ಕೊರೋನಾ ಎಫೆಕ್ಟ್​​; ಮಡಿಕೇರಿಯಲ್ಲಿ ನಡೆದ ಮದುವೆಯಲ್ಲಿ ಭಾಗಿಯಾದವರು ಕೇವಲ 7 ಮಂದಿ

ಮದುವೆ ಸಮಾರಂಭಗಳಲ್ಲಿ ಹೆಚ್ಚು ಜನ ಭಾಗಿಯಾದರೆ ಅಂತಹವರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಸರ್ಕಾರ ಎಚ್ಚರಿಕೆ ನೀಡಿದೆ. ಹೀಗಾಗಿ ಹೆಚ್ಚು ಜನ ಸೇರಲು ಹಿಂಜರಿಯುತ್ತಿದ್ದಾರೆ.

news18-kannada
Updated:March 26, 2020, 12:44 PM IST
ಕೊರೋನಾ ಎಫೆಕ್ಟ್​​; ಮಡಿಕೇರಿಯಲ್ಲಿ ನಡೆದ ಮದುವೆಯಲ್ಲಿ ಭಾಗಿಯಾದವರು ಕೇವಲ 7 ಮಂದಿ
ಮದುವೆ
  • Share this:
ಕೊಡಗು(ಮಾ.26): ಕೊರೋನಾ ಭೀತಿ ಹೆಚ್ಚಾದ ಹಿನ್ನೆಲೆ, ದೇಶಾದ್ಯಂತ ಏಪ್ರಿಲ್​ 14ರವರೆಗೆ ಲಾಕ್​ಡೌನ್​ ಘೋಷಣೆ ಮಾಡಲಾಗಿದೆ. ಹೀಗಾಗಿ ಯಾವುದೇ ಚಟುವಟಿಕೆಗಳಿಲ್ಲದೇ ಇಡೀ ದೇಶವೇ ಸ್ತಬ್ಧವಾಗಿದೆ.  ಈ ಕೊರೋನಾ ವೈರಸ್​​ ಎಫೆಕ್ಟ್​ ಜನರ ಆರೋಗ್ಯ ಮತ್ತು ಜನಜೀವನದ ಮೇಲೆ ಮಾತ್ರವಲ್ಲದೇ, ಮದುವೆ ಸಮಾರಂಭಗಳ ಮೇಲೂ ಆಗಿದೆ. ಕೊರೋನಾ ಭೀತಿಯಿಂದಾಗಿ ಮಡಿಕೇರಿಯಲ್ಲಿ ನಡೆದ ಮದುವೆಯೊಂದರಲ್ಲಿ ಕೇವಲ 7 ಜನ ಭಾಗಿಯಾಗಿದ್ದರು.

ಹೌದು, ಮಡಿಕೇರಿಯ ರಜಿತ್ ಮತ್ತು ಕಾಸರಗೋಡು ತಾಲ್ಲೂಕಿನ ಗ್ರಾಮದವೊಂದರ ಅನುಷಾಗೆ ಇಂದು ಮದುವೆ ನಿಶ್ಚಿತವಾಗಿತ್ತು. ಸುಳ್ಯದ ಪುರಭವನದಲ್ಲಿ ಮದುವೆ ನಿಗದಿಯಾಗಿ 500 ಜನರಿಗೆ ಆಮಂತ್ರಣ ಪತ್ರಿಕೆ ನೀಡಲಾಗಿತ್ತು. ಪುರಭವನಕ್ಕೆ ಮುಂಗಡ ಹಣವಾಗಿ ಸಾವಿರಾರು ರೂಪಾಯಿಯನ್ನು ಕೊಡಲಾಗಿತ್ತು. ಅದ್ಧೂರಿ ಮದುವೆಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು.

Coronavirus: ಭಾರತದಲ್ಲಿ ಸಾವಿನ ಸಂಖ್ಯೆ 15ಕ್ಕೆ ಏರಿಕೆ; 649 ಮಂದಿಗೆ ಕೊರೋನಾ ದೃಢ

ಆದರೆ ಕೊರೋನಾ ಎಫೆಕ್ಟ್ ನಿಂದಾಗಿ ದೇಶವನ್ನು ಲಾಕ್ ಡೌನ್ ಮಾಡಿರುವುದರಿಂದ ಮದುವೆಯ ಸ್ಥಳವನ್ನು ಬದಲಾಯಿಸಲಾಗಿದೆ. ಮಡಿಕೇರಿ ನಗರದ ಹೊರ ವಲಯದಲ್ಲಿರುವ ರಾಜರಾಜೇಶ್ವರಿ ದೇವಾಲಯದಲ್ಲಿ ಕೇವಲ ಏಳು ಜನರು ಮಾತ್ರವೇ ಮದುವೆಯಲ್ಲಿ ಭಾಗವಹಿಸಿ ಮದುವೆ ನೆರವೇರಿಸಿದರು. ವಧು-ವರರ ತಂದೆತಾಯಿ ಮತ್ತು ಅರ್ಚಕರು ಮಾತ್ರವೇ ಮದುವೆಯಲ್ಲಿ ಭಾಗವಹಿಸಿದ್ದರು.

ಮದುವೆ ಸಮಾರಂಭಗಳಲ್ಲಿ ಹೆಚ್ಚು ಜನ ಭಾಗಿಯಾದರೆ ಅಂತಹವರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಸರ್ಕಾರ ಎಚ್ಚರಿಕೆ ನೀಡಿದೆ. ಹೀಗಾಗಿ ಹೆಚ್ಚು ಜನ ಸೇರಲು ಹಿಂಜರಿಯುತ್ತಿದ್ದಾರೆ.
First published:March 26, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading