HOME » NEWS » Coronavirus-latest-news » OVER 210 NEW CORONA CASES DETECTED AND 12 PEOPLE DIED IN LAST 24 HOURS IN KARNATAKA MAK

Karnataka Health Bulletin: ರಾಜ್ಯದಲ್ಲಿ 8 ಸಾವಿರ ಗಡಿ ಮುಟ್ಟಿದ ಕೊರೋನಾ ಪ್ರಕರಣ; ಮಾರಣಾಂತಿಕ ಸೋಂಕಿಗೆ ಇಂದು ಒಂದೇ ದಿನ 12 ಬಲಿ!

ಮಾರಣಾಂತಿಕ ಸೋಂಕಿಗೆ 12 ಜನ ಬಲಿಯಾಗಿದ್ದು, ಬಲಿಯಾದವರ ಸಂಖ್ಯೆಯೂ 102ರ ಗಡಿ ದಾಟಿದೆ. ಇನ್ನೂ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸಾ ಘಟಕದಲ್ಲಿ ಸುಮಾರು 73ಜನ ದಾಖಲಾಗಿದ್ದು ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

news18-kannada
Updated:June 18, 2020, 7:29 PM IST
Karnataka Health Bulletin: ರಾಜ್ಯದಲ್ಲಿ 8 ಸಾವಿರ ಗಡಿ ಮುಟ್ಟಿದ ಕೊರೋನಾ ಪ್ರಕರಣ; ಮಾರಣಾಂತಿಕ ಸೋಂಕಿಗೆ ಇಂದು ಒಂದೇ ದಿನ 12 ಬಲಿ!
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಜೂನ್‌ 18); ಲಾಕ್‌ಡೌನ್‌ ಸಡಿಲಿಕೆ ನಂತರ ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಇಂದು ಒಂದೇ ದಿನ ಸುಮಾರು 210 ಹೊಸ ಸೋಂಕು ಪ್ರಕರಣಗಳು ರಾಜ್ಯದಾದ್ಯಂತ ದಾಖಲಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 7944ಕ್ಕೆ ಏರಿಕೆಯಾಗಿದ್ದು, ಪ್ರತಿದಿನ ರಾಜ್ಯದಲ್ಲಿ ಸರಾಸರಿಯಾಗಿ 200ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿರುವುದು ಇದೀಗ ರಾಜ್ಯ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. 

ಇದಲ್ಲದೆ, ಮಾರಣಾಂತಿಕ ಸೋಂಕಿಗೆ 12 ಜನ ಬಲಿಯಾಗಿದ್ದು, ಬಲಿಯಾದವರ ಸಂಖ್ಯೆಯೂ 102ರ ಗಡಿ ದಾಟಿದೆ. ಇನ್ನೂ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸಾ ಘಟಕದಲ್ಲಿ ಸುಮಾರು 73ಜನ ದಾಖಲಾಗಿದ್ದು ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇದಲ್ಲದೆ 179 ಜನ ಕೊರೋನಾ ಸೋಂಕಿನಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.

ಲಾಕ್‌ಡೌನ್‌ ಸಡಿಲಿಕೆ ಆರಂಭವಾದ ನಂತರ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಊಹೆಗೂ ಮೀರಿ ಏರಿಕೆಯಾಗುತ್ತಲೇ ಇದೆ. ಸರಾಸರಿಯಾಗಿ ಪ್ರತಿದಿನ ಇನ್ನೂರಕ್ಕೂ ಹೆಚ್ಚು ಜನ ಈ ಸೋಂಕಿಗೆ ತುತ್ತಾಗುತ್ತಿದ್ದಾರೆ. ದೇಶದಾದ್ಯಂತ ವಲಸೆ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ಹಿಂತಿರುಗುತ್ತಿರುವುದೇ ಈ ಸೋಂಕು ಅಧಿಕವಾಗಲು ಪ್ರಮುಖ ಕಾರಣ ಎನ್ನಲಾಗುತ್ತಿದೆ.

ಇದನ್ನೂ ಓದಿ:  ವಲಸೆ ಕಾರ್ಮಿಕರ ಜೀವನೋಪಾಯಕ್ಕೆ 50,000 ಕೋಟಿ; ಗರೀಬ್‌ ಕಲ್ಯಾಣ್ ರೋಜ್‌ಗಾರ್‌ ಯೋಜನೆ ಮಾಹಿತಿ ನೀಡಿದ ಸೀತಾರಾಮನ್
Youtube Video
ಇಂದೂ ಸಹ ಈ ಸಾಲಿನಲ್ಲಿ 210 ಹೊಸ ಪ್ರಕರಣಗಳು ಸೇರ್ಪಡೆಯಾಗಿದೆ. ಈ ಪೈಕಿ ವಲಸೆ ಕಾರ್ಮಿಕರ ಮತ್ತು ಪ್ರವಾಸಿಗರ ಸಂಖ್ಯೆಯೇ ಅಧಿಕ ಎನ್ನಲಾಗುತ್ತಿದೆ. ಅಲ್ಲದೆ, ಇಂದು ಒಂದೇ ದಿನ ರಾಜ್ಯಾದ್ಯಂತ ಸುಮಾರು 8709 ಜನರನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಈವರೆಗೆ ಪರೀಕ್ಷೆ ಒಳಗಾದವರ ಸಂಖ್ಯೆ 4,73,507 ಎಂದು ರಾಜ್ಯ ಆರೋಗ್ಯ ಇಲಾಖೆ ಇಂದಿನ Health Bulletien ನಲ್ಲಿ ತಿಳಿಸಿದೆ.

 
First published: June 18, 2020, 7:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories