HOME » NEWS » Coronavirus-latest-news » OXFORDS COVISHIELD VACCINE FOR RS 200 TO GOVT AND RS 1000 FOR PUBLIC SNVS

Covishield ದರ: ಸರ್ಕಾರಕ್ಕೆ 200, ಸಾರ್ವಜನಿಕರಿಗೆ 1000 ರೂ – ಸೆರಮ್ ಇನ್ಸ್​ಟಿಟ್ಯೂಟ್ ಸ್ಪಷ್ಟನೆ

ಪ್ರಪಂಚದ ಅತಿದೊಡ್ಡ ಲಸಿಕೆ ಉತ್ಪಾದಕ ಸೆರಮ್ ಇನ್ಸ್​ಟಿಟ್ಯೂಟ್ ಸಂಸ್ಥೆ ಕೋವಿಶೀಲ್ಡ್ ಲಸಿಕೆ ವಿತರಣೆಗೆ ಸಜ್ಜಾಗಿದೆ. ಈಗಾಗಲೇ 5 ಕೋಟಿ ಲಸಿಕೆ ಲಭ್ಯ ಇವೆ. ಸರ್ಕಾರದ ಒಪ್ಪಿಗೆ ಮುದ್ರೆ ದೊರೆತ ಬೆನ್ನಲ್ಲೇ ಇನ್ನೂ ಹಲವು ಕೋಟಿ ಡೋಸ್ ಲಸಿಕೆಗಳು ಕೆಲವೇ ದಿನಗಳಲ್ಲಿ ಉತ್ಪಾದನೆಯಾಗಲಿವೆ.

news18
Updated:January 3, 2021, 6:13 PM IST
Covishield ದರ: ಸರ್ಕಾರಕ್ಕೆ 200, ಸಾರ್ವಜನಿಕರಿಗೆ 1000 ರೂ – ಸೆರಮ್ ಇನ್ಸ್​ಟಿಟ್ಯೂಟ್ ಸ್ಪಷ್ಟನೆ
ಸೆರಮ್ ಇನ್ಸ್​ಟಿಟ್ಯೂಟ್​ನ ಸಿಇಒ ಆಡಾರ್ ಪೂನಾವಾಲ
  • News18
  • Last Updated: January 3, 2021, 6:13 PM IST
  • Share this:
ನವದೆಹಲಿ(ಜ. 03): ಭಾರತದಲ್ಲಿ ಎರಡು ಕೋವಿಡ್ ಲಸಿಕೆಗಳ ಬಳಕೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಈಗಾಗಲೇ ದೇಶಾದ್ಯಂತ ವ್ಯಾಕ್ಸಿನ್ ಡ್ರೈನ್ ರನ್ ಯಶಸ್ವಿಯಾಗಿ ನಡೆದಿದೆ. ಆಕ್ಸ್​ಫರ್ಡ್ ಯೂನಿವರ್ಸಿಟಿ ಮತ್ತು ಭಾರತ್ ಬಯೋಟೆಕ್ ಸಂಸ್ಥೆಯ ಕೋವಿಶೀಲ್ಡ್ (Covishield) ಮತ್ತು ಕೋವ್ಯಾಕ್ಸಿನ್ (Covaxin) ಲಸಿಕೆಗಳು ಬಳಕೆಗೆ ಸಿದ್ಧವಾಗಿವೆ. ಈ ಎರಡು ಲಸಿಕೆಗಳ ಪೈಕಿ ಆಕ್ಸ್​ಫರ್ಡ್ ಯೂನಿರ್ಸಿಟಿಯ ಕೋವಿಶೀಲ್ಡ್ ಲಸಿಕೆಯ ಬಳಕೆಗೆ ಮೊದಲ ಆದ್ಯತೆ ನೀಡಲಾಗಿದೆ. ಈ ಲಸಿಕೆಯನ್ನು ಉತ್ಪಾದಿಸುತ್ತಿರುವ ಸೆರಮ್ ಇನ್ಸ್​ಟಿಟ್ಯೂಟ್ ಅಫ್ ಇಂಡಿಯಾ (Serum Institute of India) ಸಂಸ್ಥೆ ಸರ್ವ ರೀತಿಯಲ್ಲಿ ಸಜ್ಜಾಗಿದ್ದು, ಸರ್ಕಾರದ ಲಿಖಿತ ಒಪ್ಪಂದಕ್ಕೆ ಎದುರುನೋಡುತ್ತಿದೆ. ಒಪ್ಪಂದಕ್ಕೆ ಸಹಿ ಬಿದ್ದ ನಂತರ ಕೆಲವೇ ದಿನಗಳಲ್ಲಿ ಕೋಟ್ಯಂತರ ಡೋಸ್​ಗಳ ಲಸಿಕೆಗಳನ್ನ ಉತ್ಪಾದಿಸುವ ನಿರೀಕ್ಷೆ ಇದೆ.

ಸೆರಮ್ ಇನ್ಸ್​ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆ ತನ್ನ ಕೋವಿಡ್ ಲಸಿಕೆಯನ್ನು ಸರ್ಕಾರಕ್ಕೆ 200 ರೂ ದರದಲ್ಲಿ ಮಾರಾಟ ಮಾಡುತ್ತದೆ. ಸಾರ್ವಜನಿಕರಿಗೆ ಇದು 1 ಸಾವಿರ ರೂ ಬೆಲೆಗೆ ಲಭ್ಯವಿರುತ್ತದೆ ಎಂದು ಸಂಸ್ಥೆಯ ಸಿಇಒ ಅಡಾರ್ ಪೂನಾವಾಲ ಹೇಳಿದ್ದಾರೆ. ಕೇಂದ್ರ ಸರ್ಕಾರ ಸುಮಾರು ಆಯ್ದ 30 ಕೋಟಿ ಮಂದಿಗೆ ಉಚಿತವಾಗಿ ಲಸಿಕೆ ಹಾಕುತ್ತಿದೆ. ಉಳಿದವರು ಹಣ ಪಾವತಿಸಿ ಲಸಿಕೆ ಪಡೆಯಬಹುದಾಗಿದೆ. ಕೋವ್ಯಾಕ್ಸಿನ್ ಲಸಿಕೆಯ 5 ಕೋಟಿ ಡೋಸ್​ಗಳು ಈಗಾಗಲೇ ವಿತರಣೆಗೆ ಸಿದ್ಧವಿವೆ.

ಇದನ್ನೂ ಓದಿ: ದೆಹಲಿ ಸಮೀಪ ಚಿತಾಗಾರ ಕಟ್ಟಡ ಕುಸಿತ; 18ಕ್ಕೂ ಹೆಚ್ಚು ಮಂದಿ ಸಾವು; NDRFನಿಂದ ರಕ್ಷಣಾ ಕಾರ್ಯಾಚರಣೆ

ಪ್ರಪಂಚದ ಅತಿದೊಡ್ಡ ಲಸಿಕೆ ಉತ್ಪಾದಕ ಸಂಸ್ಥೆ ಎನಿಸಿರುವ ಸೆರಮ್ ಇನ್ಸ್​ಟಿಟ್ಯೂಟ್ ಒಂದು ನಿಮಿಷಕ್ಕೆ 5 ಸಾವಿರ ಡೋಸ್ ಲಸಿಕೆ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಈ ಹಿಂದೆ ವಿವಿಧ ರೋಗಗಳಿಗೆ ಈ ಸಂಸ್ಥೆ ಸಮರ್ಪಕವಾಗಿ ಲಸಿಕೆ ತಯಾರಿಸಿ ವಿತರಿಸಿದ ಅನುಭವ ಹೊಂದಿದೆ. ಸದ್ಯ ಕೋವಿಡ್​ನ ಲಸಿಕೆಯನ್ನು ರಫ್ತು ಮಾಡಲು ಕೇಂದ್ರ ಸರ್ಕಾರ ಅವಕಾಶ ನೀಡಿಲ್ಲ. ಆದರೆ, ಭಾರತಕ್ಕೆ ಸಾಕಾಗುವಷ್ಟು ಮಾತ್ರವಲ್ಲದೆ ಪ್ರಪಂಚದ ಹಲವು ದೇಶಗಳಿಗೆ ಲಸಿಕೆ ಕಳುಹಿಸುವಷ್ಟು ಉತ್ಪಾದನಾ ಸಾಮರ್ಥ್ಯ ಸೆರಮ್ ಇನ್ಸ್​ಟಿಟ್ಯೂಟ್​ಗೆ ಇದೆ. ಸೌದಿ ಅರೇಬಿಯಾ ಸೇರಿದಂತೆ 68 ದೇಶಗಳೊಂದಿಗೆ ಎಸ್​ಐಐ ಲಸಿಕೆ ವಿತರಣೆಗೆ ದ್ವಿಪಕ್ಷೀಯ ಒಪ್ಪಂದ ಹೊಂದಿದೆ. ಹೀಗಾಗಿ, ರಫ್ತು ಮಾಡಲು ಅವಕಾಶ ಕೋರಿ ಕೇಂದ್ರ ಸರ್ಕಾರಕ್ಕೆ ಸಂಸ್ಥೆ ಮನವಿ ಮಾಡಿದೆ.

ಇದನ್ನೂ ಓದಿ: COVID-19 Vaccination: ಕೋವಿಶೀಲ್ಡ್, ಕೋವ್ಯಾಕ್ಸಿನ್ ತುರ್ತು ಬಳಕೆಗೆ ಅನುಮೋದನೆ ನೀಡಿದ ಡಿಸಿಜಿಐ

ಇನ್ನು, ಲಸಿಕೆ ವಿತರಣೆ ಮೊದಲ ಹಂತದಲ್ಲಿ ಸೆರಮ್ ಇನ್ಸ್​ಟಿಟ್ಯೂಟ್​ನ ಕೋವಿಶೀಲ್ಡ್ ಲಸಿಕೆಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಬ್ರಿಟನ್ ಮಾದರಿಯ ಕೊರೋನಾ ವೈರಸ್​ನ ಉಪಟಳ ಹಚ್ಚಾಗಿ ಪರಿಸ್ಥಿತಿ ಕೈಮೀರುವಂತಾದ ಸಂದರ್ಭ ಬಂದಲ್ಲಿ ಭಾರತ್ ಬಯೋಟೆಕ್​ನ ಕೋವ್ಯಾಕ್ಸಿನ್ ಲಸಿಕೆಯನ್ನ ಹಾಕಲಾಗುತ್ತದೆ. ಇನ್ನೂ ಪ್ರಾಯೋಗಿಕ ಹಂತದಲ್ಲಿರುವ ಕೋವ್ಯಾಕ್ಸಿನ್ ಲಸಿಕೆಯಿಂದ ಜನರಿಗೆ ಸೈಡ್ ಎಫೆಕ್ಟ್ ಆದಲ್ಲಿ ಸರ್ಕಾರದಿಂದ ಸೂಕ್ತ ಪರಿಹಾರ ಸಿಗಲಿದೆ.

ಇದನ್ನೂ ಓದಿ: COVID-19 Vaccination: ದೇಶಾದ್ಯಂತ ಕೊರೋನಾ ಲಸಿಕೆ ಉಚಿತ: ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್​ಅಮೆರಿಕ, ಬ್ರಿಟನ್ ಮೊದಲಾದ ದೇಶಗಳಲ್ಲಿ ಫೈಜರ್ ಸಂಸ್ಥೆಯ ಲಸಿಕೆಗಳನ್ನ ನೀಡಲಾಗುತ್ತಿದೆ. ಈ ಫೈಜರ್ ಲಸಿಕೆಗಳಿಗಿಂತ ಎಸ್​​ಐಐನ ಲಸಿಕೆಗಳು ಕಡಿಮೆ ಬೆಲೆ ಹಾಗೂ ಸುಲಭ ಸಂಗ್ರಹಣಾ ಯೋಗ್ಯವೆಂದು ಹೇಳಲಾಗುತ್ತಿದೆ. ಇನ್ನು ರಷ್ಯಾ ಮತ್ತು ಚೀನಾ ದೇಶಗಳು ತಮ್ಮದೇ ಲಸಿಕೆಗಳನ್ನ ಅಭಿವೃದ್ಧಿಪಡಿಸಿ ತಮ್ಮ ದೇಶಗಳ ನಿವಾಸಿಗಳಿಗೆ ಹಾಗೂ ಇತರ ಕೆಲ ದೇಶಗಳಿಗೂ ವಿತರಿಸಿವೆ.
Published by: Vijayasarthy SN
First published: January 3, 2021, 6:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories