Coronavirus: ಕೊರೋನಾ ಸೋಂಕಿಗೆ ವಿದೇಶದಲ್ಲಿ ಮೊದಲ ಭಾರತೀಯ ಸಾವು

ಇತ್ತೀಚೆಗೆ ಕೋರೋನಾ ಸೋಂಕು ದೃಢಪಟ್ಟ ಈತನನ್ನು ಪ್ರತ್ಯೇಕ ವಾರ್ಡ್‌ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೀಗ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ ಎಂದು ಇರಾನ್ ವಿದೇಶಾಂಗ ಕಚೇರಿ ಮೂಲಗಳು ತಿಳಿಸಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ನವದೆಹಲಿ(ಮಾ.19): ಜಗತ್ತಿನಾದ್ಯಂತ ಕೊರೊನಾ ವೈರಸ್‌ಗೆ ಇಲ್ಲಿಯವರೆಗೂ 9 ಸಾವಿರ ಮಂದಿ ಸಾವನ್ನಪ್ಪಿದ್ದಾರೆ. ಭಾರತದಲ್ಲಿ ಇಂದು ನಾಲ್ಕನೇ ಸಾವು ಸಂಭವಿಸಿದ್ದು, ಪಂಜಾಬ್​​​ ಮೂಲದ ವೃದ್ದನೋರ್ವ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಈ ಮಧ್ಯೆ ವಿದೇಶದಲ್ಲಿ  ಮೊದಲ ಭಾರತೀಯ ಕೊರೊನಾಗೆ ಬಲಿಯಾಗಿದ್ದಾನೆ ಎನ್ನಲಾಗಿದೆ. ಈಗಾಗಲೇ ಕೊರೋನಾಗೆ ತತ್ತರಿಸಿರುವ ಇರಾನ್​ನಲ್ಲಿ ಭಾರತೀಯನೋರ್ವ ಈ ಸೋಂಕಿನಿಂದ ಮೃತಪಟ್ಟಿದ್ದಾನೆ ಎಂದು ಪಿಟಿಐ ವರದಿ ಮಾಡಿದೆ.  ಇತ್ತೀಚೆಗೆ ಕೋರೋನಾ ಸೋಂಕು ದೃಢಪಟ್ಟ ಈತನನ್ನು ಪ್ರತ್ಯೇಕ ವಾರ್ಡ್‌ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೀಗ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ ಎಂದು ಇರಾನ್ ವಿದೇಶಾಂಗ ಕಚೇರಿ ಮೂಲಗಳು ತಿಳಿಸಿವೆ.

  ಸದ್ಯ ಭಾರತದಲ್ಲಿ 197ಕ್ಕೂ ಅಧಿಕ ಕೊರೊನಾ ಕೇಸ್‌ಗಳ ದಾಖಲಾಗಿದೆ. ಮಹಾರಾಷ್ಟ್, ಕೇರಳ, ಹರಿಯಾಣ, ಉತ್ತರ ಪ್ರದೇಶ, ದೆಹಲಿ, ಲಡಾಖ್, ರಾಜಸ್ಥಾನ, ಕರ್ನಾಟಕ, ತೆಲಂಗಾಣ ಜಮ್ಮು-ಕಾಶ್ಮೀರ, ಉತ್ತರಾಖಂಡ್, ಆಂಧ್ರ ಪ್ರದೇಶ, ತಮಿಳುನಾಡು, ಪಂಜಾಬ್​ನಲ್ಲೂ ಹಲವರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ.

  ಇನ್ನು ಕರ್ನಾಟಕದಲ್ಲಿ ಒಟ್ಟು 15 ಜನರಲ್ಲಿ ಸೋಂಕಿ ಪತ್ತೆಯಾಗಿದೆ. ಅದರಲ್ಲಿ ಕಲುಬುರ್ಗಿಯಲ್ಲಿ ಒಬ್ಬ ವ್ಯಕ್ತಿ ನಿಧನರಾಗಿದ್ದರು. ಉಳಿದ 14 ಜನರನ್ನು ಪ್ರತ್ಯೇಕ ಕೊಠಡಿಯಲ್ಲಿರಿಸಿ ನಿಗಾ ವಹಿಸಲಾಗಿದೆ.
  First published: