃಷ್ಠಿಯಾಗಿದೆ. ವೃದ್ದನ ಪಾಸಿಟಿಸ್‌ ಕೇಸ್‌ನಿಂದಾಗಿ 60ಕ್ಕು ಹೆಚ್ಚು ಜನರನ್ನ ಕ್ವಾರಂಟೈನ್ ಮಾಡಿರುವ ಜಿಲ್ಲಾಡಳಿತ ಗ್ರಾಮವನ್ನ ಕಂಟೇನ್ಮೆಂಟ್ ಏರಿಯಾ ಎಂದು ಘೋಷಿಸಿದೆ.

ಈ ಹಿನ್ನಲೆಯಲ್ಲಿ ತಾವಾಗಿಯೇ ಮುಂದೆ ಬಂದು ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳುತ್ತಿರುವ ಜನರು ಕೊರೋನಾ ತಡೆಗಟ್ಟಲು ಸಹಕಾರಿಯಾಗಿದ್ದಾರೆ.  ಆ ಮೂಲಕ ರಾಜ್ಯಕ್ಕೆ  ಮಾದರಿಯಾದ ಮೊಸಂಬಾಯನಹಳ್ಳಿ ಗ್ರಾಮದ ಜನರು ಆಶಾ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸುತ್ತಿರುವ ಪ್ರಕರಣಗಳ ನಡುವೆ ಗಮನ ಸೆಳೆದಿದ್ದಾರೆ. ಗ್ರಾಮದ ಜನರ ನಡವಳಿಕೆಗೆ ಹಾಗೂ ಜನರ ಮುಂಜಾಗ್ರತೆಗೆ ಜಿಲ್ಲಾಡಳಿತ ಮೆಚ್ಚುಗೆ ವ್ಯಕ್ತಪಡಿಸಿದೆ.

ಜುಬಿಲೆಂಟ್ಸ್ ಕಾರ್ಖಾನೆಯಲ್ಲಿ 2000ಕ್ಕಿಂತಲೂ ಹೆಚ್ಚು ಪರೀಕ್ಷೆ ಮಾಡಿದ್ದೇವೆ, ಪ್ರೈಮರಿ, ಸೆಕಂಡರಿ ಸಂಪರ್ಕದ ಎಲ್ಲರ ಸ್ಯಾಂಪಲ್ ಮುಗಿದಿದೆ. 160 ಜನರ ಸ್ಯಾಂಪಲ್ ಕಳುಹಿಸಿದ್ದೇವೆ. ಆ ಮೂಲಕ ಜುಬಿಲೆಂಟ್ಸ್ ಕಾರ್ಖಾನೆ ಸಂಪರ್ಕದ ಎಲ್ಲರ ಸ್ಯಾಂಪಲ್ ಮುಗಿದಂತಾಗಿದೆ. 2000ಕ್ಕು ಹೆಚ್ಚು ಸ್ಯಾಂಪಲ್ ಟೆಸ್ಟ್‌ನಲ್ಲಿ 69 ಪಾಸಿಟಿವ್ ಬಂದಿದೆ ಕೆಲವೊಂದು ಪ್ರೈಮರಿ ಇನ್ನು ಕೆಲವು ಸೆಕೆಂಡರಿ ಸಂಪರ್ಕದಲ್ಲಿ ಪಾಸಿಟಿವ್ ಬಂದಿದೆ. ಇನ್ನು ಮುಂದೆ ಜುಬಿಲೆಂಟ್ಸ್ ಕಾರ್ಖಾನೆ ಸಂಬಂಧ ಪಾಸಿಟಿವ್ ಕಡಿಮೆ ಆಗುವ ನಿರೀಕ್ಷೆಯಲ್ಲಿದ್ದೇವೆ ಎಂದು ಮೈಸೂರು ಡಿಸಿ ಅಭಿರಾಮ್ ಜಿ.ಶಂಕರ್ ಹೇಳಿದ್ದಾರೆ.

ಇನ್ನು ಮೈಸೂರಿನಲ್ಲಿ ತಬ್ಲಿಘಿ ಜಮಾತ್ ಸಂಪರ್ಕದ 88 ಜನರಿದಗದು, ಅದರಲ್ಲಿ 10 ಕೇಸ್ ಪಾಸಿಟಿವ್ ಬಂದಿದೆ. ಉಳಿದ 78 ಕೇಸ್ ನೆಗೆಟಿವ್ ಬಂದಿದ್ದು, ತಬ್ಲಿಘಿಗಳ ಸಂಪರ್ಕದ ಎಲ್ಲರು ನಮ್ಮ ಕ್ವಾರಂಟೈನ್​​ನಲಿದ್ದಾರೆ. ಮೈಸೂರಿನಲ್ಲಿ ತಬ್ಲಿಘಿಗಳ ಕೇಸ್‌ಗಳು ಮತ್ತೆ ಪಾಸಿಟಿವ್ ಬರುವ ಸಾಧ್ಯತೆ ಕಡಿಮೆಯಿದ್ದು, ನಮಗೆ ಉಸಿರಾಟದ ತೊಂದರೆ ಸೋಂಕಿತರ ಕೇಸ್ ನಮಗೆ ಆತಂಕ ತಂದಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್​​ ಜಿ ಶಂಕರ್​ ತಿಳಿಸಿದ್ದಾರೆ.

ಮೊಸಂಬಾಯನಹಳ್ಳಿಯ ಸೋಂಕಿತ ವೃದ್ದರದ್ದೇ ಸುಮಾರು 60 ಪ್ರಾಥಮಿಕ ಸಂಪರ್ಕ ಪತ್ತೆಯಾಗಿದೆ ಎಲ್ಲರನ್ನೂ ಗುರುತಿಸಿ ನಿಗಾದಲ್ಲಿ ಇಡಲಾಗಿದೆ. ಮೈಸೂರಿನಲ್ಲಿ ಇನ್ನು ಸಮುದಾಯಕ್ಕೆ ಹರಡಿಲ್ಲ. ಮೊಸಂಬಾಯನಹಳ್ಳಿ ನಂಜನಗೂಡು ಸಮೀಪ ಇದೆ ರೈತರಿಗೆ ಜಮೀನಿಗೆ ಹೋಗಲು ಕಾಲು ದಾರಿಯಲ್ಲಿ ಸಾಗಲು ನಿರ್ಬಂಧ ಹೇರಿಲ್ಲ. ಆ ಮೂಲದಿಂದಲೂ ಬಂದಿರಬಹುದು ಇದರಿಂದ ಸಮುದಾಯಕ್ಕೆ ಹರಡಿದೆ ಎನ್ನುವ ಆತಂಕ ಬೇಡ ಎಂದು ಜನರಲ್ಲಿ ಮನವಿ ಮಾಡಿದರು.

ಇದನ್ನೂ ಓದಿ : Raichur Lockdown: ಮೋಸಂಬಿ ಮಾರಲು ರೈತನ ನೆರವಿಗೆ ಬಂತು ಸೋಷಿಯಲ್ ಮೀಡಿಯಾಜೊತೆಗೆ ಉಸಿರಾಟದ ತೊಂದರೆ ಇರುವವರ ಮಾಹಿತಿ ನೀಡದ ಆಸ್ಪತ್ರೆಗೆ ಶೋಕಾಸ್ ನೋಟಿಸ್ ನೀಡಲಾಗುವುದು, ಈಗಾಗಲೆ ಒಂದು ಆಸ್ಪತ್ರೆಗೆ ನೋಟಿಸ್ ನೀಡಿದ್ದು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಲು ತಡಮಾಡಿದರೆ ಅಂತಹ ಆಸ್ಪತ್ರೆ ವಿರುದ್ದ ಕೇಸ್‌ ದಾಖಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇವೆಲ್ಲದರ ನಡುವೆ ಮೈಸೂರಿನಲ್ಲಿ ಇಂದು ಹೊಸ ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗದೆ ಇರೋದು ಕೊಂಚ ನೆಮ್ಮದಿ ತಂದಿದೆ.
First published: April 21, 2020, 7:33 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading