ಕೋವಿಡ್ ಸಂದರ್ಭದಲ್ಲಿ ಆನ್ ಲೈನ್ ಕ್ಲಾಸ್ ಸಂಕಷ್ಟ ; ಅಂದು ಕೊಂಡಷ್ಟು ಸುಲಭವಲ್ಲ ಪೋಷಕರ ಉವಾಚ

ಎಲ್ ಕೆ ಜೆ, ಯುಕೆಜಿ, ನರ್ಸರಿ ಸೇರಿದಂತೆ ಶಾಲಾ ಕಾಲೇಜು ಆಡಳಿತ ಮಂಡಳಿ ಇದೀಗ ಆನ್ ಲೈನ್‌ ಕ್ಲಾಸ್ ಮೊರೆ ಹೋಗಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು(ಜುಲೈ.10): ಕೊರೋನಾ ಸಂದರ್ಭದಲ್ಲಿ ಆನ್ ಲೈನ್ ತರಗತಿ ಅನಿವಾರ್ಯವಾಗಿ ಬಿಟ್ಟಿದೆ. ಶಾಲಾಕಾಲೇಜು ತೆರೆಯದ ಹಿನ್ನೆಲೆ ಆನ್‌ಲೈನ್ ಕ್ಲಾಸ್ ಒಪ್ಪಿಕೊಂಡ ಪೋಷಕರಿಗೆ ಆರ್ಥಿಕ ಸಂಕಷ್ಟ ತಪ್ಪುತ್ತಿಲ್ಲ. ಲ್ಯಾಪ್ ಟಾಪ್ ಬೇಕು ಇಲ್ಲವೇ ಮೊಬೈಲ್ ಆದ್ರೂ ಬೇಕೇ ಬೇಕು. ಮಧ್ಯಮ ವರ್ಗ ಹಾಗೂ ಬಡ ವರ್ಗದ ಖಾಸಗಿ ಶಾಲೆಯ ಮಕ್ಕಳ ಪರಿಸ್ಥಿತಿ ಹೇಳತೀರದು!

ಆರಂಭದ ಕೊರೋನಾ‌ ಪರಿಸ್ಥಿತಿಯಲ್ಲಿ ಜುಲೈ ತಿಂಗಳು ಶಾಲಾ ಕಾಲೇಜು ತೆರೆಯಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಕೊರೋನಾ ಪ್ರಕರಣ ಐನೂರಲ್ಲ, ಸಾವಿರ ಅಲ್ಲ, ಬದಲಾಗಿ ಎರಡು ಸಾವಿರ ಕೇಸ್ ರಾಜ್ಯದಲ್ಲಿ ದಾಖಲಾಗುತ್ತಿದೆ. ಇದರಲ್ಲಿ ಬೆಂಗಳೂರಿನಲ್ಲಿ ದಿನವೊಂದಕ್ಕೆ ಒಂದುವರೆ ಸಾವಿರ ದಾಟುತ್ತಿದೆ. ಇಂಥ ಸಂದಿಗ್ಧ ದುಸ್ಥಿತಿಯಲ್ಲಿ ಶಾಲಾ ಕಾಲೇಜು ತೆರೆಯುತ್ತಿಲ್ಲ.

ಎಲ್ ಕೆ ಜೆ, ಯುಕೆಜಿ, ನರ್ಸರಿ ಸೇರಿದಂತೆ ಶಾಲಾ ಕಾಲೇಜು ಆಡಳಿತ ಮಂಡಳಿ ಇದೀಗ ಆನ್ ಲೈನ್‌ ಕ್ಲಾಸ್ ಮೊರೆ ಹೋಗಿದೆ. ಕೊರೋನಾ ಕಾಲದಲ್ಲಿ ಆನ್‌ಲೈನ್ ಕ್ಲಾಸ್​ಗಳು ಸಂಕಷ್ಟವಿದೆ. ನೀವಂದುಕೊಂಡಷ್ಟು ಸುಲಭವಲ್ಲ ಆನ್ ಲೈನ್‌ ಕ್ಲಾಸ್. ವಾಸ್ತವವಾಗಿ ಬಹಳ ಸಮಸ್ಯೆ ಮಕ್ಕಳಿಗೆ, ಪೋಷಕರಿಗೆ ಎದುರಾಗುತ್ತಿದೆ. ನೆಟ್ ವರ್ಕ್ ಸಮಸ್ಯೆ, ತಾಂತ್ರಿಕ ಕಾರಣಗಳಿಗೆ ಕ್ಲಾಸಗಳನ್ನು ಹಾಜರಾಗುವುದು ಇನ್ನಷ್ಟು ಕಷ್ಟವಾಗಿದೆ. ಆನ್‌ಲೈನ್ ಕ್ಲಾಸ್ ಸಂಕಷ್ಟ ಸದ್ಯದ ಸಂಕೀರ್ಣ ಪರಿಸ್ಥಿತಿಯಲ್ಲಿ ನರ್ಸರಿ ಹಾಗೂ ಹತ್ತನೇ ತರಗತಿವರೆಗೆ ಮಕ್ಕಳಿಗೆ ಈಗಾಗಲೇ ಆನ್ ಲೈನ್ ಕ್ಲಾಸ್ ಶುರುವಾಗಿದೆ. ಆದರೆ ಕ್ಲಾಸ್ ಗೆ ಬಹುತೇಕರು ಮೊಬೈಲ್ ನಲ್ಲಿ ಆನ್ ಲೈನ್ ಕ್ಲಾಸ್ ಹಾಜರಾಗುತ್ತಿದ್ದಾರೆ.

ಉಳ್ಳವರ ಮನೆಯವರು ಮಾತ್ರ ಲ್ಯಾಪ್ ಟಾಪ್ ಬಳಕೆ ಮಾಡಿದರೆ, ಉಳಿದವರೆಲ್ಲ ಮೊಬೈಲ್ ನಲ್ಲಿ ಆನ್ ಲೈನ್‌ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ. ಒಂದೇ ಮನೆಯಲ್ಲಿ ಇಬ್ಬರು, ಮೂವರು ಮಕ್ಕಳು ಇದ್ದರೆ ಅವರಿಗೆ ದಿನದಲ್ಲಿ ಗರಿಷ್ಟ ನಾಲ್ಕು ಪ್ರತ್ಯೇಕ ತರಗತಿಗಳಿರುತ್ತವೆ. ಇವರು ಕ್ಲಾಸ್ ಹಾಜರಾಗಲು ಏನು ಮಾಡಬೇಕು? ಇವರ ಪೋಷಕರು ಸಾಲ ಮಾಡಿಯಾದರೂ ಎರಡು-ಮೂರು ಮೊಬೈಲ್ ಖರೀದಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಒಂದೇ ವೇಳೆಯಲ್ಲಿಯೇ ಆನ್ ಲೈನ್‌ ಕ್ಲಾಸ್​‌ ಇರುವುದರಿಂದ ಮೊಬೈಲ್ ಖರೀದಿ ಅನಿವಾರ್ಯ.

ಆನ್ ಲೈನ್‌ ಕ್ಲಾಸ್ ಗೆ ಪೋಷಕರ ಪೋನ್ ಕೊಟ್ಟರೆ ನಾಲ್ಕು ಗಂಟೆ ಕ್ಲಾಸ್ ಬ್ಯುಸಿಯಾಗಿರುತ್ತೆ. ಮನೆಯಲ್ಲಿ ಪೋಷಕರ ಫೋನ್ ಕಿರಿಕಿರಿ ಜಾಸ್ತಿಯೂ ಆಗುತ್ತಿದೆ‌. ನಮ್ಮ ಮನೆಯಲ್ಲಿ ಒಬ್ಬೇ ಮಗಳು ಇರುವುದು. ಅವರಿಗೆ ಒಂದು ಮೊಬೈಲ್ ಖರೀದಿಸಿದ್ದೇವೆ. ಆದರೆ ಎಲ್ಲರೂ ಖರೀಸಲು ಕಷ್ಟವಾಗುತ್ತದೆ ಎಂಬುದು ಕುರುಬರಹಳ್ಳಿ ನಿವಾಸಿ, ಪೋಷಕ ಶಿವಣ್ಣ ಅವರ ಅಭಿಪ್ರಾಯ.

ಇಲ್ಲಿಯವರೆಗೆ ದೊಡ್ಡ ಬೋರ್ಡ್ ನಲ್ಲಿ ಕಲಿತ ಮಕ್ಕಳಿಗೆ ಇದೀಗ ಪುಟ್ಟ ಪರದೆಯ ಮೊಬೈಲ್ ಆಧಾರವಾಗಿದೆ. ನಿರಂತರ ಆನ್ ಲೈನ್ ಕ್ಲಾಸ್ ಗಳಿಂದ ಇನ್ನಿಲ್ಲಿದ ಕಿರಿಕಿರಿ, ಮಕ್ಕಳಿಗೆ ತೊಂದರೆಯಾಗುತ್ತಿದೆ. ಕಣ್ಣಿನ ಸಮಸ್ಯೆ, ಹೆಚ್ಚು ಹೊತ್ತು ಇಯರ್ ಫೋನ್‌ ಬಳಕೆಯಿಂದ ಕಿವಿ ಸಮಸ್ಯೆ ಕೂಡ ಹೆಚ್ಚಾಗುತ್ತಿದೆ.

ಇದನ್ನೂ ಓದಿ :  ಸ್ಮಶಾನದಲ್ಲಿ ಹೊಸ ಕಾರಿನ ಚಾಲನಾ ಸಮಾರಂಭ ; ಮೂಢ ನಂಬಿಕೆ ವಿರುದ್ಧ ಶಾಸಕ ಸತೀಶ್ ಜಾರಕಿಹೊಳಿ ಮತ್ತೊಂದು ಹೆಜ್ಜೆ...!

ಮೊಬೈಲ್ ನಲ್ಲಿ ಪಿಡಿಎಫ್ ಫೈಲ್ ನೋಡುವುದು ಇನ್ನೂ ಕಷ್ಟ. ಮೊದಲೆಲ್ಲ ನಾವೇ ಮಕ್ಕಳಿಗೆ ಮೊಬೈಲ್ ಕೊಡುತ್ತಿದ್ದಿಲ್ಲ‌. ಇದೀಗ ನಾವೇ ಆನ್ ಲೈನ್‌ ಕ್ಲಾಸ್‌ ಹೆಸರಿನಲ್ಲಿ ಹೆಚ್ಚು ಕೊಡುತ್ತಿದ್ದೇವೆ ಎಂದು ಬೆಂಗಳೂರಿನ ಹೊಸಕೆರೆಹಳ್ಳಿ ನಿವಾಸಿ, ಗೃಹಿಣಿ ಗಾಯತ್ರಿ‌ ಯುವರಾಜ್ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಒಟ್ಟಿನಲ್ಲಿ ಮಕ್ಕಳಿಗೆ ಆನ್ ಲೈನ್ ಪಾಠಕ್ಕೆ, ಪೋಷಕರಿಗೆ ಪರದಾಟ ಎಂಬಂತಾಗಿದೆ ಈ ಆನ್ ಲೈನ್ ಶಿಕ್ಷಣ. ಹೈಕೋರ್ಟ್ ಮೊನ್ನೆ ಸರ್ಕಾರದ ಆದೇಶವನ್ನ ತಡೆ ಹಿಡಿದ ಬಳಿಕ ಆನ್ ಲೈನ್ ಶಿಕ್ಷಣಕ್ಕೆ ಸಮ್ಮಿತಿ ನೀಡಿದೆ. ಇದರ ಬೆನ್ನಲ್ಲೇ, ಲ್ಯಾಪ್ ಟಾಪ್, ಫೋನ್, ನೆಟ್ ಹೆಚ್ಚುವರಿ ಹೊರೆ, ಪೋಷಕರ ಮೇಲೆ ಬಿದ್ದಿದೆ. ಇದೆಲ್ಲವನ್ನು ಸಿದ್ದಪಡಿಸಿಕೊಳ್ಳಲು, ಆರ್ಥಿಕ ಸಮಸ್ಯೆಯಾಗ್ತಿದೆ. ಒಡವೆ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನ ಅಡವಿಟ್ಟು, ಮಕ್ಕಳಿಗೆ ಆನ್ ಲೈನ್ ಶಿಕ್ಷಣ ಕೊಡಿಸಲಾಗುತ್ತಿದೆ.
Published by:G Hareeshkumar
First published: