ಕೋವಿಡ್-19 ರೋಗಿಗಳ ಚಿಕಿತ್ಸೆಗೆಂದೇ ದೊಡ್ಡ ಆಸ್ಪತ್ರೆ ಸ್ಥಾಪನೆಗೆ ಒಡಿಶಾ ಮುಂದು; ದೇಶದಲ್ಲಿ ಇದೇ ಮೊದಲು

ಕೋವಿಡ್-19 ರೋಗಿಗಳ ಚಿಕಿತ್ಸೆಗೆಂದು ಇಷ್ಟು ದೊಡ್ಡ ಮಟ್ಟದ ಆಸ್ಪತ್ರೆ ನಿರ್ಮಾಣವಾಗುತ್ತಿರುವುದು ಇಡೀ ದೇಶದಲ್ಲಿ ಇದೇ ಮೊದಲು. ಒಡಿಶಾಗೆ ಆ ಕೀರ್ತಿ ಲಭ್ಯವಾಗಲಿದೆ.

news18
Updated:March 26, 2020, 5:24 PM IST
ಕೋವಿಡ್-19 ರೋಗಿಗಳ ಚಿಕಿತ್ಸೆಗೆಂದೇ ದೊಡ್ಡ ಆಸ್ಪತ್ರೆ ಸ್ಥಾಪನೆಗೆ ಒಡಿಶಾ ಮುಂದು; ದೇಶದಲ್ಲಿ ಇದೇ ಮೊದಲು
ಪ್ರಾತಿನಿಧಿಕ ಚಿತ್ರ
  • News18
  • Last Updated: March 26, 2020, 5:24 PM IST
  • Share this:
ಬೆಂಗಳೂರು(ಮಾ. 26): ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯಿಂದ ಮುಂಬೈನಲ್ಲಿ ಕೊರೋನಾ ವೈರಸ್ ರೋಗಿಗಳ ಚಿಕಿತ್ಸೆಗೆ 100 ಬೆಡ್ ಇರುವ ಪ್ರತ್ಯೇಕ ಆಸ್ಪತ್ರೆ ಸ್ಥಾಪನೆಯಾಗಿರುವ ಸುದ್ದಿ ಕೇಳಿದ್ದೇವೆ. ಆದರೆ, ಒಡಿಶಾದಲ್ಲಿ ಇನ್ನೂ ಬೃಹತ್ತಾದ ವಿಶೇಷ ಆಸ್ಪತ್ರೆಯೊಂದು ಸ್ಥಾಪನೆಯಾಗುತ್ತಿದೆ. ಕೊರೋನಾ ರೋಗಿಗಳ ಚಿಕಿತ್ಸೆಗೆ 1,000 ಬೆಡ್ ಇರುವ ಆಸ್ಪತ್ರೆ ನಿರ್ಮಾಣಕ್ಕೆ ಒಡಿಶಾ ಸರ್ಕಾರ ಯೋಜಿಸಿದೆ. ಆ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಇನ್ನೆರಡು ವಾರದಲ್ಲಿ ಕೋವಿಡ್-19 ಆಸ್ಪತ್ರೆ ಸಿದ್ಧಗೊಳ್ಳಬಹುದು ಎಂದು ಎಎನ್​ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಕೋವಿಡ್-19 ರೋಗಿಗಳ ಚಿಕಿತ್ಸೆಗೆಂದು ಇಷ್ಟು ದೊಡ್ಡ ಮಟ್ಟದ ಆಸ್ಪತ್ರೆ ನಿರ್ಮಾಣವಾಗುತ್ತಿರುವುದು ಇಡೀ ದೇಶದಲ್ಲಿ ಇದೇ ಮೊದಲು. ಒಡಿಶಾಗೆ ಆ ಕೀರ್ತಿ ಲಭ್ಯವಾಗಲಿದೆ.

ರಿಲಾಯನ್ಸ್ ಸಂಸ್ಥೆ ಒಡೆತನ ಎಚ್.ಎನ್. ರಿಲಾಯನ್ಸ್ ಫೌಂಡೇಶನ್ ಆಸ್ಪತ್ರೆಯು ಮುಂಬೈ ಪಾಲಿಕೆ ಸಹಯೋಗದಲ್ಲಿ ಸೆವೆನ್ ಹಿಲ್ಸ್ ಆಸ್ಪತ್ರೆಯಲ್ಲಿ ಕೊರೋನಾ ವೈರಸ್ ರೋಗಿಗಳ ಚಿಕಿತ್ಸೆಗೆಂದೇ 100 ಬೆಡ್​ಗಳುಳ್ಳ ಚಿಕಿತ್ಸಾ ಕೇಂದ್ರವನ್ನು ಪ್ರಾರಂಭಿಸಿದೆ. ಆದರೆ, 1 ಸಾವಿರ ಬೆಡ್​ಗಳುಳ್ಳ ಪ್ರತ್ಯೇಕ ಆಸ್ಪತ್ರೆ ಸ್ಥಾಪಿಸಲಾಗುತ್ತಿರುವುದು ದೇಶದಲ್ಲಿ ಇದೇ ಮೊದಲಾಗಿದೆ. ಒಡಿಶಾ ಸರ್ಕಾರದ ಈ ಕ್ರಮ ಸಾಕಷ್ಟು ಪ್ರಶಂಸೆಗೆ ಪಾತ್ರವಾಗಿದೆ.

ದೇಶಾದ್ಯಂತ ಕೊರೋನಾದಿಂದ ಸೋಂಕಿತವಾದವರ ಸಂಖ್ಯೆ 650 ದಾಟಿದೆ. ಸಾವಿನ ಸಂಖ್ಯೆ 15 ಮುಟ್ಟಿದೆ. ಭಾರತದಲ್ಲಿ ಪ್ರಧಾನಿ ಮೋದಿ 21 ದಿನಗಳ ಕಾಲ ಲಾಕ್ ಡೌನ್ (ದಿಗ್ಬಂಧನ) ಘೋಷಿಸಿದ್ದಾರೆ. ಅನಿವಾರ್ಯ ಸಂದರ್ಭ ಹೊರತುಪಡಿಸಿ ಉಳಿದಂತೆ ಯಾವಾಗಲೂ ಮನೆಯಿಂದ ಹೊರಗೆ ಹೋಗಬಾರದು ಎಂದು ಅಪ್ಪಣೆ ಮಾಡಿದ್ಧಾರೆ.

First published:March 26, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ