HOME » NEWS » Coronavirus-latest-news » OPPOSITION PARTY LEADERS ATTACKS GOVERNMENT FOR NOT STARTING CORONA TESTING LAB AT KALBURGI HK

ಪರಿಸ್ಥಿತಿ ಗಂಭೀರವಾದರೂ ಕಲಬುರ್ಗಿಯಲ್ಲಿ ಆರಂಭವಾಗದ ಕೊರೋನಾ ಟೆಸ್ಟಿಂಗ್ ಲ್ಯಾಬ್; ವಿಪಕ್ಷಗಳ ಕಿಡಿ

ಕಲಬುರ್ಗಿಯಲ್ಲಿ ಇದೂವರೆಗೂ ಕೊರೋನಾ ಪರೀಕ್ಷಾ ಕೇಂದ್ರ ಆರಂಭವಾಗಿಲ್ಲ. ಈ ವಿಚಾರದಲ್ಲಿ ಕೇವಲ ಆಡಳಿತ ಪಕ್ಷದ ಶಾಸಕರ ಜೊತೆ ಮಾತ್ರ ವಿಡಿಯೋ ಕಾನ್ಫರೆನ್ಸ್ ಮಾಡಲಾಗುತ್ತಿದೆ. ಇದರಲ್ಲೂ ಪಕ್ಷಪಾತ ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ.

news18
Updated:March 23, 2020, 9:20 PM IST
ಪರಿಸ್ಥಿತಿ ಗಂಭೀರವಾದರೂ ಕಲಬುರ್ಗಿಯಲ್ಲಿ ಆರಂಭವಾಗದ ಕೊರೋನಾ ಟೆಸ್ಟಿಂಗ್ ಲ್ಯಾಬ್; ವಿಪಕ್ಷಗಳ ಕಿಡಿ
ವಿಧಾನ ಪರಿಷತ್ ಕಲಾಪ
  • News18
  • Last Updated: March 23, 2020, 9:20 PM IST
  • Share this:
ಬೆಂಗಳೂರು(ಮಾ. 23): ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲಿದೆ. ಕಲಬುರ್ಗಿಯಲ್ಲಿ ಕೊರೋನಾ ಸೋಂಕಿತ ವ್ಯಕ್ತಿ ಮೃತಪಟ್ಟಿದ್ದು, ಮತ್ತಷ್ಟು ಮಂದಿ ಸೋಂಕಿತ ಶಂಕೆಯಿಂದ ಬಳಲುತ್ತಿದ್ದಾರೆ. ಕಲಬುರ್ಗಿಯಲ್ಲಿ ಕೊರೋನಾ ಟೆಸ್ಟಿಂಗ್​ ಲ್ಯಾಬ್​​​ ಸ್ಥಾಪನೆ ಮಾಡುತ್ತೇವೆ ಎಂದು ರಾಜ್ಯ ಸರ್ಕಾರ ಹೇಳಿದೆ. ಆದರೆ, ಇದುವರೆಗೂ ಪರೀಕ್ಷಾಲಯ ಸ್ಥಾಪಿಸಲಿಲ್ಲ ಎಂದು ಸರ್ಕಾರವನ್ನು ಪ್ರತಿಪಕ್ಷ ನಾಯಕರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. 

ಬೆಂಗಳೂರಿನ ತಾರಾ ಹೊಟೇಲ್​ಗಳನ್ನೇ ಆಸ್ಪತ್ರೆಗಳಾಗಿ ಪರಿವರ್ತಿಸಿ ಹಾಗೂ ಹೌಸ್ ಕ್ವಾರಂಟೈನ್ ಆಗಿರುವವರನ್ನು ಅಲ್ಲಿರಿಸಿ ಚಿಕಿತ್ಸೆ ಕೊಡಿಸಿ. ಮನೆಯಲ್ಲಿ ಕ್ವಾರಂಟೈನ್ ಮಾಡಿದ್ರೆ ಪ್ರಯೋಜನವಾಗಲ್ಲ. ಅರ್ಧ ನಿರ್ಬಂಧ ಮಾಡಿ ಇನ್ನರ್ಧ ಮಾಡಲ್ಲ ಎಂದರೆ ಏನು ಉಪಯೋಗ. ಇದುವರೆಗೆ ಕಲ್ಬುರ್ಗಿಯಲ್ಲಿ ಪ್ರಯೋಗಾಲಯ ಸ್ಥಾಪನೆಯೇ ಆಗಿಲ್ಲ. ಹದಿಮೂರು ದಿನಗಳಾದರೂ ಸಹ ವೈದ್ಯಕೀಯ ಕಾಲೇಜುಗಳಲ್ಲಿ ಪ್ರಯೋಗಾಲಯ ಸ್ಥಾಪನೆಯಾಗಿಲ್ಲ‌.ಇಷ್ಟು ದೊಡ್ಡ ಲೋಪ ಆಗಿರೋದಕ್ಕೆ ಸರ್ಕಾರದ ಬೇಜವಾಬ್ದಾರಿಯೇ ಕಾರಣ ಎಂದು ಮಾಜಿ ಸಚಿವ ಹೆಚ್​ ಕೆ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೂ ಶಾಸಕ  ಪ್ರಿಯಾಂಕ್ ಖರ್ಗೆ ಮಾತನಾಡಿ, ಕಲಬುರ್ಗಿಯಲ್ಲಿ ಇದೂವರೆಗೂ ಕೊರೋನಾ ಪರೀಕ್ಷಾ ಕೇಂದ್ರ ಆರಂಭವಾಗಿಲ್ಲ. ಈ ವಿಚಾರದಲ್ಲಿ ಕೇವಲ ಆಡಳಿತ ಪಕ್ಷದ ಶಾಸಕರ ಜೊತೆ ಮಾತ್ರ ವಿಡಿಯೋ ಕಾನ್ಫರೆನ್ಸ್ ಮಾಡಲಾಗುತ್ತಿದೆ. ಇದರಲ್ಲೂ ಪಕ್ಷಪಾತ ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ : ರಾಜ್ಯದಲ್ಲಿ ಕೊರೋನಾ ಅತಂಕ; ವಿದೇಶದಿಂದ ಬಂದವರನ್ನು ಮೊದಲು ಪತ್ತೆ ಮಾಡಿ: ವಿಪಕ್ಷ ನಾಯಕ ಸಿದ್ದರಾಮಯ್ಯ

ಇತ್ತ ಆರೋಗ್ಯ ಸಚಿವ ಶ್ರೀರಾಮುಲು ಮಾತನಾಡಿ ವೈರಸ್ ಕಡಿವಾಣಕ್ಕೆ ಮುಖ್ಯಮಂತ್ರಿಗಳು ಅನೇಕ ಕ್ರಮಗಳನ್ನು ಕೈಕೊಳ್ಳುತ್ತಿದ್ದಾರೆ. ಪ್ರಥಮ ಬಾರಿಗೆ ವಾರ್ ರೂಮ್ ತೆರೆಯಲಾಗಿದೆ. 100 ಜನರು ಇಲ್ಲಿ ಕೆಲಸ ಮಾಡುತ್ತಿದ್ದು, ಇದು ದಿನದ 24 ತಾಸು ಕೆಲಸ ಮಾಡುತ್ತದೆ. ಕೊವೀಡ್ ನಿಯಂತ್ರಣಕ್ಕೆ ವಾರ್ ರೂಮ್ ಸಹಕಾರಿಯಾಗಿದ್ದು, ಕೊರೋನಾ ಕುರಿತು ಸಮಗ್ರ ಮಾಹಿತಿ ಅನುಕೂಲವಾಗಲಿದೆ. ಇದು ದೇಶದಲ್ಲಿ ಪ್ರಥಮ ಬಾರಿಗೆ ವಾರ್ ರೂಮ್ ತೆರೆಯಲಾಗಿದೆ ಎಂದು ಸಚಿವ ಹೇಳಿದ್ದಾರೆ.
First published: March 23, 2020, 9:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories