ಪ್ರತಿ 3 ದಿನಗಳಿಗೊಮ್ಮೆ ಫ್ರಾನ್ಸ್ ನಲ್ಲಿ ದ್ವಿಗುಣವಾಗುತ್ತಿದೆ ಕೊರೋನಾ ವೈರಸ್ ಪ್ರಕರಣ

ತೀವ್ರವಾಗಿ ಅನಾರೋಗ್ಯದಿಂದ ಬಳಲುತ್ತಿರುವ ರೋಗಿಗಳ ಸಂಖ್ಯೆ ಮತ್ತು ತೀವ್ರ ನಿಗಾವಹಿಸುವ ಅಗತ್ಯವಿರುವವರು ಸಂಖ್ಯೆ ನೂರರ ಗಡಿ ದಾಟಿದೆ ಎಂದು ಫ್ರಾನ್ಸ್ ನ ಆರೋಗ್ಯ ಅಧಿಕಾರಿ ಜೆರೋಮ್ ಸಾಲೋಮನ್ ಹೇಳಿದ್ದಾರೆ.

ಸದ್ಯ ಮಹಾಮಾರಿ ಕೊರೋನಾ ವೈರಸ್ನಿಂದಾಗಿ ಮಾರ್ಚ್ 29 ರಂದು ಆರಂಭವಾಗಬೇಕಿದ್ದ ಐಪಿಎಲ್ ಅನ್ನು ಏಪ್ರಿಲ್ 15ಕ್ಕೆ ಮುಂದೂಡಲಾಗಿದೆ.

ಸದ್ಯ ಮಹಾಮಾರಿ ಕೊರೋನಾ ವೈರಸ್ನಿಂದಾಗಿ ಮಾರ್ಚ್ 29 ರಂದು ಆರಂಭವಾಗಬೇಕಿದ್ದ ಐಪಿಎಲ್ ಅನ್ನು ಏಪ್ರಿಲ್ 15ಕ್ಕೆ ಮುಂದೂಡಲಾಗಿದೆ.

 • Share this:
  ಪ್ಯಾರಿಸ್: ಫ್ರಾನ್ಸ್​ನಲ್ಲಿನ ಕರೋನಾವೈರಸ್ ಏಕಾಏಕಿ ತುಂಬಾ ಆತಂಕಕಾರಿಯಾಗಿ ವೇಗವಾಗಿ ಬೆಳೆಯುತ್ತಿದೆ ಎಂದು ದೇಶದ ಆರೋಗ್ಯ ಸೇವೆಯ ಮುಖ್ಯಸ್ಥರು ಸೋಮವಾರ ತಿಳಿಸಿದ್ದಾರೆ.

  "ಪ್ರತಿ ಮೂರು ದಿನಗಳಿಗೊಮ್ಮೆ ಪ್ರಕರಣಗಳ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ" ಎಂದು ಜೆರೋಮ್ ಸಾಲೋಮನ್ ಫ್ರಾನ್ಸ್ ಇಂಟರ್​ ಪತ್ರಿಕೆಗೆ ಹೇಳಿಕೆ ನೀಡಿದ್ದಾರೆ. ಅಲ್ಲದೇ ತೀವ್ರವಾಗಿ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳ ಸಂಖ್ಯೆ ಮತ್ತು ತೀವ್ರ ನಿಗಾ ಅಗತ್ಯವಿರುವವರ ಸಂಖ್ಯೆ ನೂರರ ಗಡಿಯನ್ನು ದಾಟಿದೆ ಎಂದು ಅವರು ಹೇಳಿದ್ದಾರೆ.

  "ನಮ್ಮ ನಾಗರಿಕರು ಕೊರೋನಾ ವೈರಸ್ ವೇಗವಾಗಿ ಹರಡುತ್ತಿದೆ ಎಂಬುದನ್ನು ಅರಿತುಕೊಳ್ಳಬೇಕೆಂದು ನಾನು ಬಯಸುತ್ತೇನೆ" ಎಂದು ಅವರು ಹೇಳಿದ್ದಾರೆ.

  ಭಾನುವಾರ ಪ್ರಕಟವಾದ ಇತ್ತೀಚಿನ ಅಧಿಕೃತ ಅಂಕಿಅಂಶಗಳ ಪ್ರಕಾರ, ಫ್ರಾನ್ಸ್​ನಲ್ಲಿ 127 ಜನರು ಕೊರೋನಾವೈರಸ್ ನಿಂದ ಮೃತಪಟ್ಟಿದ್ದಾರೆ ಮತ್ತು 5,423 ಸೋಂಕಿನ ಪ್ರಕರಣಗಳು ಧೃಢಪಟ್ಟಿವೆ.

  ಆದರೆ 24 ಗಂಟೆಗಳಲ್ಲಿ 36 ಸಾವುಗಳು ಸಂಭವಿಸಿದ್ದು, 900 ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಅಲ್ಲದೇ 400 ಕ್ಕೂ ಹೆಚ್ಚು ಜನರನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.

  ಏಕಾಏಕಿ ವೇಗವಾಗಿ ಹರಡುತ್ತಿರುವ ವೈರಸ್ ಆಸ್ಪತ್ರೆಗಳಲ್ಲಿ ಸಿಬ್ಬಂದಿಗೂ ತಲೆನೋವಾಗುವ ಚಿಂತೆ ಎದುರಾಗಿದೆ ಮತ್ತು ನಾವು ಆ ತೊಂದರೆಯನ್ನು ಸಂಪೂರ್ಣವಾಗಿ ತಪ್ಪಿಸಲು ಬಯಸುತ್ತೇವೆ "ಎಂದು ಸಾಲೋಮನ್ ಹೇಳಿದ್ದಾರೆ.

  ಜರ್ಮನಿಯ ಸಮೀಪವಿರುವ ಅಲ್ಸೇಸ್​ನ ಪೂರ್ವ ಪ್ರದೇಶ ಮತ್ತು ಪ್ಯಾರಿಸ್​ನ ಬಹುತೇಕ ಭಾಗಗಳಲ್ಲಿ ವೈರಸ್ ಜನರನ್ನು ಕಾಡುತ್ತಿದೆ ಎಂದು ಸಾಲೋಮನ್ ಹೇಳಿದ್ದಾರೆ.

  ಇದನ್ನೂ ಓದಿ: ಜನ ಸಂದಣಿಗಳಿಂದ ದೂರವಿರುವುದು ಒಳ್ಳೆಯ ಹೆಜ್ಜೆ: ಕೊರೋನಾ ವೈರಸ್ ಬಗ್ಗೆ ಐಸಿಎಂಆರ್ ನಿರ್ದೇಶಕ ಎಚ್ಚರಿಕೆ

  ಇದಕ್ಕಾಗಿಯೇ ವೈರಸ್ ಹರಡುವುದನ್ನು ತಡೆಯಲು ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

  ಫ್ರಾನ್ಸ್​ನ ಪ್ರತಿ ಜನರು ಪ್ರತಿದಿನ ಬೆಳಿಗ್ಗೆ ತಮಗೆ ತಾವೇ ಜನರ ಸಂಪರ್ಕವನ್ನು ಹೇಗೆ ಕಡಿಮೆ ಮಾಡುವುದು ಎಂದು ಯೋಚಿಸಬೇಕು. ಮನೆಯಲ್ಲಿಯೇ ಇರಿ ಆಗ ವೈರಸ್ ಹರಡುವುದನ್ನು ತಪ್ಪಿಸಬಹುದು ಎಂದಿದ್ದಾರೆ.

  ಇದನ್ನೂ ಓದಿ: ನಿಲ್ಲದ ಕೊರೋನಾ ಅಬ್ಬರ; ಇರಾನ್​ನಿಂದ 53 ಭಾರತೀಯರು ತಾಯ್ನಾಡಿಗೆ ವಾಪಾಸ್

  ಪ್ರಪಂಚದಾದ್ಯಂತ ಕೊರೋನಾ ವೈರಸ್ 1, 69,316 ಜನರಿಗೆ ತಗುಲಿದ್ದು 6,500 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ. ಅಲ್ಲದೇ ಭಾರತದಲ್ಲಿ ಕೊರೋನಾ ವೈರಸ್ ಪ್ರಕರಣ 110 ಕ್ಕೆ ಏರಿದ್ದು ಜನರಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.

  (ವರದಿ: ಸಂಧ್ಯಾ ಎಂ)
  First published: