ಆಟೋ ಚಾಲಕರ ಸಹಾಯಧನ ಅರ್ಜಿ ಹಾಕಲು ಮತ್ತೊಂದು ಅವಕಾಶ ; ಇಲ್ಲಿಯವರೆಗೆ ಎಷ್ಟು ಅರ್ಜಿ ಬಂದಿದೆ, ಎಷ್ಟು ಹಣ ಚಾಲಕರ ಕೈ ಸೇರಿದೆ‌ ಗೊತ್ತಾ?

ಈಗಾಗಲೇ ಆಟೋ ಚಾಲಕರು ಸೇವಾ ಸಿಂಧು ಆಪ್ ನಲ್ಲಿ ನೊಂದಣಿ ಮಾಡಿಸಿದ್ದಾರೆ. ಆದರೆ, ಇದರ ಪ್ರಮಾಣ ತುಂಬ ಕಡಿಮೆಯಿದೆ. ಇದರ ಹಿನ್ನೆಲೆ ಸಾರಿಗೆ ಇಲಾಖೆ ಅರ್ಜಿ ಸಲ್ಲಿಸುವ ದಿನಾಂಕವನ್ನು ಜುಲೈ 31ರ ವರೆಗೆ ವಿಸ್ತರಿಸಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು(ಜುಲೈ.09): ಆಟೋ, ಟ್ಯಾಕ್ಸಿ ಚಾಲಕರೇ ಕೊರೋನಾ‌ ಸಂಕಷ್ಟ ಹಿನ್ನೆಲೆ ಸರ್ಕಾರ ನೀಡುವ ಪರಿಹಾರ ಧನ ನೀವು ಸ್ವೀಕರಿಸಿಲ್ಲವೇ? ಇನ್ನೂ ನೀವು ಅರ್ಜಿ ಹಾಕಿಲ್ಲವಾದ್ರೆ ನಿಮಗೆ ಮತ್ತೊಂದು ಅವಕಾಶವಿದೆ. ಜುಲೈ 31 ರವರೆಗೆ ಅರ್ಜಿ ಸಲ್ಲಿಸಬಹುದು.

ಕೊರೋನಾ‌ ಸೋಂಕು ಹೆಚ್ಚಳವಾಗುತ್ತಿದ್ದಂತೆ ಲಾಕ್ ಡೌನ್ ಮಾಡಲಾಯಿತು. ಇದರಿಂದ ಇಡೀ ದೇಶದ ಅರ್ಥಿಕ‌ ಪರಿಸ್ಥಿತಿಯೇ ಸ್ತಬ್ದಗೊಂಡಿತು. ಆಗ ರಾಜ್ಯ ಸರ್ಕಾರ ಆಟೋ,‌ ಟ್ಯಾಕ್ಸಿ ಚಾಲಕರಿಗೆ ಪರಿಹಾರ ಧನವಾಗಿ ತಲಾ ಒಬ್ಬ ಆಟೋ ಚಾಲಕರಿಗೆ ಐದು ಸಾವಿರ ನೀಡಲು ನಿರ್ಧರಿಸಿತು. ಅದರ ಹಿನ್ನೆಲೆ ಈಗಾಗಲೇ ಆಟೋ ಚಾಲಕರು ಸೇವಾ ಸಿಂಧು ಆಪ್ ನಲ್ಲಿ ನೊಂದಣಿ ಮಾಡಿಸಿದ್ದಾರೆ. ಆದರೆ, ಇದರ ಪ್ರಮಾಣ ತುಂಬ ಕಡಿಮೆಯಿದೆ. ಇದರ ಹಿನ್ನೆಲೆ ಸಾರಿಗೆ ಇಲಾಖೆ ಅರ್ಜಿ ಸಲ್ಲಿಸುವ ದಿನಾಂಕವನ್ನು ಜುಲೈ 31ರ ವರೆಗೆ ವಿಸ್ತರಿಸಿದೆ ಎಂದು ಸಾರಿಗೆ ಆಯುಕ್ತ ಎನ್ ಶಿವಕುಮಾರ್ ತಿಳಿಸಿದ್ದಾರೆ.

ರಾಜ್ಯದಲ್ಲಿ  ಒಟ್ಟು 8 ಲಕ್ಷ  ಆಟೋ, ಟ್ಯಾಕ್ಸಿ ಚಾಲಕರಿದ್ದಾರೆ. ಇಲ್ಲಿಯವರೆಗೂ ಸೇವಾಸಿಂಧು ಪೋರ್ಟಲ್‌ ನಲ್ಲಿ ಕೇವಲ 2.40 ಲಕ್ಷ ಚಾಲಕರು ಅಪ್ಲಿಕೇಶನ್ ಹಾಕಿದ್ದಾರೆ. ಉಳಿದ 5.60 ಲಕ್ಷ ಚಾಲಕರು ಅಪ್ಲಿಕೇಶನ್ ಹಾಕಿಲ್ಲ. ರಾಜ್ಯದಲ್ಲಿ ಅಪ್ಲಿಕೇಶನ್ ಹಾಕದ ಲಕ್ಷಾಂತರ ಚಾಲಕರಿದ್ದಾರೆ. ಇವರೆಲ್ಲ ಅರ್ಜಿ ಸಲ್ಲಿಸಲು ಇನ್ನೊಂದು ತಿಂಗಳು ವಿಸ್ತರಣೆ ಮಾಡಿದೆ. ಇದುವರೆಗೂ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಸಿಕೊಂಡು ಫಲಾನುಭವಿ ಪಡೆದವರ ಸಂಖ್ಯೆ ಎರಡು ಲಕ್ಷ‌ ಮೀರಿಲ್ಲ. ಸಾರಿಗೆ ಇಲಾಖೆಯಿಂದ ಒಟ್ಟು 1.20 ಲಕ್ಷ ಚಾಲಕರಿಗೆ ಪರಿಹಾರ ಹಣ ಕೈ ಸೇರಿದೆ. ಉಳಿದ ಚಾಲಕರಿಗೆ ಹಣ ವರ್ಗಾವಣೆ ಕಾರ್ಯ ಇನ್ನೂ ಪ್ರಗತಿಯಲ್ಲಿದೆ.

ಕೊವಿಡ್‌ ಸಂಕಷ್ಟದಲ್ಲಿ ದಿನನಿತ್ಯ ಜೀವನ ನಡೆಸುವುದು ಆಟೋ, ಟ್ಯಾಕ್ಸಿ ಚಾಲಕರಿಗೆ ಕಷ್ಟವಾಗಿದೆ. ಲಾಕ್ ಡೌನ್ ಸಂದರ್ಭದಲ್ಲಿಯಂತೂ ಇವರ ಪರಿಸ್ಥಿತಿ ಹೇಳತೀರದು. ಲಾಕ್ ಡೌನ್ ಸಡಲಿಕೆ ಬಳಿಕ ಜನರು ಹೊರಗಡೆ ಬರುವವರ ಸಂಖ್ಯೆ ಕಡಿಮೆ. ಬಂದರೂ ಆಟೋ, ಟ್ಯಾಕ್ಸಿಯಂಥ ಸಾರ್ವಜನಿಕ ವಾಹನಗಳಲ್ಲಿ ಹಿಂದೇಟು ಹಾಕುತ್ತಿದಾರೆ.

ಇಡೀ ದಿ‌ನ ಆಟೋ ನಿಲ್ಲಿಸಿದರೂ 200 ರೂಪಾಯಿ ಕಲೆಕ್ಷನ್ ಆಗುತ್ತಿಲ್ಲ. ಸರ್ಕಾರ ಏನೋ ಒಂದು ಸಹಾಯ ಮಾಡುತ್ತಿದೆ ಎಂದುಕೊಂಡರೆ ಅದೂ ಆಗುತ್ತಿಲ್ಲ. ಎಲ್ಲ ಅರ್ಜಿ‌ ಸಲ್ಲಿಸಿ ತಿಂಗಳಾದರೂ ಇನ್ನೂ ಸರ್ಕಾರದಿಂದ ಐದು ಸಾವಿರ ಪರಿಹಾರ ಹಣ ಸಿಕ್ಕಿಲ್ಲ ಎಂದು ರಾಜಾಜಿನಗರದ ಆಟೋ ಚಾಲಕರು ತಮ್ಮ ಅಳಲು ತೋಡಿಕೊಳ್ಳುತ್ತಾರೆ‌.

ಇದನ್ನೂ ಓದಿ : ಕುಕ್ಕರ್ ವಿಚಾರದಲ್ಲಿ ಆಣೆ, ಪ್ರಮಾಣಕ್ಕೆ ಸಿದ್ಧ ; ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​ಗೆ ಸಚಿವ ರಮೇಶ್ ಜಾರಕಿಹೊಳಿ ಸವಾಲ್..!

ಸರ್ಕಾರ ದಿಂದ ಮೊದಲನೇ ಹಂತದಲ್ಲಿ 20 ಕೋಟಿ ಹಾಗೂ ಎರಡನೇ ಹಂತದಲ್ಲಿ 40 ಕೋಟಿ ಹಣ ಬಿಡುಗಡೆಯಾಗಿದೆ. ಹಂತ ಹಂತವಾಗಿ ಅನುದಾನ ಬಿಡುಗಡೆಯಾಗಿದ್ದರಿಂದ ತಡವಾಗಿರುವ ಸಾಧ್ಯತೆಯಿದೆ.

ಇನ್ನು ಅರ್ಜಿ‌ಸಲ್ಲಿಸಿದವರ ಸಂಖ್ಯೆಯಲ್ಲಿ ಅರ್ಧದಷ್ಟು ಇಲ್ಲ.‌ ಇದರಿಂದ ಅರ್ಜಿ ಸಲ್ಲಿಸಲು ಇನ್ನೊಂದು ತಿಂಗಳು ವಿಸ್ತರಣೆಯಾಗಿದ್ದು ಇದುವರೆಗೂ ಅರ್ಜಿ ಸಲ್ಲಿಸಲು ಆಗದೇ ಇರುವ ರಾಜ್ಯದ ಆಟೋ, ಟ್ಯಾಕ್ಸಿ ಚಾಲಕರು ಅರ್ಜಿ ಸಲ್ಲಿಸಲು ಅವಕಾಶ ಮಿಸ್ ಮಾಡ್ಕೋಬೇಡಿ‌.
Published by:G Hareeshkumar
First published: