Migrants: ಕೊರೋನಾ 2ನೇ ಅಲೆಯಲ್ಲಿ 13 ಲಕ್ಷ ವಲಸೆ ಕಾರ್ಮಿಕರು ದೆಹಲಿ ತೊರೆದಿದ್ದಾರೆ; ವರದಿ

ಕೊರೋನಾ ಎರಡನೇ ಅಲೆಯ ಸಂದರ್ಭದಲ್ಲಿ ಸುಮಾರು 5,17,073 ವಲಸೆ ಕಾರ್ಮಿಕರು ರೈಲುಗಳ ಮೂಲಕ ದೆಹಲಿಯಿಂದ ತಮ್ಮ ಮನೆಗಳಿಗೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ನವದೆಹಲಿ(ಜು.02): ದೇಶದಲ್ಲಿ ಕೊರೋನಾ ಎರಡನೇ ಅಲೆ ಶುರುವಾದಾಗ,  ಲಾಕ್​ಡೌನ್​ನಿಂದಾಗಿ ಏಪ್ರಿಲ್​ ಮಧ್ಯಭಾಗದಿಂದ ಸುಮಾರು 5 ಲಕ್ಷಕ್ಕೂ ಹೆಚ್ಚು ವಲಸೆ ಕಾರ್ಮಿಕರು(ತಮ್ಮ ಕುಟುಂಬಸ್ಥರ ಜೊತೆ) ರಾಷ್ಟ್ರ ರಾಜಧಾನಿ ನವದೆಹಲಿಯನ್ನು ಬಿಟ್ಟು ತಮ್ಮ ತಮ್ಮ ಮನೆಗಳಿಗೆ ಹೋಗಿದ್ದಾರೆ ಎಂದು ಕೇಂದ್ರ ಕಾರ್ಮಿಕ ಸಚಿವಾಲಯ ಹೇಳಿದೆ. ಒಟ್ಟು 13 ಲಕ್ಷ ವಲಸೆ ಕಾರ್ಮಿಕರು ರಾಜಧಾನಿಯನ್ನು ಬಿಟ್ಟು ಹೋಗಿದ್ದಾರೆ ಎಂದು ತಿಳಿದು ಬಂದಿದೆ.

  ರೈಲ್ವೆ ಸಚಿವಾಲಯದಿಂದ ಪಡೆದ ದತ್ತಾಂಶವನ್ನು ಆಧರಿಸಿ, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಸೋಮವಾರ ಗೃಹ ವ್ಯವಹಾರಗಳ ಸಂಸದೀಯ ಸಮಿತಿಗೆ ಸಲ್ಲಿಸಿದ ವರದಿಯಲ್ಲಿ, ಕೊರೋನಾ ಎರಡನೇ ಅಲೆಯ ಸಂದರ್ಭದಲ್ಲಿ ಸುಮಾರು 5,17,073 ವಲಸೆ ಕಾರ್ಮಿಕರು ರೈಲುಗಳ ಮೂಲಕ ದೆಹಲಿಯಿಂದ ತಮ್ಮ ಮನೆಗಳಿಗೆ ತೆರಳಿದ್ದಾರೆ ಎಂದು ಹೇಳಿದೆ.

  ಇದನ್ನೂ ಓದಿ:Explained: ಕೊವ್ಯಾಕ್ಸಿನ್, ಕೋವಿಶೀಲ್ಡ್, ಸ್ಪುಟ್ನಿಕ್ & ಮಾಡರ್ನಾ ಲಸಿಕೆಗಳಲ್ಲಿ ಯಾವುದು ಉತ್ತಮ? ಹೇಗೆ ಭಿನ್ನ?

  ಏಪ್ರಿಲ್​ ಮಧ್ಯಭಾಗದಿಂದ ಮೇ ಮಧ್ಯಭಾಗದವರೆಗೆ ಸುಮಾರು 8 ಲಕ್ಷ ವಲಸೆ ಕಾರ್ಮಿಕರು ಬಸ್ಸಿನ ಮೂಲಕ ರಾಜಧಾನಿ ದೆಹಲಿಯನ್ನು ತೊರೆದಿದ್ದಾರೆ ಎಂದು ದೆಹಲಿ ಸರ್ಕಾರ ಕಳೆದ ತಿಂಗಳು ಹೇಳಿತ್ತು.

  ಕಳೆದ ವರ್ಷ ಏಪ್ರಿಲ್​​ ಮತ್ತು ಮೇ ತಿಂಗಳಿನಲ್ಲಿ ಯಾವುದೇ ಸಾರಿಗೆ ಸೌಲಭ್ಯವಿಲ್ಲದ ಕಾರಣ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ಪರದಾಡುವಂತಾಗಿತ್ತು. ಆದರೆ ಈ ಬಾರಿ ಭಾಗಶಃ ಲಾಕ್​ಡೌನ್​ ಇದ್ದ ಕಾರಣ ಕಾರ್ಮಿಕರಿಗೆ ಆ ರೀತಿಯ ತೊಂದರೆ ಆಗಲಿಲ್ಲ ಎಂದು ವರದಿಯಲ್ಲಿ ಹೇಳಿದೆ.

  ಇದನ್ನೂ ಓದಿ:ಬಿಸಿಯೂಟ ಆಹಾರ ಧಾನ್ಯಕ್ಕೆ ಕಳ್ಳರ ಕಾಟ; ರಾತ್ರಿಯಿಡೀ ಶಾಲೆಯಲ್ಲೇ ವಾಸ್ತವ್ಯ ಹೂಡಿದ ಶಿಕ್ಷಕ

  ಕೊರೋನಾ ಎರಡನೇ ಅಲೆಯ ಸಂದರ್ಭದಲ್ಲಿ ದೇಶಾದ್ಯಂತ ಲಾಕ್​ಡೌನ್​ ಜಾರಿ ಮಾಡಿರಲಿಲ್ಲ. ಬದಲಾಗಿ ಕೊರೋನಾ ಕೇಸ್​​ಗಳು ಹೆಚ್ಚಾಗಿರುವ ರಾಜ್ಯಗಳು ಲಾಕ್​ಡೌನ್​ ಜಾರಿಗೊಳಿಸಿದ್ದವು. ಆದಾಗ್ಯೂ ರೈಲು ಮತ್ತು ಬಸ್​ ಸಂಚಾರ ವ್ಯತ್ಯಯವಾಗಿರಲಿಲ್ಲ. ಹೀಗಾಗಿ ವಲಸೆ ಕಾರ್ಮಿಕರು ಬಸ್​, ರೈಲು ಹಿಡಿದು ತಮ್ಮ -ತಮ್ಮ ಊರುಗಳಿಗೆ ಪ್ರಯಾಣ ಬೆಳೆಸಲು ಸಾಧ್ಯವಾಯಿತು. ದೆಹಲಿಯಲ್ಲಿ ಏಪ್ರಿಲ್​ 19ರಿಂದ ಮೇ 14ರವರೆಗೆ ಸುಮಾರು 8 ಲಕ್ಷ ಪ್ರಯಾಣಿಕರು ಮೂರು ಅಂತರರಾಜ್ಯ ಬಸ್​ ಟರ್ಮಿನಲ್​ಗಳಿಂದ ಬೇರೆ ಬೇರೆ ರಾಜ್ಯಗಳಿಗೆ ಹೋಗಲು ಬಸ್​ಗಳ ಮೊರೆ ಹೋದರು. ದೆಹಲಿ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಸರ್ಕಾರಗಳು ವಲಸೆ ಕಾರ್ಮಿಕರಿಗಾಗಿ ಬಸ್​ ಸೌಲಭ್ಯವನ್ನು ಕಲ್ಪಿಸಿದ್ದವು.

  ಏಪ್ರಿಲ್​-ಮೇ ನಡುವೆ ದೆಹಲಿಯಲ್ಲಿ ಕೊರೋನಾ ನಾಲ್ಕನೇ ಅಲೆ ಕಾಣಿಸಿಕೊಂಡಿತ್ತು. ದಿನೇ ದಿನೇ ಕೊರೋನಾ ಪ್ರಕರಣಗಳು ಹೆಚ್ಚಾಗಿ ಆಸ್ಪತ್ರೆಗಳಲ್ಲಿ ಬೆಡ್​ಗಳಿಲ್ಲದೇ ಪರಿತಪಿಸುವಂತಾಗಿತ್ತು. ಚಿತಾಗಾರಗಳಲ್ಲೂ ಕ್ಯೂ ನಿಲ್ಲುವ ಪರಿಸ್ಥಿತಿ ಬಂದೊದಗಿತ್ತು. ಈ ಅವಧಿಯಲ್ಲಿ 7,60,000ಕ್ಕೂ ಹೆಚ್ಚು ಜನರಿಗೆ ಕೊರೊನಾ ಸೋಂಕು ತಗುಲಿತ್ತು. ಏ್ರಪಿಲ್​-ಮೇ ತಿಂಗಳಲ್ಲಿ ಸುಮಾರು 13 ಸಾವಿರಕ್ಕೂ ಹೆಚ್ಚು ಜನರು ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.
  Published by:Latha CG
  First published: