ಕೊರೋನಾ ಕರಾಳ ನರ್ತನ; ದೇಶದಲ್ಲಿ ಸೋಂಕಿತರ ಸಂಖ್ಯೆ 223ಕ್ಕೆ ಏರಿಕೆ; ಮಹಾರಾಷ್ಟದಲ್ಲಿಯೇ 49 ಪ್ರಕರಣ ಪತ್ತೆ

ಕೊರೋನಾ ಸೋಂಕು ತೀವ್ರವಾಗಿ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ದೇಶವ್ಯಾಪಿ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಶಾಲಾ-ಕಾಲೇಜು, ಥಿಯೇಟರ್, ಮಾಲ್​ಗಳು, ಸಭೆ-ಸಮಾರಂಭಗಳನ್ನು ಸ್ಥಗಿತ ಮಾಡಲಾಗಿದೆ. ಬಹುತೇಕ ಖಾಸಗಿ ಕಂಪನಿಗಳು ಸಿಬ್ಬಂದಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶ ಮಾಡಿಕೊಟ್ಟಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ನವದೆಹಲಿ: ಮಾರಕ ಮಹಾಮಾರಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ತನ್ನ ಕರಾಳ ನರ್ತನ ತೋರುತ್ತಿದ್ದು, ಇದವರೆಗೂ ವಿಶ್ವದಾದ್ಯಂತ ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಸರಿಸುಮಾರು 2,42,000 ಮಂದಿ ಸೋಂಕಿಗೆ ತುತ್ತಾಗಿದ್ದು ಜೀವನ್ಮರಣದ ನಡುವೆ ಹೋರಾಡುತ್ತಿದ್ದಾರೆ.

  ಭಾರತದಲ್ಲೂ ರೌದ್ರಾವತಾರ ತಾಳಿರುವ ಕೊರೋನಾ ವ್ಯಾಪಕವಾಗಿ ಹರಡುತ್ತಿದೆ. ಇದುವರೆಗೂ ದೇಶದಲ್ಲಿ 223 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಇಟಲಿ ಪ್ರಜೆ ಸೇರಿದಂತೆ ಐದು ಮಂದಿ ಜೀವ ತೆತ್ತಿದ್ದಾರೆ.

  ಕೊರೋನಾ ಸೋಂಕು ತೀವ್ರವಾಗಿ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ದೇಶವ್ಯಾಪಿ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಶಾಲಾ-ಕಾಲೇಜು, ಥಿಯೇಟರ್, ಮಾಲ್​ಗಳು, ಸಭೆ-ಸಮಾರಂಭಗಳನ್ನು ಸ್ಥಗಿತ ಮಾಡಲಾಗಿದೆ. ಬಹುತೇಕ ಖಾಸಗಿ ಕಂಪನಿಗಳು ಸಿಬ್ಬಂದಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶ ಮಾಡಿಕೊಟ್ಟಿವೆ.

  ಇದುವರೆಗೂ ದೇಶದಲ್ಲಿ ಒಟ್ಟು 223 ಪ್ರಕರಣಗಳು ಪತ್ತೆಯಾಗಿವೆ. ಇವುಗಳಲ್ಲಿ ಮಹಾರಾಷ್ಟ್ರದಲ್ಲಿ ಹೆಚ್ಚಿನ ಮಂದಿ ಸೋಂಕಿಗೆ ತುತ್ತಾಗಿದ್ದು, 49 ಪ್ರಕರಣಗಳ ಈವರೆಗೂ ದಾಖಲಾಗಿವೆ. ಸೋಂಕು ನಿಯಂತ್ರಣಕ್ಕಾಗಿ ಮಹಾರಾಷ್ಟ್ರ ಸರ್ಕಾರ ದಿನನಿತ್ಯದ ಚಟುವಟಿಕೆಗಳ ಮೇಲೆ ನಿರ್ಬಂಧ ವಿಧಿಸಿದೆ. ಹೀಗಾಗಿ ವಾಣಿಕ್ಯ ನಗರಿ ಮುಂಬೈ ಬಹುತೇಕ ಸ್ತಬ್ಧವಾಗಿದೆ. ಅದೇ ರೀತಿ ಕೇರಳದಲ್ಲೂ ಕೂಡ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು, ಅಲ್ಲಿನ ಸರ್ಕಾರ ಕೂಡ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ.

  ಇದನ್ನು ಓದಿ: ಮುಂಬೈ, ಪುಣೆ, ನಾಗಪುರದಲ್ಲಿ ಮಾ. 31ರವರೆಗೆ ಎಲ್ಲಾ ಕಚೇರಿ, ಅಂಗಡಿ ಮುಂಗಟ್ಟು ಬಂದ್​ಗೆ ಆದೇಶ

  ಕರ್ನಾಟಕದಲ್ಲಿ ಸೋಂಕಿತರ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈವರೆಗೂ ರಾಜ್ಯದಲ್ಲಿ 15 ಪ್ರಕರಣಗಳು ಪತ್ತೆಯಾಗಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಖುಷಿಯ ವಿಚಾರ ಏನೆಂದರೆ ಸೋಂಕಿತ 15 ಮಂದಿಯಲ್ಲಿ ಐವರು ಗುಣಮುಖರಾಗುತ್ತಿದ್ದು, ಇಬ್ಬರು ಸಂಪೂರ್ಣವಾಗಿ ಗುಣಮುಖರಾಗಿ, ಮನೆಗೆ ತೆರಳುತ್ತಿದ್ದಾರೆ ಎಂದು ರಾಜ್ಯ ಆರೋಗ್ಯ ಸಚಿವ ಶ್ರೀರಾಮುಲು ಮಾಹಿತಿ ನೀಡಿದ್ದಾರೆ.

   
  First published: