Omicron: ಕೋವಿಡ್ ರೂಪಾಂತರ ಓಮಿಕ್ರಾನ್ ಪ್ರಪಂಚಕ್ಕೆ ವರದಾನವಾಗಬಹುದು..! ತಜ್ಞರು ಹೀಗೆ ಹೇಳಿದ್ದೇಕೆ..?

ಪ್ರಾಥಮಿಕ ಪುರಾವೆಗಳು ರೂಪಾಂತರವು ಮರು ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ ಮತ್ತು ಡೆಲ್ಟಾ ಸೇರಿದಂತೆ ಇತರ ತಳಿಗಳಿಗಿಂತ ಹೆಚ್ಚು ವೇಗವಾಗಿ ಹರಡಬಹುದು ಎಂದು WHO ಎಚ್ಚರಿಸಿದೆ.

 ಓಮಿಕ್ರಾನ್

ಓಮಿಕ್ರಾನ್

  • Share this:
ದಕ್ಷಿಣ ಆಫ್ರಿಕಾ(South Africa)ದ ವಿವಿಧ ಮಾಧ್ಯಮಗಳು ಆಕ್ರಮಣಕಾರಿಯಾಗಿರುವ ಹಾಗೂ ಕೋವಿಡ್‌ನ ಹೊಸ ರೂಪಾಂತರ ಓಮಿಕ್ರಾನ್(Omicron)‌ನ ಲಕ್ಷಣಗಳು ಅಸಾಮಾನ್ಯವಾಗಿದ್ದರೂ ಸೌಮ್ಯವಾಗಿವೆ ಎಂಬುದಾಗಿ ದಕ್ಷಿಣ ಆಫ್ರಿಕದ ಆಸ್ಪತ್ರೆಗಳು ವರದಿ ಮಾಡಿವೆ. ಜೋಹಾನ್ಸ್‌ಬರ್ಗ್ ಪ್ರದೇಶದಲ್ಲಿ ಕಂಡುಬಂದ ಹೊಸ ಸೋಂಕುಗಳಲ್ಲಿ 90%ನಷ್ಟು ಓಮಿಕ್ರಾನ್ ರೂಪಾಂತರದಿಂದ ಉಂಟಾಗಿದ್ದರೂ ಇಲ್ಲಿಯವರೆಗೆ ಸಾವಿನ ಪ್ರಮಾಣ ಹಾಗೂ ಆಸ್ಪತ್ರೆಯ ದಾಖಲಾತಿಗಳಲ್ಲಿ ಗಮನಾರ್ಹ ಹೆಚ್ಚಳ ಕಂಡುಬಂದಿಲ್ಲವೆಂದು ಸ್ಥಳೀಯ ಮಾಧ್ಯಮ(Local Media) ವರದಿ ಮಾಡಿದೆ.ಈ ಹಿನ್ನಲೆಯಲ್ಲಿ ಕೆಲವೊಂದು ತಜ್ಞರು ಆಶಾವಾದಿಗಳಾಗಿದ್ದು ಓಮಿಕ್ರಾನ್(Omicron) ಕಡಿಮೆ ಮಾರಕವಾಗಿದ್ದು, ಆದಾಗ್ಯೂ ಡೆಲ್ಟಾ(Delta) ರೂಪಾಂತರಕ್ಕಿಂತ ಹೆಚ್ಚು ಸಾಂಕ್ರಾಮಿಕ ಮತ್ತು ಪ್ರಬಲವಾಗಿದ್ದರೆ ಇದೊಂದು ವರದಾನ ಎಂಬುದಾಗಿ ಉಲ್ಲೇಖಿಸಿದ್ದಾರೆ.

ಸೌಮ್ಯ ಲಕ್ಷಣಗಳು:

ದಕ್ಷಿಣ ಆಫ್ರಿಕಾದಾದ್ಯಂತ ನೂರಾರು ಸೋಂಕಿತ ಜನರು ವಾಕರಿಕೆ, ತಲೆನೋವು, ಆಯಾಸ ಮತ್ತು ಹೆಚ್ಚಿನ ನಾಡಿ ಬಡಿತದ ರೋಗ ಲಕ್ಷಣಗಳು ವರದಿಯಾಗಿದ್ದು ಕೋವಿಡ್‌ನ ಇತರ ರೂಪಾಂತರಗಳಲ್ಲಿ ಕಂಡುಬಂದ ರುಚಿ ಅಥವಾ ವಾಸನೆಯ ನಷ್ಟದಿಂದ ಯಾರೂ ಬಳಲಿದಂತೆ ಕಾಣುತ್ತಿಲ್ಲ. ಇದಲ್ಲದೆ ದಕ್ಷಿಣ ಆಫ್ರಿಕಾದ ಹೆಚ್ಚಿನ ವೈದ್ಯರು ಓಮಿಕ್ರಾನ್ ಸೋಂಕನ್ನು ಹೊಂದಿರುವ ರೋಗಿಗಳು ತೀವ್ರ ತಲೆನೋವು, ವಾಕರಿಕೆ ಇಲ್ಲವೇ ತಲೆತಿರುಗುವಿಕೆಯನ್ನು ಹೊಂದಿದ್ದಾರೆ ಎಂಬುದಾಗಿ ದೃಢಪಡಿಸಿದ್ದಾರೆ.

ಕೋವಿಡ್ ಹೊಸ ರೂಪಾಂತರವಾಗಿ ಮಾರ್ಪಾಡಾಗಿದೆ ಎಂದು ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದ ಮೊದಲ ಆಫ್ರಿಕನ್ ವೈದ್ಯೆ ಡಾ. ಏಂಜೆಲಿಕ್ ಕೊಯೆಟ್ಜಿ ಪತ್ರಿಕೆಗಳಿಗೆ ಉಲ್ಲೇಖಿಸಿರುವ ಮಾಹಿತಿಯ ಪ್ರಕಾರ ಅವರು ಚಿಕಿತ್ಸೆ ನೀಡಿದ ರೋಗಿಗಳಲ್ಲಿ ಕೋವಿಡ್ ಲಕ್ಷಣಗಳು ತುಂಬಾ ವಿಭಿನ್ನ ಹಾಗೂ ಸೌಮ್ಯವಾಗಿವೆ ಎಂದಿದ್ದಾರೆ. ರೋಗಲಕ್ಷಣಗಳು ತಕ್ಷಣವೇ ಪ್ರಭಾವ ಬೀರುವುದಿಲ್ಲವೆಂದು ತಿಳಿಸಿರುವ ಸ್ಥಳೀಯ ಪತ್ರಿಕೆಗಳು ಆಯಾಸದಿಂದ ಬಳಲುತ್ತಿರುವ ಯುವ ಜನರು ಹಾಗೂ ಹೆಚ್ಚಿನ ನಾಡಿ ಬಡಿತವನ್ನು ಹೊಂದಿರುವ ಸಣ್ಣ ಮಗು ಸೇರಿದಂತೆ ಆಸ್ಪತ್ರೆಗೆ ದಾಖಲಾಗಿರುವುದಾಗಿ ತಿಳಿಸಿದೆ.

ರೂಪಾಂತರ ಕುರಿತು ಆಶಾವಾದ:

ದಕ್ಷಿಣ ಆಫ್ರಿಕಾದಿಂದ ಬಂದಂತಹ ಮೊದಲ ಅಂಕಿ ಅಂಶ ನೋಡುವಾಗ, ವೈರಾಲಜಿಸ್ಟ್ ಮಾರ್ಕ್ ವ್ಯಾನ್ ರಾನ್ಸ್ಟ್ ಪ್ರಕಾರ "ಓಮಿಕ್ರಾನ್ ರೂಪಾಂತರವು ಕಡಿಮೆ ರೋಗಕಾರಕವಾಗಿದ್ದರೆ ಆದರೆ ಹೆಚ್ಚಿನ ಸೋಂಕಿನೊಂದಿಗೆ, ಡೆಲ್ಟಾವನ್ನು ಬದಲಿಸಲು ಓಮಿಕ್ರಾನ್‌ಗೆ ಅವಕಾಶ ನೀಡಿದರೆ, ಇದು ತುಂಬಾ ಧನಾತ್ಮಕವಾಗಿರುತ್ತದೆ" ಎಂದು ತಿಳಿಸಿದ್ದಾರೆ.

ಪ್ರಾಥಮಿಕ ಪುರಾವೆಗಳು ರೂಪಾಂತರವು ಮರು ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ ಮತ್ತು ಡೆಲ್ಟಾ ಸೇರಿದಂತೆ ಇತರ ತಳಿಗಳಿಗಿಂತ ಹೆಚ್ಚು ವೇಗವಾಗಿ ಹರಡಬಹುದು ಎಂದು WHO ಎಚ್ಚರಿಸಿದೆ. ಓಮಿಕ್ರಾನ್ ಮರು ಸೋಂಕಿನ ಅಪಾಯವನ್ನು ಹೆಚ್ಚಿಸಿದೆ ಎಂಬುದನ್ನು ಸೂಚಿಸಲು ಆರಂಭಿಕ ಪುರಾವೆಗಳಿಗೆ ಎಂದು ತಿಳಿಸಿದ ಅವರು ದಕ್ಷಿಣ ಆಫ್ರಿಕಾದಲ್ಲಿ ರೂಪಾಂತರದ ಕ್ಷಿಪ್ರ ಹರಡುವಿಕೆಯು ಬೆಳವಣಿಗೆಯ ಪ್ರಯೋಜನ ಹೊಂದಿದೆ ಎಂದು ತಿಳಿಸಿದ್ದಾರೆ.

ಇದರ ನಡುವೆಯೇ, ಜರ್ಮನಿ, ನೆದರ್ಲ್ಯಾಂಡ್, ಬೆಲ್ಜಿಯಂ, ಆಸ್ಟ್ರೇಲಿಯಾ, ಜೆಕ್ ರಿಪಬ್ಲಿಕ್, ಇಟಲಿ ಮತ್ತು ಯುಕೆ ಅಧಿಕಾರಿಗಳು ತಮ್ಮ ದೇಶಗಳಲ್ಲಿ ಕೊರೋನಾವೈರಸ್‌ನ ಹೊಸ ಓಮಿಕ್ರಾನ್ ರೂಪಾಂತರವನ್ನು ದೃಢಪಡಿಸಿದ್ದಾರೆ ಹಾಗೂ ಹರಡುವಿಕೆಯನ್ನು ತಡೆಯಲು ಪ್ರಪಂಚದಾದ್ಯಂತ ಸರಕಾರಗಳು ಹೆಣಗಾಡುತ್ತಿವೆ. ಪ್ರಪಂಚದಾದ್ಯಂತ 5 ದಶಲಕ್ಷಕ್ಕೂ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಂಡ ಕೊರೋನಾ ಪ್ರಾರಂಭವಾಗಿ ಎರಡು ವರ್ಷಗಳು ಕಳೆದಿದ್ದರೂ ಎಲ್ಲಾ ದೇಶಗಳು ಹೆಚ್ಚಿನ ಮುತುವರ್ಜಿ ಅನುಸರಿಸಿಕೊಂಡು ಬರುತ್ತಿವೆ.

ಲಸಿಕೆಗಳ ಅನ್ವೇಷಣೆಗೆ ಸಿದ್ಧರಾದ ತಜ್ಞರ ತಂಡ:

ಹೆಚ್ಚಿನ ಪರೀಕ್ಷೆಯ ಅಗತ್ಯವಿದ್ದು ಸ್ಪಷ್ಟ ಚಿತ್ರಣವು ಹೊರಹೊಮ್ಮಲು ವಾರಗಳವರೆಗೆ ತೆಗೆದುಕೊಳ್ಳಬಹುದು ಎಂದು ತಜ್ಞರು ಹೇಳುತ್ತಾರೆ. ಓಮಿಕ್ರಾನ್‌ಗೆ ಸಂಬಂಧಿಸಿದಂತೆ ಅನುವಂಶಿಕ ಅನುಕ್ರಮ ಆಧರಿಸಿ ಹೊಸ ಮರುಸಂಯೋಜಕ ಸ್ಪೈಕ್ ಪ್ರೋಟೀನ್‌ನ ಅಭಿವೃದ್ಧಿಯನ್ನು ಈಗಾಗಲೇ ಪ್ರಾರಂಭಿಸಿದೆ ಮತ್ತು ಮುಂದಿನ ಕೆಲವು ವಾರಗಳಲ್ಲಿ ಪರೀಕ್ಷೆ ಮತ್ತು ಉತ್ಪಾದನೆ ಪ್ರಾರಂಭಿಸಲು ಸಿದ್ಧವಾಗಿದೆ ಎಂಬುದಾಗಿ ತಜ್ಞರ ತಂಡ ತಿಳಿಸಿದೆ.

ಇಂಗ್ಲೆಂಡ್‌ನಲ್ಲಿ ಕಟ್ಟುನಿಟ್ಟಿನ ಮಾರ್ಗಸೂಚಿ ಜಾರಿ:

ಇಂಗ್ಲೆಂಡ್‌ಗೆ ಆಗಮಿಸುವವರು ಕಡ್ಡಾಯವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ಗಳನ್ನು ಧರಿಸಬೇಕು. ಅಂತೆಯೇ ಲಸಿಕೆ ಹಾಗೂ ಇನ್ನಿತರ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂಬುದಾಗಿ ಪ್ರಧಾನಿ ಬೋರಿಸ್ ಜಾನ್ಸನ್ ಘೋಷಿಸಿದ್ದಾರೆ. ಜಾನ್ಸನ್ ಇಂದು ಮಧ್ಯಾಹ್ನ ಇಂಗ್ಲೆಂಡ್ ಮುಖ್ಯ ವೈಜ್ಞಾನಿಕ ಅಧಿಕಾರಿ ಸರ್ ಪ್ಯಾಟ್ರಿಕ್ ವ್ಯಾಲೆನ್ಸ್ ಮತ್ತು ಮುಖ್ಯ ವೈದ್ಯಕೀಯ ಅಧಿಕಾರಿ ಕ್ರಿಸ್ ವಿಟ್ಟಿ ಅವರೊಂದಿಗೆ ಡೌನಿಂಗ್ ಸ್ಟ್ರೀಟ್ ಅವರೊಂದಿಗೆ ಈ ಸಂಬಂಧಿತವಾಗಿ ಪತ್ರಿಕಾಗೋಷ್ಠಿಯನ್ನು ನಡೆಸಿದ್ದಾರೆ.

ನಾಟಿಂಗ್‌ಹ್ಯಾಮ್‌ ಮತ್ತು ಎಸೆಕ್ಸ್‌ನಲ್ಲಿ ಮೊದಲ ಎರಡು ಪ್ರಕರಣಗಳನ್ನು ಗುರುತಿಸಿದ ನಂತರ, ಓಮಿಕ್ರಾನ್‌ ರೂಪಾಂತರದ ಹರಡುವಿಕೆಯನ್ನು ನಿಗ್ರಹಿಸಲು ಜಾನ್ಸನ್ ಕೋವಿಡ್ ನಿಯಮಾವಳಿಗಳನ್ನು ಪ್ರಜೆಗಳು ಅಂತೆಯೇ ಇಂಗ್ಲೆಂಡ್‌ಗೆ ಆಗಮಿಸುವವರು ಕಡ್ಡಾಯವಾಗಿ ಅನುಸರಿಸಬೇಕು ಎಂದು ತಿಳಿಸಿದ್ದಾರೆ. ಕ್ರಿಸ್‌ಮಸ್ ಆಚರಣೆಗೆ ಓಮಿಕ್ರಾನ್ ಅಡ್ಡಿಯಾಗುವುದಿಲ್ಲವೆಂದು ತಿಳಿಸಿದ ಜಾನ್ಸನ್ ಅದಕ್ಕೂ ಮುನ್ನವೇ ರೂಪಾಂತರವನ್ನು ನಾವು ಹತ್ತಿಕ್ಕಬಹುದು ಎಂಬುದಾಗಿ ಆಶಾವಾದ ವ್ಯಕ್ತಪಡಿಸಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ಮೊದಲು ಕಂಡುಬಂದ ರೂಪಾಂತರವು ಆರಂಭಿಕ ಹಂತದಲ್ಲಿರುವುದರಿಂದ ಈ ಕುರಿತು ನಮಗಿನ್ನೂ ಸ್ಪಷ್ಟ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ. ಆದರೂ ಅದರ ಸ್ವರೂಪದ ಬಗ್ಗೆ ಜಾಗರೂಕರಾಗಿರಬೇಕು ಎಂದು ಜಾನ್ಸನ್ ತಿಳಿಸಿದ್ದಾರೆ. ಇದು ಬಹಳ ವೇಗವಾಗಿ ಹರಡುತ್ತದೆ ಮತ್ತು ಎರಡು ಬಾರಿ ಲಸಿಕೆ ಹಾಕಿದ ಜನರಲ್ಲಿಯೂ ಹರಡಬಹುದು ಎಂದು ಜಾನ್ಸನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. 
Published by:Latha CG
First published: