ಕೊಡಗಿನಲ್ಲಿ ಮಾರಕ ಕೊರೋನಾಗೆ ಎರಡನೇ ಬಲಿ: ಸೋಂಕಿತರ ಸಂಖ್ಯೆ 156ಕ್ಕೆ ಏರಿಕೆ

ಬೆಂಗಳೂರಿಂದ ಕೊಡಗು ಜಿಲ್ಲೆಗೆ ಬಂದ ವ್ಯಕ್ತಿಗೆ ಬಂದ ಜ್ವರದಿಂದ ಬಳಲುತ್ತಿದ್ದ ವ್ಯಕ್ತಿಗೂ ಕೊರೋನಾ ಕಾಣಿಸಿಕೊಂಡಿದೆ. ಇದುವರೆಗೂ ಕೊಡಗಿನಲ್ಲಿ ಒಟ್ಟು ಕೊರೋನಾ ಪೀಡಿತರ ಸಂಖ್ಯೆ 156 ಆಗಿದೆ.

news18-kannada
Updated:July 12, 2020, 11:12 AM IST
ಕೊಡಗಿನಲ್ಲಿ ಮಾರಕ ಕೊರೋನಾಗೆ ಎರಡನೇ ಬಲಿ: ಸೋಂಕಿತರ ಸಂಖ್ಯೆ 156ಕ್ಕೆ ಏರಿಕೆ
ಸಾಂದರ್ಭಿಕ ಚಿತ್ರ
  • Share this:
ಕೊಡಗು(ಜು.12): ರಾಜ್ಯದ ವಿವಿಧ ಜಿಲ್ಲೆಗಳಂತೆಯೇ ಕೊಡಗಿನಲ್ಲೂ ಕೊರೋನಾ ವೈರಸ್​ ಹಾವಳಿ ಮುಂದುವರಿದಿದೆ. ಇದರ ಪರಿಣಾಮ ಕೋವಿಡ್​-19 ವೈರಸ್​​ಗೆ ಜಿಲ್ಲೆಯಲ್ಲಿ ಮತ್ತೊಬ್ಬರು ಬಲಿಯಾಗಿದ್ದಾರೆ. ವಿರಾಜಪೇಟೆ ತಾಲೂಕಿನ ಗೋಣಿಕೊಪ್ಪದ ಅಚ್ಚಪ್ಪ ಬಡಾವಣೆಯ 86 ವರ್ಷದ ವೃದ್ಧೆ ಸಾವನ್ನಪ್ಪಿದ್ದಾರೆ.

ಜುಲೈ 6ನೇ ತಾರೀಕಿನಂದು ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದ ವೃದ್ಧೆಯನ್ನು ಮಡಿಕೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಮಾರನೇ ದಿನ ಏಳರಂದು ವೃದ್ದೆಗೆ ಕೊರೋನಾ ಇರುವುದು ದೃಢಪಟ್ಟಿತ್ತು. ತೀರ ಗಂಭೀರ ಸ್ಥಿತಿಯಲ್ಲಿದ್ದ ಮಹಿಳೆಗೆ ವೆಂಟಿಲೇಟರ್​​ನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು.

ವೃದ್ದೆಗೆ ಹಲವು ವರ್ಷಗಳಿಂದ ಅಧಿಕ ರಕ್ತದೊತ್ತಡ, ಮಧುಮೇಹ ಕಾಯಿಲೆಗಳು ಇದ್ದಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ರಾತ್ರಿ ಮೃತಪಟ್ಟಿದ್ದಾರೆ. ಹೀಗಾಗಿ ಡೆಡ್ಲಿ ವೈರಸ್ ಕೊರೋನಾ ಮಹಾಮಾರಿಗೆ ಕೊಡಗಿನಲ್ಲಿ ಇದು ಎರಡನೆ ಬಲಿ ಆಗಿದೆ. ಮೃತ ವೃದ್ದೆಯ ಅಂತ್ಯ ಸಂಸ್ಕಾರವು ಸರ್ಕಾರದ ಮಾರ್ಗಸೂಚಿಯಂತೆ ನಿಗದಿತ ಸ್ಮಶಾನದಲ್ಲಿ ನಡೆಸಲು ಜಿಲ್ಲಾಡಳಿತ ನಿರ್ಧರಿಸಿದೆ.

ಇನ್ನು, ಜಿಲ್ಲೆಯಲ್ಲಿ ಕೊರೋನಾ ಆರ್ಭಟ ಮುಂದುವರೆದಿದ್ದು, ಜಿಲ್ಲೆಯಲ್ಲಿ ಮತ್ತೆ ಶನಿವಾರ ಐದು ಜನರಿಗೆೆ ಸೋಂಕು ಕಾಣಿಸಿಕೊಂಡಿದೆ. ಅದರಲ್ಲೂ ಕೊರೋನಾ ವಾರಿಯರ್ಸ್​ ಎಂದೇ ಕರೆಯುವ ಆರೋಗ್ಯ ಕಾರ್ಯಕರ್ತರಿಗೆ ಬೆಂಬಿಡದೇ ಕೊರೋನಾ ಪದೇಪದೇ ಕಾಡುುತ್ತಿದೆ. ಹೀಗಾಗಿ ಮೂವರು ಆರೋಗ್ಯ ಕಾರ್ಯಕರ್ತೆಯರಿಗೆ ಸೋಂಕು ಬಂದಿದೆ.

ಬೆಂಗಳೂರಿಂದ ಕೊಡಗು ಜಿಲ್ಲೆಗೆ ಬಂದ ವ್ಯಕ್ತಿಗೆ ಬಂದ ಜ್ವರದಿಂದ ಬಳಲುತ್ತಿದ್ದ ವ್ಯಕ್ತಿಗೂ ಕೊರೋನಾ ಕಾಣಿಸಿಕೊಂಡಿದೆ. ಇದುವರೆಗೂ ಕೊಡಗಿನಲ್ಲಿ ಒಟ್ಟು ಕೊರೋನಾ ಪೀಡಿತರ ಸಂಖ್ಯೆ 156 ಆಗಿದೆ.

ಒಂದೆಡೆ ಕೊರೋನಾಗೆ ಬಲಿಯಾಗುವರ ಸಂಖ್ಯೆ ಹೆಚ್ಚುತ್ತಲೇ ಇದ್ದರೂ, ಇನ್ನೊಂದೆಡೆ ಸಾವಿನ ಪ್ರಮಾಣ ರಾಜ್ಯದಲ್ಲಿ ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಇದೆ. ಶೇಕಡ 1.69 ಇದೆ. ಮರಣ ಪ್ರಮಾಣ ಕಡಿಮೆ ಮಾಡುವಲ್ಲಿ ಕರ್ನಾಟಕ ಉತ್ತಮ ಯಶಸ್ಸು ಸಾಧಿಸಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್​​​​ ಮಾಧ್ಯಮದ ಜತೆ ತಿಳಿಸಿದ್ದಾರೆ.
ಇದನ್ನೂ ಓದಿ: ಕೋವಿಡ್​-19 ಮರಣ ಪ್ರಮಾಣ ಕಡಿಮೆ ಮಾಡುವಲ್ಲಿ ಕರ್ನಾಟಕ ಯಶಸ್ಸು - ಸಚಿವ ಡಾ. ಕೆ ಸುಧಾಕರ್​​

ಈ ನಡುವೆಯೇ ಮಾರಣಾಂತಿಕ ಕೊರೋನಾ ಸೋಂಕು ರಾಜ್ಯ ರಾಜಧಾನಿಯಲ್ಲಿ ದಿನೇ ದಿನೇ ಅಧಿಕವಾಗುತ್ತಿದ್ದು, ಇದನ್ನು ನಿಯಂತ್ರಿಸುವ ಹಾಗೂ ಸಾಮೂದಾಯಿಕವಾಗಿ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಮತ್ತೆ ಒಂದು ವಾರಗಳ ಕಾಲ ಲಾಕ್‌ಡೌನ್‌ ಘೋಷಣೆ ಮಾಡಿದೆ.
Published by: Ganesh Nachikethu
First published: July 12, 2020, 11:12 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading