ಜೊಮ್ಯಾಟೋ ಬೆನ್ನಿಗೆ 1100 ಜನ ಉದ್ಯೋಗಿಗಳನ್ನು ವಜಾ ಮಾಡಿದ ಸ್ವಿಗ್ಗಿ; ಮುಂದುವರೆದ ಕೊರೋನಾ ನಿರುದ್ಯೋಗ ಪರ್ವ

ಕಳೆದ ವರ್ಷದ ಅಕ್ಟೋಬರ್ ವೇಳೆಗೆ ತನ್ನ ವೇತನದಾರರ ಪಟ್ಟಿಯಲ್ಲಿ ಸುಮಾರು 8,000 ಉದ್ಯೋಗಿಗಳನ್ನು ಹೊಂದಿದ್ದ ಸ್ವಿಗ್ಗಿ, ಇದೀಗ ಕೆಲಸ ಕಳೆದುಕೊಳ್ಳುತ್ತಿರುವ ಎಲ್ಲಾ ಕಾರ್ಮಿಕರಿಗೆ ಮೂರು ತಿಂಗಳ ಸಂಬಳವನ್ನು ನೀಡುವುದಾಗಿಯೂ ತಿಳಿಸಿದೆ.

ಸ್ವಿಗ್ಗಿ.

ಸ್ವಿಗ್ಗಿ.

  • Share this:
ಭಾರತದ ಪ್ರಸಿದ್ಧ ಆನ್‌ಲೈನ್‌ ಆಹಾರ ಪೂರೈಕೆದಾರ ಕಂಪೆನಿಯಾದ ಸ್ವಿಗ್ಗಿ ತನ್ನ ಕಂಪೆನಿಯ 1,100 ಉದ್ಯೋಗಿಗಳನ್ನು ಅಂದರೆ ಶೇ.14ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಲು ಮುಂದಾಗಿರುವುದಾಗಿ ತಿಳಿಸಿದೆ. ಲಾಕ್‌ಡೌನ್‌ನಿಂದಾಗಿ ಆನ್‌ಲೈನ್ ಆಹಾರದ ಬೇಡಿಕೆ ತಗ್ಗಿರುವುದರಿಂದ ಈ ನಿರ್ಧಾರ ಅನಿವಾರ್ಯ ಎಂದು ಆ ಕಂಪೆನಿ ತಿಳಿಸಿದೆ.

ಈ ಕುರಿತು ಮಾತನಾಡಿರುವ ಸ್ವಿಗ್ಗಿ ಸಂಸ್ಥೆಯ ಸಹ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯ ನಿರ್ವಾಹಕ ಶ್ರೀಹರ್ಷ, “ಲಾಕ್‌ಡೌನ್‌ನಿಂದಾಗಿ ದೇಶದಲ್ಲಿ ಪ್ರಮುಖ ಆಹಾರ ವಿತರಣಾ ವ್ಯವಹಾರ ತೀವ್ರವಾಗಿ ಕುಸಿತ ಕಂಡಿದೆ. ಇದು ಅಲ್ಪಾವಧಿಯ ಪರಿಣಾಮವಾಗಿದ್ದು, ಭವಿಷ್ಯದಲ್ಲಿ ಉದ್ಯಮ ಮತ್ತೆ ಬೆಳೆಯುವ ನಿರೀಕ್ಷೆ ಇದೆ” ಎಂದು ತಿಳಿಸಿದ್ದಾರೆ.

“ಭಾರತದ ಪ್ರಸಿದ್ಧ ಸ್ಟಾರ್ಟ್ಅಪ್‌ಗಳಲ್ಲಿ ಒಂದಾದ ಸ್ವಿಗ್ಗಿ, ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ನೌಕರರನ್ನು ವಜಾಗೊಳಿಸುತ್ತಿದೆ ಮತ್ತು ಈ ಅವಧಿಯಲ್ಲಿ ಉದ್ಯಮವನ್ನು ಮತ್ತಷ್ಟು ಬಲಿಷ್ಠಗೊಳಿಸಲು ಪ್ತಯತ್ನಿಸಲಾಗುವುದು. ಈವರೆಗೆ 1.3 ಬಿಲಿಯನ್ ಭಾರತೀಯರಿಗೆ ಸ್ವಿಗ್ಗಿ ಸೇವೆ ಸಲ್ಲಿಸಿದೆ” ಎಂದು ಅವರು ಮಾಹಿತಿ ನೀಡಿದ್ದಾರೆ.

ಕೊರೋನಾ ಹರಡದಂತೆ ತಡೆಯುವ ಸಲುವಾಗಿ ಭಾರತದಲ್ಲಿ ಸತತವಾಗಿ ಎರಡು ತಿಂಗಳ ಕಾಲ ಲಾಕ್‌ಡೌನ್ ಘೋಷಿಸಲಾಗಿದೆ. ಈ ಹಂತದಲ್ಲಿ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಹೀಗಾಗಿ ರೆಸ್ಟೋರೆಂಟ್‌ಗಳನ್ನೇ ನಂಬಿ ಉದ್ಯಮ ಕಟ್ಟಿದ್ದ ಸ್ವಿಗ್ಗಿ ಇದೀಗ ಸಂಕಷ್ಟಕ್ಕೆ ಒಳಗಾಗಿದೆ. ಈ ನಡುವೆ ಜೊಮ್ಯಾಟೋ ದಂತಹ ಪ್ರತಿಸ್ಪರ್ಧಿ ಕಂಪೆನಿಗಳೂ ಸಹ ಸ್ವಿಗ್ಗಿಗೆ ಸಾಕಷ್ಟು ಹಾನಿ ಉಂಟುಮಾಡಿದೆ ಎನ್ನಲಾಗಿದೆ.

ಕಳೆದ ವರ್ಷದ ಅಕ್ಟೋಬರ್ ವೇಳೆಗೆ ತನ್ನ ವೇತನದಾರರ ಪಟ್ಟಿಯಲ್ಲಿ ಸುಮಾರು 8,000 ಉದ್ಯೋಗಿಗಳನ್ನು ಹೊಂದಿದ್ದ ಸ್ವಿಗ್ಗಿ, ಇದೀಗ ಕೆಲಸ ಕಳೆದುಕೊಳ್ಳುತ್ತಿರುವ ಎಲ್ಲಾ ಕಾರ್ಮಿಕರಿಗೆ ಮೂರು ತಿಂಗಳ ಸಂಬಳವನ್ನು ನೀಡುವುದಾಗಿಯೂ ತಿಳಿಸಿದೆ.

ಇನ್ನೂ ಜೊಮ್ಯಾಟೋ ಸಹ ಕಳೆದ ಶುಕ್ರವಾರ ತನ್ನ ಕಂಪೆನಿಯ 500 ಉದ್ಯೋಗಿಗಳನ್ನು ಅಂದರೆ ಒಟ್ಟು ಉದ್ಯೋಗಿಗಳ ಪೈಕಿ ಶೇ.13 ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡುವುದಾಗಿ ತಿಳಿಸಿತ್ತು. ಕೊರೋನಾದಿಂದ ದಿನನಿತ್ಯ ದೇಶದಲ್ಲಿ ಕೆಲಸ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಏರುತ್ತಲೇ ಇದೆ.

ಇದನ್ನೂ ಓದಿ : ‘ಅಮೆರಿಕಾದಲ್ಲಿ ಕೊರೋನಾ ಪಾಸಿಟಿವ್​​ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದೆ‘ - ಅಧ್ಯಕ್ಷ ಡೊನಾಲ್ಡ್​ ಟ್ರಂಪ್​​
First published: