HOME » NEWS » Coronavirus-latest-news » OXYGEN CONCENTRATORS INDIAN AMERICAN NGO RAISES 35 CRORE RUPEES FOR COVID 19 RELIEF TO SHIP 2184 OXYGEN CONCENTRATORS STG SCT

Oxygen Concentrators | ಭಾರತದ ಕೋವಿಡ್ ಹೋರಾಟಕ್ಕೆ ಎನ್‌ಜಿಒ ಸಾಥ್; 2,184 ಆಕ್ಸಿಜನ್ ಸಾಂದ್ರಕಗಳ ಸಾಗಣೆಗೆ 35 ಕೋಟಿ ರೂ. ಸಂಗ್ರಹ

ಭಾರತೀಯ-ಅಮೆರಿಕದ ಸ್ವಯಂ ಸೇವಾ ಸಂಸ್ಥೆಯು ಭಾರತದಲ್ಲಿ COVID-19 ಪರಿಹಾರ ಕಾರ್ಯಗಳಿಗಾಗಿ ಸಾಮಾಜಿಕ ಮಾಧ್ಯಮಗಳ ಮೂಲಕ ಸುಮಾರು 4.7 ಮಿಲಿಯನ್ ಡಾಲರ್‌ಗಳನ್ನು ಸಂಗ್ರಹಿಸಿದೆ.

news18-kannada
Updated:April 30, 2021, 10:43 AM IST
Oxygen Concentrators | ಭಾರತದ ಕೋವಿಡ್ ಹೋರಾಟಕ್ಕೆ ಎನ್‌ಜಿಒ ಸಾಥ್; 2,184 ಆಕ್ಸಿಜನ್ ಸಾಂದ್ರಕಗಳ ಸಾಗಣೆಗೆ 35 ಕೋಟಿ ರೂ. ಸಂಗ್ರಹ
ಆಕ್ಸಿಜನ್ ಸಾಂದ್ರಕ
  • Share this:
ಸಾಂಕ್ರಾಮಿಕ ರೋಗ ಕೊರೊನಾದ ಭೀಕರ ಎರಡನೇ ಅಲೆಯೊಂದಿಗೆ ಭಾರತ ಸೆಣಸಾಡುತ್ತಿದೆ. ಈ ಹಿನ್ನೆಲೆಯಲ್ಲಿ ಬಹುತೇಕ ದೇಶಗಳು ಭಾರತದ ಜೊತೆಗೆ ಕೈ ಜೋಡಿಸಿದ್ದು, ನೆರವಿನ ಹಸ್ತಚಾಚಲು ಮುಂದಾಗಿವೆ. ಇದಕ್ಕೆ ಸಂಬಂಧಿಸಿದಂತೆ ಭಾರತೀಯ-ಅಮೆರಿಕದ ಸ್ವಯಂ ಸೇವಾ ಸಂಸ್ಥೆಯು ಭಾರತದಲ್ಲಿ COVID-19 ಪರಿಹಾರ ಕಾರ್ಯಗಳಿಗಾಗಿ ಸಾಮಾಜಿಕ ಮಾಧ್ಯಮಗಳ ಮೂಲಕ ಸುಮಾರು 4.7 ಮಿಲಿಯನ್ ಡಾಲರ್‌ಗಳನ್ನು ಸಂಗ್ರಹಿಸಿದೆ. ಇದೊಂದು ಸಾಮೂಹಿಕ ಪ್ರಯತ್ನವಾಗಿದ್ದು, ಜೀವಗಳ ಸಂರಕ್ಷಣೆಗೆ ಪುಟ್ಟ ಸೇವೆಯಾಗಿದೆ.ಅಲ್ಲದೇ ಹಸಿವನ್ನು ಬಡಿದೋಡಿಸಲು, ತೊಂದರೆಗೀಡಾದ ಜನರಿಗೆ ಭರವಸೆ ತುಂಬಲು ಕೋವಿಡ್ 19 ವಿರುದ್ಧದ ಈ ನಿರ್ಣಾಯಕ ಹೋರಾಟದಲ್ಲಿ ಭಾರತಕ್ಕೆ ಅಲ್ಪ ಮಟ್ಟಿಗಾದರೂ ಸಹಾಯಕವಾಗಬಹುದು ಎಂದು ಸೇವಾ (Sewa) ಇಂಟರ್‌ನ್ಯಾಷನಲ್ ಯುಎಸ್ಎ ಹೇಳಿದೆ.

ಮಂಗಳವಾರ, ಸೇವಾ ಭಾರತಕ್ಕೆ 2,184 ಆಮ್ಲಜನಕ ಸಾಂದ್ರಕಗಳ ಸಾಗಣೆ ಮಾಡಲು ಸಂಗ್ರಹ ಮಾಡಿದೆ. ಇನ್ನು, ನಿಧಿ ಸಂಗ್ರಹ ಅಭಿಯಾನವನ್ನು ಪ್ರಾರಂಭಿಸಿದ 100 ಗಂಟೆಗಳಿಗಿಂತಲೂ ಕಡಿಮೆ ಅವಧಿಯಲ್ಲಿ, ಭಾರತದಲ್ಲಿ COVID-19 ಪರಿಹಾರ ಕಾರ್ಯಗಳಿಗಾಗಿ 66,700ಕ್ಕೂ ಹೆಚ್ಚು ಭಾರತೀಯ-ಅಮೆರಿಕನ್ನರು 4.7 ಮಿಲಿಯನ್ ಡಾಲರ್‌ಗಳನ್ನು ಸಂಗ್ರಹಿಸಲು ಮುಂದಾಗಿದ್ದಾರೆ ಎಂದು ತಿಳಿಸಿದೆ. ಕಳೆದ ಕೆಲವು ವರ್ಷಗಳಲ್ಲಿ, ಸೇವಾ ಇಂಟರ್‌ನ್ಯಾಷನಲ್‌ ಅಮೆರಿಕದಲ್ಲಿ ಅತ್ಯುನ್ನತ ಮತ್ತು ನಂಬಿಕೆಗೆ ಅರ್ಹವಾದ ಭಾರತೀಯ-ಅಮೆರಿಕ ಚಾರಿಟಿ ಸಂಸ್ಥೆಯಾಗಿ ಹೊರಹೊಮ್ಮಿದೆ.

ಇನ್ನು ಸೇವಾ ಅವರು ಹೇಳುವಂತೆ ಎಲ್ಲಕ್ಕಿಂತಲೂ ಮೊದಲು ಆಮ್ಲಜನಕ ಸಾಂದ್ರತೆಯನ್ನು ಕೂಡಲೇ ಸಂಗ್ರಹಿಸಿ ಅವುಗಳನ್ನು ಭಾರತಕ್ಕೆ ಕಳುಹಿಸಬೇಕಿದೆ. ಆ ಮೂಲಕ ಎಷ್ಟೋ ಜೀವಗಳನ್ನು ಕಾಪಾಡಬೇಕಿದೆ. ಈಗ ಇದೇ ನಮ್ಮ ಮೊದಲ ಆದ್ಯತೆಯಾಗಿದೆ. ಹೆಚ್ಚು ಕೊರೊನಾವೈರಸ್ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡುವ ಸಾಮರ್ಥ್ಯವನ್ನು ವಿಸ್ತರಿಸಲು ನಾವು ಸೇವಾ (Sewa) ಪಾಲುದಾರ ಸಂಸ್ಥೆಗಳು ನಡೆಸುವ ಆಸ್ಪತ್ರೆಗಳಿಗೆ ನೆರವಾಗಿದ್ದೇವೆ ಎಂದು ಸೇವಾ (Sewa) ಸಂಸ್ಥೆ ತಿಳಿಸಿದೆ.

ಇದನ್ನೂ ಓದಿ: Israel Stampede | ಇಸ್ರೇಲ್​ನಲ್ಲಿ ಕಾಲ್ತುಳಿತದಿಂದ 44 ಜನ ಸಾವು; ನೂರಾರು ಮಂದಿಗೆ ಗಾಯ

ಸೇವಾ ಸ್ವಯಂಸೇವಕರು ಡಿಜಿಟಲ್ ಹೆಲ್ಪ್‌ಡೆಸ್ಕ್ ನಿರ್ಮಿಸುವ ಮೂಲಕ ಅತಿ ಕಠಿಣ ಸಮಯಗಳಲ್ಲಿ ಅಗತ್ಯವಾದ ಅಂಬ್ಯುಲೆನ್ಸ್ ಸೇವೆ, ಆಸ್ಪತ್ರೆಯಲ್ಲಿ ಹಾಸಿಗೆಗಳ ಲಭ್ಯತೆ ಮತ್ತು ಜನರಿಗೆ ಔಷಧ ಸರಬರಾಜು ಸೇರಿದಂತೆ ಹಲವಾರು ಕೆಲಸಗಳನ್ನು ಮಾಡುತ್ತಿವೆ. ಇನ್ನು ಸಾಂಕ್ರಾಮಿಕ ಸಮಸ್ಯೆಯಿಂದ ಲಾಕ್‌ಡೌನ್‌ ಮಾಡಲಾಗಿದ್ದು, ಆರ್ಥಿಕ ಹೊಡೆತ ಬಿದ್ದಿದೆ. ಈ ನಿಟ್ಟಿನಲ್ಲಿ 10,000ಕ್ಕೂ ಹೆಚ್ಚು ಅಗತ್ಯ ಕಿಟ್‌ಗಳನ್ನು ಕುಟುಂಬಗಳಿಗೆ ವಿತರಿಸಲು, 1000ಕ್ಕೂ ಹೆಚ್ಚು ಅನಾಥಾಶ್ರಮ ಮತ್ತು ವೃದ್ಧಾಶ್ರಮಗಳಿಗೆ ನೆರವು ನೀಡಲು ಯೋಚಿಸುತ್ತಿದ್ದೇವೆ ಎಂದಿದ್ದಾರೆ.

ನಾವು ನಮ್ಮ ಪಾಲುದಾರ ಸಂಸ್ಥೆಯೊಂದಿಗೆ ಅಗತ್ಯವಿರುವವರಿಗೆ ಆಹಾರ ಮತ್ತು ಔಷಧಗಳನ್ನು ಅನೇಕ ಕಡೆ ನೀಡುತ್ತಿದ್ದೇವೆ. ದೇಶದ ಅತಿದೊಡ್ಡ ವೈದ್ಯಕೀಯ ಸಂಸ್ಥೆಯಾದ ಅಮೆರಿಕ ಅಸೋಸಿಯೇಷನ್ ಆಫ್ ಫಿಸಿಶಿಯನ್ಸ್ ಆಫ್ ಇಂಡಿಯನ್ ಆರಿಜಿನ್ (ಎಪಿಪಿಐ) ಭಾರತದಲ್ಲಿ ಕೋವಿಡ್ - 19 ಅನ್ನು ಪ್ರಬಲವಾಗಿ ಎದುರಿಸಲು ವೈದ್ಯಕೀಯ ಆಕ್ಸಿಜನ್, ಫೋನ್ ಮೂಲಕ ಸಂಪರ್ಕ ಮತ್ತು ಶೈಕ್ಷಣಿಕ ವೆಬ್‌ನಾರ್‌ಗಳ ಮೂಲಕ ರಾಷ್ಟ್ರವ್ಯಾಪಿ ಅಭಿಯಾನವನ್ನು ಮಂಗಳವಾರ ಪ್ರಕಟಿಸಿದೆ.

ಎಎಪಿಐ ಅಧ್ಯಕ್ಷ ಡಾ.ಸುಧಾಕರ್ ಜೊನ್ನಲ್‌ಗದ್ದ ಅವರು ಇದು ತುರ್ತು ಸಮಯ. ವೈದ್ಯರಾದ ನಾವು ಈ ಬಗ್ಗೆ ಏನಾದರೂ ಮಾಡಲೇಬೇಕು ಎಂದಿದ್ದಾರೆ. ನಾವು ಆಕ್ಸಿಜನ್ ಸಾಂದ್ರಕಗಳನ್ನು ಪೂರೈಸುವ ಮೂಲ ಗುರುತಿಸಿದ್ದು, ಭಾರತದ ಪ್ರತಿ ಜೀವಗಳನ್ನು ಉಳಿಸಲು ಇದು ನೆರವಾಗುತ್ತದೆ ಎಂದಿದ್ದಾರೆ. ಇನ್ನು ಪ್ರತಿ ಘಟಕದ ವೆಚ್ಚವು 500 ಡಾಲರ್ ರಷ್ಟಿದೆ" ಎಂದು ಅವರು ಇದೇ ಸಮಯದಲ್ಲಿ ತಿಳಿಸಿದರು. ಎಎಪಿಐ, ಹಲವಾರು ಸದಸ್ಯರ ಸಹಯೋಗದೊಂದಿಗೆ, ಸೇವಾ (Sewa) ಇಂಟರ್‌ನ್ಯಾಷನಲ್ ಸಹಾಯದಿಂದ 200 ಆಮ್ಲಜನಕ ಸಾಂದ್ರಕಗಳನ್ನು ನೇರವಾಗಿ ಭಾರತದ ಆಸ್ಪತ್ರೆಗಳಿಗೆ ತಲುಪಿಸಲು ಆದೇಶಿಸಿದೆ" ಎಂದು ಜೊನ್ನಲ್ಗದ್ದ ಅವರು ಹೇಳಿದರು.ಇದನ್ನೂ ಓದಿ: ಹೆಂಗಸರನ್ನು ಕಂಟ್ರೋಲ್ ಮಾಡೋದು ಹೇಗೆ?; 2020ರಲ್ಲಿ ಗೂಗಲ್‌ನಲ್ಲಿ ಅತಿ ಹೆಚ್ಚು ಸರ್ಚ್ ಆಗಿದ್ದು ಇದೇ!

ಯುಎಸ್ ಇಂಡಿಯಾ ಚೇಂಬರ್ ಆಫ್ ಕಾಮರ್ಸ್ ಡಿಎಫ್‌ಡಬ್ಲ್ಯೂ ಮತ್ತು ಇಂಡೋ ಅಮೆರಿಕನ್ ಚೇಂಬರ್ ಆಫ್ ಕಾಮರ್ಸ್ ಆಫ್ ಗ್ರೇಟರ್ ಹೂಸ್ಟನ್ ಎರಡೂ ಟೆಕ್ಸಾಸ್‌ನಿಂದ ಹಾಗೂ ಯುಎಸ್ಐಸಿಒಸಿ ಫೌಂಡೇಶನ್ ಸಹಭಾಗಿತ್ವದಲ್ಲಿ ದೆಹಲಿಯ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಗೆ 20 ವೆಂಟಿಲೇಟರ್‌ಗಳನ್ನು ಮೊದಲ ಬ್ಯಾಚ್ ಎಂಬಂತೆ ಆಸ್ಪತ್ರೆಗಳಿಗೆ ಕಳುಹಿಸಲಾಗಿದೆ.

ಈ ತುರ್ತು ಸಮಯದಲ್ಲಿ ಭಾರತದ ಜೊತೆ ನಿಲ್ಲುವ ನೈತಿಕ ಬಾಧ್ಯತೆ ನಮ್ಮದು, ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರಲು ನಾವು ಸಾಧ್ಯವಾದಷ್ಟು ಬೆಂಬಲ ನೀಡುತ್ತೇವೆ ಎಂದು ಯುಎಸ್ ಇಂಡಿಯಾ ಚೇಂಬರ್‌ನ ಸ್ಥಾಪಕ ಅಧ್ಯಕ್ಷ ಅಶೋಕ್ ಮಾಗೊ ಹೇಳಿದರು. ಅಲ್ಲದೇ ಅಶೋಕ್ ಅವರು ಈಗಾಗಲೇ ಸಾಕಷ್ಟು ನಿಧಿ ಸಂಗ್ರಹಣೆಗೆ ನೆರವಾಗಿದ್ದಾರೆ.

ಇನ್ನು ಮುಂಬರುವ ದಿನಗಳಲ್ಲಿ 30 ವೆಂಟಿಲೇಟರ್ ಕಳುಹಿಸಲಾಗುವುದು. ಅಲ್ಲದೇ ಇಂಡೋ ಅಮೆರಿಕದ ಚೇಂಬರ್ ಆಫ್ ಕಾಮರ್ಸ್ ಆಫ್ ಗ್ರೇಟರ್ ಹೂಸ್ಟನ್‌ನ ಜಗದೀಪ್ ಅಹ್ಲುವಾಲಿಯಾ, ಸಂಘಟನೆಯ ಸದಸ್ಯರು ಭಾರತದ ಆಸ್ಪತ್ರೆಗಳು, ಎನ್‌ಜಿಒಗಳು, ವೈದ್ಯಕೀಯ ಶಾಲೆಗಳು ಮತ್ತು ಸರ್ಕಾರಿ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸುತ್ತಿದ್ದು, ವೃತ್ತಿಪರರು ನಿಭಾಯಿಸಬಹುದು ಎಂದಿದ್ದಾರೆ.
Published by: Sushma Chakre
First published: April 30, 2021, 10:43 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories