HOME » NEWS » Coronavirus-latest-news » OXYGEN CONTAINER ISRAEL GOVERNMENT GIFTED OXYGEN CONTAINER TO YADAGIRI FOR PRODUCE OXYGEN NMPG SCT

Yadagiri: ಇಸ್ರೇಲ್ ಸರ್ಕಾರದಿಂದ ಯಾದಗಿರಿಗೆ ಆಕ್ಸಿಜನ್ ಉತ್ಪಾದಿಸುವ ಬೃಹತ್ ಕಂಟೇನರ್ ಗಿಫ್ಟ್

4 ಟನ್ ತೂಕವಿರುವ ಆಕ್ಸಿಜನ್ ಉತ್ಪಾದನೆ ಮಾಡುವ ಕಂಟೇನರ್ ನ್ನು ಬೆಂಗಳೂರು ಮೂಲಕ ಯಾದಗಿರಿ ಜಿಲ್ಲೆಗೆ ತರಲಾಗಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ನೇತೃತ್ವದಲ್ಲಿ ಕಂಟೇನರ್ ಯಾದಗಿರಿ ಕೋವಿಡ್ ಆಸ್ಪತ್ರೆ ಆವರಣದೊಳಗೆ ತಂದು ಇಳಿಸಲಾಗಿದೆ.

news18-kannada
Updated:May 12, 2021, 7:10 AM IST
Yadagiri: ಇಸ್ರೇಲ್ ಸರ್ಕಾರದಿಂದ ಯಾದಗಿರಿಗೆ ಆಕ್ಸಿಜನ್ ಉತ್ಪಾದಿಸುವ ಬೃಹತ್ ಕಂಟೇನರ್ ಗಿಫ್ಟ್
ಯಾದಗಿರಿಗೆ ಬಂದ ಆಕ್ಸಿಜನ್ ಕಂಟೇನರ್ ಪರಿಶೀಲಿಸುತ್ತಿರುವ ಡಿಸಿ ರಾಗಪ್ರಿಯಾ
  • Share this:
ಯಾದಗಿರಿ: ಕೊರೊನಾ ಎರಡನೇ ಅಲೆಗೆ ಈಡೀ ದೇಶವು ತತ್ತರಿಸಿದ್ದು, ಭಾರತದ ಜನರ ಪ್ರಾಣ ಉಳಿಸಲು ವಿದೇಶದಿಂದ ನೆರವಿನ ಹಸ್ತ ಬರುತ್ತಿದೆ. ಇಸ್ರೇಲ್ ಸರಕಾರ ಕೂಡ  ಮಾನವೀಯತೆ ಮೆರೆದಿದ್ದು, ದೇಶದಲ್ಲಿ ‌ಈಗ ಸೋಂಕಿತರು ಪ್ರಾಣವಾಯುದಿಂದ ನರಳಾಡುತ್ತಿರುವುದರಿಂದ ಇಸ್ರೇಲ್ ಸರಕಾರ ಈಗ ಆಕ್ಸಿಜನ್ ಉತ್ಪಾದನಾ ಘಟಕದ ಬೃಹತ್ ಕಂಟೇನರ್ ಅನ್ನು ದಾನವಾಗಿ ನೀಡಿದೆ. ಈಗ ಇಸ್ರೇಲ್ ನಿಂದ ಈಗ ಕಂಟೇನರ್ ಯಾದಗಿರಿ ಜಿಲ್ಲೆಗೆ ಬಂದು ತಲುಪಿದ್ದು, ಜಿಲ್ಲೆಯ ಜನರ ಆತಂಕ ದೂರವಾದಂತಾಗಿದೆ.

ಯಾದಗಿರಿ ಜಿಲ್ಲೆಯಲ್ಲಿ ಈಗಾಗಲೇ ಕೋವಿಡ್ ಆಸ್ಪತ್ರೆ ಆವರಣದಲ್ಲಿ 6 ಕೆಎಲ್ ಆಕ್ಸಿಜನ್ ಪ್ಲಾಂಟ್ ಇದ್ದು, ಸದ್ಯಕ್ಕೆ ಯಾದಗಿರಿ ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ , ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ, ಸಹಾಯಕ ಆಯುಕ್ತ ಶಂಕರ ಗೌಡ ಸೋಮನಾಳ  ಹಾಗೂ ಜನಪ್ರತಿನಿಧಿಗಳ ನಿರಂತರ ಪ್ರಯತ್ನದಿಂದ ಇಲ್ಲಿಯವರೆಗೆ ಆಕ್ಸಿಜನ್ ಕೊರತೆಯಾಗಿಲ್ಲ. ಇದರಿಂದ ಸೋಂಕಿತರ ಜೀವ ಉಳಿಯುವಂತಾಗಿದೆ. ಹಗಲು ರಾತ್ರಿಯೆನ್ನದೆ ಅಧಿಕಾರಿಗಳು ಆಕ್ಸಿಜನ್ ಕೊರತೆಯಾಗದಂತೆ ನೋಡಿಕೊಂಡಿದ್ದಾರೆ. ಮುಂದಾಗಬಹುದಾದ ಸಮಸ್ಯೆ ಅರಿತು ಈಗಾಗಲೇ ಆರೋಗ್ಯ ಇಲಾಖೆಯು ಇಸ್ರೇಲ್ ಸರಕಾರ ದಾನವಾಗಿ ನೀಡಿದ ಆಕ್ಸಿಜನ್ ಉತ್ಪಾದನಾ ಘಟಕದ ಬೃಹತ್ ಕಂಟೇನರ್ ನ್ನು ಯಾದಗಿರಿ ‌ಜಿಲ್ಲೆಗೆ ಪೂರೈಸಿದೆ.

ದೇಶದಲ್ಲಿಯೇ ಇಸ್ರೇಲ್ ಸರಕಾರ ಮೂರು ಕಡೆ ಬೃಹತ್ ಕಂಟೇನರ್ ‌ಪೂರೈಸಿದೆ. ಉತ್ತರಪ್ರದೇಶದ ವಾರಣಾಸಿಗೆ ಅದೆ ರೀತಿ ರಾಜ್ಯದ ಎರಡು ಜಿಲ್ಲೆಗಳಾದ ಯಾದಗಿರಿ ಹಾಗೂ ಕೋಲಾರಗೆ ಆಕ್ಸಿಜನ್ ಉತ್ಪಾದನೆ ಮಾಡುವ ಕಂಟೇನರ್ ಇಸ್ರೇಲ್ ಸರಕಾರ ಪೂರೈಸಿದೆ. ಕೇಂದ್ರ ಸರಕಾರದ ಸತತ ಪ್ರಯತ್ನದಿಂದ ದೇಶಕ್ಕೆ ಮೂರು ಬೃಹತ್ ಆಕ್ಸಿಜನ್ ಉತ್ಪಾದನೆ ಮಾಡುವ ಕಂಟೇನರ್ ಇಸ್ರೇಲ್ ಸರಕಾರ ಪೂರೈಕೆ ಮಾಡಿದೆ. 4 ಟನ್ ತೂಕವಿರುವ ಆಕ್ಸಿಜನ್ ಉತ್ಪಾದನೆ ಮಾಡುವ ಕಂಟೇನರ್ ನ್ನು ಬೆಂಗಳೂರು ಮೂಲಕ ಯಾದಗಿರಿ ಜಿಲ್ಲೆಗೆ ತರಲಾಗಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ನೇತೃತ್ವದಲ್ಲಿ ಕಂಟೇನರ್ ಯಾದಗಿರಿ ಕೋವಿಡ್ ಆಸ್ಪತ್ರೆ ಆವರಣದೊಳಗೆ ತಂದು ಇಳಿಸಲಾಗಿದೆ.

ಇದನ್ನೂ ಓದಿ: Corona Mask: ವಿದೇಶ ಹಾಗೂ ಹೊರ ರಾಜ್ಯದಲ್ಲೂ ಫೇಮಸ್ ಈ ದಾವಣಗೆರೆ ಮಾಸ್ಕ್

ಆಕ್ಸಿಜನ್ ಉತ್ಪಾದನೆ ಕಂಟೇನರ್ ಮೂಲಕ ಪ್ರತಿ ಒಂದು ನಿಮಿಷಕ್ಕೆ 500 ಲೀಟರ್ ಆಕ್ಸಿಜನ್ ಉತ್ಪಾದನೆ ಮಾಡುವ ಸಾಮರ್ಥ ಹೊಂದಲಾಗಿದ್ದು, ಸುಮಾರು 80 ರೋಗಿಗಳಿಗೆ ನಿರಂತರವಾಗಿ ಆಕ್ಸಿಜನ್ ಪೂರೈಕೆ ಮಾಡಬಹುದಾಗಿದೆ. ಇದರಿಂದ ಆಕ್ಸಿಜನ್ ಕೊರತೆ ಎದುರಿಸುವ ಸೋಂಕಿತರಿಗೆ ಆಕ್ಸಿಜನ್ ಸಮಸ್ಯೆ ನೀಗಲಿದೆ. ಗಾಳಿಯ ಮೂಲಕವೇ ಆಕ್ಸಿಜನ್ ಉತ್ಪಾದನೆ ಮಾಡುವ ವಿಶೇಷ ಯಂತ್ರ ಹೊಂದಿದೆ ಎನ್ನಲಾಗುತ್ತಿದೆ.

ಜಿಲ್ಲಾಧಿಕಾರಿ ಪರಿಶೀಲನೆ:

ಯಾದಗಿರಿ ತಾಲೂಕಿನ ಮುದ್ನಾಳ ಸಮೀಪದ ಕೋವಿಡ್ ಆಸ್ಪತ್ರೆ ಆವರಣದಲ್ಲಿ ಈ ಬೃಹತ್ ಕಂಟೇನರ್ ಬಂದಿದ್ದು, ಖುದ್ದು ಯಾದಗಿರಿ ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ ಅವರು ಭೇಟಿ ನೀಡಿ ಮಾತನಾಡಿ, ಇಸ್ರೇಲ್ ನಿಂದ ಆಕ್ಸಿಜನ್ ಉತ್ಪಾದನೆಯ ಬೃಹತ್ ಕಂಟೇನರ್ ಬಂದಿದ್ದು, ಪ್ರತಿ ಒಂದು ನಿಮಿಷಕ್ಕೆ 500 ಲೀಟರ್ ಆಕ್ಸಿಜನ್ ಉತ್ಪಾದನೆ ಮಾಡುವ ಸಾಮರ್ಥ ಹೊಂದಲಾಗಿದೆ. ಆಮ್ಲಜನಕ ಉತ್ಪಾದನಾ ಘಟಕ ನಿರ್ಮಾಣ ಕಾರ್ಯ ನಡೆದಿದ್ದು ಆಕ್ಸಿಜನ್ ಸಮಸ್ಯೆ ನಿಗಲಿದೆ ಎಂದರು.
Youtube Video

ಕಂಟೇನರ್ 15 ದಿನದೊಳಗಡೆ ನಿರ್ಮಾಣ ಮಾಡಲು ಅಗತ್ಯ ತಯಾರಿ ಮಾಡಿಕೊಂಡು ನಿರ್ಮಾಣ ಕಾರ್ಯ ಜರುಗುತ್ತಿದೆ. ಘಟಕ ನಿರ್ಮಾಣವಾಗಿ ಅಂದುಕೊಂಡಂತೆ ಕಾರ್ಯರೂಪಕ್ಕೆ ಬಂದರೆ ಈ ಆಸ್ಪತ್ರೆ ಮೂಲಕ ಜಂಬು ಸಿಲಿಂಡರ್ ‌ಮೂಲಕ ತುರ್ತು ಆಸ್ಪತ್ರೆಗಳಿಗೆ ಆಕ್ಸಿಜನ್ ಪೂರೈಕೆ ಮಾಡಬಹುದಾಗಿದೆ. ಕಂಟೇನರ್ ಆಗಮಿಸಿದ ಹಿನ್ನೆಲೆ ‌ಸದ್ಯಕ್ಕೆ ಮುಂದಾಗುವ ಆಕ್ಸಿಜನ್ ಸಮಸ್ಯೆ ನೀಗಲಿದ್ದು ಜಿಲ್ಲೆಯ ‌ಜನರ ಆತಂಕ ದೂರವಾದಂತಾಗಿದೆ.
Published by: Sushma Chakre
First published: May 12, 2021, 7:10 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories