HOME » NEWS » Coronavirus-latest-news » OXYGEN SHORTAGE EVERYWHERE WHAT IS THE SEVERITY OF CORONA FOR A PATIENT TO BE ICU OR O2 DEPENDENT SKTV

Corona Virus: ಕೊರೊನಾ ಸೋಂಕು ತಗುಲಿದ ಎಲ್ಲರಿಗೂ ಬೇಕಾಗಿಲ್ಲ ಆಕ್ಸಿಜನ್, ರೋಗಿಗೆ ಆಕ್ಸಿಜನ್ ಬೇಕಾ ಬೇಡ್ವಾ ಅಂತ ನಿರ್ಧರಿಸೋದು ಹೇಗೆ ಗೊತ್ತಾ?

ಈಗಿನ ಕೋವಿಡ್ ಪರಿಸ್ಥಿತಿ ನೋಡಿದ್ರೆ ಮೇ ತಿಂಗಳಲ್ಲಿ 1,400 ಮೆಟ್ರಿಕ್ ಟನ್ ಹೆಚ್ಚುವರಿ ಆಕ್ಸಿಜನ್ ಬೇಕಾಗುವ ಸಾಧ್ಯತೆ ಇದೆ ಎನ್ನುತ್ತಿದ್ದಾರೆ ತಜ್ಞರು. ಈಗಲೇ ಅಗತ್ಯಕ್ಕೆ ತಕ್ಕಂತೆ ಆಕ್ಸಿಜನ್ ಪೂರೈಕೆ ಆಗ್ತಿಲ್ಲ.. ಇನ್ನೂ 1400 ಮೆಟ್ರಿಕ್ ಟನ್ ಅಗತ್ಯ ಬಿದ್ದರೆ ಜನರ ಪಾಡೇನು ಎನ್ನುವ ಆತಂಕ ಎಲ್ಲರಲ್ಲಿ ಎದುರಾಗಿದೆ.

Soumya KN | news18-kannada
Updated:May 2, 2021, 3:46 PM IST
Corona Virus: ಕೊರೊನಾ ಸೋಂಕು ತಗುಲಿದ ಎಲ್ಲರಿಗೂ ಬೇಕಾಗಿಲ್ಲ ಆಕ್ಸಿಜನ್, ರೋಗಿಗೆ ಆಕ್ಸಿಜನ್ ಬೇಕಾ ಬೇಡ್ವಾ ಅಂತ ನಿರ್ಧರಿಸೋದು ಹೇಗೆ ಗೊತ್ತಾ?
ಸಾಂದರ್ಭಿಕ ಚಿತ್ರ
  • Share this:
Oxygen Shortage: ಕೊರೊನಾ ಆರ್ಭಟ ತೀವ್ರವಾಗ್ತಿದ್ದಂತೆ ಮೊದಲು ಎದುರಾದ ಸಮಸ್ಯೆ ಆಕ್ಸಿಜನ್​ದು. ಎರಡನೇ ಅಲೆಯಲ್ಲಿ ಅತಿ ದೊಡ್ಡ ವಿಲನ್ ಆಕ್ಸಿಜನ್ ಅಭಾವವೇ ಆಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡೂ ನಾನಾ ಬಗೆಯ ಪ್ರಯತ್ನ ಮಾಡಿದ್ರೂ ಆಮ್ಲಜನಕ ಸಾಲುತ್ತಿಲ್ಲ. ಸೂಕ್ತ ರೀತಿಯಲ್ಲಿ ಜೀವ ವಾಯು ಪೂರೈಸಲಾಗದೆ ಸರ್ಕಾರ ಪರದಾಡುತ್ತಿದೆ. ಆದ್ರೆ ಆಕ್ಸಿಜನ್ ನಿಜಕ್ಕೂ ಯಾಕೆ ಇಷ್ಟೊಂದು ಅಭಾವ ಉಂಟಾಗಿದೆ. ಸೋಂಕಿತರಿಗೆ ಆಕ್ಸಿಜನ್ ಅಗತ್ಯ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಯಾಕಿದೆ ಎನ್ನುವುದರ ಬಗ್ಗೆ ಉಪಯುಕ್ತ ಮಾಹಿತಿ ಹಂಚಿಕೊಂಡಿದ್ದಾರೆ ವೈದ್ಯರು.

ಸೋಂಕಿತರಿಗೆ ಆಕ್ಸಿಜನ್ ಯಾಕೆ ಇಷ್ಟು ಮುಖ್ಯ.? ಪಾಸಿಟಿವ್ ಆದರೆ ಆಕ್ಸಿಜನ್ ಬೇಕೇ ಬೇಕಾ..?

ಈಗಿನ ಕೋವಿಡ್ ಪರಿಸ್ಥಿತಿ ನೋಡಿದ್ರೆ ಮೇ ತಿಂಗಳಲ್ಲಿ 1,400 ಮೆಟ್ರಿಕ್ ಟನ್ ಹೆಚ್ಚುವರಿ ಆಕ್ಸಿಜನ್ ಬೇಕಾಗುವ ಸಾಧ್ಯತೆ ಇದೆ ಎನ್ನುತ್ತಿದ್ದಾರೆ ತಜ್ಞರು. ಈಗಲೇ ಅಗತ್ಯಕ್ಕೆ ತಕ್ಕಂತೆ ಆಕ್ಸಿಜನ್ ಪೂರೈಕೆ ಆಗ್ತಿಲ್ಲ.. ಇನ್ನೂ 1400 ಮೆಟ್ರಿಕ್ ಟನ್ ಅಗತ್ಯ ಬಿದ್ದರೆ ಜನರ ಪಾಡೇನು ಎನ್ನುವ ಆತಂಕ ಎಲ್ಲರಲ್ಲಿ ಎದುರಾಗಿದೆ.

ಅಂದ್ಹಾಗೆ ಎಲ್ಲಾ ಕಾವಿಡ್ ಪಾಸಿಟಿವ್ ರೋಗಿಗಳಿಗೆ ಆಕ್ಸಿಜನ್ ಅವಶ್ಯಕತೆ ಇರುವುದಿಲ್ಲ. ಯಾವ ರೋಗಿಯ ಆಕ್ಸಿಜನ್ ಸ್ಯಾಚುರೇಚನ್ ಲೆವೆಲ್ 94% ಗಿಂತ ಕಡಿಮೆ ಇರುತ್ತದೆಯೋ, ಅಂತಹವರಿಗೆ ಆಕ್ಸಿಜನ್ ಬೇಕಾಗುತ್ತದೆ.

ಇದನ್ನೂ ಓದಿhttps://kannada.news18.com/news/coronavirus-latest-news/shut-down-the-country-for-weeks-hang-in-and-take-care-we-will-get-to-normal-says-dr-anthiny-s-fausi-on-corona-crisis-in-india-sktv-559223.html

ಅನೇಕ ಬಾರಿ ಕೊರೋನಾ ಸೋಂಕಿತರಿಗೆ ವೈರಲ್ ನ್ಯೂಮೋನಿಯಾ ಇರುತ್ತದೆ. ಅದು ಜಾಸ್ತಿ ಆದಲ್ಲಿ ಶ್ವಾಸಕೋಶದಿಂದ ರಕ್ತಕ್ಕೆ ಆಕ್ಸಿಜನ್ ಪೂರೈಕೆ ಸರಿಯಾಗಿ ಆಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಆಕ್ಸಿಜನ್ ಅವಶ್ಯಕತೆ ಬಹಳ ಇರುತ್ತದೆ. ಆದ್ದರಿಂದ ಆಕ್ಸಿಜನ್ ರೋಗಿಯ ಜೀವ ಉಳಿಸುವಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಖುದ್ದು ತಾವೇ ಉಸಿರಾಡುವಾಗ ದೇಹಕ್ಕೆ ಅಗತ್ಯವಿದ್ದಷ್ಟು ಪ್ರಮಾಣದಲ್ಲಿ ಆಕ್ಸಿಜನ್ ಹೀರಿಕೊಳ್ಳಲು ಇವರ ಶ್ವಾಸಕೋಶಗಳು ಶಕ್ತವಾಗಿರುವುದಿಲ್ಲ.

ಆಕ್ಸಿಜನ್ ಅವಶ್ಯಕತೆ ಇರುವ ರೋಗಿಗಳಿಗೆ ಘಂಟೆಗೆ 2 ರಿಂದ 6 ಲೀಟರ್ ಆಕ್ಸಿಜನ್ ಅವಶ್ಯಕತೆ ಇರುತ್ತದೆ. ಅಂದರೆ  ದಿನಕ್ಕೆ ಆಕ್ಸಿಜನ್ ಅವಶ್ಯಕವಿರುವ ಪೇಷಂಟ್ ಗೆ 3-7 ಸಾವಿರ ಲೀಟರ್ ಆಕ್ಸಿಜನ್  ಅವಶ್ಯಕತೆ ಇರುತ್ತದೆ ಎನ್ನುತ್ತಾರೆ ಐಸಿಯು ಸ್ಪೆಷಲಿಸ್ಟ್ ಆದ ಡಾ ಶರತ್.
Youtube Video

ಆದ್ದರಿಂದಲೇ ಅನೇಕ ಬಾರಿ ಆಕ್ಸಿಜನ್ ಲೆವೆಲ್ 94ಕ್ಕಿಂತ ಹೆಚ್ಚಿದ್ದಾಗ ರೋಗಿಗಳಿಗೆ ಆಕ್ಸಿಜನ್ ಸೌಕರ್ಯ ಇರುವ ಹಾಸಿಗೆಗಳನ್ನು ಆಸ್ಪತ್ರೆಯಲ್ಲಿ ನೀಡುವುದಿಲ್ಲ.
Published by: Soumya KN
First published: May 2, 2021, 3:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories