ರಾಜ್ಯದಲ್ಲಿ ಮತ್ತೆ ಹೊಸ ದಾಖಲೆ: 1939ಕ್ಕೆ ಏರಿದ ಕೊರೋನಾ ಪ್ರಕರಣ

ಇದೂವರೆಗೂ ರಾಜ್ಯದಲ್ಲಿ ದಾಖಲಾಗಿರುವ ಪ್ರಕರಣಗಳ ಸಂಖ್ಯೆ 1,939ಕ್ಕೇರಿದೆ. ಸಾವಿನ ಸಂಖ್ಯೆ 42 ತಲುಪಿದೆ.

news18-kannada
Updated:May 23, 2020, 1:55 PM IST
ರಾಜ್ಯದಲ್ಲಿ ಮತ್ತೆ ಹೊಸ ದಾಖಲೆ: 1939ಕ್ಕೆ ಏರಿದ ಕೊರೋನಾ ಪ್ರಕರಣ
ಪ್ರಾತಿನಿಧಿಕ ಚಿತ್ರ
  • Share this:
ಬೆಂಗಳೂರು(ಮೇ 23): ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಏರುವಿಕೆ ದರ ದಿನೇ ದಿನೇ ಹೆಚ್ಚಾಗುತ್ತಲೇ ಹೋಗುತ್ತಿದೆ. ಕಳೆದ 12 ಗಂಟೆ ಅವಧಿಯಲ್ಲಿ ಬರೋಬ್ಬರಿ 196 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ. ಇಬ್ಬರು ಸಾವನ್ನಪ್ಪಿದ್ದಾರೆ. ಬೆಂಗಳೂರು ಮತ್ತು ದಕ್ಷಿಣ ಕನ್ನಡದಲ್ಲಿ ಒಬ್ಬೊಬ್ಬ ವ್ಯಕ್ತಿಗಳು ಸಾವನ್ನಪ್ಪಿದ್ದಾರೆ. ಒಂದು ದಿನದ ಅವಧಿಯಲ್ಲಿ ಇಷ್ಟು ಪ್ರಕರಣ ಯಾವತ್ತೂ ದಾಖಲಾಗಿರಲಿಲ್ಲ. ಇವತ್ತು ಕೇವಲ ಅರ್ಧ ದಿನದಲ್ಲೇ 196 ಪ್ರಕರಣಗಳು ದೃಢಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ.

ಇದೂವರೆಗೂ ರಾಜ್ಯದಲ್ಲಿ ದಾಖಲಾಗಿರುವ ಪ್ರಕರಣಗಳ ಸಂಖ್ಯೆ 1,939ಕ್ಕೇರಿದೆ. ಸಾವಿನ ಸಂಖ್ಯೆ 42 ತಲುಪಿದೆ. ಇವತ್ತು ಸಾವನ್ನಪ್ಪಿದ ಬೆಂಗಳೂರಿನ 32 ವರ್ಷದ ವ್ಯಕ್ತಿ (ಪಿ-1270) ಮೇ 19ರಂದು ತೀವ್ರ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಇವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇನ್ನು, ದಕ್ಷಿಣ ಕನ್ನಡ ಜಿಲ್ಲೆಯ ಪಿ-1783 ರೋಗಿಯ ಸಾವಿಗೆ ಕೊರೋನಾ ಸೋಂಕು ಕಾರಣವಲ್ಲ ಎನ್ನಲಾಗಿದೆ.

ಇದನ್ನೂ ಓದಿ: ಮಂಗಳೂರಲ್ಲಿ ಕೊರೋನಾ ಗೆದ್ದ ಒಬ್ಬೊಬ್ಬ ಜನರದ್ದೂ ಕರುಣಾಜನಕ ಕಥೆ

ಇವತ್ತು ಪಾಸಿಟಿವ್ ಬಂದ ಪ್ರಕರಣಗಳಲ್ಲಿ ಬಹುತೇಕ ಮಂದಿ ಮಹಾರಾಷ್ಟ್ರದಿಂದ ಬಂದವರೇ ಆಗಿದ್ದಾರೆ. ಹೀಗಾಗಿ, ಕರ್ನಾಟಕಕ್ಕೆ ಮಹಾ ಕಂಟಕ ಮುಂದುವರಿದಿದೆ. ತಮಿಳುನಾಡು, ರಾಜಸ್ಥಾನ, ಗುಜರಾತ್ ರಾಜ್ಯಗಳಿಂದ ಬಂದ ಕೆಲವರಲ್ಲೂ ಇವತ್ತು ಸೋಂಕು ದೃಢಪಟ್ಟಿದೆ. ಅದೃಷ್ಟಕ್ಕೆ ಇವರ್ಯಾರೂ ಕೂಡ ತಮ್ಮ ಊರುಗಳಿಗೆ ಹೋಗದೇ ನೇರವಾಗಿ ಕ್ವಾರಂಟೈನ್​​ಗೆ ಒಳಪಟ್ಟಿದ್ದಾರೆ.

ಇವತ್ತು ಯಾದಗಿರಿಯಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಗದಗ, ರಾಯಚೂರು, ಕಲಬುರ್ಗಿ, ದಾವಣಗೆರೆ, ಧಾರವಾಡ, ಮಂಡ್ಯ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಹಾಸನ, ಕೋಲಾರ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲೂ ಪ್ರಕರಣಗಳು ಪತ್ತೆಯಾಗಿವೆ.

First published:May 23, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading