HOME » NEWS » Coronavirus-latest-news » ODISHA ANNOUNCES 14 DAY LOCKDOWN FROM MAY 5 DUE TO SURGE IN COVID CASES SKTV

Coronavirus: ನಿಯಂತ್ರಣಕ್ಕೆ ಬಾರದ ಕೊರೊನಾ, ಮೇ 5ರಿಂದ 14 ದಿನಗಳ ಲಾಕ್​ಡೌನ್ ಘೋಷಿಸಿದ ಒಡಿಶಾ ಸರ್ಕಾರ

ಒಡಿಶಾ ರಾಜ್ಯ ಸರ್ಕಾರ ಮೇ 15ರಿಂದ 15ರವರಗೆ ಒಟ್ಟು 14 ದಿನಗಳ ಲಾಕ್ಡೌನ್ ಘೋಷಿಸಿದೆ. ವಾರದ ದಿನಗಳಲ್ಲಿ ಬೆಳಗ್ಗೆ 7ರಿಂದ 12 ಗಂಟೆಯವರಗೆ ಜನರು ತಮ್ಮ ಮನೆಯಿಂದ 500 ಮೀಟರ್ ದೂರದವರಗೆ ಅಗತ್ಯ ವಸ್ತುಗಳ ಖರೀದಿಗೆ ತೆರಳಬಹುದಾಗಿದೆ. 12 ಗಂಟೆಯ ನಂತರ ಸಂಪೂರ್ಣ ಲಾಕ್ಡೌನ್ ಆಗಲಿದೆ.

Soumya KN | news18-kannada
Updated:May 2, 2021, 12:14 PM IST
Coronavirus: ನಿಯಂತ್ರಣಕ್ಕೆ ಬಾರದ ಕೊರೊನಾ, ಮೇ 5ರಿಂದ 14 ದಿನಗಳ ಲಾಕ್​ಡೌನ್ ಘೋಷಿಸಿದ ಒಡಿಶಾ ಸರ್ಕಾರ
ಸಾಂದರ್ಭಿಕ ಚಿತ್ರ
  • Share this:
ಒಡಿಶಾ(ಮೇ 02): ಒಡಿಶಾ ರಾಜ್ಯದಲ್ಲಿ ಕೊರೊನಾ ಸೋಂಕು ಬಹಳ ವೇಗವಾಗಿ ಹರಡುತ್ತಿದೆ. ಇದನ್ನು ತಡೆಯಲು ಇದುವರಗೆ ಮಾಡಿದ ಎಲ್ಲಾ ಪ್ರಯತ್ನಗಳೂ ವಿಫಲವಾದ ಹಿನ್ನೆಲೆಯಲ್ಲಿ ಒಡಿಶಾ ರಾಜ್ಯ ಸರ್ಕಾರ ಮೇ 15ರಿಂದ 15ರವರಗೆ ಒಟ್ಟು 14 ದಿನಗಳ ಲಾಕ್​ಡೌನ್ ಘೋಷಿಸಿದೆ. ವಾರದ ದಿನಗಳಲ್ಲಿ ಬೆಳಗ್ಗೆ 7ರಿಂದ 12 ಗಂಟೆಯವರಗೆ ಜನರು ತಮ್ಮ ಮನೆಯಿಂದ 500 ಮೀಟರ್​ ದೂರದವರಗೆ ಅಗತ್ಯ ವಸ್ತುಗಳ ಖರೀದಿಗೆ ತೆರಳಬಹುದಾಗಿದೆ. 12 ಗಂಟೆಯ ನಂತರ ಸಂಪೂರ್ಣ ಲಾಕ್​ಡೌನ್ ಆಗಲಿದೆ. ಇನ್ನು ವೀಕೆಂಡ್​ನಲ್ಲಿ ಸಂಪೂರ್ಣ ಲಾಕ್​ಡೌನ್ ಇರಲಿದೆ ಎಂದು ಒಡಿಶಾ ರಾಜ್ಯ ಸರ್ಕಾರ ಆದೇಶಿಸಿದೆ.

ಇಂದು (ಭಾನುವಾರ) ಒಡಿಶಾ ರಾಜ್ಯ ಸರ್ಕಾರ ಲಾಕ್​ಡೌನ್ ಘೋಷಣೆ ಮಾಡಿದೆ. ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 8,015 ಹೊಸಾ ಕೋವಿಡ್ ಪ್ರಕರಣಗಳು ವರದಿಯಾಗಿದ್ದು 14 ಜನ ಸಾವನ್ನಪ್ಪಿದ್ದಾರೆ ಎಂದು ಒಡಿಶಾ ಆರೋಗ್ಯ ಇಲಾಖೆ ತಿಳಿಸಿದೆ. ಇದರಿಂದ ಇದುವರಗೆ ಒಡಿಶಾದಲ್ಲಿ ಒಟ್ಟು 4,62,622 ಜನರಿಗೆ ಸೋಂಕು ತಗುಲಿದ್ದು ಅವರಲ್ಲಿ 3,91,048 ಜನ ಗುಣಮುಖರಾಗಿದ್ದಾರೆ. ಇದುವರಗೆ ರಾಜ್ಯದಲ್ಲಿ 2068 ಜನ ಸೋಂಕಿಗೆ ಬಲಿಯಾಗಿದ್ದು 69543 ಆಕ್ಟಿವ್ ಪ್ರಕರಣಗಳಿವೆ.

Youtube Video

ಹೊಸಾ ಪ್ರಕರಣಗಳಲ್ಲಿ ಕ್ವಾರಂಟೈನ್​​ನಲ್ಲಿ ಇದ್ದ 4568 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ವರ್ಷ ಏಪ್ರಿಲ್ ನಿಂದ  ಜುಲೈವರಗೆ ಕೋವಿಡ್ ಡ್ಯೂಟಿಯಲ್ಲಿರುವ ಎಲ್ಲಾ ಆರೋಗ್ಯ ಕಾರ್ಯಕರ್ತರಿಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರೋತ್ಸಾಹ ಧನ ನೀಡುವುದಾಗಿ ಘೋಷಿಸಿತ್ತು.
Published by: Soumya KN
First published: May 2, 2021, 12:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories