HOME » NEWS » Coronavirus-latest-news » NUMBER OF CORONA AFFECTED DEATHS IS RISING IN MAHARASHTRA MAK

Corona Virus: ಮಹಾರಾಷ್ಟ್ರದಲ್ಲಿ ಅಂಕೆಗೆ ಸಿಗದ ಕೊರೋನಾ ಅಟ್ಟಹಾಸ; ಏರುತ್ತಲೇ ಇದೆ ಸಾವಿನ ಸಂಖ್ಯೆ

ಕಳೆದ 24 ಗಂಟೆಗಳಲ್ಲಿ ಮಹಾರಾಷ್ಟ್ರದಲ್ಲಿ ಕೊರೋನಾದಿಂದಾಗಿ 60 ಸಾವುಗಳು ಸಂಭವಿಸಿವೆ. ಇದರೊಂದಿಗೆ ಒಟ್ಟು ಸಾವಿನ ಸಂಖ್ಯೆ 1,577ಕ್ಕೆ ಏರಿದೆ. ಇದಲ್ಲದೆ ರಾಜ್ಯದಲ್ಲಿ ಸತತ ಏಳನೇ ದಿನ 2,000 ಕ್ಕೂ ಹೆಚ್ಚು ಹೊಸ ಕರೋನಾ ವೈರಸ್ ಪ್ರಕರಣಗಳು ದಾಖಲಾಗಿವೆ ಎಂದು ವರದಿಯಾಗಿದೆ.

news18-kannada
Updated:May 23, 2020, 10:18 PM IST
Corona Virus: ಮಹಾರಾಷ್ಟ್ರದಲ್ಲಿ ಅಂಕೆಗೆ ಸಿಗದ ಕೊರೋನಾ ಅಟ್ಟಹಾಸ; ಏರುತ್ತಲೇ ಇದೆ ಸಾವಿನ ಸಂಖ್ಯೆ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ (ಮೇ 23): ಮಹಾರಾಷ್ಟ್ರದಲ್ಲಿ ಶನಿವಾರ ಒಂದೇ ದಿನ 2,608 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಇದು ದಿನವೊಂದರಲ್ಲಿ ದಾಖಲಾದ ಎರಡನೇ ಅತಿ ಹೆಚ್ಚು ಜಿಗಿತವಾಗಿದ್ದು, ಇದರಿಂದಾಗಿ ಮಹಾರಾಷ್ಟ್ರದ ಕರೋನಾ ಪ್ರಕರಣಗಳ  ಸಂಖ್ಯೆ 47,190ಕ್ಕೆ ಏರಿಕೆಯಾಗಿದೆ.

ಕಳೆದ 24 ಗಂಟೆಗಳಲ್ಲಿ ಮಹಾರಾಷ್ಟ್ರದಲ್ಲಿ ಕೊರೋನಾದಿಂದಾಗಿ 60 ಸಾವುಗಳು ಸಂಭವಿಸಿವೆ. ಇದರೊಂದಿಗೆ ಒಟ್ಟು ಸಾವಿನ ಸಂಖ್ಯೆ 1,577ಕ್ಕೆ ಏರಿದೆ. ಇದಲ್ಲದೆ, ರಾಜ್ಯದಲ್ಲಿ ಸತತ ಏಳನೇ ದಿನವೂ 2,000 ಕ್ಕೂ ಹೆಚ್ಚು ಹೊಸ ಕರೋನಾ ವೈರಸ್ ಪ್ರಕರಣಗಳು ದಾಖಲಾಗಿವೆ ಎಂದು ರಾಜ್ಯ ಆರೋಗ್ಯ ಇಲಾಖೆಯ ಅಂಕಿ ಅಂಶಗಳು ತಿಳಿಸಿವೆ. ಇಡೀ ದೇಶದ ಕೊರೋನಾ ಸೋಂಕು ಪೀಡಿತರ ಸಂಖ್ಯೆಯಲ್ಲಿ ಮಹಾರಾಷ್ಟ್ರದ ಪಾಲು ಮೂರನೇ ಒಂದು ಭಾಗದಷ್ಟಿದೆ.‌

ಮುಂಬೈ ಒಂದರಲ್ಲೇ ಶನಿವಾರ 1,566 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿವೆ. ಇದು ಶುಕ್ರವಾರದ ಎಣಿಕೆಗಿಂತ ಸ್ವಲ್ಪ ಕಡಿಮೆ ಎನ್ನಲಾಗಿದೆ. ಇದರಿಂದ ಮುಂಬೈನ ಒಟ್ಟು ಕೊರೊನಾ ಪಾಸಿಟಿವ್ ರೋಗಿಗಳ ಸಂಖ್ಯೆ 28,817ಕ್ಕೆ ಏರಿದೆ. ಮುಂಬೈನಲ್ಲಿ ಕಳೆದ 24 ಗಂಟೆಗಳಲ್ಲಿ 40 ಸಾವು ವರದಿಯಾಗಿವೆ. ಮುಂಬೈನಲ್ಲಿ ಕೊರೋನಾದಿಂದ ಸತ್ತವರ ಸಂಖ್ಯೆ 949ಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ : Ramadan: ಪವಿತ್ರ ರಂಜಾನ್; ನಾಳೆ ಮಾತ್ರ ಕರಾವಳಿಯಲ್ಲಿ, ಉಳಿದೆಡೆ ಸೋಮವಾರವೇ ಈದ್‌ ಉಲ್‌ ಫಿತ್ರ್‌ ಆಚರಣೆ
First published: May 23, 2020, 10:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories