ಕೊರೋನಾಕ್ಕೆ ಮದ್ದು ಕಂಡುಹಿಡಿದ ಆಕ್ಸ್​ಫರ್ಡ್, ನಾಳೆ ಭಾರತದಲ್ಲಿ ಲಸಿಕೆಯ ಪ್ರಯೋಗ

ಆಕ್ಸ್​ಫರ್ಡ್ ವಿಶ್ವವಿದ್ಯಾಲಯದ ಲಸಿಕೆ ವಿಭಾಗದಲ್ಲಿ (ವ್ಯಾಕ್ಸಿನೋಲಜಿ) ಅನುಭವಿಯಾಗಿರುವ ಸಾರಾ ಗಿಲ್ಬರ್ಟ್ ಅವರಿಗೆ ಮಾರ್ಚ್ ತಿಂಗಳಲ್ಲಿ ಲಸಿಕೆ ತಯಾರಿಸುವ ಜವಾಬ್ದಾರಿ ನೀಡಲಾಗಿತ್ತು. ಅದಕ್ಕಾಗಿ ಸುಮರು 2 ಸಾವಿರ ಕೋಟಿ ರೂಪಾಯಿ ಕೊಡಲಾಗಿತ್ತು. ಸಾರಾ ಗಿಲ್ಬರ್ಟ್ ತನ್ನ ತಂಡದ ಇತರ ಸದಸ್ಯರ ಜೊತೆ ಹಗಲಿರುಳು ದುಡಿದು ಲಸಿಕೆ ಕಂಡುಹಿಡಿಯುವುದರಲ್ಲಿ ಯಶಸ್ವಿಯಾಗಿದ್ದಾರೆ.

news18-kannada
Updated:April 22, 2020, 3:43 PM IST
ಕೊರೋನಾಕ್ಕೆ ಮದ್ದು ಕಂಡುಹಿಡಿದ ಆಕ್ಸ್​ಫರ್ಡ್, ನಾಳೆ ಭಾರತದಲ್ಲಿ ಲಸಿಕೆಯ ಪ್ರಯೋಗ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ: ಮಾರಕ ರೋಗವಾಗಿರುವ ಕೊರೋನಾಗೆ ಮದ್ದು ಸಿಗದೆ ಸೂಕ್ತ ಚಿಕಿತ್ಸೆ ನೀಡುವುದು ವೈದ್ಯರಿಗೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು‌. ಸೂಕ್ತ ಅಥವಾ ನಿರ್ದಿಷ್ಟವಾದ ಮದ್ದಿಲ್ಲದ ಕಾರಣಕ್ಕೆ ಮಲೇರಿಯಾ ಕಾಯಿಲೆಗೆ ನೀಡಲಾಗುತ್ತಿದ್ದ ಹೈಡ್ರೋಕ್ಸಿಕ್ಲೋರೋಕ್ವಿನ್‌ ಅನ್ನು ಬಳಸಲಾಗುತ್ತಿತ್ತು. ಈಗ ಸ್ವಲ್ಪ ನಿರಾಳ ಆಗುವಂತಹ ಸುದ್ದಿಯೊಂದು ಲಭಿಸಿದೆ. ಪ್ರತಿಷ್ಠಿತ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯ ಕೊರೋನಾಗೆ ಲಸಿಕೆ ಕಂಡು‌ಹಿಡಿದಿದ್ದು, ನಾಳೆಯಿಂದಲೇ ಕೊರೋನಾ ಸೋಂಕು ಪೀಡಿತರ ಮೇಲೆ ಲಸಿಕೆಯ ಪ್ರಯೋಗ ಮಾಡಲಾಗುತ್ತದೆ‌.

ಜಗತ್ತಿನಾದ್ಯಂತ 2,565,299 ಜನರಿಗೆ ಕೊರೋನಾ ಸೋಂಕು ತಗುಲಿದೆ. ಒಟ್ಟು 177,775 ಜನ ಕೊರೋನಾದಿಂದ ಮೃತಪಟ್ಟಿದ್ದಾರೆ. ಇನ್ನೂ 1,690,745 ಜನ ಕೊರೋನಾ ರೋಗ ಪೀಡಿತರ ಪೈಕಿ ಗಂಭೀರ ಸ್ವರೂಪದಲ್ಲಿದ್ದಾರೆ. ಮೂರೇ ತಿಂಗಳ ಅವಧಿಯಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಜನ ರೋಗ ಪೀಡಿತರಾಗಲು ಹಾಗೂ ಸಾವನ್ನಪ್ಪಲು ಬಹಳ ಮುಖ್ಯವಾದ ಕಾರಣ ಈ ರೋಗಕ್ಕೆ ಸೂಕ್ತ ಮದ್ದು ಸಿಗದೇ ಇದ್ದುದು. ಈಗ ಆ ಸಮಸ್ಯೆ ನಿವಾರಣೆ ಆದಂತಾಗಿದೆ.

ಕೊರೋನಾ ಸೋಂಕು ಹರಡುವಿಕೆ ತಡೆಯಲು ಜಗತ್ತಿನ ವಿವಿಧ ದೇಶಗಳು ಲಾಕ್​ಡೌನ್ ಮಾಡಿ ದೇಶಕ್ಕೆ ದೇಶವನ್ನೇ ಸ್ಥಬ್ದಗೊಳಿಸಿವೆ. ಇದು ಆರ್ಥಿಕವಾಗಿ ಹೊಡೆತ ನೀಡಿದರೆ ರೋಗಕ್ಕೆ ಮದ್ದಿಲ್ಲದ ಕಾರಣಕ್ಕೆ ಜಾಗತಿಕವಾಗಿ ದೇಶದೇಶಗಳ ನಡುವೆ ಕಲಹಗಳು ಏರ್ಪಟ್ಟವು. ಅಂತಾರಾಷ್ಟ್ರೀಯ ಮಟ್ಟದ ಆರ್ಥಿಕ ವಹಿವಾಟಿನ ಮೇಲೆ ಹಿಡಿತ ಸಾಧಿಸಲು ಸದಾ ಸ್ಪರ್ಧೆಯಲ್ಲಿರುವ ಅಮೇರಿಕಾ ಮತ್ತು ಚೀನಾ ನಡುವೆ ಸಂಘರ್ಷ ಸೃಷ್ಟಿಯಾಯಿತು. ಚೀನಾ ಮೇಲೆ ಕ್ರಮ ಕೈಗೊಂಡಿಲ್ಲ ಎಂಬ ಕಾರಣಕ್ಕೆ ಅಮೇರಿಕಾವು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಗೆ ಹಣ ಕೊಡುವುದಿಲ್ಲ ಎಂಬ ವರಾತ ತೆಗೆಯಿತು. ಬಿಲ್ ಗೇಟ್ ನಂಥ ಅವರದೇ ದೇಶದ ಉದ್ಯಮಿಗಳು ಅಮೇರಿಕಾದ ಕಿವಿ ಹಿಂಡಬೇಕಾಯಿತು. ಇಷ್ಟೆಲ್ಲದಕ್ಕೂ ಕಾರಣ ಕೊರೋನಾಕ್ಕೆ ಔಷಧಿ ಇಲ್ಲದೇ ಇದ್ದುದು.

ಕೊರೋನಾಕ್ಕೆ ಸೂಕ್ತ ಅಥವಾ ನಿರ್ದಿಷ್ಟ ಔಷಧಿ ಇಲ್ಲದ ಕಾರಣಕ್ಕೆ ಮಲೇರಿಯಾ ರೋಗಕ್ಕೆ ಬಳಸುವ ಪ್ಯಾರಾಸೆಟಮೊಲ್, ಅಜಿತ್ರೋಮೈಸಿನ್ ಮತ್ತು ಹೈಡ್ರೋಕ್ಸಿಕ್ಲೋರೋಕ್ವಿನ್ ಔಷಧಿಗಳನ್ನು ಉಪಯೋಗಿಸಲು ಆರಂಭಿಸಲಾಯಿತು. ಈ ಔಷಧಿಗಳು ಇದ್ದಿದ್ದು ಭಾರತದ ಬಳಿ ಮಾತ್ರ. ಭಾರತದಿಂದ ಈ ಔಷಧಿ ಪಡೆಯಲು ಭಾರತದ ಮೇಲೆ ಪರೋಕ್ಷವಾಗಿ ಒತ್ತಡ ತಂತ್ರವನ್ನೂ ಅನುಸರಿಸಿತು.

ಇಷ್ಟೆಲ್ಲಾ ಬೆಳವಣಿಗೆಗಳ ನಡುವೆ ಜಗತ್ತಿನ ವಿವಿಧ ವೈದ್ಯಕೀಯ ಸಮುದಾಯಗಳು, ವಿಶ್ವವಿದ್ಯಾಲಯಗಳು ಕೊರೋನಾಗೆ ಮದ್ದು ಹುಡುಕುವ ನಿರಂತರ ಪ್ರಯತ್ನ ನಡೆಸಿದವು. ಅದೇ ರೀತಿ ಪ್ರತಿಷ್ಠಿತ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯವು ಕೂಡ ಪ್ರಯತ್ನ ನಡೆಸಿ ಈಗ ಲಸಿಕೆ ಕಂಡುಹಿಡಿದಿದೆ.‌ ಸದ್ಯ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಜೊತೆ ಸಂಪರ್ಕದಲ್ಲಿರುವ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಈಗ ಲಸಿಕೆಯನ್ನು ಪಡೆದುಕೊಂಡಿದ್ದು ನಾಳೆಯೇ ಪ್ರಯೋಗ ಆರಂಭಿಸಲಿದೆ. ಜೊತೆಗೆ ಈ ವ್ಯಾಕ್ಸಿನ್ ಪ್ರಯೋಗ ಯಶಸ್ವಿಯಾಗಲಿದೆ ಎಂಬ ನಿರೀಕ್ಷೆಯನ್ನೂ ಹೊಂದಿದೆ.

ಇದನ್ನು ಓದಿ: Reliance Jio-Facebook Deal: ರಿಲಾಯನ್ಸ್​ ಜಿಯೋದ ಶೇ. 9.99 ಷೇರನ್ನು 43,574 ಕೋಟಿ ರೂಪಾಯಿಗೆ ಖರೀದಿಸಿದ ಫೇಸ್​ಬುಕ್​

ಆಕ್ಸ್​ಫರ್ಡ್ ವಿಶ್ವವಿದ್ಯಾಲಯದ ಲಸಿಕೆ ವಿಭಾಗದಲ್ಲಿ (ವ್ಯಾಕ್ಸಿನೋಲಜಿ) ಅನುಭವಿಯಾಗಿರುವ ಸಾರಾ ಗಿಲ್ಬರ್ಟ್ ಅವರಿಗೆ ಮಾರ್ಚ್ ತಿಂಗಳಲ್ಲಿ ಲಸಿಕೆ ತಯಾರಿಸುವ ಜವಾಬ್ದಾರಿ ನೀಡಲಾಗಿತ್ತು. ಅದಕ್ಕಾಗಿ ಸುಮರು 2 ಸಾವಿರ ಕೋಟಿ ರೂಪಾಯಿ ಕೊಡಲಾಗಿತ್ತು. ಸಾರಾ ಗಿಲ್ಬರ್ಟ್ ತನ್ನ ತಂಡದ ಇತರ ಸದಸ್ಯರ ಜೊತೆ ಹಗಲಿರುಳು ದುಡಿದು ಲಸಿಕೆ ಕಂಡುಹಿಡಿಯುವುದರಲ್ಲಿ ಯಶಸ್ವಿಯಾಗಿದ್ದಾರೆ. ಈಗ ಅದನ್ನು ಮನುಷ್ಯರ ಮೇಲೆ ಪ್ರಯೋಗ ಮಾಡುವುದಷ್ಟೇ ಬಾಕಿ ಇದೆ ಎಂದು ಹೇಳಿದ್ದಾರೆ. ಮನುಷ್ಯರ ಮೇಲೆ ಪ್ರಯೋಗಕ್ಕೆ ಒಡ್ಡಿಕೊಳ್ಳಲು 500 ಮಂದಿ ಮುಂದೆ ಬಂದಿದ್ಧಾರೆ ಎಂದು ತಿಳಿದುಬಂದಿದೆ.ವಿಶ್ವದ ಇತರೆಡೆಯೂ ಲಸಿಕೆ ತಯಾರಿಗೆ ಸತತ ಪ್ರಯತ್ನಗಳು ನಡೆದಿವೆ. ವಿಶ್ವ ಆರೋಗ್ಯ ಸಂಸ್ಥೆಯು 70 ಲಸಿಕೆ ಅಭಿವೃದ್ಧಿ ಕಾರ್ಯಕ್ಕೆ ಮಾನ್ಯತೆ ನೀಡಿದೆ. ಸಾರಾ ಗಿಲ್ಬರ್ಟ್ ಅವರಲ್ಲದೇ ಇನ್ನೂ 3 ಲಸಿಕೆಗಳು ಈಗಾಗಲೇ ಮಾನವ ಪ್ರಯೋಗದ ಹಂತಕ್ಕೆ ಹೋಗಿವೆ ಎಂದು ತಿಳಿದುಬಂದಿದೆ.
First published: April 22, 2020, 3:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading