ಆರೋಗ್ಯ ಸಿಬ್ಬಂದಿಗೆ ಬಿಗ್ ರಿಲೀಫ್; ಸರ್ಕಾರದಿಂದ ಸಿಕ್ತು ಗುಡ್ ನ್ಯೂಸ್

ಈ ಮೊದಲು ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದವರಿಗೆ ಕೊರೋನಾ ವೈರಸ್​ ಲಕ್ಷಣ ಇರಲಿ ಅಥವಾ ಇಲ್ಲದಿರಲಿ ಕಡ್ಡಾಯವಾಗಿ ಸರ್ಕಾರ ಸೂಚಿಸಿದ ಕೇಂದ್ರದಲ್ಲೇ ಅವರು ಕ್ವಾರಂಟೈನ್​ ಆಗಬೇಕಿತ್ತು. ಈ ಬಗ್ಗೆ ಅನೇಕರು ವಿರೋಧ ವ್ಯಕ್ತಪಡಿಸಿದ್ದರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬೆಂಗಳೂರು (ಜೂ.27): ರೋಗ ಲಕ್ಷಣ ಇಲ್ಲದ ವೈದ್ಯರು, ದಾದಿಯರು ಮತ್ತು ಪ್ಯಾರಮೆಡಿಕ್​​ಗಳಿಗೆ ಇನ್ನುಮುಂದೆ ಹೋಮ್ ಕ್ವಾರಂಟೈ​​ನಲ್ಲಿರಲು ಇರಲು ಸರ್ಕಾರ ಅನುಮತಿ ನೀಡಿದೆ. ಈ ಮೂಲಕ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ನೇತೃತ್ವದ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ.

  ಆರೋಗ್ಯ ಸಿಬ್ಬಂದಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿರುತ್ತಾರೆ. ಹೀಗಾಗಿ ಅವರಿಗೆ ಕೊರೋನಾ ಚಿಕಿತ್ಸೆ, ಅದರ ಲಕ್ಷಣ, ತೆಗೆದುಕೊಳ್ಳಬೇಕಾದ ಎಚ್ಚರಿಕೆ, ಕ್ವಾರಂಟೈನ್ ಎಲ್ಲದರ ಬಗ್ಗೆ ಪೂರ್ಣ ಅರಿವಿರುತ್ತದೆ. ಹೀಗಾಗಿ, ರೋಗಲಕ್ಷಣ ಇಲ್ಲದಿರುವವರಿಗೆ ಮನೆಯಲ್ಲೇ ಇರಲು ಅನುಮತಿ ನೀಡಲಾಗಿದೆ.

  “ಆಸ್ಪತ್ರೆಯಿಂದ ತೆರಳಿದ ನಂತರ ಸ್ವ ನಿರ್ಬಂಧ ಹೇರಿಕೊಂಡು ಮನೆಯಲ್ಲೇ ಇರುವಂತೆ ಸೂಚಿಸುತ್ತೇವೆ. ಪ್ರತ್ಯೇಕವಾಗಿ ಇರುವುದರ ಬಗ್ಗೆ ಅವರಿಗೆ ಮತ್ತೊಮ್ಮೆ ಮಾಹಿತಿ ನೀಡಿ, ಅಗತ್ಯ ಕ್ರಮಗಳ ಬಗ್ಗೆ ಎಚ್ಚರಿಕೆ ನೀಡುತ್ತೇವೆ. ಜೊತೆಗೆ ಪಿಪಿಇ ಕಿಟ್, ಉಸಿರಾಟ ಪರೀಕ್ಷಾ ಸಲಕರಣೆಯನ್ನು ಒದಗಿಸುತ್ತೇವೆ,” ಎಂದು ಸರ್ಕಾರ ತಿಳಿಸಿದೆ.

  ಇದರ ಜೊತೆಗೆ, ಆರೋಗ್ಯ ಸಿಬ್ಬಂದಿ ತಮ್ಮ‌ ಮೇಲಧಿಕಾರಿಗೆ ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ನೀಡಬೇಕು. 7 ದಿನಗಳ ಐಸೊಲೇಶನ್ ನಂತರವೂ ರೋಗಲಕ್ಷಣ ಕಂಡುಬರದಿದ್ದರೆ ಮತ್ತೊಮ್ಮೆ ಸ್ವಾಬ್ ಪರೀಕ್ಷೆ ಮಾಡಲಾಗುತ್ತದೆ. ಅದರಲ್ಲಿ ರಿಸಲ್ಟ್ ನೆಗೆಟಿವ್ ಬಂದರೆ ಇವರು ರೋಗಮುಕ್ತ ಎಂದು ಘೋಷಣೆ ಮಾಡಲಾಗುತ್ತದೆ ಎಂದು ಸರ್ಕಾರ ಹೇಳಿದೆ.

  ಇದನ್ನೂ ಓದಿ: ಪೊಲೀಸ್‌ ಇಲಾಖೆಗೆ ಮೇಜರ್‌ ಸರ್ಜರಿ; 13 ಐಪಿಎಸ್‌ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶಿಸಿದ ಸರ್ಕಾರ

  ಈ ಮೊದಲು ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದವರಿಗೆ ಕೊರೋನಾ ವೈರಸ್​ ಲಕ್ಷಣ ಇರಲಿ ಅಥವಾ ಇಲ್ಲದಿರಲಿ ಕಡ್ಡಾಯವಾಗಿ ಸರ್ಕಾರ ಸೂಚಿಸಿದ ಕೇಂದ್ರದಲ್ಲೇ ಅವರು ಕ್ವಾರಂಟೈನ್​ ಆಗಬೇಕಿತ್ತು. ಈ ಬಗ್ಗೆ ಅನೇಕರು ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಈ ರೀತಿಯ ಕ್ರಮ ಕೈಗೊಳ್ಳಲಾಗಿದೆ.
  First published: