• ಹೋಂ
  • »
  • ನ್ಯೂಸ್
  • »
  • Corona
  • »
  • Corona Death: ದೆಹಲಿ ಸಾರ್ವಜನಿಕ ದಾಖಲೆಗಳಿಂದ ಕಾಣೆಯಾದ 1,000 ಕೋವಿಡ್ ಸಾವುಗಳು; ಸತ್ಯ ಬಹಿರಂಗ!

Corona Death: ದೆಹಲಿ ಸಾರ್ವಜನಿಕ ದಾಖಲೆಗಳಿಂದ ಕಾಣೆಯಾದ 1,000 ಕೋವಿಡ್ ಸಾವುಗಳು; ಸತ್ಯ ಬಹಿರಂಗ!

ದೆಹಲಿಯ ಘಾಜಿಪುರ್ ಶವಾಗಾರದಲ್ಲಿ ಕಂಡುಬಂದ ದೃಶ್ಯ.

ದೆಹಲಿಯ ಘಾಜಿಪುರ್ ಶವಾಗಾರದಲ್ಲಿ ಕಂಡುಬಂದ ದೃಶ್ಯ.

ದೆಹಲಿಯಲ್ಲಿ 1,158 ಕೋವಿಡ್ ಸಾವುಗಳು ಲೆಕ್ಕಕ್ಕೆ ಬಾರದೆ ಇರಬಹುದು ಎಂಬ ಅಂಶವನ್ನು ಮುನ್ಸಿಪಲ್ ಕಾರ್ಪೊರೇಶನ್ ಬಯಲು ಮಾಡಿದೆ.

  • Share this:

ದೆಹಲಿ (ಏಪ್ರಿಲ್ 27); ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೋನಾದಿಂದ ಸಾವಿಗೀಡಾದವರ ಶವ ಸಂಸ್ಕಾರದ ವೈಮಾನಿಕ ಚಿತ್ರಗಳು ಇತ್ತೀಚೆಗೆ ಸಾಕಷ್ಟು ಸದ್ದು ಮಾಡುತ್ತಿದೆ. ದೆಹಲಿಯಲ್ಲಿ ಕೊರೋನಾ ರೋಗಿಗಳ ಸಾವಿನ ಸಂಖ್ಯೆ ದಿನಿದಿಂದ ದಿನಕ್ಕೆ ಅಧಿಕವಾಗುತ್ತಲೇ ಇದೆ ಎಂದು ಸುದ್ದಿಯಾಗುತ್ತಲೇ ಇದೆ. ಆದರೆ, ಕಳೆದ ಒಂದು ವಾರದಿಂದ ಕೊರೋನಾ ಸಾವಿನ ಸಂಖ್ಯೆ ಅಧಿಕೃತ ಅಂಕಿಅಂಶಗಳಿಗಿಂತ ಭಿನ್ನವಾಗಿರಬಹುದು ಎನ್ನಲಾಗುತ್ತಿತ್ತು. ಹೀಗಾಗಿ, ನಗರ ನಾಗರೀಕ ಸಂಸ್ಥೆ ಇತ್ತೀಚೆಗೆ ಏಳು ಶವಾಗಾರಗಳಿಗೆ ಭೇಟಿ ನೀಡಿದ ನಂತರ, ಕನಿಷ್ಠ 1,150 ಸಾವುಗಳು ಅಧಿಕೃತ ಕೋವಿಡ್ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ ಎಂಬ ಸತ್ಯವನ್ನು ಬಯಲು ಮಾಡಿವೆ. ದೆಹಲಿಯ ಮುನ್ಸಿಪಲ್ ಕಾರ್ಪೊರೇಶನ್‌ನಿಂದ ನಡೆಸಲಾಗುತ್ತಿರುವ 26 ಶವಾಗಾರಗಳಿಂದ ಸಂಗ್ರಹಿಸಿದ ಮಾಹಿತಿಯು, ಏಪ್ರಿಲ್ 18 ಮತ್ತು ಏಪ್ರಿಲ್ 24 ರ ನಡುವೆ ಕೋವಿಡ್ ರೋಗಿಗಳ 3,096 ಮೃತ ದೇಹಗಳನ್ನು ದಹನ ಮಾಡಲಾಗಿದೆ ಎಂಬ ಅಂಶ ಇದೀಗ ಬಯಲಾಗಿದೆ.


ಇದೇ ಅವಧಿಯಲ್ಲಿ ದೆಹಲಿ ಸರ್ಕಾರವು ಬಿಡುಗಡೆ ಮಾಡಿದ ಒಟ್ಟು ಕೋವಿಡ್ ಸಾವುಗಳ ಸಂಖ್ಯೆ 1,938 ಎಂದು ಚಿತ್ರಿಸಲಾಗಿದೆ. ದೆಹಲಿಯಲ್ಲಿ 1,158 ಕೋವಿಡ್ ಸಾವುಗಳು ಲೆಕ್ಕಕ್ಕೆ ಬಾರದೆ ಇರಬಹುದು ಎಂಬ ಅಂಶವನ್ನು ಮುನ್ಸಿಪಲ್ ಕಾರ್ಪೊರೇಶನ್ ಬಯಲು ಮಾಡಿದೆ. ಆಸ್ಪತ್ರೆಗಳಿಂದ ತರಲಾದ ದೇಹಗಳನ್ನು ಮಾತ್ರ ಕೋವಿಡ್ ಸಾವು ಎಂದು ಎಂಸಿಡಿ ಪರಿಗಣಿಸುತ್ತದೆ. ಅಧಿಕೃತ ಅಂಕಿಅಂಶಗಳೊಂದಿಗೆ ಅದರ ಡೇಟಾವನ್ನು ಹೊಂದಿಕೆಯಾಗದ ಕಾರಣ ಈ ಸಾವುಗಳನ್ನು ಕೋವಿಡ್​ ಲೆಕ್ಕಕ್ಕೆ ಪರಿಗಣಿಸಿಲ್ಲ ಎನ್ನಲಾಗುತ್ತಿದೆ.


ದೆಹಲಿಯ ಹೊರವಲಯದಲ್ಲಿರುವ ಘಾಜಿಪುರ್ ಶವಾಗಾರದಲ್ಲಿ ಕೋವಿಡ್ ಸಂತ್ರಸ್ತರ ಮೃತ ದೇಹಗಳ ಅಂತ್ಯಕ್ರಿಯೆಗೆ ಕುಟುಂಬಸ್ಥರು ಸಾಲುಗಟ್ಟಿ ನಿಂತಿರುವ ದೃಶ್ಯ ಇತ್ತೀಚೆಗೆ ಸಾಮಾನ್ಯವಾಗಿದೆ. ಆದರೆ, ಕೋವಿಡ್ ಕಾರಣದಿಂದಾಗಿ ಮನೆಯಲ್ಲೇ ಸಾವನ್ನಪ್ಪಿದವರನ್ನು ಈ ಪಟ್ಟಿಗೆ ಸೇರಿಸಲಾಗಿಲ್ಲ ಎನ್ನಲಾಗುತ್ತಿದೆ.


ಘಾಜಿಪುರ ಸ್ಮಶಾನದ ಸಿಬ್ಬಂದಿ ಅನುಜ್ ಬನ್ಸಾಲ್ ಈ ಬಗ್ಗೆ ಮಾತನಾಡಿ, "ಆಸ್ಪತ್ರೆಗಳಿಂದ ಬರುವ ಜನರು, ಆಂಬುಲೆನ್ಸ್‌ಗಳಲ್ಲಿ ಬರುತ್ತಾರೆ. ಇತರರು ಮನೆಯಿಂದ (ದೇಹಗಳನ್ನು) ತರುತ್ತಾರೆ. ಆದರೆ ಅವರ ವರದಿಗಳನ್ನು ನೋಡಿದರೆ ಅದು ಉಸಿರಾಟದ ವೈಫಲ್ಯ ಎಂದು ನಮಗೆ ತಿಳಿಯುತ್ತದೆ. ನಾವು ಅವರ ಸಾವಿಗೆ ಕಾರಣವನ್ನು ನಮೂದಿಸುವಾಗ ಆಸ್ಪತ್ರೆಯಿಂದ ಬಂದ ಮೃತದೇಹಗಳನ್ನು ಮಾತ್ರ ಕೋವಿಡ್ ಎಂದು ಪರಿಗಣಿಸುತ್ತೇವೆ. ಮನೆಯಿಂದ ಬಂದ ದೇಹಗಳನ್ನು ನಾವು ಆ ಪಟ್ಟಿಗೆ ಸೇರಿಸುವುದಿಲ್ಲ" ಎಂದು ತಿಳಿಸಿದ್ದಾರೆ.


ಮೇ ಎರಡನೇ ವಾರದಲ್ಲಿ ಕಾದಿದೆ ಆತಂಕ:


ದೇಶದಲ್ಲಿ ಎರಡನೇ ಸುತ್ತಿನಲ್ಲಿ ಮಾರಕ‌ ಕಾಯಿಲೆ ಕೊರೋನಾ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಆತಂಕವನ್ನು ಸೃಷ್ಟಿಸುತ್ತಿದೆ. ಹಲವು ನಿರ್ಬಂಧಗಳ ನಡುವೆಯೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಕೊರೋನಾ ಸೋಂಕಿತರು ಪತ್ತೆ ಆಗುತ್ತಿದ್ದಾರೆ‌.‌ ಪ್ರತಿದಿನ ಮೂರು ಲಕ್ಷಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಗೋಚರಿಸಲು ಆರಂಭಿಸಿವೆ. ಆದರೀಗ ಮೇ ತಿಂಗಳ ಮಧ್ಯಭಾಗದಲ್ಲಿ ಇನ್ನೂ ದೊಡ್ಡ ಆಪತ್ತು ಕಾದಿದೆ ಎಂದು ಐಐಟಿ ವಿಜ್ಞಾನಿಗಳು ಭಯಾನಕ ಭವಿಷ್ಯ ನುಡಿದಿದ್ದಾರೆ.


ಕಾನ್ಪುರ ಮತ್ತು ಹೈದರಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (IIT) ವಿಜ್ಞಾನಿಗಳು ಗಣಿತಶಾಸ್ತ್ರೀಯ ಮಾದರಿಯಲ್ಲಿ ಅಧ್ಯಯನ ನಡೆಸಿದ್ದಾರೆ. ಅವರ ಅಧ್ಯಯನದ ಪ್ರಕಾರ ಮೇ 14ರಿಂದ 18ರವರೆಗಿನ‌ ಅವಧಿಯಲ್ಲಿ ಕೊರೋನಾ ಎರಡನೇ ಅಲೆಯು ಗರಿಷ್ಠ ಹಂತ ತಲುಪಲಿದೆ. ಆಗ ದೇಶದಲ್ಲಿ 38ರಿಂದ 48 ಲಕ್ಷ ಸಕ್ರಿಯ ಪ್ರಕರಣಗಳು ಇರಲಿವೆ. ಆ ಅವಧಿಯಲ್ಲಿ ಪ್ರತಿದಿನ 4.4 ಲಕ್ಷದಷ್ಟು ಹೊಸ ಕೇಸುಗಳು ಪತ್ತೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.


ಕಾನ್ಪುರ ಮತ್ತು ಹೈದರಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿಜ್ಞಾನಿಗಳು ಗಣಿತಶಾಸ್ತ್ರೀಯದಲ್ಲಿನ 'ಸೂತ್ರ' ಎಂಬ ಮಾದರಿಯ ಆಧಾರದ ಮೇಲೆ ದೇಶದಲ್ಲಿ ಕಂಡುಬರುತ್ತಿರುವ ಕೊರೋನಾ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಈ ‘ಸೂತ್ರ’ ಮಾದರಿಯು ಹಲವು ಬಗೆಯ ವೈಶಿಷ್ಟ್ಯಗಳನ್ನು ಹೊಂದಿದೆ ಮತ್ತು ಹೊಸ ಮಾದರಿಯಾಗಿದೆ.


ಇದನ್ನೂ ಓದಿ: Coronavirus: ಮೇ ತಿಂಗಳ ಮಧ್ಯದಲ್ಲಿ ಭಾರತಕ್ಕೆ ಕಾದಿದೆ ಕೊರೋನಾ ಆಪತ್ತು; ಭಯಾನಕ ಭವಿಷ್ಯ ನುಡಿದಿದ್ದಾರೆ ಐಐಟಿ ವಿಜ್ಞಾನಿಗಳು


ಮೂರು ಪ್ರಮುಖ ಸಂಗತಿಗಳನ್ನು ಒಳಗೊಂಡ ಸೂತ್ರ ಮಾದರಿಯನ್ನು ಅಭಿವೃದ್ಧಿಪಡಿಸಲಾಗಿದೆ. ಕೊರೋನಾ ವೈರಸ್ ತಗುಲಿದ ವ್ಯಕ್ತಿಯು ಪ್ರತಿ ದಿನ ಎಷ್ಟು ಜನರಿಗೆ ಸೋಂಕು ಹರಡುತ್ತಾನೆ ಎಂಬ ಸಂಖ್ಯೆ, ನಾಗರಿಕರು ಯಾವ ರೀತಿಯಲ್ಲಿ ಮುನ್ನೆಚ್ಚರಿಕೆ ವಹಿಸುತ್ತಿದ್ದಾರೆ ಎಂಬ ಅಂಶ ಹಾಗೂ ದೃಢಪಡದ ಪ್ರಕರಣಗಳ ಸಂಖ್ಯೆಯನ್ನು ಅಧ್ಯಯನ ನಡೆಸಲಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಆದರೆ ತಮ್ಮ ಅಧ್ಯಯನ ವರದಿಯನ್ನು ವಿಜ್ಞಾನಿಗಳು ಪ್ರಕಟಣೆ ಮಾಡಿಲ್ಲ‌.


ಮೇ 14ರಿಂದ 18ರವರೆಗಿನ‌ ಅವಧಿಯಲ್ಲಿ ಕೊರೋನಾ ಎರಡನೇ ಅಲೆಯು ಗರಿಷ್ಠ ಹಂತ ತಲುಪಲಿದೆ ಎಂದಿರುವ ವಿಜ್ಞಾನಿಗಳು ಅದಕ್ಕೂ ಮೊದಲು ಮೇ 11ರಿಂದ15ರ ನಡುವೆ 33ರಿಂದ 35 ಲಕ್ಷ ಸಕ್ರಿಯ ಪ್ರಕರಣಗಳಾಗುವ ಸಾಧ್ಯತೆ ಇದೆ ಹೇಳಿದ್ದಾರೆ. ಹಾಗೆಯೇ ಮೇ ಮಧ್ಯದಲ್ಲಿ ಗರಿಷ್ಠ ಹಂತ ತಲುಪಿ ನಂತರ ಮೇ ತಿಂಗಳ ಕಡೆಯಲ್ಲಿ ಇಳಿಮುಖವಾಗಲಿದೆ ಎಂಬುದಾಗಿಯೂ ತಿಳಿಸಿದ್ದಾರೆ. ತಮ್ಮ ಈ ಭವಿಷ್ಯ ನಿಜವಾಗಲಿದೆ ಎಂದು ಪ್ರಾಧ್ಯಾಪಕ ಮನಿಂದರ್ ಅಗರ್‌ವಾಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

top videos
    First published: