• ಹೋಂ
  • »
  • ನ್ಯೂಸ್
  • »
  • Corona
  • »
  • ಸಂಸತ್ ಅಧಿವೇಶನದ ಮೊದಲ ದಿನವೇ 26 ಸಂಸದರಿಗೆ ಕೊರೋನಾ ಪಾಸಿಟಿವ್ ಪತ್ತೆ

ಸಂಸತ್ ಅಧಿವೇಶನದ ಮೊದಲ ದಿನವೇ 26 ಸಂಸದರಿಗೆ ಕೊರೋನಾ ಪಾಸಿಟಿವ್ ಪತ್ತೆ

ಭಾರತೀಯ ಸಂಸತ್

ಭಾರತೀಯ ಸಂಸತ್

ಸುಮಾರು 2 ತಿಂಗಳು ವಿಳಂಬವಾಗಿ ಪ್ರಾರಂಭಗೊಂಡ ಮುಂಗಾರು ಅಧಿವೇಶನದ ಮೊದಲ ದಿನದಂದು ಲೋಕಸಭೆಯ 17 ಸದಸ್ಯರು ಸೇರಿ ಒಟ್ಟು 26ಕ್ಕೂ ಹೆಚ್ಚು ಸಂಸದರಿಗೆ ಕೊರೋನಾ ವೈರಸ್ ಸೋಂಕು ಇರುವುದು ದೃಢಪಟ್ಟಿದೆ.

  • News18
  • 2-MIN READ
  • Last Updated :
  • Share this:

    ನವದೆಹಲಿ(ಸೆ. 14): ಸಂಸತ್​ನಲ್ಲಿ ಮುಂಗಾರು ಅಧಿವೇಶನದ ಮೊದಲ ದಿನವೇ 25 ಸಂಸದರಿಗೆ ಕೊರೋನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಇವರ ಪೈಕಿ 17 ಮಂದಿ ಲೋಕಸಭಾ ಸದಸ್ಯರಾದರೆ, ಇನ್ನುಳಿದವರು ರಾಜ್ಯಸಭಾ ಸದಸ್ಯರಾಗಿದ್ಧಾರೆ. ಕೊರೋನಾ ಸೋಂಕಿತ 17 ಲೋಕಸಭಾ ಸದಸ್ಯರಲ್ಲಿ ಬಿಜೆಪಿಯವರೇ 12 ಮಂದಿ ಇದ್ದಾರೆ. ವೈಎಸ್ಸಾರ್ ಕಾಂಗ್ರೆಸ್​ನ 2 ಹಾಗೂ ಡಿಎಂಕೆ, ಆರ್​ಎಲ್​ಪಿ ಮತ್ತು ಶಿವಸೇನೆಯ ತಲಾ ಒಬ್ಬ ಸಂಸದರಿಗೆ ಸೋಂಕು ಇರುವುದು ಖಚಿತವಾಗಿದೆ. ಅಧಿವೇಶನ ಪ್ರಾರಂಭವಾಗುವ ಮುನ್ನ ಪ್ರತಿಯೊಬ್ಬ ಸಂಸದರಿಗೂ ಕೊರೋನಾ ಪರೀಕ್ಷೆ ಕಡ್ಡಾಯಪಡಿಸಲಾಗಿದೆ. ನಿನ್ನೆ ಮತ್ತು ಇವತ್ತು ಲೋಕಸಭಾ ಸದಸ್ಯರಿಗೆ ಪರೀಕ್ಷೆ ಮಾಡಲಾಗಿತ್ತು ಎಂದು ಮೂಲಗಳು ನ್ಯೂಸ್18ಗೆ ಮಾಹಿತಿ ನೀಡಿವೆ.


    ಜೂನ್-ಜುಲೈನಲ್ಲೇ ನಡೆಯಬೇಕಿದ್ದ ಮುಂಗಾರು ಅಧಿವೇಶನ ಕೊರೋನಾ ಕಾರಣವಾಗಿ ಬಹಳ ತಡವಾಗಿ ಆರಂಭಗೊಂಡಿದೆ. ಕಡ್ಡಾಯ ಪರೀಕ್ಷೆ ಸೇರಿದಂತೆ ಹಲವು ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಲಾಗಿದೆ. ದೈಹಿಕ ಅಂತರ, ಮಾಸ್ಕ್, ಸ್ಯಾನಿಟೈಸರ್ ಇತ್ಯಾದಿಯ ಬಳಕೆ ಕಡ್ಡಾಯ ಮಾಡಲಾಗಿದೆ. ಹಾಗೆಯೇ, ಅಧಿವೇಶನದ ಅವಧಿಯನ್ನೂ ಕಡಿಮೆಗೊಳಿಸಲಾಗಿದೆ. ಶೂನ್ಯ ವೇಳೆಯನ್ನೇ ರದ್ದುಗೊಳಿಸಲಾಗಿದೆ. ಲೋಕಸಭೆ ಬೆಳಗ್ಗೆ 9ರಿಂದ ಮಧ್ಯಾಹ್ನ 1ಗಂಟೆಯವರೆಗೆ ನಡೆದರೆ, ರಾಜ್ಯಸಭೆ ಮಧ್ಯಾಹ್ನ 3ರಿಂದ 7 ಗಂಟೆಯವರೆಗೆ ಮಾತ್ರ ನಿರ್ವಹಿಸಲಿದೆ.


    ಇದನ್ನೂ ಓದಿ: ದೆಹಲಿ ಗಲಭೆ ಪ್ರಕರಣ; ಮಾಜಿ ಜೆಎನ್‌ಯು ವಿದ್ಯಾರ್ಥಿ ಮುಖಂಡ ಉಮರ್‌ ಖಾಲಿದ್‌ ಬಂಧನ


    ಬೆಳಗ್ಗೆ ಪ್ರಾರಂಭವಾದ ಲೋಕಸಭೆ ಅಧಿವೇಶನದಲ್ಲಿ ದೈಹಿಕ ಅಂತರಕ್ಕೆ ಒತ್ತು ಕೊಡಲಾಗಿತ್ತು. ಸುಮಾರು 200 ಸದಸ್ಯರು ಲೋಕಸಭೇ ಚೇಂಬರ್​ನಲ್ಲಿ ಕುಳಿತಿದ್ದರೆ, 30-35ರಷ್ಟು ಸಂಸದರು ಚೇಂಬರ್​ನ ಮೇಲ್ಗಡೆ ಇರುವ ವಿಸಿಟರ್ಸ್ ಗ್ಯಾಲರಿಯಲ್ಲಿ ಕುಳಿತಿದ್ದರು. ಮಾಮೂಲಿಯ ಸಂದರ್ಭದಲ್ಲಿ ಒಂದು ಬೆಂಚ್​ನಲ್ಲಿ ಆರು ಮಂದಿ ಕುಳಿತುಕೊಳ್ಳಬಹುದು. ಈಗ ಕೇವಲ 3 ಮಂದಿಗೆ ಮಾತ್ರ ಅವಕಾಶ ಕೊಡಲಾಗಿದೆ. ಕೆಲವರು ರಾಜ್ಯಸಭಾ ಚೇಂಬರ್​ನಲ್ಲಿ ಕುಳಿದತುಕೊಂಡಿದ್ದು ಕಂಡು ಬಂದಿತು.


    ಮೊದಲ ದಿನದ ಅಧಿವೇಶನದಲ್ಲಿ ಕೊರೋನಾ ವೈರಸ್ ವಿಚಾರ ಹೆಚ್ಚು ಸದ್ದು ಮಾಡಿತು. ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ಅವರು ಭಾರತದಲ್ಲಿ ಕೊರೋನಾ ವೈರಸ್ ಕೈಮೀರಿ ಹೋಗಿದೆ ಎಂಬುದನ್ನು ಒಪ್ಪಿಕೊಳ್ಳಲಿಲ್ಲ. ಭಾರತದಲ್ಲಿ ಪ್ರತೀ ಒಂದು ಮಿಲಿಯನ್​ಗೆ (10 ಲಕ್ಷ) 3,328 ಪ್ರಕರಣಗಳು ದಾಖಲಾಗಿವೆ. 55 ಸಾವು ಇದೆ. ಇದು ವಿಶ್ವದ ಇತರ ತೀವ್ರ ಬಾಧಿತ ದೇಶಗಳಿಗೆ ಹೋಲಿಸಿದರೆ ಕಡಿಮೆ ಇದೆ. ಹಾಗೆಯೇ. ಭಾರತದಲ್ಲಿ ಸೋಂಕಿತರ ಪೈಕಿ ಶೇ. 77 ಮಂದಿ ಗುಣಮುಖವಾಗಿದ್ದಾರೆ ಎಂದರು.


    ಇದನ್ನೂ ಓದಿ: ಜಿಎಸ್‌ಟಿ ಪರಿಹಾರ ನೀಡಲ್ಲ, ಸಾಲ ನೀಡುತ್ತೇವೆ; ಕೇಂದ್ರದ ಪ್ರಸ್ತಾಪ ಒಪ್ಪಿದ 13 ರಾಜ್ಯಗಳು


    ಮಹಾರಾಷ್ಟ್ರ, ಆಂಧ್ರ ಪ್ರದೇಶ, ತಮಿಳುನಾಡು, ಕರ್ನಾಟಕ, ಉತ್ತರ ಪ್ರದೇಶ, ದೆಹಲಿ, ಪಶ್ಚಿಮ ಬಂಗಾಳ, ಬಿಹಾರ, ತೆಲಂಗಾಣ, ಒಡಿಶಾ, ಅಸ್ಸಾಮ್, ಕೇರಳ ಮತ್ತು ಗುಜರಾತ್​ನಲ್ಲಿ ಅತಿ ಹೆಚ್ಚು ಪ್ರಕರಣಗಳು ಹಾಗೂ ಸಾವುಗಳು ಸಂಭವಿಸಿವೆ ಎಂದು ಅವರು ಮಾಹಿತಿ ನೀಡಿದರು.


    ಭಾರತದಲ್ಲಿ ಇದುವರೆಗೂ ದಾಖಲಾಗಿರುವ ಪ್ರಕರಣಗಳ ಸಂಖ್ಯೆ 50 ಲಕ್ಷ ಸಮೀಪಿಸಿದೆ. 37 ಲಕ್ಷಕ್ಕೂ ಹೆಚ್ಚು ಮಂದಿ ಗುಣಮುಖಗೊಂಡಿದ್ದರೆ ಸಾವಿನ ಸಂಖ್ಯೆ 80 ಸಾವಿರ ಸಮೀಪ ಇದೆ. ಒಟ್ಟಾರೆ ಸಕ್ರಿಯ ಪ್ರಕರಣಗಳು 9.87 ಲಕ್ಷ ಇವೆ.

    Published by:Vijayasarthy SN
    First published: