ಭಾರತದಲ್ಲಿ 600ರ ಗಡಿ ದಾಟಿದ ಸೋಂಕಿತರ ಸಂಖ್ಯೆ; ಇದುವರೆಗೂ 10 ಮಂದಿ ಸಾವು

ಭಾರತದಲ್ಲಿ ಈಗಾಗಲೇ 606 ಜನರಿಗೆ ಕೊರೋನಾ ಸೋಂಕು ತಗುಲಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಲಾಗಿದೆ. ಆದರೂ, ಕೊರೋನಾ ಶಂಕಿತರಿಗೆ ಸರಿಯಾದ ಟೆಸ್ಟಿಂಗ್ ಮಾಡುವಲ್ಲಿ ವಿಳಂಬ ಧೋರಣೆ ತಳೆದರೆ ಇಡೀ ದೇಶವನ್ನೇ ಆವರಿಸುವ ಕೊರೋನಾದಿಂದ ಜನರನ್ನು ಕಾಪಾಡುವುದು ಕಷ್ಟ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.

news18-kannada
Updated:March 25, 2020, 10:05 PM IST
ಭಾರತದಲ್ಲಿ 600ರ ಗಡಿ ದಾಟಿದ ಸೋಂಕಿತರ ಸಂಖ್ಯೆ; ಇದುವರೆಗೂ 10 ಮಂದಿ ಸಾವು
ಕೊರೋನಾ ಪ್ರಕರಣಗಳು
  • Share this:
ನವದೆಹಲಿ(ಮಾ.25): ವ್ಯಾಪಕವಾಗಿ ಹರಡುತ್ತಿರುವ ಕೊರೋನಾ ವೈರಸ್​ ನಿಯಂತ್ರಿಸಲು ಪ್ರಧಾನಿ ನರೇಂದ್ರ ಮೋದಿಯವರು ನೀಡಿದ 21 ದಿನಗಳ ಕಾಲ ಲಾಕ್​​ಡೌನ್​​ ಕರೆಗೆ ದೇಶಾದ್ಯಂತ ಉತ್ತಮ ಬೆಂಬಲ ಸಿಕ್ಕಿದೆ. ಈ ಮಧ್ಯೆಯೂ ಕೋವಿಡ್-19 ಸೋಂಕಿನ ಅಟ್ಟಹಾಸ ಮುಂದುವರೆದ ಪರಿಣಾಮ ಭಾರತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 10ಕ್ಕೇರಿದೆ. ಜತೆಗೆ ಇಲ್ಲಿಯವರೆಗೂ 606 ಮಂದಿಗೆ ಕೊರೋನಾ ಸೋಂಕಿರುವುದು ಧೃಡವಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಭಾರತದಲ್ಲಿ ಕೊರೋನಾ ವೈರಸ್​ ತಡೆಗಟ್ಟಲು ಹಲವು ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇಷ್ಟಾದರೂ ದೇಶದಲ್ಲಿ ಕೊರೋನಾ ವೈರಸ್ ಪ್ರಕರಣಗಳು ಹೆಚ್ಚುತ್ತಿದ್ದು, ಈಗಾಗಲೇ 10 ಜನರು ಸಾವನ್ನಪ್ಪಿದ್ದಾರೆ. ಕೊರೋನಾ ವೈರಸ್​ನ ಗಂಭೀರತೆಯನ್ನು ಅರಿತ ಕೇಂದ್ರ ಸರ್ಕಾರ ದೇಶಾದ್ಯಂತ 21 ದಿನಗಳ ಕಾಲ ಲಾಕ್​ಡೌನ್​​ಗೆ ಕರೆ ನೀಡಿದೆ.

ಭಾರತದಲ್ಲಿ ಈಗಾಗಲೇ 606 ಜನರಿಗೆ ಕೊರೋನಾ ಸೋಂಕು ತಗುಲಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಲಾಗಿದೆ. ಆದರೂ, ಕೊರೋನಾ ಶಂಕಿತರಿಗೆ ಸರಿಯಾದ ಟೆಸ್ಟಿಂಗ್ ಮಾಡುವಲ್ಲಿ ವಿಳಂಬ ಧೋರಣೆ ತಳೆದರೆ ಇಡೀ ದೇಶವನ್ನೇ ಆವರಿಸುವ ಕೊರೋನಾದಿಂದ ಜನರನ್ನು ಕಾಪಾಡುವುದು ಕಷ್ಟ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: 21 ದಿನಗಳ ಭಾರತ್​​ ಬಂದ್​ ಕೊರೋನಾ ತಡೆಯುತ್ತೆ ಎನ್ನಲು ವೈಜ್ಞಾನಿಕ ಪುರಾವೆಗಳಿಲ್ಲ - ಪ್ರಶಾಂತ್​​ ಕಿಶೋರ್​

ಅಮೆರಿಕ, ಇಟಲಿಯಂತಹ ದೇಶಗಳಲ್ಲಿ ಕೂಡ ಇದೇ ರೀತಿಯ ನಿರ್ಲಕ್ಷ್ಯ ಧೋರಣೆ ತಳೆದಿದ್ದರಿಂದಲೇ ಈಗ ಸಾವಿನ ಸಂಖ್ಯೆ ವಿಪರೀತಕ್ಕೆ ಹೋಗಿದೆ. ಕೊರೋನಾ ನಿಯಂತ್ರಣಕ್ಕೆ ಸಾಧ್ಯವೇ ಇಲ್ಲ ಎಂಬ ರಿಸ್ಥಿತಿ ಎದುರಾಗಿದೆ. ಭಾರತ ಕೂಡ ಈ ರೀತಿಯ ನಿರ್ಲಕ್ಷ್ಯ ತಳೆದರೆ ಮುಂದೆ ದೊಡ್ಡ ಬೆಲೆಯನ್ನೇ ತೆರಬೇಕಾದೀತು ಎಂಬುದು ಸಂಶೋಧಕರ ಎಚ್ಚರಿಕೆ. ಇಟಲಿ ಮತ್ತು ಅಮೆರಿಕದಲ್ಲಿ ಕೂಡ ಆರಂಭದಲ್ಲಿ ಟೆಸ್ಟಿಂಗ್ ವೇಳೆ ಇದೇ ಪ್ರಮಾಣದ ಪ್ರಕರಣಗಳು ಕಂಡುಬಂದಿದ್ದವು. ಆದರೆ, ಇದೀಗ ಅಲ್ಲಿ ಸಾವಿನ ಸಂಖ್ಯೆ ಗಣನೀಯವಾಗಿ ಏರುತ್ತಿದೆ.
First published: March 25, 2020, 9:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading