• ಹೋಂ
  • »
  • ನ್ಯೂಸ್
  • »
  • Corona
  • »
  • ಓಮೈಕ್ರಾನ್ ಅಪಾಯ ಅಲ್ಲ ಅಂತ ಭಾವಿಸೀರಿ ಜೋಕೆ; ಮಕ್ಕಳು ಹುಷಾರ್ ಎಂದ WHO

ಓಮೈಕ್ರಾನ್ ಅಪಾಯ ಅಲ್ಲ ಅಂತ ಭಾವಿಸೀರಿ ಜೋಕೆ; ಮಕ್ಕಳು ಹುಷಾರ್ ಎಂದ WHO

ಡಾ. ಸೌಮ್ಯಾ ಸ್ವಾಮಿನಾಥನ್

ಡಾ. ಸೌಮ್ಯಾ ಸ್ವಾಮಿನಾಥನ್

Omicron Danger- ಓಮೈಕ್ರಾನ್ ಸೋಂಕಿತರ ಬಗ್ಗೆ ನಿಖರ ಮಾಹಿತಿ ಬರಬೇಕಾದರೆ ಇನ್ನೂ 2-3 ವಾರ ಕಾಲ ಕಾಯಬೇಕಾಗುತ್ತದೆ. ಆಸ್ಪತ್ರೆಗಳ ದತ್ತಾಂಶಗಳು ಬಂದ ಬಳಿಕ ಓಮೈಕ್ರಾನ್ ಅಪಾಯ ಎಷ್ಟಿದೆ ಎಂಬ ಸುಳಿವು ಸಿಗುತ್ತದೆ ಎಂದು WHO ಮುಖ್ಯ ವಿಜ್ಞಾನಿ ಡಾ. ಸೌಮ್ಯಾ ಸ್ವಾಮಿನಾಥನ್ ಹೇಳಿದ್ಧಾರೆ.

  • News18
  • 5-MIN READ
  • Last Updated :
  • Share this:

ನವದೆಹಲಿ, ಡಿ. 6: ಓಮೈಕ್ರಾನ್ ತಳಿಯ ಕೋವಿಡ್ ರೂಪಾಂತರಿ ವೈರಸ್ ಹೆಚ್ಚು ವೇಗವಾಗಿ ಹರಡುತ್ತದೆಯೇ ಹೊರತು ಡೆಲ್ಟಾ ತಳಿಯಷ್ಟು ಅಪಾಯಕಾರಿ ಅಲ್ಲ ಎಂಬಂತಹ ವರದಿಗಳು ಸಾಕಷ್ಟು ಬಂದಿವೆ. ಆಫ್ರಿಕಾದಿಂದ ಬೇರೆಡೆ ಹರಡಿವೆ ಎನ್ನಲಾದ ಓಮೈಕ್ರಾನ್ ತಳಿಯ ವೈರಸ್ ಎಷ್ಟು ಅಪಾಯಕಾರಿ ಅಥವಾ ಎಷ್ಟು ಅಪಾಯಕಾರಿ ಅಲ್ಲ ಎಂಬುದು ಇನ್ನೂ ಖಚಿತಪಟ್ಟಿಲ್ಲ. ಆದರೆ, ಇದೂವರೆಗೆ ಓಮೈಕ್ರಾನ್ ಸೋಂಕು ಹೊಂದಿದವರಲ್ಲಿ ಸಾವಿನ ಹಂತಕ್ಕೆ ಹೋದವರು ಹೆಚ್ಚೇನಿಲ್ಲ ಎಂಬುದು ಈವರೆಗೆ ಬಂದಿರುವ ಮಾಹಿತಿ. ಆದರೆ, ಇದು ಇನ್ನೂ ಆರಂಭಿಕ ಹಂತದ ಕಾಲವಾದ್ದರಿಂದ ಇದನ್ನೇ ನಂಬಿಕೊಂಡು ನಿರ್ಲಕ್ಷ್ಯ ವಹಿಸಿದರೆ ಅಪಾಯ ಎರಗುತ್ತದೆಯೇ? ಡಬ್ಲ್ಯೂಎಚ್​ಒ ಮುಖ್ಯ ವಿಜ್ಞಾನಿ ಡಾ. ಸೌಮ್ಯಾ ಸ್ವಾಮಿನಾಥನ್ ಕೂಡ ಈ ಬಗ್ಗೆ ಸರ್ಕಾರಗಳನ್ನ ಎಚ್ಚರಿಸಿದ್ಧಾರೆ. ಓಮೈಕ್ರಾನ್ ಎಷ್ಟು ಅಪಾಯಕಾರಿ ಎಂಬುದು ಸ್ವಲ್ಪ ನಿಖರವಾಗಿ ತಿಳಿಯಬೇಕೆಂದರೆ ಇನ್ನೂ ಎರಡು ಮೂರು ವಾರ ಬೇಕಾಗುತ್ತದೆ. ಅಲ್ಲಿಯವರೆಗೆ ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಅವರು ಸಲಹೆ ನೀಡಿದ್ಧಾರೆ.


ಅವರ ಪ್ರಕಾರ, ಭಯಾನಕ ಎರಡನೇ ಅಲೆಗೆ ಕಾರಣವಾಗಿದ್ದ ಡೆಲ್ಟಾ ತಳಿಯ ರೂಪಾಂತರಿಗಿಂತ ಓಮೈಕ್ರಾನ್ ತಳಿ ಮೂರು ಪಟ್ಟು ಹೆಚ್ಚು ಮರುಸೋಂಕುಗೊಳಿಸುವಷ್ಟು ಅಪಾಯಕಾರಿ ಆಗಿದೆಯಂತೆ. ಅಂದರೆ, ಒಮ್ಮೆ ಸೋಂಕು ಬಂದು 90 ದಿನಗಳ ನಂತರ ಮತ್ತೊಮ್ಮೆ ಸೋಂಕು ತಗುಲಿಸಬಲ್ಲ ಶಕ್ತಿ ಓಮೈಕ್ರಾನ್​ನಲ್ಲಿ ಹೆಚ್ಚಿದೆ ಎಂದು ಡಾ. ಸೌಮ್ಯಾ ಹೇಳಿದ್ದಾರೆ.


“ಡೆಲ್ಟಾಗೆ ಹೋಲಿಸಿದರೆ ಓಮೈಕ್ರಾನ್ 90 ದಿನಗಳ ನಂತರ ಮರುಸೋಂಕು ಮಾಡಬಲ್ಲ ಸಾಮರ್ಥ್ಯ ಮೂರು ಪಟ್ಟು ಹೆಚ್ಚು ಇದೆ. ಓಮೈಕ್ರಾನ್ ಸೋಂಕಿನ ಲಕ್ಷಣಗಳನ್ನ ಈಗಲೇ ಅಂದಾಜು ಮಾಡಲು ಸಾಧ್ಯವಿಲ್ಲ. ಓಮೈಕ್ರಾನ್ ಪ್ರಕರಣಗಳ ಏರಿಕೆ ಹಾಗೂ ಆಸ್ಪತ್ರೆಗೆ ದಾಖಲಾಗುವ ಸಂಖ್ಯೆಯಲ್ಲಿನ ಏರಿಕೆಯಲ್ಲಿ ಬಹಳಷ್ಟು ಅಂತರ ಕಾಣುತ್ತಿದೆ. ಈ ಹೊಸ ಸೋಂಕು ಎಷ್ಟು ತೀವ್ರವಾಗಿರುತ್ತದೆ ಎಂಬುದನ್ನು ಅಂದಾಜು ಮಾಡಲು ಆಸ್ಪತ್ರೆಗೆ ದಾಖಲಾಗುವ ಪ್ರಮಾಣವನ್ನು ಅಧ್ಯಯನ ಮಾಡಬೇಕಾಗುತ್ತದೆ. ಅದಕ್ಕಾಗಿ ಇನ್ನೂ ಎರಡು ಅಥವಾ ಮೂರು ವಾರ ಕಾಲ ನಾವು ಕಾಯಬೇಕಾಗುತ್ತೆ” ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ತಿಳಿಸಿದ್ಧಾರೆ.


ಲಸಿಕೆ ಪಡೆಯದವರು ಮತ್ತು ಮಕ್ಕಳು ಜಾಗ್ರತೆಯಲ್ಲಿರಲಿ:


ಸಿಎನ್​ಬಿಸಿ-18 ವಾಹಿನಿಯೊಂದಿಗಿನ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಡಾ. ಸೌಮ್ಯಾ ಸ್ವಾಮಿನಾಥನ್, ಲಸಿಕೆ ಹಾಕಿಸಿಕೊಳ್ಳದವರು ಕೋವಿಡ್ ಸೋಂಕಿಗೆ ಹೆಚ್ಚು ಗುರಿಯಾಗುವ ಅಪಾಯ ಇದೆ. ಹಾಗೆಯೇ, ಜಗತ್ತಿನ ಬಹುತೇಕ ಮಕ್ಕಳಿಗೆ ಲಸಿಕೆ ನೀಡಲಾಗಿಲ್ಲ. ಹೀಗಾಗಿ, ಮಕ್ಕಳನ್ನ ಬಹಳ ಜಾಗ್ರತೆಇಂದ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದ್ಧಾರೆ.


ಇದನ್ನೂ ಓದಿ: ಮನೆಯವರ ವಿರೋಧಿಸಿ ಮದುವೆಯಾದ ಅಕ್ಕನ ಕತ್ತು ಸೀಳಿ ಸೆಲ್ಪಿ ತೆಗೆದುಕೊಂಡ ತಮ್ಮ; ಮಹಾರಾಷ್ಟ್ರದಲ್ಲೊಂದು ಮರ್ಯಾದಾ ಹತ್ಯೆ


“ಮಕ್ಕಳಿಗೆ ಹೆಚ್ಚು ಲಸಿಕೆಗಳು ಇಲ್ಲ. ಕೆಲವೇ ದೇಶಗಳಲ್ಲಿ ಮಾತ್ರ ಮಕ್ಕಳಿಗೆ ಲಸಿಕೆ ಹಾಕಲಾಗುತ್ತಿದೆ. ಕೋವಿಡ್ ಪ್ರಕರಣಗಳ ಸಂಖ್ಯೆ ಏರಿದಾಗ ಲಸಿಕೆ ಹಾಕಿಸಿಕೊಳ್ಳದವರು ಮತ್ತು ಮಕ್ಕಳು ಬೇಗ ಸೋಂಕಿಗೆ ತುತ್ತಾಗುವ ಸಾಧ್ಯತೆ ಇದೆ. ಆದರೆ, ಓಮೈಕ್ರಾನ್ ತಳಿಯ ವೈರಸ್ ಮಕ್ಕಳ ಮೇಲೆ ಎಂಥ ಪರಿಣಾಮ ಬೀರಬಲ್ಲುದು ಎಂಬುದಕ್ಕೆ ಹೆಚಚಿನ ದತ್ತಾಂಶಕ್ಕಾಗಿ ನಾವು ಕಾಯುತ್ತಿದ್ದೇವೆ” ಎಂದು ಡಬ್ಲ್ಯೂಎಚ್​ಒ ಚೀಫ್ ಸೈಂಟಿಸ್ಟ್ ತಿಳಿಸಿದ್ಧಾರೆ.


ವಯೋಮಾನವಾರು, ಪ್ರದೇಶವಾರು ಲಸಿಕೆ ಪ್ರಮಾಣ ಎಷ್ಟು ಆಗಿದೆ ಎಂದು ಎಲ್ಲಾ ದೇಶಗಳು ಅಧ್ಯಯನ ನಡೆಸಬೇಕು. 18 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಯಾರು ಲಸಿಕೆ ಹಾಕಿಲ್ಲ ಅಂಥವರನ್ನ ಗುರುತಿಸಿ ಲಸಿಕೆ ಹಾಕಲು ಆದ್ಯತೆ ನೀಡಬೇಕು ಎಂದು ಡಾ. ಸೌಮ್ಯಾ ಕರೆ ನೀಡಿದ್ದಾರೆ.


ಸದ್ಯ, 25 ದೇಶಗಳಲ್ಲಿ ತೀರಾ ಕಡಿಮೆ ಸಂಖ್ಯೆಯಲ್ಲಿ ಲಸಿಕೆ ಹಾಕಲಾಗಿದೆ. ಲಸಿಕೆ ತಯಾರಕರು ಎಷ್ಟು ಲಸಿಕೆ ಸರಬರಾಜು ಮಾಡುತ್ತಿದ್ದಾರೆಂದು ಮಾಹಿತಿಯನ್ನ ಬಹಿರಂಗವಾಗಿ ನೀಡಲಿ ಎಂದೂ ಅವರು ಮನವಿ ಮಾಡಿದ್ದಾರೆ.

First published: