ನೆಟ್ವರ್ಕ್​ ಹುಡುಕಲು ಹೋಗಿ ವಿದ್ಯಾರ್ಥಿ ಸಾವು: ಯೂಟ್ಯೂಬ್​ ತರಗತಿ ಆರಂಭಿಸಿದ ಒಡಿಸ್ಸಾ ಸರ್ಕಾರ

ಶಾಲೆ ಮತ್ತು ಕಾಲೇಜು ಭಾಗಶಃ ತೆರೆದಿದ್ದರೂ, ಒಡಿಶಾದಲ್ಲಿ ಮೂರನೇ ಕೋವಿಡ್ -19 ಅಲೆಯ ಭಯ ಮತ್ತು  ಮಕ್ಕಳಿಗೆ ಲಸಿಕೆಯ ಕೊರತೆಯ ಭಯದ ನಡುವೆ ಮಕ್ಕಳ ಹಾಜರಾತಿ ಕಡಿಮೆ ಇದ್ದು, ಪೋಷಕರು ಮಕ್ಕಳನ್ನು ಶಾಲೆಗೆ ಕಳಿಸಲು ಹಿಂದೇಟು ಹಾಕುತ್ತಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಒಡಿಸ್ಸಾ ರಾಜ್ಯದ ಶಾಲೆ ಮತ್ತು ಸಮೂಹ ಶಿಕ್ಷಣ ಇಲಾಖೆ, ಯೂಟ್ಯೂಬ್ ವೀಡಿಯೋಗಳ ಮೂಲಕ ಪಾಠಗಳನ್ನು ಮುಂದುವರಿಸಲು ಯೋಜಿಸುತ್ತಿದೆ. ವೀಡಿಯೋ ಆಧಾರಿತ ಪಾಠದ ವೇದಿಕೆಯು ವಿದ್ಯಾರ್ಥಿಗಳಿಗೆ ಸಂಪರ್ಕದ ಲಭ್ಯತೆಗೆ ಅನುಗುಣವಾಗಿ ರೆಕಾರ್ಡ್ ಮಾಡಿದ ಪಾಠ ತರಗತಿಗಳನ್ನು ನೋಡಲು, ಕೇಳಲು, ಅತ್ಯಂತ ಸುಲಭದ ಮಾರ್ಗ ಇದಾಗಿದೆ.

  ಆನ್‌ಲೈನ್ ತರಗತಿಗಳಿಗಾಗಿ ನೆಟ್‌ವರ್ಕ್ ಸಿಗುವ ಜಾಗ ಹುಡುಕಲು ಹೋದ ರಾಯಗಡ ಜಿಲ್ಲೆಯ ವಿದ್ಯಾರ್ಥಿಯೊಬ್ಬರು ಮೃತಪಟ್ಟ ತಕ್ಷಣ ಈ ಯೋಜನೆಯನ್ನು ಜಾರಿಗೆ ತರಲು ಫೋಷಣೆ ಮಾಡಲಾಗಿದೆ. ಮೃತ ವಿದ್ಯಾರ್ಥಿಯು ರಾಯಗಡ ಜಿಲ್ಲೆಯ ಪದ್ಮಾಪುರ ಬ್ಲಾಕ್‌ ವ್ಯಾಪ್ತಿಯ ಪಾಂಡ್ರಗುಡ ಗ್ರಾಮದ ಆಂಡ್ರಿಯಾ ಜಾಗರಂಗ ಎಂದು ಗುರುತಿಸಲಾಗಿದೆ.

  ಆಂಡ್ರಿಯಾ ಕಟಕ್ ಮಿಷನರಿ ಶಾಲೆಯ ವಿದ್ಯಾರ್ಥಿಯಾಗಿದ್ದರು. ಕೋವಿಡ್ -19 ಅವಧಿಯಲ್ಲಿ ಅವರು ಮನೆಯಲ್ಲಿ ಆನ್‌ಲೈನ್ ತರಗತಿಗಳಿಗೆ ನಿಯಮಿತವಾಗಿ ಹಾಜರಾಗುತ್ತಿದ್ದರು, ಆದರೆ ದುರಾದೃಷ್ಟವಶಾತ್​ ಮಂಗಳವಾರ ವಿದ್ಯಾರ್ಥಿಯ ಮೊಬೈಲ್ ಫೋನ್‌ಗೆ ಯಾವುದೇ ಸಿಗ್ನಲ್ ದೊರೆಯಲಿಲ್ಲ ಮತ್ತು ಆನ್‌ಲೈನ್ ತರಗತಿಗೆ ಹಾಜರಾಗಲು ಸಿಗ್ನಲ್ ಹುಡುಕುತ್ತ ಈ ವಿದ್ಯಾರ್ಥಿಯು ಅವರ ಹಳ್ಳಿಯ ಸಮೀಪವಿರುವ ಎತ್ತರವಾದ ಬೆಟ್ಟದ ಮೇಲೆ ಹತ್ತಿದರು.

  ದುರದೃಷ್ಟವಶಾತ್, ನೆಟ್ವರ್ಕ್​ ಹುಡುಕುತ್ತಾ ಬೆಟ್ಟ ಹತ್ತಿದ್ದ ವಿದ್ಯಾರ್ಥಿ ಜಾರಿ ಕೆಳಗೆ ಬಿದ್ದು, ಗಂಭೀರ ಗಾಯಗೊಂಡಿದ್ದಾನೆ. ಸ್ಥಳೀಯರು ಆತನನ್ನು ಗಂಭೀರ ಸ್ಥಿತಿಯಲ್ಲೇ ಪದ್ಮಪುರ ಮೆಡಿಕಲ್‌ಗೆ ಕರೆದೊಯ್ದರು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಎಂಕೆಸಿಜಿ ಮೆಡಿಕಲ್‌ಗೆ ತೆರಳುತ್ತಿದ್ದಾಗ, ಬೆರ್ಹಂಪುರ್ ಮಾರ್ಗ ಮಧ್ಯೆ ಮೃತಪಟ್ಟರು. ಸ್ಥಳೀಯ ಶಿಕ್ಷಕ ಬಿಜಯ್ ಚೌಧರಿ ಮಾತನಾಡಿ, ಮೊಬೈಲ್ ನೆಟ್ವರ್ಕ್ ಜಿಲ್ಲೆಯಲ್ಲಿ ಒಂದು ಪ್ರಮುಖ ಸಮಸ್ಯೆಯಾಗಿದೆ ಮತ್ತು ಅನೇಕ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಹಳ್ಳಿಗಳಲ್ಲಿ, ವಿದ್ಯಾರ್ಥಿಗಳು ಆನ್‌ಲೈನ್ ತರಗತಿಗಳನ್ನು ಅಧ್ಯಯನ ಮಾಡಲು ತಮ್ಮ, ತಮ್ಮ ಊರಿನಲ್ಲಿರುವ ಛಾವಣಿಗಳು, ಮರಗಳು ಮತ್ತು ಬೆಟ್ಟಗಳ ಮೇಲೆ ಕುಳಿತುಕೊಳ್ಳುವುದನ್ನು ಕಾಣಬಹುದು.


  ಶಾಲೆ ಮತ್ತು ಕಾಲೇಜು ಭಾಗಶಃ ತೆರೆದಿದ್ದರೂ, ಒಡಿಶಾದಲ್ಲಿ ಮೂರನೇ ಕೋವಿಡ್ -19 ಅಲೆಯ ಭಯ ಮತ್ತು  ಮಕ್ಕಳಿಗೆ ಲಸಿಕೆಯ ಕೊರತೆಯ ಭಯದ ನಡುವೆ ಮಕ್ಕಳ ಹಾಜರಾತಿ ಕಡಿಮೆ ಇದ್ದು, ಪೋಷಕರು ಮಕ್ಕಳನ್ನು ಶಾಲೆಗೆ ಕಳಿಸಲು ಹಿಂದೇಟು ಹಾಕುತ್ತಿದ್ದಾರೆ.

  ಯೂಟ್ಯೂಬ್ ತರಗತಿಗಳು ಆಗಸ್ಟ್ 23 ರಂದು ಆರಂಭವಾಗುವ ನಿರೀಕ್ಷೆಯಿದ್ದು. ಶಿಕ್ಷಣ ವಿಭಾಗವು ಈ ಹಿಂದೆ ಯೂಟ್ಯೂಬ್ ಲೈವ್ ತರಗತಿಗಳನ್ನು ಅಳವಡಿಸಿಕೊಂಡಿತ್ತು. ಈ ತರಗತಿಗಳನ್ನು ಸೇವ್​ ಮಾಡುತ್ತಿರಲಿಲ್ಲ,  ಆದರೆ ಈಗ ಹೊಸಾ ರೀತಿಯ ಯೋಜನೆ ತಂದಿದ್ದು"ಶಾಲೆ ಮುಚ್ಚಿದರೂ ತರಗತಿಗಳು ಮುಚ್ಚುವುದಿಲ್ಲ" ಯಾವಾಗ ಬೇಕಾದರೂ ವಿದ್ಯಾರ್ಥಿಗಳು ತಮ್ಮ ಪಾಠವನ್ನು ಕೇಳಬಹುದು ಎಂದು ರಾಜ್ಯ ಶಾಲಾ ಮತ್ತು ಸಮೂಹ ಶಿಕ್ಷಣ ಸಚಿವ ಸಮೀರ್ ರಂಜನ್ ದಾಸ್ ಹೇಳಿದರು.


  ಇದನ್ನೂ ಓದಿ: ಆರ್​ಎಸ್​ಎಸ್​ಅನ್ನು ತಾಲಿಬಾನಿಗೆ ಹೋಲಿಸಿದ ಕಾಂಗ್ರೆಸ್​ ನಾಯಕ ಧ್ರುವನಾರಾಯಣ್​; ಬಿಜೆಪಿ ಪಾಳಯ ಕೆಂಡಾಮಂಡಲ

  YouTube ಲೈವ್ ತರಗತಿಗಳು ಸೋಮವಾರದಿಂದ ಶುಕ್ರವಾರದವರೆಗೆ ವಾರದಲ್ಲಿ ಐದು ದಿನ ನಡೆಯಲಿದೆ. ಇದು ಬೆಳಿಗ್ಗೆ 9:30 ಕ್ಕೆ ಆರಂಭವಾಗುತ್ತದೆ ಮತ್ತು ಮಧ್ಯಾಹ್ನ 1.30 ರವರೆಗೆ ನಡೆಯುತ್ತದೆ. ದಿನಕ್ಕೆ ಐದು ಅವಧಿ ಇರುತ್ತದೆ. ವಿಜ್ಞಾನ, ವಾಣಿಜ್ಯ, ಕಲೆ ಮತ್ತು ಬಿಜಿನೆಸ್​ ಆಧಾರದ ಮೇಲೆ ವಿಂಗಡಿಸಲಾಗಿದೆ. ಲೈವ್ ತರಗತಿಗಳಲ್ಲಿ ವಿದ್ಯಾರ್ಥಿಗಳು ಪಾಠಗಳನ್ನು ಕೇಳಬಹುದು, ಅಥವಾ ನಂತರ ಓದಬಹುದು ಏಕೆಂದರೆ ಈ ತರಗತಿಗಳನ್ನು ದಾಖಲಿಸಲಾಗುತ್ತದೆ ಎಂದು ಶಾಲಾ ಮತ್ತು ಸಮೂಹ ಶಿಕ್ಷಣ ಸಚಿವ ಸಮೀರ್ ರಂಜನ್ ದಾಸ್​ ಮಾಹಿತಿ ನೀಡಿದರು.

   

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: