ಓಮೈಕ್ರಾನ್ (Omicron Variant) ಕೊರೋನಾ ವೈರಸ್ (Corona Virus) ರೂಪಾಂತರವು ಡೆಲ್ಟಾ (Delta Variant) ಗಿಂತ ಹೆಚ್ಚು ಪ್ರಬಲವಾಗಿದ್ದು ತೀವ್ರವಾಗಿ ಹರಡುತ್ತಿದೆ ಹಾಗೂ ಲಸಿಕೆ (Corona Vaccine Double Dose) ಕೂಡ ಇದರ ಮೇಲೆ ಪರಿಣಾಮ ಬೀರುವಲ್ಲಿ ಅಷ್ಟೊಂದು ಯಶಸ್ವಿಯಾಗಿಲ್ಲ ಎಂಬ ಮಾಹಿತಿಯನ್ನು ವಿಶ್ವ ಆರೋಗ್ಯ ಸಂಸ್ಥೆ (WHO world health organization) ತಿಳಿಸಿದ್ದು ತೀವ್ರವಾದ ರೋಗಲಕ್ಷಣಗಳನ್ನುಂಟು ಮಾಡಲಿದೆ ಎಂದು ಹೇಳಿದೆ. ಈ ವರ್ಷದ ಆರಂಭದಲ್ಲಿ ಭಾರತದಲ್ಲಿ ಮೊದಲು ಗುರುತಿಸಲಾದ ಡೆಲ್ಟಾ ರೂಪಾಂತರವು ಪ್ರಪಂಚದ ಹೆಚ್ಚಿನ ಕರೋನ ವೈರಸ್ ಸೋಂಕುಗಳಿಗೆ ಕಾರಣವಾಗಿದೆ.
ಆದರೆ ಹೆಚ್ಚಿನ ಸಂಖ್ಯೆಯ ಓಮೈಕ್ರಾನ್ ರೂಪಾಂತರಗಳು ಪತ್ತೆಯಾಗಿದ್ದ ದಕ್ಷಿಣ ಆಫ್ರಿಕಾದಲ್ಲಿ ಪ್ರಯಾಣ ನಿಷೇಧವನ್ನು ವಿಧಿಸಲು ಕಾರಣವಾಯಿತು ಮತ್ತು ಅದರ ಹರಡುವಿಕೆಯನ್ನು ನಿಧಾನಗೊಳಿಸಲು ದೇಶೀಯ ನಿರ್ಬಂಧಗಳನ್ನು ಮರುಪರಿಚಯಿಸಲು ಪ್ರಪಂಚದಾದ್ಯಂತದ ದೇಶಗಳನ್ನು ಪ್ರೇರೇಪಿಸಿತು.
ಡಿಸೆಂಬರ್ 9 ರ ಹೊತ್ತಿಗೆ ಓಮೈಕ್ರಾನ್ 63 ದೇಶಗಳಿಗೆ ಹರಡಿದೆ ಎಂದು WHO ಹೇಳಿದೆ. ಡೆಲ್ಟಾ ಕಡಿಮೆ ಪ್ರಚಲಿತವಿರುವ ದಕ್ಷಿಣ ಆಫ್ರಿಕಾದಲ್ಲಿ ಮತ್ತು ಡೆಲ್ಟಾ ಪ್ರಬಲವಾದ ಬ್ರಿಟನ್ನಲ್ಲಿ ವೇಗವಾಗಿ ಪ್ರಸರಣವನ್ನು ಗುರುತಿಸಲಾಗಿದೆ.
ಓಮೈಕ್ರಾನ್ನ ಪ್ರಸರಣ ದರವು ಪ್ರತಿರಕ್ಷಣಾ ಪ್ರತಿಕ್ರಿಯೆಗಳಿಗೆ ಕಡಿಮೆ ಪ್ರದರ್ಶನವನ್ನು ಹೊಂದಿದೆ ಅದೇ ರೀತಿ ಹೆಚ್ಚು ಪ್ರಸರಣ ಇಲ್ಲವೇ ಎರಡರ ಸಂಯೋಜನೆಯಿಂದ ಕೂಡಿದೆ ಎಂದು ಹೇಳಲಾಗುವುದಿಲ್ಲವೆಂದು ಸಂಸ್ಥೆ ತಿಳಿಸಿದೆ.
ಆರಂಭಿಕ ಪುರಾವೆಗಳು ಓಮೈಕ್ರಾನ್ ಸೋಂಕು ಮತ್ತು ಪ್ರಸರಣದ ವಿರುದ್ಧ ಲಸಿಕೆ ಪರಿಣಾಮಕಾರಿತ್ವದಲ್ಲಿ ಕಡಿತವನ್ನು ಉಂಟುಮಾಡುತ್ತದೆ ಎಂದು WHO ತಾಂತ್ರಿಕ ರೂಪದಲ್ಲಿ ಸಂಕ್ಷಿಪ್ತವಾಗಿ ಹೇಳಿದೆ. ಪ್ರಸ್ತುತ ಲಭ್ಯವಿರುವ ಅಂಕಿ ಅಂಶಗಳ ಪ್ರಕಾರ ಓಮೈಕ್ರಾನ್ ಡೆಲ್ಟಾ ಪ್ರಸರಣವನ್ನು ಮೀರಿ ಸಮುದಾಯದಲ್ಲಿ ಹರಡುವ ಸಾಧ್ಯತೆ ಹೆಚ್ಚಿದ್ದು ಡೆಲ್ಟಾವನ್ನು ಓಮಿಕ್ರಾನ್ ಮೀರಿಸುವ ಎಲ್ಲಾ ಸಾಧ್ಯತೆಗಳಿವೆ ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಇಲ್ಲಿಯವರೆಗೆ ಓಮೈಕ್ರಾನ್ ರೋಗಲಕ್ಷಣಗಳು ಸೌಮ್ಯವಾಗಿದ್ದು ಅನಾರೋಗ್ಯ ಅಥವಾ ಲಕ್ಷಣರಹಿತ ಪ್ರಕರಣಗಳನ್ನು ಉಂಟುಮಾಡಿದೆ ಆದರೆ ರೂಪಾಂತರದ ವೈದ್ಯಕೀಯ ತೀವ್ರತೆಯನ್ನು ಸ್ಥಾಪಿಸಲು ಈಗಿರುವ ಅಂಕಿ ಅಂಶಗಳು ಸಾಕಾಗುವುದಿಲ್ಲ ಎಂದು WHO ಹೇಳಿದೆ.
ದಕ್ಷಿಣ ಆಫ್ರಿಕಾವು ನವೆಂಬರ್ 24 ರಂದು ವಿಶ್ವ ಆರೋಗ್ಯ ಸಂಸ್ಥೆಗೆ ಓಮಿಕ್ರಾನ್ ಪ್ರಕರಣಗಳನ್ನು ವರದಿ ಮಾಡಿತ್ತು. ಫೈಜರ್/BioNTech ಲಸಿಕೆ ತಯಾರಕರು ಉಲ್ಲೇಖಿಸಿರುವಂತೆ ಲಸಿಕೆಗಳ ಮೂರು ಡೋಸ್ಗಳು ಓಮಿಕ್ರಾನ್ ವಿರುದ್ಧ ಪರಿಣಾಮಕಾರಿ ಎಂಬುದಾಗಿ ಹೇಳಿಕೊಂಡಿದ್ದಾರೆ.
ಬ್ರಿಟನ್ ಮತ್ತು ಫ್ರಾನ್ಸ್ನಂತಹ ಸಾಕಷ್ಟು ಲಸಿಕೆ ಸರಬರಾಜುಗಳನ್ನು ಹೊಂದಿರುವ ದೇಶಗಳು ಓಮಿಕ್ರಾನ್ ವಿರುದ್ಧ ಹೋರಾಡಲು ಮೂರನೇ "ಬೂಸ್ಟರ್" ಲಸಿಕೆಯನ್ನು ಸ್ವೀಕರಿಸಲು ತಮ್ಮ ಜನಸಂಖ್ಯೆಯನ್ನು ಪ್ರೋತ್ಸಾಹಿಸಿವೆ.
ಓಮೈಕ್ರಾನ್ ರೂಪಾಂತರದ ಕುರಿತು ಸಂಗ್ರಹಿಸಿರುವ ಮಾಹಿತಿಗಳು ಸಾಕಷ್ಟಿಲ್ಲವಾದ್ದರಿಂದ ಈಗಲೇ ಓಮಿಕ್ರಾನ್ ಎಷ್ಟು ಪ್ರಬಲವಾಗಿದೆ ಎಂಬುದನ್ನು ನಿರ್ಧರಿಸಲಾಗುವುದಿಲ್ಲವೆಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿತ್ತು. ಆದರೆ ಒಂದು ರೀತಿಯಲ್ಲಿ ವಿಶ್ಲೇಷಿಸುವುದಾದರೆ ಡೆಲ್ಟಾಗಿಂತ ಹೆಚ್ಚು ಪ್ರಭಾವಶಾಲಿಯಾಗಿ ಶಕ್ತಿಶಾಲಿಯಾಗಿ ಓಮೈಕ್ರಾನ್ ಸಮುದಾಯದಲ್ಲಿ ಹರಡಲಿದೆ ಎಂಬುದಾಗಿ ಕಳವಳ ವ್ಯಕ್ತಪಡಿಸಿದ್ದು ವಿಶ್ವ ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನು ಅಳವಡಿಸಿಕೊಳ್ಳಬೇಕಿದೆ ಎಂಬ ಸಂದೇಶವನ್ನು ಪರೋಕ್ಷವಾಗಿ ನೀಡಿದೆ.
ಲಸಿಕೆಗಳಿಗೂ ಬಗ್ಗದ ಶಕ್ತಿಶಾಲಿ ರೂಪಾಂತರ ಓಮಿಕ್ರಾನ್ ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆಯ ಗಂಟೆ ಬಾರಿಸಿದೆ.
ರಾಜ್ಯದಲ್ಲಿ ಮತ್ತೊಂದು ಓಮೈಕ್ರಾನ್ ಪ್ರಕರಣ ಪತ್ತೆಯಾಗಿರುವ ಮಾಹಿತಿಯನ್ನು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಇದುವರೆಗೂ ಮೂರು ಓಮೈಕ್ರಾನ್ ಪ್ರಕರಣಗಳು ಪತ್ತೆಯಾಗಿವೆ.
ಮೂರನೇ ಕೇಸ್ ಕೂಡ ಬೆಂಗಳೂರಿನಲ್ಲೇ ಪತ್ತೆಯಾಗಿರೋದು ರಾಜಧಾನಿ ಜನರನ್ನು ಬೆಚ್ಚಿಬೀಳಿಸಿದೆ. ಸೌತ್ ಆಫ್ರಿಕಾ ದಿಂದ ಬಂದ ಪ್ರಯಾಣಿಕನಿಗೆ ಒಮೈಕ್ರಾನ್ ಪಾಸಿಟಿವ್ ಕಂಡು ಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ