Omicron ರೋಗ ಲಕ್ಷಣಗಳಿದ್ದರೂ ಕೋವಿಡ್ Positive ಬಂದಿಲ್ಲವೇ? ಹಾಗಾದ್ರೆ ಕಾರಣವೇನು!

ಓಮೈಕ್ರಾನ್‌ ರೂಪಾಂತರದ ಐದು ಸಾಮಾನ್ಯ ರೋಗಲಕ್ಷಣಗಳೆಂದರೆ ಕೆಮ್ಮು, ಮೂಗು ಕಟ್ಟುವುದು, ಆಯಾಸ, ಮೂಗು ಸೋರುವುದು ಮತ್ತು ಮೈಕೈ ನೋವು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಈಗಂತೂ ಕೋವಿಡ್-19 ಮತ್ತು ಅದರ ಹೊಸ ರೂಪಾಂತರಿಯಾದ ಓಮೈಕ್ರಾನ್‌ (Omicron) ಪ್ರಕರಣಗಳು ದೇಶಾದ್ಯಂತ ಹೆಚ್ಚಾಗುತ್ತಿದ್ದು, ಜನರಲ್ಲಿ ಮತ್ತೊಮ್ಮೆ ಈ ಸಾಂಕ್ರಾಮಿಕ ರೋಗವು ಭಯ ಹುಟ್ಟಿಸಿದೆ ಎಂದು ಹೇಳಬಹುದು.ಕೆಲವೊಬ್ಬರಿಗೆ ಕೋವಿಡ್ ರೋಗಲಕ್ಷಣಗಳಿದ್ದರೂ ಸಹ ಟೆಸ್ಟ್ ಮಾಡಿಸಿಕೊಂಡಾಗ ಕೋವಿಡ್ ಪಾಸಿಟಿವ್ ತೋರಿಸದೇ ಇರುವುದು ಮತ್ತು ನೆಗೆಟಿವ್ ಆರ್‌ಟಿ-ಪಿಸಿಆರ್ ಪರೀಕ್ಷೆಗಳ (RT-PCR Tests) ಹೆಚ್ಚುತ್ತಿರುವ ಪ್ರಕರಣಗಳನ್ನು ಮತ್ತು ರೋಗಲಕ್ಷಣಗಳ ಬಗ್ಗೆ ದೂರು ನೀಡುವ ರೋಗಿಗಳನ್ನು(Patients) ವೈದ್ಯರು ಗಮನಿಸುತ್ತಿದ್ದಾರೆ. ರೋಗಲಕ್ಷಣಗಳಿದ್ದರೂ (Symptoms) ಸಹ ರೋಗಿಯ ಈ ಕೋವಿಡ್ ಪರೀಕ್ಷೆ ನೆಗೆಟಿವ್ ಆಗಿ ತೋರಿಸಲು ಹಲವಾರು ಕಾರಣಗಳಿವೆ ಎಂದು ವೈದ್ಯರು ಹೇಳುತ್ತಾರೆ.

ಪರೀಕ್ಷಾ ವಿಧಾನಗಳು
ಮುಂಬೈ ಬಳಿಯ ಖಾರ್ ಘಟಕದ ಪಿ.ಡಿ. ಹಿಂದೂಜಾ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಮುಖ್ಯ ಸಲಹೆಗಾರರಾಗಿರುವ ಡಾ. ಭರೇಶ್ ದೇಧಿಯಾ ಅವರು “ಕೆಲವು ಪರೀಕ್ಷಾ ವಿಧಾನಗಳು ಅನುಚಿತವಾಗಿವೆ.

ರೋಗಿಯ ಗಂಟಲು ದ್ರವವನ್ನು ಸರಿಯಾಗಿ ಸಂಗ್ರಹಿಸುವುದಿಲ್ಲ ಮತ್ತು ಅದನ್ನು ಲ್ಯಾಬ್‌ಗೆ ರವಾನಿಸುವ ಸಮಯದಲ್ಲಿ ಮಾದರಿ ಸಂಗ್ರಹಣೆಯನ್ನು ಸೂಕ್ತವಾಗಿ ಇರಿಸಲಾಗುವುದಿಲ್ಲ. ಈ ಅಂಶಗಳಿಂದಾಗಿಯೂ ಸಹ ಈ ರೀತಿ ಘಟನೆಗಳು ಸಂಭವಿಸಬಹುದು ಎಂದು ಹೇಳುತ್ತಾರೆ.

"ಕೆಲವು ಓಮೈಕ್ರಾನ್‌ ರೂಪಾಂತರಿಗಳು ಆರ್‌ಟಿ-ಪಿಸಿಆರ್ ಪರೀಕ್ಷೆಯಲ್ಲಿ ನೆಗೆಟಿವ್ ಫಲಿತಾಂಶವನ್ನು ತೋರಿಸಬಹುದು, ವಿಶೇಷವಾಗಿ ಆರ್‌ಎಟಿ ಅಂತಹವುಗಳು" ಎಂದು ಡಾ. ಭರೇಶ್ ಹೇಳುತ್ತಾರೆ.

“ನನ್ನ ಅಭಿಪ್ರಾಯದಲ್ಲಿ, ವೈರಲ್ ಲೋಡ್ ಅಥವಾ ಸಿ.ಟಿ ಮೌಲ್ಯ ಸಾಕಷ್ಟು ಕಡಿಮೆ ಇರುವುದು ಸಹ ಅತ್ಯಂತ ಪ್ರಮುಖ ಅಂಶಗಳಲ್ಲಿ ಒಂದಾಗಿದೆ” ಎಂದು ಇವರು ಹೇಳಿದ್ದಾರೆ.

ಇದನ್ನೂ ಓದಿ: Zinc ಇರೋ ಈ ಆಹಾರಗಳನ್ನು ತಿಂದ್ರೆ ಕೊರೊನಾ ನಿಮ್ಮ ಹತ್ತಿರಕ್ಕೂ ಬರಲ್ವಂತೆ, ಸೋಂಕಿತರಿಗೆ ವೈದ್ಯರು ಹೇಳೋದು ಇದನ್ನೇ!

ಫಲಿತಾಂಶ ನೆಗೆಟಿವ್
ಐಸಿಎಂಆರ್ ಮಾರ್ಗಸೂಚಿಗಳ ಪ್ರಕಾರ, ಸಿ.ಟಿ ಮೌಲ್ಯವು 35ಕ್ಕಿಂತ ಹೆಚ್ಚಿದ್ದರೆ, ಕೋವಿಡ್ ಪರೀಕ್ಷೆಯನ್ನು ನೆಗೆಟಿವ್ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ವ್ಯಕ್ತಿಯ ವೈರಲ್ ಲೋಡ್ ತುಂಬಾ ಕಡಿಮೆಯಾಗಿದ್ದರೆ, ಪರೀಕ್ಷೆಯ ಫಲಿತಾಂಶ ನೆಗೆಟಿವ್ ಎಂದು ವರದಿ ಮಾಡಲಾಗುತ್ತದೆ.

ಕೊನೆಯದಾಗಿ, ಆರ್‌ಟಿ-ಪಿಸಿಆರ್ ಟೆಸ್ಟ್‌ನಲ್ಲಿ, ಕೆಲವು ಓಮೈಕ್ರಾನ್‌ ರೂಪಾಂತರಗಳು ಪಾಸಿಟಿವ್ ತೋರಿಸದೇ ಇರಬಹುದಾದ ಸಾಧ್ಯತೆಗಳು ಇವೆ ಎಂದೂ ಹೇಳಿದ್ದಾರೆ.

"ಆರ್‌ಟಿ-ಪಿಸಿಆರ್ ಪರೀಕ್ಷೆಯಲ್ಲಿ ಎಸ್ ಜೀನ್ ಡ್ರಾಪ್ ಕಂಡು ಬಂದರೆ, ಅದು ಬಹುಶಃ ಓಮೈಕ್ರಾನ್‌ ಮತ್ತು ಎಸ್ ಜೀನ್ ಇದ್ದರೆ, ಅದು ಬಹುಶಃ ಡೆಲ್ಟಾ ರೂಪಾಂತರವಾಗಿರುತ್ತದೆ. ಆರ್‌ಟಿ-ಪಿಸಿಆರ್ ಹೊಸ ವೇರಿಯಂಟ್ ಅನ್ನು ಪತ್ತೆ ಹಚ್ಚುವುದು ಹೀಗೆ. ಆದರೂ, ಜೀನ್ ಸೀಕ್ವೆನ್ಸಿಂಗ್ ಮೂಲಕ ದೃಢೀಕರಣವನ್ನು ಮಾಡಬೇಕಾಗಿದೆ" ಎಂದು ಅವರು ವಿವರಿಸುತ್ತಾರೆ.

ರೂಪಾಂತರಗಳ ನಡುವಿನ ವ್ಯತ್ಯಾಸ
ಜೀನೋಮ್ ಸೀಕ್ವೆನ್ಸಿಂಗ್ ಒಂದೇ ವೈರಸ್‌ನ ಎರಡು ರೂಪಾಂತರಗಳ ನಡುವಿನ ವ್ಯತ್ಯಾಸ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಚಿಕಿತ್ಸೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸುತ್ತದೆ. ಒಬ್ಬ ವ್ಯಕ್ತಿಯು ವಿಶಿಷ್ಟ ಕೋವಿಡ್ ರೋಗಲಕ್ಷಣಗಳನ್ನು ಹೊಂದಿದ್ದರೆ ಮತ್ತು ಆರ್‌ಟಿ-ಪಿಸಿಆರ್ ಟೆಸ್ಟ್‌ನಲ್ಲಿ ನೆಗೆಟಿವ್ ಎಂದು ತೋರಿಸಿದರೆ, ಅವನು ಅಥವಾ ಅವಳು ಕನಿಷ್ಠ ಏಳು ದಿನಗಳವರೆಗೆ ತಮ್ಮನ್ನು ತಾವು ಐಸೋಲೆಟ್ ಮಾಡಿಕೊಳ್ಳಬೇಕು.

ವ್ಯಕ್ತಿಯು ಮತ್ತೆ ಆರ್‌ಟಿ-ಪಿಸಿಆರ್ ಟೆಸ್ಟ್ ಅನ್ನು ಐದನೇ ಅಥವಾ ಆರನೇ ದಿನದ ಕೊನೆಯಲ್ಲಿ ಪುನರಾವರ್ತಿಸಬಹುದು, ಅದು ಈಗ ಪಾಸಿಟಿವ್ ಆಗಿ ಬದಲಾಗುತ್ತಿದೆಯೇ ಅಥವಾ ಅದು ಇನ್ನೂ ನೆಗೆಟಿವ್ ಎಂದು ತೋರಿಸುತ್ತಿದೆಯೇ ಎಂಬುದನ್ನು ಪರಿಶೀಲಿಸಿ.

ಓಮೈಕ್ರಾನ್‌ ರೋಗಲಕ್ಷಣಗಳು

ಓಮೈಕ್ರಾನ್‌ ರೂಪಾಂತರದ ಐದು ಸಾಮಾನ್ಯ ರೋಗಲಕ್ಷಣಗಳೆಂದರೆ ಕೆಮ್ಮು, ಮೂಗು ಕಟ್ಟುವುದು, ಆಯಾಸ, ಮೂಗು ಸೋರುವುದು ಮತ್ತು ಮೈಕೈ ನೋವು.

ಮುಂಬೈನ ಪರೇಲ್‌ನ ಗ್ಲೋಬಲ್ ಹಾಸ್ಪಿಟಲ್‌ನ ಪಲ್ಮೋನಾಲಜಿ ಮತ್ತು ಕ್ರಿಟಿಕಲ್ ಕೇರ್‌ನ ಹಿರಿಯ ಸಲಹೆಗಾರರಾದ ಡಾ. ಹರೀಶ್ ಚಾಫ್ಲೆ ಅವರು ರೋಗಲಕ್ಷಣಗಳನ್ನು ಅತ್ಯಂತ ಸಾಮಾನ್ಯ, ಕಡಿಮೆ ಮತ್ತು ಗಂಭೀರ ರೋಗಲಕ್ಷಣಗಳಾಗಿ ವರ್ಗೀಕರಿಸಲಾಗಿದೆ ಎಂದು ಹೇಳುತ್ತಾರೆ.

ಇದನ್ನೂ ಓದಿ: Booster Dose: ನೀವು ಬೂಸ್ಟರ್ ಡೋಸ್ ಪಡೆಯಲು ಅರ್ಹರೆ? ಎಲ್ಲಾ ಅನುಮಾನಗಳಿಗೆ ವೈದ್ಯರ ಉತ್ತರ ಇಲ್ಲಿದೆ

1. ಓಮೈಕ್ರಾನ್‌ ಅತ್ಯಂತ ಸಾಮಾನ್ಯ ಲಕ್ಷಣಗಳು

ಜ್ವರ, ಕೆಮ್ಮು, ದಣಿವು, ರುಚಿ ಅಥವಾ ವಾಸನೆಯನ್ನು ಗ್ರಹಿಸದೆ ಇರುವುದು

2. ಓಮೈಕ್ರಾನ್‌ ಕಡಿಮೆ ಸಾಮಾನ್ಯ ಲಕ್ಷಣಗಳು

ಗಂಟಲು ನೋವು, ತಲೆನೋವು, ಮೈಕೈ ನೋವುಗಳು, ಅತಿಸಾರ, ಚರ್ಮದ ಮೇಲೆ ದದ್ದು, ಬೆರಳುಗಳು ಅಥವಾ ಕಾಲ್ಬೆರಳುಗಳ ಬಣ್ಣ ಬದಲಾಗುವುದು ಮತ್ತು ಕಣ್ಣುಗಳು ಕೆಂಪಾಗುವುದು ಮತ್ತು ಕಿರಿಕಿರಿ ಅನ್ನಿಸುವುದು.

3. ಓಮೈಕ್ರಾನ್‌ ಗಂಭೀರ ಲಕ್ಷಣಗಳು

ಉಸಿರಾಟದ ತೊಂದರೆ, ಮಾತು ಅಥವಾ ಚಲನಶೀಲತೆ ಕಳೆದುಕೊಳ್ಳುವುದು, ಗೊಂದಲವಾಗುವುದು ಮತ್ತು ಎದೆ ನೋವು.
Published by:vanithasanjevani vanithasanjevani
First published: