ಪದವಿ ಹಂತದಲ್ಲಿ ಆನ್​​ಲೈನ್​​ ಶಿಕ್ಷಣ ನೀಡುವುದಕ್ಕೆ ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ವಿರೋಧ

ದೇಶದ ಸಾಮಾಜಿಕ ವಾಸ್ತವದ ಅರಿವಿಲ್ಲದವರ ಈ ತರಹದ ಕುರುಡುತನದ ಆಲೋಚನೆ ಮಾಡುತ್ತಾರೆ


Updated:May 31, 2020, 4:27 PM IST
ಪದವಿ ಹಂತದಲ್ಲಿ ಆನ್​​ಲೈನ್​​ ಶಿಕ್ಷಣ ನೀಡುವುದಕ್ಕೆ ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ವಿರೋಧ
ಮಾಜಿ ಸಿಎಂ ಸಿದ್ದರಾಮಯ್ಯ.
  • Share this:
ಬೆಂಗಳೂರು(ಮೇ.31): ಕೊರೋನಾ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳು ಕಳೆದ ಎರಡು ತಿಂಗಳಿನಿಂದ ಆರಂಭವಾಗಿಲ್ಲ. ಹೀಗಾಗಿ ದೇಶದಲ್ಲಿ ಪದವಿ ಮತ್ತು ವೃತ್ತಿಪರ ಶಿಕ್ಷಣವನ್ನು ಆನ್​ಲೈನ್ ನಲ್ಲಿ ನೀಡುವ  ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾವಕ್ಕೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದಾರೆ.

ಟ್ವೀಟರ್​​  ಮೂಲಕ ಆನ್​ಲೈನ್​​ ಶಿಕ್ಷಣವನ್ನು ವಿರೋಧಿಸಿರುವ ಅವರು, ದೇಶದ ಸಾಮಾಜಿಕ ವಾಸ್ತವದ ಅರಿವಿಲ್ಲದವರ ಈ ತರಹದ ಕುರುಡುತನದ ಆಲೋಚನೆ ಮಾಡುತ್ತಾರೆ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.ಜೊತೆಗೆ ಇದರಿಂದ ಸಮಾಜದ ದೊಡ್ಡ ವರ್ಗ ಶಿಕ್ಷಣದಿಂದ ವಂಚಿತವಾಗಲಿದೆ , ಭಾರತದ ಅಸ್ತಿತ್ವ ಇರುವುದು ಹಳ್ಳಿಗಳಲ್ಲಿ ಹಾಗಾಗಿ ಆನ್ಲೈನ್ ಶಿಕ್ಷಣ ಬೇಡ ಎನ್ನುತ್ತಾ ಹಳ್ಳಿಗಳಲ್ಲಿ ವಿದ್ಯಾರ್ಥಿಗಳ ಬಳಿ ಕಂಪ್ಯೂಟರ್-ಲ್ಯಾಪ್ ಟಾಪ್ -ಸ್ಮಾರ್ಟ್ ಪೋನ್‌ಗಳೆಲ್ಲಿಂದ ಬರಬೇಕು ಎಂದು ಪ್ರಶ್ನೆ ಮಾಡಿ ಒಂದು ವೇಳೆ ಪೋನ್ ಇದ್ದರೂ  ನೆಟ್‌ವರ್ಕ್ ಎಲ್ಲಿದೆ ಎಂದು  ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.ಕೆಲವು ಆನ್ ಲೈನ್ ಶಿಕ್ಷಣದಲ್ಲಿ ಹಳ್ಳಿ ವಿದ್ಯಾರ್ಥಿಗಳು ಪಾಲ್ಗೊಳ್ಳುವುದು ಹೇಗೆ ಹಾಗಾಗಿ ದೇಶ ಆಳುವ ನಾಯಕರಿಗೆ ಪ್ರಾಥಮಿಕ ಜ್ಞಾನ ಇರಬೇಕು ಎಂದು ಪ್ರತಿಪಕ್ಷದ ನಾಯಕ  ಸಿದ್ದರಾಮಯ್ಯ ಟ್ವೀಟರ್​ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ : ಸಿಎಂ ಜೊತೆ ಉತ್ತಮ ಸಂಬಂಧಕ್ಕಾಗಿ ನಿರಾಣಿ ಭಿನ್ನರಿಗೆ ಇಟ್ಟರಾ ಗುರಾಣಿ ? : ಬಂಡಾಯ ಶಾಸಕರಲ್ಲಿ ಉಂಟಾಗಿದೆ ಆಕ್ರೋಶ
First published: May 31, 2020, 4:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading