ನೋಯ್ಡಾದ ಒಪ್ಪೊ ಸ್ಮಾರ್ಟ್​ಫೋನ್​ ಉತ್ಪಾದನ ಸಂಸ್ಥೆ ಸ್ಥಗಿತ; 3 ಸಾವಿರ ಉದ್ಯೋಗಿಗಳಿಗೆ ಕೊರೋನಾ ಪರೀಕ್ಷೆ

Oppo: ಎಲ್ಲಾ ಉದ್ಯೋಗಿಗಳ ಆರೋಗ್ಯ ಕಾಳಜಿಯ ಕುರಿತು ಹಾಗೂ ನಾಗರಿಕರ ಸುರಕ್ಷತೆಗಾಗಿ ನಾವು ಗ್ರೇಟರ್ ನೋಯ್ಡಾದಲ್ಲಿರುವ ಒಪ್ಪೊ ಸ್ಮಾರ್ಟ್​ಫೋನ್​ ಉತ್ಪಾದನ ಕೇಂದ್ರದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದೇವೆ. 3 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೋವಿಡ್​-19 ಪರೀಕ್ಷೆಗೆ ಒಳಪಡಿಸಲಾಗಿದ್ದು, ಫಲಿತಾಂಶಕ್ಕಾಗಿ ಕಾಯುತ್ತಿದ್ದೇವೆ ಎಂದು ಒಪ್ಪೊ ಸಂಸ್ಥೆ ಭಾನುವಾರ ಹೇಳಿಕೆ ನೀಡಿದೆ.

news18-kannada
Updated:May 18, 2020, 12:59 PM IST
ನೋಯ್ಡಾದ ಒಪ್ಪೊ ಸ್ಮಾರ್ಟ್​ಫೋನ್​ ಉತ್ಪಾದನ ಸಂಸ್ಥೆ ಸ್ಥಗಿತ; 3 ಸಾವಿರ ಉದ್ಯೋಗಿಗಳಿಗೆ ಕೊರೋನಾ ಪರೀಕ್ಷೆ
ಒಪ್ಪೊ
  • Share this:
ನವ ದೆಹಲಿ(ಮಾ.18): ನೋಯ್ಡಾ ಒಪ್ಪೊ ಸ್ಮಾಟ್​ಫೋನ್​ ಉತ್ಪಾದಿಸುತ್ತಿದ್ದ ಫ್ಯಾಕ್ಟರಿಯನ್ನು ಸ್ಥಗಿತಮಾಡಲಾಗಿದೆ. ಅಲ್ಲಿರುವ 3000 ಉದ್ಯೋಗಿಗಳನ್ನುಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಕಳೆದ ಶುಕ್ರವಾದರಂದು ಉತ್ತರ ಪ್ರದೇಶದಲ್ಲಿ ಸರ್ಕಾರದ ಅನುಮತಿ ಮೇರೆಗೆ ಅಲ್ಲಿರುವ ಶೇ.30 ರಷ್ಟು ಉದ್ಯೋಗಿಗಳನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದೆ.

ಎಲ್ಲಾ ಉದ್ಯೋಗಿಗಳ ಆರೋಗ್ಯ ಕಾಳಜಿಯ ಕುರಿತು ಹಾಗೂ ನಾಗರಿಕರ ಸುರಕ್ಷತೆಗಾಗಿ ನಾವು ಗ್ರೇಟರ್ ನೋಯ್ಡಾದಲ್ಲಿರುವ ಒಪ್ಪೊ ಸ್ಮಾರ್ಟ್​ಫೋನ್​ ಉತ್ಪಾದನ ಕೇಂದ್ರದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದೇವೆ. 3 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೋವಿಡ್​-19 ಪರೀಕ್ಷೆಗೆ ಒಳಪಡಿಸಲಾಗಿದ್ದು, ಫಲಿತಾಂಶಕ್ಕಾಗಿ ಕಾಯುತ್ತಿದ್ದೇವೆ ಎಂದು ಒಪ್ಪೊ ಸಂಸ್ಥೆ ಭಾನುವಾರ ಹೇಳಿಕೆ ನೀಡಿದೆ.

ಉದ್ಯೋಗಿಗಳಿಗೆ ಕೊರೋನಾ ನೆಗೆಟಿವ್​ ಫಲಿತಾಂಶ ಬಂದರೆ ಎಲ್ಲಾ ಸುರಕ್ಷತೆ ಮತ್ತು ಪ್ರೋಟೋಕಾಲ್​ ಆಧಾರದಲ್ಲಿ ಮತ್ತೆ ಕೆಲಸವನ್ನು ಪ್ರಾರಂಭಿಸಿಲು ಸಹಾಯ ಮಾಡುತ್ತದೆ ಎಂದು ಒಪ್ಪೊ ಹೇಳಿದೆ.

ಇದರ ಜೊತೆಗೆ ಉದ್ಯೋಗಿಗಳು ಸುರಕ್ಷಿತವಾಗಿರಲು ಮತ್ತು ಆವರಣವನ್ನು ಸೋಂಕು ನಿವಾರಣೆಗೊಳಿಸಲು ನಾವು ಕಠಿಣ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಒಪ್ಪೊ ಹೇಳಿದೆ.

ಇನ್​ಸ್ಟಾಗ್ರಾಂ ಖಾತೆಯಿಂದ ಹೊರ ಬಂದ ಕಣ್ಸನ್ನೆ ಬೆಡಗಿ ಪ್ರಿಯಾ ಪ್ರಕಾಶ್​​ ವಾರಿಯರ್; ಅಷ್ಟಕ್ಕೂ ಕಾರಣವೇನು?
First published: May 18, 2020, 12:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading